ಆ್ಯಪ್ನಗರ

ಈ ವರ್ಕಿಂಗ್‌ ಮದರ್ 2 ತಿಂಗಳಿನಲ್ಲಿ 10 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ?

ತೂಕ ಇಳಿಸುವುದು ದುಡಿಯುವ ಮಹಿಳೆಯರಿಗೆ ತುಂಬಾ ಸವಾಲಿನ ಕೆಲಸವೇ ಸರಿ. ಆಫೀಸ್‌, ಮನೆ, ಮಕ್ಕಳ ಜವಾಬ್ದಾರಿ ನಡುವೆ ತಮ್ಮ ಫಿಟ್ನೆಸ್‌ ಕಡೆ ಗಮನ ಕೊಡಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಮೈ ತೂಕ ಹೆಚ್ಚಾಗುವುದು. ಇಲ್ಲಿ ಟೀನಾ ನೇಹ್ರಾ ಸನ್ಸಾವಾಲ್‌ ಮೈ ತೂಕ ಇಳಿಸಿಕೊಂಡಿರುವ ಟಿಪ್ಸ್ ನೀಡಿದ್ದಾರೆ ನೋಡಿ.

TIMESOFINDIA.COM 30 Jun 2019, 4:57 pm
39 ವರ್ಷದ ಟೀನಾ ನೇಹ್ರಾ ಸನ್ಸಾವಾಲ್‌ ಎರಡನೇಯ ಹೆರಿಗೆಯ ನಂತರ ಮೈ ತೂಕ ತುಂಬಾ ಹೆಚ್ಚಾಗಿತ್ತು. ಹೊರಗಡೆ ದುಡಿಯಲು ಹೋಗುತ್ತಿದ್ದರು, ಮನೆಯಲ್ಲಿ ಮಕ್ಕಳ ನೋಡಿಕೊಳ್ಳಲು ಮನೆಯವರ ಸಹಕಾರ ಇಲ್ಲದಿರುವ ಕಾರಣ, ತಮ್ಮ ದೇಹದ ಕುರಿತು ಕಾಳಜಿ ಕೊಡಲು ಸಾಧ್ಯವಾಗಿರಲಿಲ್ಲ, ಈಗ ಅವರು ಹಂಚಿಕೊಂಡಿರುವ ಈ ತೂಕ ಇಳಿಕೆಯ ಟಿಪ್ಸ್ ಇವರಂತೆಯೇ ತೂಕ ಇಳಿಸ ಬಯಸುವವರಿಗೆ ಸಹಾಯವಾಗಲಿದೆ ನೋಡಿ.
Vijaya Karnataka Web weight loss


ವಯಸ್ಸು 39
ಅತ್ಯಧಿಕ ಮೈ ತೂಕ: 89 ಕೆಜಿ
2 ತಿಂಗಳಿನಲ್ಲಿ ಇಳಿಸಿಕೊಂಡ ತೂಕ 10 ಕೆಜಿ

ತೂಕ ಕಳೆದುಕೊಳ್ಳಲು ನಿರ್ಧರಿಸಿದ ಕ್ಷಣ
ಮಕ್ಕಳು-ಆಫೀಸ್‌ ಇವುಗಳ ನಡುವೆ ನನ್ನ ನೋಡಿಕೊಳ್ಳಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಒಂದು ದಿನ ನನಗೆ ನನಗಾಗಿ ಸ್ವಲ್ಪ ಕಾಳಜಿ ಕೊಡಬೇಕೆಂದು ಅನಿಸತ್ತು, ತೂಕ ಕಡಿಮೆ ಮಾಡಬೇಕೆಂದು ನಿರ್ಧರಿಸಿದೆ.

ನನ್ನ ಗೆಳೆತಿಯರ ಜತೆ ತೆಗೆದ ಫೋಟೋದಲ್ಲಿ ನಾನೊಬ್ಬಳೇ ತುಂಬಾ ದಪ್ಪ ಕಾಣುತ್ತಿದ್ದೆ, ಆಗ ನನ್ನ ಮೈ ಕೊಬ್ಬು ಕರಗಿಸಲೇಬೇಕೆಂದು ನಿರ್ಧರಿಸಿದೆ.

ಬ್ರೇಕ್‌ಫಾಸ್ಟ್:
1 ಕಪ್ ಗ್ರೀನ್‌ ಟೀ, 1 ಮೊಟ್ಟೆ, ಸ್ವಲ್ಪ ಚಿಕನ್‌,ಸ್ವಲ್ಪ ಮೊಳಕೆ ಭರಿಸಿದ ಕಾಳುಗಳು ಹಾಗೂ 3 ಲೀಟರ್ ಕಾಳು.

ಲಂಚ್: ಚಿಕನ್ ಅಥವಾ ಮೀನು ಹಾಗೂ ಒಂದು ಕಪ್‌ ತರಕಾರಿ.

ಡಿನ್ನರ್: ರಾತ್ರಿ ಲಘು ಆಹಾರ ತೆಗೆದುಕೊಳ್ಳುತ್ತಿದ್ದೆ, ಕೆಲವೊಮ್ಮೆ ಮೀನು ಅಥವಾ ಎಗ್‌ ರೋಲ್‌ ತಿನ್ನುತ್ತಿದ್ದೆ. ಒಂದು ಕಪ್‌ ಕೆಮೈಲ್ ಟೀ ಕುಡಿಯುತ್ತಿದ್ದೆ.
ಚಾಕಲೇಟ್‌ ತುಂಬಾ ಇಷ್ಟ ಪಡುತ್ತೇನೆ. ಅದನ್ನು ಅಪರೂಪಕ್ಕೆ ತಿನ್ನುತ್ತಿದ್ದೆ.

ವ್ಯಾಯಾಮ: ಯಾವುದೇ ನಿರ್ಧಿಷ್ಟ ಅಂತೇನೂ ಪಾಲಿಸಲಿಲ್ಲ, ನಾಯಿ ಜತೆ ವಾಕ್‌ ಹೋಗುತ್ತಿದ್ದೆ.
ಲೋ ಕ್ಯಾಲೋರಿ ಡಯಟ್‌: ತಂದೂರಿ, ಗೋಬಿ(ಹೂ ಕೋಸು) ತಿನ್ನುತ್ತೇನೆ.

ಮುಂದಿನ ಆಲೋಚನೆ
ಇನ್ನೂ 5-6 ಕೆಜಿ ಕಡಿಮೆ ಮಾಡಬೇಕೆಂದು ಬಯಸಿದ್ದೇನೆ ಹಾಗೂ ಮುಂದೆ ಕೂಡ ದೇಹದ ಶೇಪ್‌ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ