ಆ್ಯಪ್ನಗರ

ತುಟಿಯ ಮೇಲೆ ಬೆರಳಿಟ್ಟು ಸೆಲ್ಫಿ ಕ್ಲಿಕ್ಕಿಸಿ

ಸೆಲ್ಫಿ ಕ್ರೇಜ್‌ ಇರುವವರನ್ನು ಇದೀಗ ಸೆಳೆದಿದೆ ಫಿಂಗರ್‌ಮೌತಿಂಗ್‌ ಇದು ಬ್ಯೂಟಿ ಟ್ರೆಂಡ್‌ ಕೂಡ ಹೌದು.

Vijaya Karnataka 6 Jan 2019, 5:00 am
ಕೆಲವರ ತುಟಿ ಸುಮ್ಮನೆ ಇರುವುದಿಲ್ಲ. ಅದರ ಮೇಲೆ ಬೆರಳುಗಳಿರುತ್ತವೆ. ಸದಾ ತುಟಿಗಳ ಮೇಲೆ ಬೆರಳಿಟ್ಟರೆ ಅಥವಾ ಹಲ್ಲುಗಳ ನಡುವೆ ಉಗುರುಗಳನ್ನಿಟ್ಟುಕೊಳ್ಳುವುದು ಕೆಲವರಿಗೆ ಅಭ್ಯಾಸ. ಆದರೆ ಅದೇ ರೂಢಿ ಇದೀಗ ಸೆಲ್ಫಿ ರೂಪದಲ್ಲಿ ಯುವ ಜನತೆಯನ್ನು ಸೆಳೆದಿದೆ.
Vijaya Karnataka Web what is fingermouthing
ತುಟಿಯ ಮೇಲೆ ಬೆರಳಿಟ್ಟು ಸೆಲ್ಫಿ ಕ್ಲಿಕ್ಕಿಸಿ

ತುಟಿಯ ಮೇಲೆ ಅಥವಾ ತುಟಿಯೊಳಗೆ ಬೆರಳನ್ನು ಇಡುವ ಮೂಲಕ ಸೆಲ್ಫಿ ತೆಗೆದುಕೊಳ್ಳುವುದು ಕೇವಲ ಸೆಲ್ಫಿ ಕ್ರೇಜ್‌ ಅಲ್ಲ, ಬ್ಯೂಟಿ ಟ್ರೆಂಡ್‌ ಕೂಡ ಹೌದು. ತುಟಿಯ ಬಣ್ಣ, ನೇಲ್‌ ಪಾಲಿಶ್‌, ತ್ವಚೆಯ ಮೂಲಕ ಗಮನ ಸೆಳೆಯುವುದು ಕೂಡ ಹೌದು. ಸಾಮಾನ್ಯವಾಗಿ ನಟಿಯರು, ಮಾಡೆಲ್‌ಗಳು ಪೋಟೋಶೂಟ್‌ ಸಮಯದಲ್ಲಿ ಇಂತಹ ಪೋಸ್‌ ಕೊಡುತ್ತಾರೆ.
ಹಾಲಿವುಡ್‌ ನಟಿಯರಾದ ಕೈಲಿ ಜೆನ್ನರ್‌, ಕಿಮ್‌ ಕರ್ದೇಶಿಯಾ ಸೇರಿದಂತೆ ಹಲವುರು ಇದನ್ನು ಟ್ರೈ ಮಾಡಿದ್ದಾರೆ. ಈ ಬಗ್ಗೆ ನಟಿ ಕೈಲಿ ಜನ್ನರ್‌ ಹೇಳಿದ್ದೇನು ಅಂದರೆ 'ನಾನು ನನ್ನ ತುಟಿಗಳ ಬಗ್ಗೆ ಅಸುರಕ್ಷೆ ಭಾವ ಹೊಂದಿದ್ದೆ. ಯಾವಾಗಲೂ ನನ್ನ ಬೆರಳು ತುಟಿಯ ಮೇಲಿರುತ್ತಿತ್ತು. ಈಗ ಅಂತಹ ಫೋಟೊಗಳನ್ನೇ ಪೋಸ್ಟ್‌ ಮಾಡುತ್ತೇನೆ ಎನ್ನುತ್ತಾರೆ.
ಸಾಮಾನ್ಯವಾಗಿ ಸೆಲ್ಫಿ ಸ್ವಮೋಹದ ಜತೆ ಆತ್ಮವಿಶ್ವಾಸನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ. ಈ ನಿಟ್ಟಿನಲ್ಲಿ ಇದೊಂದು ಧನಾತ್ಮಕ ಸಂಗತಿಯನ್ನು ತಿಳಿಸುವುದಾದರೆ ಇಂತಹದ್ದೊಂದು ಸೆಲ್ಫಿ ಟ್ರೈ ಮಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ