ಆ್ಯಪ್ನಗರ

ಮಾವಿನ ಹಣ್ಣು ತಿನ್ನದಿದ್ದರೆ ಆರೋಗ್ಯಕ್ಕೆ ನಷ್ಟ!

ಮಾವಿನ ಹಣ್ಣನ್ನು ನೋಡುವಾಗ ತಿನ್ನಬೇಕೆಂದು ಅನಿಸುತ್ತದೆ. ಆದರೆ ಎಲ್ಲಿ ದಪ್ಪಗಾಗುತ್ತೇನೆ ಎಂಬ ಭಯದಿಂದ ಆ ಹಣ್ಣನ್ನು ದೂರವಿಡುತ್ತಿದ್ದೀರಾ?

Vijaya Karnataka Web 2 May 2017, 11:35 am
ಮಾವಿನ ಹಣ್ಣನ್ನು ನೋಡುವಾಗ ತಿನ್ನಬೇಕೆಂದು ಅನಿಸುತ್ತದೆ. ಆದರೆ ಎಲ್ಲಿ ದಪ್ಪಗಾಗುತ್ತೇನೆ ಎಂಬ ಭಯದಿಂದ ಆ ಹಣ್ಣನ್ನು ದೂರವಿಡುತ್ತಿದ್ದೀರಾ? ಹಾಗಾದರೆ ನೀವು ತಪ್ಪು ಮಾಹಿತಿಯಿಂದಾಗಿ ಹಾಗೆ ಮಾಡುತ್ತಿದ್ದೀರಾ.
Vijaya Karnataka Web celebrity nutritionist tells you why you must eat mangoes
ಮಾವಿನ ಹಣ್ಣು ತಿನ್ನದಿದ್ದರೆ ಆರೋಗ್ಯಕ್ಕೆ ನಷ್ಟ!


ಸೀಸನ್‌ನಲ್ಲಿ ದೊರೆಯುವ ಮಾವಿನ ಹಣ್ಣನ್ನು ತಿನ್ನಲೇಬೇಕೆಂದು ಸೆಲೆಬ್ರಿಟಿ ನ್ಯೂಟ್ರಿಷಿಯನ್ ರುಜುತ ದಿವಾಕರ್‌ ಸಲಹೆ ನೀಡುತ್ತಾರೆ.

ಹೆರಿಗೆಯ ನಂತರ ತೂಕ ಕಮ್ಮಿಯಾಗಲು ಕರೀನಾ ಕಪೂರ್‌ ಕೂಡ ಈ ನ್ಯೂಟ್ರಿಷಿಯನ್‌ ಸಲಹೆ ಪಾಲಿಸುತ್ತಿದ್ದಾರೆ. ಈ ನ್ಯೂಟ್ರಿಷಿಯನ್‌ ಈ ಸಮಯದಲ್ಲಿ ಮಾವಿನ ಹಣ್ಣನ್ನು ತಿನ್ನುವುದನ್ನು ಏಕೆ ಮಿಸ್‌ ಮಾಡಬಾರದೆಂದು ಕಾರಣ ಸಹಿತ ವಿವರಿಸುತ್ತಾರೆ ನೋಡಿ:

ರುಜುತ ಅವರ ಪ್ರಕಾರ ಮಾವಿನ ಹಣ್ಣನ್ನು ತಿನ್ನಲೇಬೇಕು ಎನ್ನುವುದಕ್ಕೆ ಪ್ರಮುಖ ಕಾರಣಗಳೆಂದರೆ

* ಅದು ಸ್ಥಳೀಯ ಹಣ್ಣು, ಸ್ಥಳೀಯ ಹಣ್ಣುಗಳು ಯಾವಾಗಲೂ ಆರೋಗ್ಯಕ್ಕೆ ಒಳ್ಳೆಯದು.
* ಇದು ಸೀಸನ್ ಹಣ್ಣು. ಸೀಸನ್ ಹಣ್ಣುಗಳಲ್ಲಿ ಆಯಾ ಕಾಲಕ್ಕೆ ತಕ್ಕಂತೆ ನಮ್ಮ ಆರೋಗ್ಯವನ್ನು ಕಾಪಾಡುವ ಗುಣವಿರುತ್ತದೆ.'

ಮಾವಿನ ಹಣ್ಣಿನಲ್ಲಿರುವ ಪೋಷಕಾಂಶಗಳು

ವಿಟಮಿನ್ ಎ: ಇದು ತ್ವಚೆಗೆ ತುಂಬಾ ಒಳ್ಳೆಯದು.

ವಿಟಮಿನ್‌ ಸಿ: ನಮ್ಮ ಮೂಳೆಗೆ ಒಳ್ಳೆಯದು.

ನಾರಿನಂಶ: ಮಾವಿನ ಹಣ್ಣು ಮಲಬದ್ಧತೆ ನಿವಾರಣೆ ತುಂಬಾ ಒಳ್ಳೆಯದು. ಇದು ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವಿಟಮಿನ್‌ ಬಿ6: ಕೆಲವರಿಗೆ ಹೊಟ್ಟೆ ಉಬ್ಬುವ ಸಮಸ್ಯೆ ಕಂಡು ಬರುತ್ತದೆ. ವಿಟಮಿನ್‌ 6 ಈ ಸಮಸ್ಯೆ ಬರದಂತೆ ತಡೆಯಲು ಸಹಕಾರಿ.

ತಪ್ಪು ಕಲ್ಪನೆಗಳು

ಮಾವಿನ ಹಣ್ಣನ್ನು ಮಧುಮೇಹಿಗಳು ತಿನ್ನಬಾರದು, ಈ ಹಣ್ಣು ತಿಂದರೆ ತೂಕ ಹೆಚ್ಚುವುದು, ದೇಹದ ಉಷ್ಣತೆ ಹೆಚ್ಚುವುದು ಇವೆಲ್ಲಾ ತಪ್ಪು ಕಲ್ಪನೆಗಳು.

ಆದ್ದರಿಂದ ಈ ಸೀಸನ್‌ನಲ್ಲಿ ದೊರೆಯುವ ಮಾವಿನ ಹಣ್ಣನ್ನು ಮಿಸ್‌ ಮಾಡದೆ ತಿನ್ನಿ ಎನ್ನುವುದು ರುಜುತ ಅವರ ಸಲಹೆ.
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ