ಆ್ಯಪ್ನಗರ

ನಿಮ್ಮ ಅಡುಗೆ ಕೋಣೆಯಲ್ಲಿರುವ ತೂಕ ಇಳಿಸುವ ಆಹಾರಗಳು

ತೂಕ ಇಳಿಕೆ ಪ್ರಕ್ರಿಯೆಯಲ್ಲಿ ನಿಮ್ಮ ದೇಹಕ್ಕೆ ಹೆಚ್ಚಿನ ಕ್ಯಾಲೋರಿ ಸೇರ್ಪಡೆಯಾಗುವಂತಿಲ್ಲ. ಬದಲಾಗಿ ಕ್ಯಾಲೋರಿ ಬರ್ನ್ ಆಗಬೇಕು. ಇಲ್ಲಿವೆ ನಿಮ್ಮ ತೂಕ ಇಳಿಕೆ ಪ್ರಕ್ರಿಯೆಯಲ್ಲಿ ನಿಜಕ್ಕೂ ಸಹಾಯಕವಾಗುವಂತಹ ಕೆಲವು ಆಹಾರಗಳು.

Vijaya Karnataka Web 14 Apr 2019, 1:46 pm
ತೂಕ ಇಳಿಕೆ ಎಂದಾಕ್ಷಣ ಕೆಲ ಆಹಾರಗಳನ್ನು ವರ್ಜಿಸಬೇಕು ಮತ್ತು ಸೂಪರ್ ಫುಡ್‌ಗಳೆಂದು ಗುರುತಿಸಲ್ಪಟ್ಟಿರುವುದನ್ನು ತಿನ್ನಬೇಕು ಎಂದು ಅಂದುಕೊಂಡಿರುತ್ತೇವೆ. ಆದರೆ ನಿಮ್ಮ ಅಡುಗೆ ಕೋಣೆಯಲ್ಲಿ ಸದಾ ದೊರೆಯುವ ಆಹಾರಗಳಿಂದಲೇ ನೀವು ಸುಲಭವಾಗಿ ತೂಕ ನಷ್ಟವನ್ನು ಮಾಡಿಕೊಳ್ಳಬಹುದು. ಅಂತಹ ಆಹಾರಗಳ ಪಟ್ಟಿಯೇ ನಿಮ್ಮ ಅಡುಗೆ ಕೋಣೆಯಲ್ಲಿದೆ. ಅವು ಯಾವುವು ಎಂದು ತಿಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗಬಹುದು.
Vijaya Karnataka Web Veg


ತೂಕ ಇಳಿಕೆ ಪ್ರಕ್ರಿಯೆಯಲ್ಲಿ ನಿಮ್ಮ ದೇಹಕ್ಕೆ ಹೆಚ್ಚಿನ ಕ್ಯಾಲೋರಿ ಸೇರ್ಪಡೆಯಾಗುವಂತಿಲ್ಲ. ಬದಲಾಗಿ ಕ್ಯಾಲೋರಿ ಬರ್ನ್ ಆಗಬೇಕು. ಇಲ್ಲಿವೆ ನಿಮ್ಮ ತೂಕ ಇಳಿಕೆ ಪ್ರಕ್ರಿಯೆಯಲ್ಲಿ ನಿಜಕ್ಕೂ ಸಹಾಯಕವಾಗುವಂತಹ ಕೆಲವು ಆಹಾರಗಳು

ಹೆಸರುಬೇಳೆ

ಹೆಸರುಬೇಳೆಯಲ್ಲಿ ಅತೀ ಹೆಚ್ಚು ಪೌಷ್ಠಿಕಾಂಶವಿದೆ. ಇದರಲ್ಲಿರುವ ಅಮೈನೋ ಆಸಿಡ್ ಕೋಶಗಳು ಮತ್ತು ಮಾಂಸಖಂಡಗಳನ್ನು ಬಲಪಡಿಸಿ ದೇಹದಲ್ಲಿರುವ ಬೇಡವಾದ ಕೊಬ್ಬಿನಾಂಶವನ್ನು ಕಡಿಮೆಗೊಳಿಸುವಲ್ಲಿ ಸಹಕಾರಿಯಾಗಿದೆ. ಅಷ್ಟೇ ಅಲ್ಲ ಇದು ವಿಟಾಮಿನ್ ಎ,ಸಿ,ಬಿ, ಇ, ಪೋಟ್ಯಾಶಿಯಂ, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶದ ಆಗರ. ಹೊಟ್ಟೆ ತುಂಬಿದಂತೆ ಫೀಲ್ ಇರಿಸುವ ಇದು ಹಸಿವಾಗದಂತೆ ತಡೆಯುತ್ತದೆ ಮತ್ತು ಇದು ಸುಲಭವಾಗಿ ಜೀರ್ಣವಾಗುವ ಆಹಾರ ಕೂಡ ಹೌದು.

ವಾಲ್ ನಟ್(ಆಕ್ರೋಟ)

ವಾಲ್ ನಟ್‌ನಲ್ಲಿರುವ ಪ್ರೋಟೀನ್ ಮತ್ತು ಫೈಬರ್ ಅಂಶ ದೀರ್ಘ ಸಮಯದವರೆಗೆ ಹೊಟ್ಟೆ ತುಂಬಿ ಇರುವಂತಹ ಫೀಲ್ ನೀಡುತ್ತದೆ. ಹೀಗಾಗಿ ನಿಮಗೆ ಬೇಗ ಹಸಿವಾಗುವುದಿಲ್ಲ. ಈ ಮೂಲಕ ತೂಕ ಇಳಿಕೆಗೆ ಸಹಾಯಕಾರಿ ವಾಲ್ ನಟ್.

ಹಸಿರು ಸೊಪ್ಪು

ಹಸಿರು ತರಕಾರಿ ಆರೋಗ್ಯಕ್ಕೆಷ್ಟು ಸಹಾಯಕಾರಿ ಎಂಬುದನ್ನು ಬಾಲ್ಯದಿಂದಲೂ ತಿಳಿದಿದ್ದೇವೆ. ಹಸಿರು ಸೊಪ್ಪುಗಳು ಕಡಿಮೆ ಕ್ಯಾಲೋರಿ ಹೊಂದಿರುತ್ತವೆ. ಆದರೆ
ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ವಿಟಮಿನ್ ಕೆ, ವಿಟಮಿನ್ ಎ, ಫೋಲೇಟ್, ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಸಿ, ಫೈಬರ್, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಸತುಗಳ ಆಗರ. ಇದರಲ್ಲಿರುವ ಫೈಬರ್ ಅಂಶ ಜೀರ್ಣ ಕ್ರಿಯೆಗೆ ಸಹಾಯಕಾರಿಯಾಗಿದ್ದು ಮಲಬದ್ಧತೆಯಿಂದ ದೂರವಿರಿಸುತ್ತದೆ.

ಹಾಗಲಕಾಯಿ

ತಿನ್ನಲು ಕಹಿ ಎಂದು ಹಾಗಲಕಾಯೆಂದರೆ ಎಲ್ಲರು ಮೂಗು ಮುರಿಯುತ್ತಾರೆ. ಆದರೆ ಅದನ್ನು ಕತ್ತರಿಸಿ 2 ತಾಸು ಉಪ್ಪಿನಲ್ಲಿಟ್ಟರೆ ಕಹಿ ಅಂಶ ಎಲ್ಲ ಮಾಯವಾಗುತ್ತದೆ. ಹಾಗಲಕಾಯಿ 85% ದಿಂದ 90% ದವರೆಗೆ ನೀರಿಂದಲೇ ತುಂಬಿರುತ್ತದೆ. ನಿಮಗೆ ಗೊತ್ತಿರುವ ಹಾಗೆ ನೀರು ಕ್ಯಾಲೋರಿ ಮುಕ್ತವಾಗಿರುತ್ತದೆ. ಹೀಗಾಗಿ ಸಹಜವಾಗಿ ಹಾಗಲಕಾಯಿ ತೂಕ ಇಳಿಸಲು ಪೂರಕ ಆಹಾರ.

ಬೀಟ್‌ರೂಟ್

ಬೀಟ್‌ರೂಟ್ ಜ್ಯೂಸ್ ನಿಮ್ಮ ಸ್ಟೆಮಿನಾವನ್ನು ಹೆಚ್ಚಿಸುತ್ತದೆ. ಇದು ಸಹ ಕಡಿಮೆ ಕ್ಯಾಲೋರಿ ಹೊಂದಿರುವ , ಆದರ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರ.

ಬಾದಾಮಿ


ಬಾದಾಮಿ ಬಲ ವರ್ಧಕ ಎಂದು ಅಧ್ಯಯನಗಳು ತೋರಿಸಿವೆ. ಫೈಬರ್ ಮತ್ತು ಮೆಗ್ನೀಸಿಯಮ್, ವಿಟಮಿನ್ ಇ ಮತ್ತು ಆಂಟಿಆಕ್ಸಿಡೆಂಟ್ಗಳಂತಹ ಇತರ ಪೌಷ್ಟಿಕಾಂಶಗಳಿಂದ ತುಂಬಿರುವ ಇದು ರಕ್ತದ ಹರಿವನ್ನು ಸುಗಮವಾಗಿರಿಸಲು ಸಹಾಯ ಮಾಡುತ್ತದೆ. ಆದರೆ ತೂಕ ಇಳಿಕೆಗೆ ಇದು ಬಲು ಸಹಾಯಕಾರಿ.

ಸೇಬು

ಫೈಬರ್‌ನಿಂದ ತುಂಬಿರುವ ಸೇಬು ಜೀರ್ಣಕ್ರಿಯೆಗೆ ಸಹಾಯಕಾರಿಯಾಗಿದೆ. ಚಯಾಪಚಯ ಕ್ರಿಯೆಯನ್ನು ಸುಗಮಗೊಳಿಸುವ ಮೂಲಕ ತೂಕ ಇಳಿಕೆಗೆ ಇದು ಸಹಾಯ ಮಾಡುತ್ತದೆ.

ಕಾಫಿ

ನರಮಂಡಲದ ಚಟುವಟಿಕೆಯನ್ನು ಸಕ್ರಿಯವಾಗಿಸುತ್ತದೆ ಕಾಫಿ. ನಿಮ್ಮ ಚಯಾಪಚಯ ಕ್ರಿಯೆಗೆ ಸಹಕಾರಿಯಾದ ಈ ಪೇಯ ಕೊಬ್ಬನ್ನು ಕರಗಿಸುವಲ್ಲಿ ನಿಜಕ್ಕೂ ಗಮನಾರ್ಹ ಪಾತ್ರ ವಹಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ