ಆ್ಯಪ್ನಗರ

ತರಕಾರಿಗಳ ತಿರಂಗಾ ಬಾವುಟ

ರಟ್ಟಿನ ಮೇಲೆ ಬಿಳಿಕಾಗದ ಇಟ್ಟು ಸುತ್ತಲೂ ಅಲ್ಲಲ್ಲಿ ಪಿನ್ನುಗಳನ್ನು ಚುಚ್ಚಿ ಕಾಗದ ಅಲುಗಾಡದಂತೆ ಮಾಡಿ. ಬಾವುಟದಂತೆ ಪೆನ್ಸಿಲ್‌ನಿಂದ ಬರೆಯಿರಿ. ಅದರ ಮೇಲೆ ದುಂಡಗೆ ಕತ್ತರಿಸಿದ ಗಜ್ಜರಿ ಪೀಸ್‌ಗಳನ್ನು ಇಟ್ಟು ಎರಡರ ಮದ್ಯೆ ಬಿಟ್ಟ ಜಾಗಕ್ಕೆ ಗಜ್ಜರಿ ತುರಿಯನ್ನು ಉದುರಿಸಿ.

Vijaya Karnataka 26 Jan 2019, 9:10 am
ದುಂಡಗೆ ಕತ್ತರಿಸಿದ ಗಜ್ಜರಿ-2, ಮೂಲಂಗಿ 2, ಚಪ್ಪರದವರೆಕಾಯಿ 8-10, ಸ್ಕೆಚ್‌ ಪೆನ್‌ಗಳು ಒಂದೆರಡು ಬಣ್ಣದ್ದು (ಕಂದು ಮತ್ತು ನೀಲಿ), ಒಂದು ಅಗಲವಾದ ದಪ್ಪನೆ ರಟ್ಟು, ಬಿಳಿಕಾಗದ, ಚಿಕ್ಕ ಗುಂಡು ಪಿನ್ನುಗಳು -ಸ್ವಲ್ಪ.
Vijaya Karnataka Web craft


ವಿಧಾನ : ರಟ್ಟಿನ ಮೇಲೆ ಬಿಳಿಕಾಗದ ಇಟ್ಟು ಸುತ್ತಲೂ ಅಲ್ಲಲ್ಲಿ ಪಿನ್ನುಗಳನ್ನು ಚುಚ್ಚಿ ಕಾಗದ ಅಲುಗಾಡದಂತೆ ಮಾಡಿ. ಬಾವುಟದಂತೆ ಪೆನ್ಸಿಲ್‌ನಿಂದ ಬರೆಯಿರಿ. ಅದರ ಮೇಲೆ ದುಂಡಗೆ ಕತ್ತರಿಸಿದ ಗಜ್ಜರಿ ಪೀಸ್‌ಗಳನ್ನು ಇಟ್ಟು ಎರಡರ ಮದ್ಯೆ ಬಿಟ್ಟ ಜಾಗಕ್ಕೆ ಗಜ್ಜರಿ ತುರಿಯನ್ನು ಉದುರಿಸಿ. ಅದರ ಕೆಳಗಡೆ ಮೂಲಂಗಿಯಿಂದ ಇದೇ ರೀತಿ ಮಾಡಿ. ಅದರ ಕೆಳಗೆ ಚಪ್ಪರದವರೆಕಾಯಿಯನ್ನು ಜೋಡಿಸಿರಿ. ಅಶೋಕಚಕ್ರದಂತೆ ಕಾಣಲು ಮಧ್ಯದ ಒಂದು ಮೂಲಂಗಿ ಪೀಸ್‌ ಮೇಲೆ ನೀಲಿ ಸ್ಕೆಚ್‌ ಪೆನ್‌ನಿಂದ ಎರಡು ಮೂರು ಸಲ ಗೆರೆ ಎಳೆಯಿರಿ. ಚಿತ್ರದಲ್ಲಿ ತೋರಿಸಿರುವಂತೆ ಬಾವುಟದ ಎಡಗಡೆ ಕಂಬದಂತೆ ಮತ್ತು ಜಗಲಿಯನ್ನು ಕಂದು ಬಣ್ಣದ ಪೆನ್ಸಿಲ್‌ನಿಂದ ಬರೆದು ತುಂಬಿರಿ, ಮತ್ತು ಎರಡು ದಾರಗಳನ್ನೂ ಸಹ ಬರೆಯಿರಿ. ಈಗ ಈ ತರಕಾರಿಗಳ ತಿರಂಗಾ ಬಾವುಟ ತಯಾರಾಗಿದೆ. ಇದನ್ನು ಮಾಡಿ ಅಂಗಳದ ಟೀಪಾಯ್‌ ಮೇಲೆ ಜನವರಿ 26ರಂದು ಇಟ್ಟರೆ ನೋಡಲು ಸುಂದರವಾಗಿರುತ್ತದೆ. ಆಗಾಗ್ಗೆ ನೋಡುತ್ತಾ ಇದ್ದರೆ ದೇಶಭಕ್ತಿಯೂ ಉಕ್ಕುತ್ತದೆ.

ಕ್ರಿಶಾ.ಡಿ.ಶೆಟ್ಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ