ಆ್ಯಪ್ನಗರ

ಚಳಿಗಾಲದಲ್ಲಿ ಕೂದಲಿನ ಆರೋಗ್ಯಕ್ಕೆ 5 ಟಿಪ್ಸ್

ಚಳಿಗಾಲದಲ್ಲಿ ಕೂದಲು ಒರಟಾಗುವುದು, ತಲೆ ಹೊಟ್ಟು, ಕೂದಲು ಉದುರುವುದು ಈ ರೀತಿಯ ಸಮಸ್ಯೆ ಕಂಡು ಬರುವುದು ಅಧಿಕ.

Vijaya Karnataka Web 22 Nov 2017, 4:10 pm
ಚಳಿಗಾಲದಲ್ಲಿ ಕೂದಲು ಒರಟಾಗುವುದು, ತಲೆ ಹೊಟ್ಟು, ಕೂದಲು ಉದುರುವುದು ಈ ರೀತಿಯ ಸಮಸ್ಯೆ ಕಂಡು ಬರುವುದು ಅಧಿಕ. ಆದರೆ ಸರಿಯಾದ ಆರೈಕೆ ಮಾಡಿದರೆ ಕೂದಲಿನ ಸೌಂದರ್ಯ ಹಾಗೂ ಆರೋಗ್ಯ ಕಾಪಾಡಬಹುದು.
Vijaya Karnataka Web 5 winter hair care tips
ಚಳಿಗಾಲದಲ್ಲಿ ಕೂದಲಿನ ಆರೋಗ್ಯಕ್ಕೆ 5 ಟಿಪ್ಸ್


ಚಳಿಗಾಲಕ್ಕೆ ಕೂದಲಿನ ಆರೈಕೆ ಹೀಗಿರಲಿ:

ತಲೆ ಹೊಟ್ಟಿನ ನಿವಾರಣೆ
1 ಚಮಚ ಆಲೀವ್‌ ಆಯಿಲ್‌, 1 ಚಮಚ ಕೊಬ್ಬರಿ ಎಣ್ಣೆ ಮಿಕ್ಸ್‌ ಮಾಡಿ, ಅದಕ್ಕೆ ಸ್ವಲ್ಪ ನಿಂಬೆರಸ ಮಿಕ್ಸ್‌ ಮಾಡಿ ತಲೆ -ಬುಡಕ್ಕೆ ಚೆನ್ನಾಗಿ ಹಚ್ಚಿ 20-30 ನಿಮಿಷ ಬಿಟ್ಟು ಶ್ಯಾಂಪೂ ಮತ್ತು ಕಂಡೀಷನರ್‌ ಬಳಸಿ ತಲೆ ತೊಳೆಯಿರಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿ.

ಹದ ಬಿಸಿ ನೀರಿನಿಂದ ತಲೆ ತೊಳೆಯಿರಿ
ಚಳಿಗಾಲದಲ್ಲಿ ತಣ್ಣೀರಿನಿಂದ ತಲೆ ತೊಳೆಯುವ ಬದಲು ಉಗುರು ಬೆಚ್ಚಗಿನ ನೀರಿನಿಂದ ತಲೆ ತೊಳೆಯಿರಿ. ಉಗುರು ಬೆಚ್ಚಗಿನ ನೀರು ಚಳಿಗಾಲದಲ್ಲಿ ತಲೆಗೆ ಬಿದ್ದಾಗ ರಕ್ತ ಸಂಚಾರ ಚೆನ್ನಾಗಿ ಆಗುವುದು. ಇದು ಕೂದಲಿಗೆ ಒಳ್ಳೆಯದು.

ಕೂದಲು ಸೊಂಪಾಗಿ ಕಾಣಲು
ತಲೆಗೆ ಜೇನು ಹಚ್ಚಿ ಟವಲ್‌ ಸುತ್ತಿ ಅರ್ಧ ಗಂಟೆಯ ಬಳಿಕ ಹದ ಬಿಸಿ ನೀರಿನಿಂದ ತಲೆ ತೊಳೆಯರಿ. ಹೀಗೆ ಮಾಡಿದರೆ ಕೂದಲು ಸೊಂಪಾಗಿ ಕಾಣುವುದು.

ಡ್ರೈಯರ್‌ ಬಳಸಿ ಕೂದಲು ಒಣಗಿಸುತ್ತೀರಾ?
ಡ್ರೈಯರ್‌ ಬಳಸಿ ಕೂದಲು ಒಣಗಿಸುವುದಾದರೆ ಡ್ರೈಯರ್‌ ಅನ್ನು 15 ಸೆಂಟಿಮೀಟರ್‌ ದೂರ ಹಿಡಿಯಿರಿ. ಡ್ರೈಯರ್‌ ಬದಲು ಸೂರ್ಯನ ಬಿಸಿಲಿಗೆ ತಲೆ ಒಣಗಿಸಿದರೆ ಒಳ್ಳೆಯದು.

ಕಂಡೀಷನರ್‌ ಅನ್ನು ಹೀಗೆ ಬಳಸಿ
ಕಂಡೀಷನರ್‌ ಹಚ್ಚಿ ಒಂದು 2 ನಿಮಿಷ ಬಿಡಿ, ನಂತರ ಹದ ಬಿಸಿ ಅಥವಾ ತಣ್ಣೀರಿನಿಂದ ತಲೆ ತೊಳೆಯಿರಿ. ಇದರಿಂದ ಕೂದಲು ನುಣಪಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ