ಆ್ಯಪ್ನಗರ

ಎರಡು ತಿಂಗಳಿನಲ್ಲಿ 10 ಕೆಜಿ ತೂಕ ಇಳಿಸಿದ ಡಯಟ್ ಸೀಕ್ರೆಟ್‌

ಮದುವೆಯ ನಂತರ ಹೆಚ್ಚಾದ ಮೈ ತೂಕವನ್ನು ಕಡಿಮೆ ಮಾಡಬೇಕೆಂದು ಮನಸ್ಸು ಮಾಡಿದ ಸತ್ಯಾವತಿ ಇದೀಗ 10 ಕೆಜಿ ಕಡಿಮೆಯಾಗಿದ್ದಾರೆ, ಮೈ ತೂಕ ಇಳಿಸಲು ತಾವು ಮಾಡಿದ ಡಯಟ್‌ ಪ್ಲಾನ್‌ನ ಸೀಕ್ರೆಟ್‌ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ನೋಡಿ.

TIMESOFINDIA.COM 21 May 2019, 3:14 pm
ತೂಕ ಕಡಿಮೆಯಾಗಬೇಕು, ಆದರೆ ಜಿಮ್‌ಗೆ ಹೋಗಲು ಸಾಧ್ಯವಿಲ್ಲ ಎನ್ನುವವರಿಗೆ ಸತ್ಯಾವತಿ ಸೇನ್‌ಗುಪ್ತಾರವರ ತೂಕ ಇಳಿಕೆಯ ಕತೆ ಸ್ಪೂರ್ತಿಯಾಗಬಹುದು.
Vijaya Karnataka Web weighloss journey


ಮದುವೆಯ ನಂತರ ಹೆಚ್ಚಾದ ಮೈ ತೂಕವನ್ನು ಕಡಿಮೆ ಮಾಡಬೇಕೆಂದು ಮನಸ್ಸು ಮಾಡಿದ ಸತ್ಯಾವತಿ ಇದೀಗ 10 ಕೆಜಿ ಕಡಿಮೆಯಾಗಿದ್ದಾರೆ, ಮೈ ತೂಕ ಇಳಿಸಲು ತಾವು ಮಾಡಿದ ಡಯಟ್‌ ಪ್ಲಾನ್‌ನ ಸೀಕ್ರೆಟ್‌ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ನೋಡಿ.

ಹೆಸರು: ಸತ್ಯಾವತಿ
ವಯಸ್ಸು: 25
ಅತ್ಯಧಿಕ ತೂಕ: 60 ಕೆಜಿ
ಕಳೆದುಕೊಂಡ ತೂಕ: 10 ಕೆಜಿ
ತೆಗೆದುಕೊಂಡ ಸಮಯ: 2 ತಿಂಗಳು

ತೂಕ ಕಡಿಮೆ ಮಾಡಬೇಕೆಂದು ನಿರ್ಧರಿಸಿದ ಕ್ಷಣ
ಮದುವೆಗೆ ಮೊದಲು ತೆಳ್ಳಗಿದ್ದ ನಾನು, ನಂತರ ದಪ್ಪಗಾದೆ. ನನ್ನ ಸ್ನೇಹಿತರಿಗಿಂತ ದೊಡ್ಡವಳಂತೆ ಕಾಣುತ್ತಿದ್ದೆ ಆಗ ಏನಾದರೂ ಸರಿ ಈ ಮೈ ಬೊಜ್ಜು ಕರಗಿಸಬೇಕೆಂದು ತೀರ್ಮಾನಿಸಿದೆ.

ಬ್ರೇಕ್‌ ಫಾಸ್ಟ್
ಬೆಳಗ್ಗೆ ಒಂದು ಲೋಟ ಬಿಸಿ ನೀರಿಗೆ ನಿಂಬೆ ರಸ, 1 ಚಮಚ ಜೇನು ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಿದ್ದೆ. ಅರ್ಧ ಗಂಟೆಯ ಬಳಿಕ ಒಂದು ಹಿಡಿಯಷ್ಟು ಡ್ರೈ ಫ್ರೂಟ್ಸ್‌ ಅದರಲ್ಲೂ ಬಾದಾಮಿ ಹಾಗೂ ಒಂದು ಮೊಟ್ಟೆ ತಿನ್ನುತ್ತಿದ್ದೆ. ಕೆಲವೊಮ್ಮೆ ಬೇಯಿಸಿದ ಕಡಲೆ ಹಾಗೂ ಸೇಬು, ಪಪ್ಪಾಯಿ ತಿನ್ನುತ್ತಿದ್ದೆ.

ಲಂಚ್
ಓಟ್ಸ್‌ ಜತೆ ಮೊಸರು ಅಥವಾ ತುಂಬಾ ತರಕಾರಿ ಹಾಕಿ ಮಾಡಿದ ಕಿಚಡಿ ಅಥವಾ ಒಂದು ಬೌಲ್‌ ಕೆಂಪಕ್ಕಿ ಅನ್ನ ಹಾಗೂ ಚಿಕನ್ ಸೂಪ್, ದಾಲ್‌.

ಸ್ನ್ಯಾಕ್ಸ್: 1 ಕಪ್‌ ಗ್ರೀನ್ ಟೀ ಹಾಗೂ ಡೈಜೆಸ್ಟಿವ್‌ ಬಿಸ್ಕೆಟ್‌

ಡಿನ್ನರ್
ರಾತ್ರಿ 8 ಗಂಟೆಯ ಒಳಗೆ ಡಿನ್ನರ್ ಮುಗಿಸುತ್ತಿದ್ದೆ, ಡಿನ್ನರ್‌ಗೆ ಎರಡು ಚಪಾತಿ, ಒಂದು ಬೌಲ್‌ ತರಕಾರಿ ಹಾಗೂ ಸ್ವಲ್ಪ ಅನ್ನ ಕೆಲವೊಮ್ಮೆ ಸಲಾಡ್‌ ತಿನ್ನುತ್ತಿದ್ದೆ.
ಏನಾದರೂ ತಿನ್ನಬೇಕೆಂದು ಅನಿಸಿದಾಗ ಸ್ಪೈಸಿ ಚಿಕನ್, ಮೀನು ಹಾಗೂ ಐಸ್‌ಕ್ರೀಮ್ ತಿನ್ನುತ್ತಿದ್ದೆ, ಆದರೆ ಮಿತಿಯಲ್ಲಿ ತಿನ್ನುತ್ತಿದ್ದೆ.

ವರ್ಕೌಟ್
ಜಿಮ್‌ಗೆ ಹೋಗಲಿಲ್ಲ, ಬದಲಿಗೆ ಮನೆಯಲ್ಲಿಯೇ 45 ನಿಮಿಷ ವ್ಯಾಯಾಮ ಮಾಡುತ್ತಿದ್ದೆ.
ಸಕ್ಕರೆ, ಪುಡಿ ಉಪ್ಪು ಇವುಗಳನ್ನು ಬಳಸುವುದನ್ನು ಬಿಟ್ಟೆ, ಅಡುಗೆಗೆ ಕಲ್ಲುಪ್ಪು ಬಳಸುತ್ತಿದ್ದೆ.

ಕೆಲವೇ ದಿನಗಳಲ್ಲಿ ನನ್ನ ದೇಹದಲ್ಲಿ ಬದಲಾವಣೆ ಗೋಚರಿಸಿತು. ನನ್ನ ಮನೆಯವರು, ಅಪ್ಪ ಅಮ್ಮನ ಪ್ರೋತ್ಸಾಹ ಇತ್ತು. ಎರಡು ತಿಂಗಳು ಕಳೆಯುವಷ್ಟರಲ್ಲಿ 10 ಕೆಜಿ ಕಡಿಮೆಯಾದೆ, ಈ ತೂಕ ಇಳಿಕೆಯ ಜರ್ನಿ ನನ್ನ ದೇಹಕ್ಕೆ ಆಕರ್ಷಕ ಲುಕ್‌ ನೀಡಿದೆ, ಇನ್ನು ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ.

ಇದು ಸತ್ಯಾವತಿಯವರ ತೂಕ ಇಳಿಕೆಯ ಕತೆ. ತೆಳ್ಳಗಾಗ ಬಯಸುವವರು ಸತ್ಯಾವತಿ ಪಾಲಿಸಿದ ಡಯಟ್‌ ಪ್ಲಾನ್‌ ಟ್ರೈ ಮಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ