ಆ್ಯಪ್ನಗರ

ವಾರದ ಆರಂಭ ಉಲ್ಲಾಸದಾಯಕವಾಗಿರಲಿ

ವಾರದ ಆರಂಭ ಉಲ್ಲಾಸದಾಯಕವಾಗಿರಲಿ

Vijaya Karnataka 21 Oct 2019, 5:00 am
ಲವಲವಿಕೆಸುದ್ದಿಲೋಕ
Vijaya Karnataka Web pexels-photo-3074333.


ಪ್ರತಿ ವಾರದ ಆರಂಭವನ್ನು ಉಲ್ಲಾಸಮಯವಾಗಿಸಿ ಆರಂಭಿಸಬೇಕು. ಇಲ್ಲವಾದಲ್ಲಿ ಆರಂಭದಲ್ಲೆ ಮಾನಸಿಕವಾಗಿ ಒತ್ತಡಕ್ಕೊಳಗಾಗಿ ಅನಾರೋಗ್ಯಕ್ಕೀಡಾಗುತ್ತೇವೆ ಎನ್ನುತ್ತದೆ ಅಧ್ಯಯನವೊಂದು. ಕೆಲವೊಂದು ಸೂತ್ರಗಳನ್ನು ಅನುಸರಿಸಿದಲ್ಲಿ ಇಡೀ ವಾರದ ಆರಾಮದಾಯಕ ರುಟೀನ್‌ ನಿಮ್ಮದಾಗುವುದು ಎನ್ನುತ್ತಾರೆ ಎಕ್ಸ್‌ಪರ್ಟ್ಸ್.

1. ಚಟುವಟಿಕೆಯಿಂದಿರಿ : ವಾರದ ಆರಂಭ ಚಟುವಟಿಕೆಯಿಂದ ಆರಂಭಿಸುವುದು ದೇಹ ಮತ್ತು ಮನಸ್ಸು ಎರಡಕ್ಕೂ ಒಳ್ಳೆಯದು. ಪ್ರತಿನಿತ್ಯ ಚಟುವಟಿಕೆಯಿಂದಿರುವುದರಿಂದ ನಿಮ್ಮ ಮೂಡನ್ನು ಸಂತೋಷವಾಗಿಡುತ್ತದೆ. ನಿದ್ರೆಯು ಕೂಡ ಉತ್ತಮವಾಗಿ ಬರುವುದಲ್ಲದೇ, ಮಾಡುವ ಕೆಲಸವನ್ನು ಪ್ರೋತ್ಸಾಹಿಸುತ್ತದೆ. ಮಾನಸಿಕ ಒತ್ತಡವು ನಿವಾರಣೆಯಾಗುತ್ತದೆ.

2. ಸ್ನೇಹದಿಂದಿರಿ : ಇತರರೊಂದಿಗೆ ಸ್ನೇಹಯುತವಾಗಿ ನಗು ನಗುತ್ತ ಬೆರೆಯುವ ಕಲೆ ನಿಮ್ಮಲ್ಲಿದ್ದಾಗ, ಮಾಡುವ ಕೆಲಸಕೆÜ್ಕ ಹೊಸ ಚೈತನ್ಯ ಹುಟ್ಟುತ್ತದೆ. ಮನಸ್ಸಿನಲ್ಲಿಹೊಸ ಹೊಸದಾಗಿ ಚಿಂತಿಸಲು ಪ್ರಯತ್ನಿಸಿ. ಸುತ್ತಮುತ್ತಲಿನ ಜನರೊಂದಿಗೆ ಬೆರೆತಾಗ ಎಷ್ಟೇ ಆತಂಕವಿದ್ದರೂ ಅವರೊಂದಿಗಿನ ಮಾತು ಕತೆ ಹರಟೆಯಿಂದ ಟೆಂಕ್ಷನ್‌ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತದೆ.

3. ದೀರ್ಘವಾಗಿ ಉಸಿರಾಡಿ :
ಪ್ರತಿನಿತ್ಯ 10 ನಿಮಿಷಗಳ ಕಾಲ ದೀರ್ಘವಾಗಿ ಉಸಿರಾಡುವುದರಿಂದ ಆರೋಗ್ಯವು ಉತ್ತಮವಾಗಿರುವುದಲ್ಲದೇ, ಆತಂಕವು ಕಡಿಮೆಯಾಗುತ್ತದೆ. ಉಸಿರಾಟ ಕ್ರಿಯೆಗೆ ಅನುಕೂಲವಾಗುವಂತಹ ಯೋಗ, ಧ್ಯಾನವನ್ನು ಮಾಡುವುದನ್ನು ರೂಢಿಸಿಕೊಂಡರೆ ಪದೇ ಪದೇ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವುದು ತಪ್ಪುತ್ತದೆ. ಪೌಷ್ಟಿಕಾಂಶತೆಯಿಂದ ಕೂಡಿದ ಹಣ್ಣು, ತರಕಾರಿಗಳನ್ನು ಸೇವಿಸಿದಾಗ ಮಾತ್ರ ಮನಸ್ಸು ಫ್ರಫುಲ್ಲವಾಗಿರುತ್ತದೆ.

--------------

ಕೋಟ್ಸ್‌

ಉತ್ತಮವಾದ ಕಾರ್ಯಗಳನ್ನು ಆರಂಭಿಸುವ ಮೂಲಕ ವಾರದ ಆರಂಭ ಮಾಡಿ. ಇದರಿಂದ ಸಂತಸ ನಿಮ್ಮದಾಗುತ್ತದೆ.

- ಆಶಾ, ಆಪ್ತ ಸಲಹೆಗಾರರು


===========================

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ