ಆ್ಯಪ್ನಗರ

ಬಾದಾಮಿ ಎಣ್ಣೆ ಸ್ವಲ್ಪ ದುಬಾರಿ, ಆದರೆ ಕೂದಲಿನ ಆರೈಕೆಗೆ ಒಳ್ಳೆಯದು

ಬಾದಾಮಿ ಎಣ್ಣೆಯನ್ನು ಬಳಕೆ ಮಾಡಿದರೆ, ಅದರಿಂದ ಹಲವಾರು ರೀತಿಯ ಲಾಭಗಳು ಸಿಗುವುದು.

Vijaya Karnataka Web 31 Aug 2021, 10:36 am
ಪ್ರತಿಯೊಂದು ಎಣ್ಣೆಗಳು ಕೂಡ ಕೂದಲಿಗೆ ಪೋಷಣೆ ನೀಡಿ, ಅದರ ಆರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಕೆಲವೊಂದು ಪ್ರಮುಖ ಎಣ್ಣೆಯಲ್ಲಿ ಒಂದಾಗಿರುವಂತಹ ಬಾದಾಮಿ ಎಣ್ಣೆಯು ಕೂದಲಿಗೆ ಎಲ್ಲಾ ರೀತಿಯಿಂದಲೂ ಪೋಷಣೆ ನೀಡುವುದು ಮಾತ್ರವಲ್ಲದೆ, ಕೂದಲನ್ನು ಕಾಂತಿಯುತವಾಗಿಸುವುದು.
Vijaya Karnataka Web benefits of almond oil for healthy hair that you should know
ಬಾದಾಮಿ ಎಣ್ಣೆ ಸ್ವಲ್ಪ ದುಬಾರಿ, ಆದರೆ ಕೂದಲಿನ ಆರೈಕೆಗೆ ಒಳ್ಳೆಯದು


ಕೂದಲನ್ನು ಕಾಂತಿಯುತ ಹಾಗೂ ಬಲಿಷ್ಠವಾಗಿಸಲು ನೀವು ಹಲವಾರು ರೀತಿಯ ಶಾಂಪೂ ಹಾಗೂ ಕಂಡೀಷನರ್ ಗಳನ್ನು ಬಳಸಿರಬಹುದು. ಆದರೆ ಬಾದಾಮಿ ಎಣ್ಣೆಯು ಅದ್ಭುತವಾಗಿ ಪರಿಣಾಮ ನೀಡುವುದು.

​ಮೊಶ್ಚಿರೈಸರ್

  • ಬಾದಾಮಿ ಎಣ್ಣೆಯು ಕೂದಲನ್ನು ಮೊಶ್ಚಿರೈಸ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ಹಲವಾರು ರೀತಿಯ ಕೊಬ್ಬಿನಾಮ್ಲಗಳು ಮತ್ತು ಏಕಪರ್ಯಾಪ್ತ ಕೊಬ್ಬು ಇರುವ ಕಾರಣದಿಂದಾಗಿ ಇದು ಮೊಶ್ಚಿರೈಸ್ ಆಗಿ ಕೆಲಸ ಮಾಡುವುದು. ತಲೆಬುರುಡೆಯು ಒಣಗಿದ್ದರೆ ಅದರಿಂದ ಹಲವಾರು ರೀತಿಯ ಕೂದಲಿನ ಸಮಸ್ಯೆಗಳು ಕಂಡುಬರುವುದು.
  • ಆರಂಭದಲ್ಲಿ ತಲೆಬುರುಡೆಯಲ್ಲಿ ತುರಿಕೆ ಉಂಟಾಗುವುದು, ಇದರ ಬಳಿಕ ಚರ್ಮವು ಕೆಂಪಾಗುವುದು, ಉರಿಯೂತ ಮತ್ತು ತಲೆಹೊಟ್ಟು ಕೂಡ ಕಂಡುಬರುವುದು.
  • ಬಾದಾಮಿ ಎಣ್ಣೆಯನ್ನು ಬಳಸಿದರೆ ಅದರಿಂದ ತಲೆಬುರುಡೆಯು ಮೊಶ್ಚಿರೈಸ್ ಆಗುವುದು ಮತ್ತು ಕೂದಲಿನ ಕಿರುಚೀಲಗಳಿಗೆ ಬೇಕಾಗುವ ಪೋಷಕಾಂಶಗಳು ಸಿಗುವುದು. ಎಣ್ಣೆಯುಕ್ತ ಚರ್ಮವಿರುವವರು ಕೂಡ ಬಾದಾಮಿ ಎಣ್ಣೆಯ ಬಳಕೆಯಿಂದ ಲಾಭ ಪಡೆಯಬಹುದು.

ಉದ್ದನೆಯ ಸೊಂಪಾದ ಕೂದಲಿಗೆ ಬಾದಾಮಿ ಎಣ್ಣೆ+ ಹೆನ್ನಾ ಹೇರ್ ಮಾಸ್ಕ್

​ಪೋಷಣೆ ನೀಡುವುದು

  • ಬಾದಾಮಿ ಎಣ್ಣೆಯು ಕೂದಲಿನ ಆಳಕ್ಕೆ ಇಳಿಯುವುದು ಮತ್ತು ಕೂದಲಿನಲ್ಲಿ ಮೊಶ್ಚಿರೈಸ್ ನ್ನು ಕಾಪಾಡಿಕೊಂಡು ಕೂದಲಿನ ಬುಡಕ್ಕೆ ಬೇಕಾಗುವಂತಹ ಪೋಷಣೆ ಒದಗಿಸುವುದು. ಇದರಿಂದ ಕೂದಲಿಗೆ ಹಲವಾರು ರೀತಿಯ ಲಾಭಗಳು ಸಿಗುವುದು.
  • ಅತಿಯಾದ ಧೂಳು ಹಾಗೂ ಕಲ್ಮಶ ಇರುವಂತಹ ಇಂದಿನ ದಿನಗಳಲ್ಲಿ ಕೂಡ ಬಾದಾಮಿ ಎಣ್ಣೆಯು ತುಂಬಾ ಪರಿಣಾಮಕಾರಿ ಆಗಿ ಕೂದಲಿನ ರಕ್ಷಣೆ ಮಾಡುವುದು. ಸ್ವಲ್ಪ ಒದ್ದೆ ಇರುವಂತಹ ಕೂದಲಿಗೆ ಬಾದಾಮಿ ಎಣ್ಣೆಯನ್ನು ಹಚ್ಚಿಕೊಳ್ಳಬಹುದು.
  • ಈ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಂಡು ಸರಿಯಾಗಿ ಮಸಾಜ್ ಮಾಡಿ. ಇದು ಕೂದಲಿನ ಆಳಕ್ಕೆ ಇಳಿದ ಬಳಿಕ ಸರಿಯಾಗಿ ಕೂದಲನ್ನು ಬಾಚಿಕೊಳ್ಳಿ. ಅತಿಯಾಗಿ ಎಣ್ಣೆ ಹಚ್ಚಿಕೊಳ್ಳಬೇಡಿ. ಇದರಿಂದ ಕೂದಲು ಎಣ್ಣೆಯಿಂದ ಮುಳುಗಿ ಹೋಗಬಹುದು.

​ಕೂದಲಿಗೆ ಕಾಂತಿ

  • ಕೂದಲು ತುಂಬಾ ನಿಸ್ತೇಜ, ಕಳೆಗುಂದಿದಂತೆ ಇದ್ದರೆ ಅದು ಯಾರಿಗೂ ಇಷ್ಟವಾಗದು. ಬಾದಾಮಿ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ಹಚ್ಚಿಕೊಂಡರೆ ಆಗ ಅದು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡಿ ಬೇಕಾಗಿರುವಂತಹ ಪೋಷಕಾಂಶಗಳನ್ನು ನೀಡುವ ಜತೆಗೆ ಕೂದಲನ್ನು ಕಾಂತಿಯುತವಾಗಿಸುವುದು.
  • ಕೂದಲಿನ ಕಿರುಚೀಲ ಮತ್ತು ತಲೆಬುರುಡೆಯನ್ನು ಬಲಪಡಿಸಿ, ಕೂದಲಿಗೆ ಕಾಂತಿ ನೀಡುವುದು. ತಲೆಬುರುಡೆಯು ಆರೋಗ್ಯಕಾರಿಯಾಗಿದ್ದರೆ, ಆಗ ಕೂದಲಿಗೆ ಕಾಂತಿ ಸಿಗುವುದು. ಬಾದಾಮಿ ಎಣ್ಣೆಯು ಕೂದಲಿನ ಕಾಂತಿ ಉಳಿಸುವಂತಹ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ. ಬಾದಾಮಿ ಎಣ್ಣೆಯ ಮಾಸ್ಕ್ ನ್ನು ಬಳಸಿದರೆ ಅದು ಕಾಂತಿ ನೀಡುವುದು.

ಹೇರ್ ಕೇರ್: ಮೊಟ್ಟೆ ಕೂದಲಿಗೂ ನೀಡುವುದು ಕಾಂತಿ!

​ಒಡೆದ ಕೂದಲಿನ ತುದಿಗಳು

  • ಕೂದಲಿನ ತುದಿಗಳು ಒಡೆದು ಹೋಗಿದ್ದರೆ, ಆಗ ಇದು ಕೂದಲಿನ ಕಾಂತಿಯನ್ನು ಕುಂದಿಸುವುದು. ಇದು ಕೂದಲಿನ ಸಂಪೂರ್ಣ ವಿನ್ಯಾಸಕ್ಕೆ ಹಾನಿ ಉಂಟು ಮಾಡುವುದು. ಕೂದಲಿನ ತುದಿಯು ಒಡೆದು ಹೋಗಿದ್ದರೆ, ಆಗ ಕೂದಲು ತುಂಡಾಗಬಹುದು.
  • ಬಾದಾಮಿ ಎಣ್ಣೆಯಲ್ಲಿ ಒಮೆಗಾ3, ಒಮೆಗಾ6, ಒಮೆಗಾ9 ಕೊಬ್ಬಿನಾಮ್ಲಗಳು, ವಿಟಮಿನ್ ಗಳಾಗಿರುವಂತಹ ವಿಟಮಿನ್ ಬಿ, ವಿಟಮಿನ್ ಎ ಮತ್ತು ವಿಟಮಿನ್ ಇ ಸಮೃದ್ಧವಾಗಿದೆ.
  • ಇದು ಕೂದಲಿನ ಬುಡವನ್ನು ಬಲಪಡಿಸುವುದು ಮತ್ತು ಬಿಸಿಲಿನಿಂದಾಗಿ ಕೂದಲಿಗೆ ಆಗುವ ಹಾನಿಯನ್ನು ತಪ್ಪಿಸುವುದು. ಬಾದಾಮಿ ಎಣ್ಣೆಯು ಸುರಕ್ಷಾ ಕವಚವನ್ನು ಸೃಷ್ಟಿ ಮಾಡಿ, ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುವುದು.

​ತಲೆಹೊಟ್ಟು ದೂರ ಮಾಡುವುದು

  • ಇಂದಿನ ದಿನಗಳಲ್ಲಿ ಜನರು ಎದುರಿಸುವಂತಹ ದೊಡ್ಡ ಸಮಸ್ಯೆಯೆಂದರೆ ಅದು ತಲೆಹೊಟ್ಟು. ಬಾದಾಮಿ ಎಣ್ಣೆಯು ತಲೆಬುರುಡೆಯನ್ನು ಶುಚಿ ಮಾಡುವುದು ಮತ್ತು ಚರ್ಮದ ಸತ್ತ ಕೋಶಗಳನ್ನು ದೂರ ಮಾಡುವುದು.
  • ಇದರಿಂದ ತಲೆಹೊಟ್ಟು ನಿವಾರಣೆ ಆಗುವುದು. ಇದು ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುವುದು. ಬಾದಾಮಿ ಎಣ್ಣೆಯು ಕೂದಲಿಗೆ ಹಗುರವಾಗಿದ್ದು, ಇದು ತಲೆಹೊಟ್ಟನ್ನು ದೂರ ಓಡಿಸುವುದು. ತಲೆಹೊಟ್ಟು ನಿವಾರಣೆ ಮಾಡಲು ಬಾದಾಮಿ ಎಣ್ಣೆಯ ಜತೆಗೆ ರೋಸ್ಮೆರಿ ಎಣ್ಣೆಯನ್ನು ಬಳಕೆ ಮಾಡಿದರೆ ತುಂಬಾ ಪರಿಣಾಮಕಾರಿ.

ತಲೆಹೊಟ್ಟು ಕೂದಲು ಉದುರುವಿಕೆಗೆ ಹಾಗೂ ಬಿಳಿಕೂದಲಿನ ಸಮಸ್ಯೆಗೆ ಮನೆಮದ್ದುಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ