ಆ್ಯಪ್ನಗರ

ಹಬ್ಬಕ್ಕೆ ಹೂವಿನ ತೋರಣ

ಗೃಹಾಲಂಕಾರಕ್ಕೆ ಬೇಕಾದ ಕೆಲವು ವಸ್ತುಗಳನ್ನು ನೀವೇ ಮನೆಯಲ್ಲಿ ಮಾಡಬಹುದು...

Vijaya Karnataka 10 Oct 2018, 5:00 am
ಭವ್ಯಾ
Vijaya Karnataka Web thorana-1


ಗೃಹಾಲಂಕಾರಕ್ಕೆ ಬೇಕಾದ ಕೆಲವು ವಸ್ತುಗಳನ್ನು ನೀವೇ ಮನೆಯಲ್ಲಿ ಮಾಡಬಹುದು. ಈ ಪೈಕಿ ಮನೆಗೆ ಶೋಭೆ ತರುವ ಬಾಗಿಲ ತೋರಣಗಳನ್ನು ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಮಾಡಲು ಸಾಧ್ಯವಿದೆ. ಉಲ್ಲನ್‌ ನೂಲುಗಳಿಂದ ನೇಯ್ದ ಬಾಗಿಲ ತೋರಣಗಳು ಸುಂದರವಾಗಿ ಕಾಣುತ್ತವೆ.

ಬೇಕಾಗುವ ಸಾಮಗ್ರಿ

ವಿವಿಧ ಬಣ್ಣದ ಉಲ್ಲನ್‌ ದಾರ, ಉಲ್ಲನ್‌ ಹೂವು ಮಾಡುವ ಚಕ್ರ, ದೊಡ್ಡ ಸೂಜಿ, ಕತ್ತರಿ.

ಮಾಡುವ ವಿಧಾನ

1. ಉಲ್ಲನ್‌ ದಾರವನ್ನು ಗಂಟು ಬೀಳದಂತೆ ಜಾಗ್ರತೆಯಿಂದ ಉಂಡೆಯಂತೆ ಸುತ್ತಿ.

2. ಬಳಿಕ ಹೂವು ತಯಾರಿಸುವ ಚಕ್ರದ ಕಡ್ಡಿಗಳಿಗೆ ಹೂವಿನ ಆಕಾರ ಬರುವಂತೆ ದಾರವನ್ನು ಎಂಟರಿಂದ ಹತ್ತು ಎಳೆಯಲ್ಲಿ ಸುತ್ತಿ.

3. ಎರಡು ಅಳತೆಯಲ್ಲಿ ಹೂವನ್ನು ತಯಾರಿಸಬಹುದಾದರೂ ಈ ತೋರಣಕ್ಕೆ ಚಿಕ್ಕ ಅಳತೆಯನ್ನೇ ಆಯ್ದುಕೊಳ್ಳಿ.

4. ದಾರವನ್ನು ಚಕ್ರಕ್ಕೆ ಒಂದು ಸುತ್ತು ಸುತ್ತಿದ ಬಳಿಕವೇ ಇನ್ನೊಂದರಂತೆ ಹತ್ತು ಸುತ್ತು ಸುತ್ತಿ.

5. ದಾರವನ್ನು ತಪ್ಪಿಲ್ಲದಂತೆ ಸುತ್ತಿದರೆ ಸುತ್ತಿರುವ ದಾರದ ನಡುವೆ ರಂಧ್ರದಂತೆ ಜಾಗವಿರುತ್ತದೆ.

6. ಬೇರೊಂದು ದಾರಕ್ಕೆ ಸೂಜಿ ಪೋಣಿಸಿ ಮಧ್ಯ ಹಾಗೂ ಪಕ್ಕದ ರಂಧ್ರದಂತೆ ಹೂವಿನ ಸುತ್ತಲೂ ಇದೇ ಮಾದರಿಯಲ್ಲಿ ಎಲ್ಲಾ ದಾರಗಳನ್ನೂ ಸೇರಿಸಿ ಹೊಲಿಯಿರಿ.

7. ಹೆಚ್ಚಿರುವ ದಾರಗಳನ್ನು ಕತ್ತರಿಸಿ ಚಕ್ರದಿಂದ ಸಿದ್ಧವಾದ ಹೂವನ್ನು ಹೊರತೆಗೆಯಿರಿ.

8. ಕೊನೆಗೆ ಪ್ರತಿ ಬಿಡಿ ಹೂಗಳನ್ನೂ ದಾರದಿಂದ ಒಂದಕ್ಕೊಂದು ಜೋಡಿಸಿ ತೋರಣದಂತೆ ಸಿದ್ಧಗೊಳಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ