ಆ್ಯಪ್ನಗರ

ನಡಿಗೆಯ ಮೂಲಕವೂ ಅಳೆಯಬಹುದು ನಿಮ್ಮ ವ್ಯಕ್ತಿತ್ವ

ವಿಜ್ಞಾನಿಗಳ ಪ್ರಕಾರ, ಪ್ರತಿನಿತ್ಯ ಮುಂಜಾನೆ ಶೂ ಹಾಕಿಕೊಂಡು 30 ನಿಮಿಷ ವೇಗವಾಗಿ ನಡೆದರೆ ಮನಸ್ಸಿನಲ್ಲಿರುವ ಟೆನ್ಷನ್‌ ಕೂಡ ದೂರವಾಗುವುದಲ್ಲದೇ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ಕಡಿಮೆಯಾಗುತ್ತದೆ.

Agencies 7 May 2019, 3:50 pm
ಕೆಲವರು ನಡೆಯುವ ಶೈಲಿಯಿಂದಲೇ ಅವರವರ ವ್ಯಕ್ತಿತ್ವದ ಬಗ್ಗೆ ಕಂಡು ಹಿಡಿಯಬಹುದು. ಆಯಾ ವ್ಯಕ್ತಿಯ ವಾಕಿಂಗ್‌ ಸ್ಟೈಲ್‌ ಅವರ ವ್ಯಕ್ತಿತ್ವವನ್ನು ತೆರೆದಿಡಬಲ್ಲದು ಎನ್ನುತ್ತದೆ ಸಮೀಕ್ಷೆಯೊಂದು.
Vijaya Karnataka Web walking


ನಡೆಯುವ ನಡಿಗೆಯಲ್ಲಿ ಅಡಗಿದೆ ವ್ಯಕ್ತಿತ್ವದ ಛಾಯೆ. ಏನು ಹೇಳದಿದ್ದರೂ ನಡಿಗೆಯಿಂದಲೇ ವ್ಯಕ್ತಿತ್ವವನ್ನು ಅಳೆಯಬಹುದು. ಅಮೆರಿಕದ ವಿಶ್ವವಿದ್ಯಾನಿಲಯವೊಂದು ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಇಲ್ಲಿ ಕೆಲವು ನಡಿಗೆಯ ಶೈಲಿ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ. ಇವುಗಳಲ್ಲಿ ಯಾವುದಾರೊಂದು ನಿಮ್ಮ ವ್ಯಕ್ತಿತ್ವವಾಗಿರಬಹುದು.

ಐಡಿಯಲ್‌ ನಡಿಗೆ
ಇವರು ಯಾವಾಗಲೂ ಸದಾ ಲವಲವಿಕೆಯಿಂದ ಕೂಡಿರುತ್ತಾರೆ. ಶಕ್ತಿಶಾಲಿಯಾಗಿರುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಕೆಲಸದಲ್ಲಿ ಮಗ್ನರಾಗಿ, ಎಲ್ಲರನ್ನು ಖುಷಿ ಪಡಿಸಲು ಪ್ರಯತ್ನಿಸುತ್ತಾರೆ. ಭಯ, ಅಂಜಿಕೆ ಪಡುವುದಿಲ್ಲ. ಹೆಚ್ಚಿನ ಜ್ಞಾನ ಸಂಪಾದನೆ ಮಾಡಿಕೊಂಡಿರುತ್ತಾರೆ.

ಸ್ಟಾಂಪರ್‌ ನಡಿಗೆ
ಇವರು ಕುಳಿತಲ್ಲಿ ಕೂರುವುದಿಲ್ಲ , ನಿಂತಲ್ಲಿ ನಿಲ್ಲುವುದಿಲ್ಲ. ಸದಾ ತಿರುಗಾಡಲು ಹಂಬಲಿಸುತ್ತಾರೆ. ಸಾಮಾನ್ಯವಾಗಿ ಪಟ್ಟಣದ ಜನತೆಯೂ ಶೇ. 80 ರಷ್ಟು ಈ ರೀತಿ ನಡೆಯುವ ಶೈಲಿಯನ್ನು ಹೊಂದಿರುತ್ತಾರೆ. ಉತ್ತಮ ಸಂವಹನ ಕೌಶಲ್ಯವಿದ್ದು , ಎಲ್ಲಿ ಹೋದರೂ ಮಾತಿನಿಂದಲೇ ಜಯಿಸಿ ಮುಂದೆ ಬರುತ್ತಾರೆ. ಸುಲಭವಾಗಿ ಎಲ್ಲರನ್ನು ತನ್ನತ್ತ ಸೆಳೆದುಕೊಳ್ಳುತ್ತಾರಂತೆ.

ಎಗ್‌ ಶೆಲ್‌ ವಾಕಿಂಗ್‌
ಈ ರೀತಿಯಾಗಿ ನಡೆಯುವಾಗ ಕಾಲನ್ನು ಸ್ಟೆಫ್ಸ್‌ ಲೆಕ್ಕ ಹಾಕಿಕೊಂಡೇ ಮುಂದೆ ಇಡುತ್ತಾರೆ. ತೂಗಿ ಅಳೆದು ಮಾತನಾಡುವ ಸ್ವಭಾವ ಹೊಂದಿರುತ್ತಾರೆ. ಲೈಟಾಗಿ ಹೆಜ್ಜೆ ಮುಂದಿರಿಸುತ್ತಾರೆ. ನಾಚಿಕೆ ಸ್ವಭಾವ ಹೊಂದಿರುತ್ತಾರಂತೆ.

ಕಾಲೆಳೆದುಕೊಂಡು ಓಡಾಡುವವರು
ಕಾಲೆಳೆದುಕೊಂಡು ನಡೆಯುವವರು ಚಿಂತೆ ಹಾಗೂ ಯೋಚನೆಗಳಿಂದ ಹೊರಗೆ ಬರದಿರುವವರ ಲಿಸ್ಟ್‌ನಲ್ಲಿ ಸೇರುತ್ತಾರೆ. ಯಾವ ಕೆಲಸವನ್ನು ಸಂರ್ಪೂವಾಗಿ ಮಾಡಿ ಮುಗಿಸದಿರುವುದು ಇವರ ಪ್ರಮುಖ ಸ್ವಭಾವ. ಬೇಸರದಲ್ಲಿ ಕಾಲ ಕಳೆಯುವವರು, ಆಸಕ್ತಿ ಕಳೆದುಕೊಂಡವರೆನ್ನಲಾಗುತ್ತದೆ.

ಡೇ ಟೈಮ್‌ ಸ್ಲೀಪ್‌ ವಾಕರ್‌
ದೇಹ ಮಾತ್ರ ಇಲ್ಲಿರುತ್ತದೆ ಮನಸ್ಸು ಇನ್ನೆಲ್ಲೋ ಇರುತ್ತದೆ. ಪಕ್ಕದಲ್ಲಿ ಏನು ಮಾತನಾಡುತ್ತಿರುತ್ತಾರೆ ಎಂಬುದು ಕೂಡ ಗೊತ್ತಿರುವುದಿಲ್ಲ. ಚಿಂತನಾಶೀಲರಾಗಿದ್ದೂ, ಮಾತು ಕೂಡ ಕಡಿಮೆ. ಹೇಳಬೇಕಾದನ್ನು ಮಾತ್ರ ಹೇಳುವುದು. ನಗಲು ಕೂಡ ಯೋಚನೆ ಮಾಡುವ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಹಲವಾರು ಗೆಳೆಯರ ಬಳಗವನ್ನು ಹೊಂದಿದ್ದರೂ ಕೂಡ ತಮ್ಮದೇ ಮಾಯಾಲೋಕದಲ್ಲಿ ಸದಾ ತೇಲುತ್ತಿರುತ್ತಾರೆ.

ಸ್ಕಲ್ಲರ್‌
ಇಂತಹವರು ಕೆಲಸಗಳ್ಳರಾಗಿದ್ದೂ, ಬೇರೆಯವರ ವೀಕ್‌ನೆಸ್‌ ಎತ್ತಿತೋರಿಸುತ್ತಾರೆ. ತಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು ಇತರರ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವ ಮನೋಭಾವನೆ ಹೊಂದಿರುತ್ತಾರೆ. ಇಂತಹವರು ನೀವು ಕೆಲಸ ಮಾಡುವ ಕಭೇರಿಯಲ್ಲಿ ಹೆಚ್ಚಾಗಿ ಇರುತ್ತಾರೆ. ಬೇರೆಯರು ಮಾತನಾಡುವಾಗ ಮಧ್ಯೆ ಮಾತಾಡಿ ತಮ್ಮದೇ ಸರಿ ಎಂದು ವಾದ ವಿತಂಡ ವಾದಕ್ಕೆ ಇಳಿಯುವುದು, ಬೇರೆಯವರಲ್ಲಿ ಹುಳುಕು ಹುಡುಕುವುದು, ಅವಹೇಳನ ಮಾಡುವುದರಲ್ಲಿ ಮಗ್ನರಾಗಿರುತ್ತಾರೆ.

ಪ್ರತಿದಿನ 30 ನಿಮಿಷ ತಪ್ಪದೇ ನಡೆಯಿರಿ
ವಿಜ್ಞಾನಿಗಳ ಪ್ರಕಾರ, ಪ್ರತಿನಿತ್ಯ ಮುಂಜಾನೆ ಶೂ ಹಾಕಿಕೊಂಡು 30 ನಿಮಿಷ ವೇಗವಾಗಿ ನಡೆದರೆ ಮನಸ್ಸಿನಲ್ಲಿರುವ ಟೆನ್ಷನ್‌ ಕೂಡ ದೂರವಾಗುವುದಲ್ಲದೇ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ಕಡಿಮೆಯಾಗುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆಂದು ಹೇಳುತ್ತಾರೆ. ತಪ್ಪದೇ ಬಿಡುವು ಮಾಡಿಕೊಂಡು ಇದನ್ನು ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ರೈಟ್‌ ವಾಕ್‌
ಮೊದಲಿಗೆ ತಲೆಯನ್ನು ನೇರವಾಗಿ ಇಟ್ಟುಕೊಂಡು ಕಣ್ಣನ್ನು ಮುಂದೆ ನೋಡಿಕೊಂಡು ನಡೆಯಬೇಕು.
ಅತಿ ವೇಗವಾಗಿ ಮತ್ತು ಅತಿ ನಿಧಾನವಾಗಿ ನಡೆಯಬಾರದು
ನಡೆಯುವಾಗ ಕೈಗಳು ಮತ್ತು ಕಾಲುಗಳು ಸಡಿಲವಾಗಿರಬೇಕು. ಟೈಟ್‌ ಆಗಿ ಹಿಡಿದುಕೊಳ್ಳಬಾರದು. ಈಜುವ ರೀತಿಯಲ್ಲಿ ಕೈ ಮುಂದೆ ಹಿಂದೆ ಮಾಡುತ್ತಾ ಸರಿದೂಗಿಸಿಕೊಂಡು ಹೋಗಬೇಕು.
ನಡೆಯುವಾಗ ಮೂಗಿನಲ್ಲಿ ಉಸಿರಾಟಬೇಕು. ಹೆಚ್ಚು ಮಾತನಾಡುತ್ತಾ ನಡೆಯಬಾರದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ