ಆ್ಯಪ್ನಗರ

ತಲೆಹೊಟ್ಟಿನ ಸಮಸ್ಯೆ ಇದ್ದವರಿಗೆ ಅಂಟುವಾಳಕಾಯಿ ಸೂಪರ್ ಮನೆಮದ್ದು!

ತಲೆಹೊಟ್ಟು, ಕೂದಲು ಉದುರುವಿಕೆ, ಒಣ ಕೂದಲಿನ ಸಮಸ್ಯೆ ಇದ್ದರೆ ಮೊದಲು ಅಂಟುವಾಳ ಕಾಯಿ ಬಳಕೆ ಮಾಡಿ.

Vijaya Karnataka Web 28 Aug 2021, 10:10 am
ತಲೆ ಕೂದಲಿಗೆ ಸಂಬಂಧಪಟ್ಟಂತೆ ಹಲವಾರು ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಕೆಲವರಿಗೆ ವಯಸ್ಸಿಗೆ ಅನುಗುಣವಾಗಿ ಸಮಸ್ಯೆಗಳು ಶುರುವಾದರೆ ಇನ್ನು ಕೆಲವರಿಗೆ ಯಾವುದೇ ಸಮಯದಲ್ಲಿ ದೇಹದಲ್ಲಿ ಉಂಟಾಗುವ ಬದಲಾವಣೆಗಳ ಕಾರಣದಿಂದ ತೊಂದರೆಗಳು ಕಾಣಿಸಲು ಪ್ರಾರಂಭ ಆಗುತ್ತವೆ.
Vijaya Karnataka Web benefits of using reetha for hair to get rid from dandruff naturally
ತಲೆಹೊಟ್ಟಿನ ಸಮಸ್ಯೆ ಇದ್ದವರಿಗೆ ಅಂಟುವಾಳಕಾಯಿ ಸೂಪರ್ ಮನೆಮದ್ದು!


ಕೆಲವೊಂದು ಸಾಂಪ್ರದಾಯಿಕ ಪರಿಹಾರಗಳಿಂದ ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬಹುದು. ಆದರೆ ರಾಸಾಯನಿಕ ಉತ್ಪನ್ನಗಳ ಬಳಕೆ ಬೇಡ ಎಂಬುದು ಹಲವರ ವಾದ. ನೆತ್ತಿಯ ಭಾಗದಲ್ಲಿ ಉಂಟಾಗುವ ಫಂಗಲ್ ಸೋಂಕುಗಳಿಗೆ ಉತ್ತರವಾಗಿ ನಮ್ಮ ಬಳಿಯಿರುವ ಮನೆಮದ್ದುಗಳು ಕೆಲಸ ಮಾಡಲಿವೆ.

​ತಲೆ ಕೂದಲಿನ ತಲೆ ಹೊಟ್ಟು ಅಂಟುವಾಳ ಕಾಯಿ ಬಳಸಿ

ನಿಮ್ಮ ತಲೆ ಹೊಟ್ಟಿನ ದೀರ್ಘ ಕಾಲದ ಸಮಸ್ಯೆಗಳಿಗೆ ಅಂಟುವಾಳ ಕಾಯಿ ಬಳಕೆ ಮಾಡಿ ಎಂದು ಹೇಳುವ ಕಾರಣ ಎಂದರೆ ಅದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣ ಲಕ್ಷಣಗಳು. ಇದರಿಂದ ಸೋಂಕುಗಳನ್ನು ದೂರ ಇರಿಸಲು ಸಹಾಯವಾಗುತ್ತದೆ.

ಅಂಟುವಾಳ, ಮಂತೆಕಾಳು, ಬೇವು, ನಿಂಬೆಹಣ್ಣು, ಡ್ಯಾಂಡ್ರಫ್ ಸಮಸ್ಯೆಗೆ ಪರ್ಫೆಕ್ಟ್ ಮನೆಮದ್ದು

​ತಲೆ ಕೂದಲಿನ ಸಮಸ್ಯೆಗಳಿಗೆ ಅಂಟುವಾಳ ಕಾಯಿ ಹೀಗೆ ಪರಿಹಾರವಾಗಬಲ್ಲದು

ತಲೆ ಹೊಟ್ಟಿನ ನಿವಾರಣೆ ಇದರಿಂದ ತುಂಬಾ ಸುಲಭ

  • ದೀರ್ಘ ಕಾಲದವರೆಗೆ ನಿಮ್ಮ ತಲೆ ಹೊಟ್ಟಿನ ಸಮಸ್ಯೆ ನಿಮ್ಮನ್ನು ಈಗಾಗಲೇ ಕಾಡುತ್ತಿದ್ದರೆ ಮತ್ತು ತೊಂದರೆ ನೀಡಿದರೆ ಇನ್ನು ಮುಂದೆ ನೀವು ನಾಲ್ಕು ಜನರ ಮಧ್ಯೆ ಕಿರಿಕಿರಿಗೆ ಒಳಗಾಗುವ ಸಾಧ್ಯತೆ ಇರುವುದಿಲ್ಲ.
  • ಏಕೆಂದರೆ ಅಂಟುವಾಳ ಕಾಯಿ ಈ ವಿಷಯದಲ್ಲಿ ನಿಮಗೆ ಸಹಾಯಕ್ಕೆ ಬರಲಿದೆ. ಇದಕ್ಕಾಗಿ ನೀವು ಸುಮಾರು 10 ರಿಂದ 15 ರೀತಾ ಬೀಜಗಳನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬಿ. ಸುಮಾರು 15 ನಿಮಿಷಗಳ ಕಾಲ ನೀರಿನಲ್ಲಿ ಚೆನ್ನಾಗಿ ಕುದಿಸಿ.
  • ಇಡೀ ರಾತ್ರಿ ನೀರಿನಲ್ಲಿ ನೆನೆ ಹಾಕಿ. ಬೆಳಗ್ಗೆ ಎದ್ದು ಸೋಸಿಕೊಂಡು ಅದಕ್ಕೆ ಸ್ವಲ್ಪ ನೆಲ್ಲಿಕಾಯಿ ಪುಡಿ ಅಥವಾ ರಸ ಬೆರೆಸಿ. ಇದನ್ನು ನಿಮ್ಮ ನೆತ್ತಿಯ ಮೇಲ್ಭಾಗದಲ್ಲಿ ಅನ್ವಯಿಸಿ ಸುಮಾರು ಅರ್ಧ ಗಂಟೆಗಳ ಕಾಲ ಇದನ್ನು ಹಾಗೇ ಬಿಟ್ಟು ನಂತರ ತಲೆ ತೊಳೆದುಕೊಳ್ಳಿ. ಬೇಕೆಂದರೆ ತಲೆ ಸ್ನಾನ ಮಾಡಲು ಉಗುರು ಬೆಚ್ಚಗಿನ ನೀರನ್ನು ಬಳಕೆ ಮಾಡಬಹುದು.

ತಲೆಕೂದಲು ಉದುರುವಿಕೆ ಸಮಸ್ಯೆ ಪರಿಹಾರಕ್ಕೆ ಸುಲಭವಾದ ಮನೆಮದ್ದುಗಳು

​ತಲೆ ಕೂದಲಿನ ಸ್ವಚ್ಛತೆ ಕಾಯ್ದುಕೊಳ್ಳಬಹುದು

  • ನಿಯಮಿತವಾಗಿ ನಿಮ್ಮ ತಲೆ ಕೂದಲನ್ನು ಆಗಾಗ ಸ್ವಚ್ಛ ಮಾಡುವುದರಿಂದ ಮತ್ತು ಹೆಚ್ಚು ಗಾಢವಾದ ಶಾಂಪು ಬಳಕೆ ಮಾಡದೇ ಇರುವುದರಿಂದ ನೈಸರ್ಗಿಕವಾದ ರೀತಿಯಲ್ಲಿ ನಿಮ್ಮ ತಲೆ ಕೂದಲು ಆರೋಗ್ಯದಿಂದ ಕೂಡಿರುತ್ತದೆ. ಒಣ ಕೂದಲಿನ ಸಮಸ್ಯೆ ಕಂಡು ಬರುವುದಿಲ್ಲ.
  • ಬೇಕೆಂದರೆ ನೀವು ತಲೆ ಕೂದಲಿನ ಸ್ವಚ್ಛತೆಗೆ ಸೀಗೆಕಾಯಿ ಮತ್ತು ರೀತಾ ಒಟ್ಟಾರೆಯಾಗಿ ಬಳಕೆ ಮಾಡಬಹುದು. ಸಮಪ್ರಮಾಣದಲ್ಲಿ ಎರಡನ್ನೂ ತೆಗೆದುಕೊಂಡು ಅದಕ್ಕೆ ನೀರು ಹಾಕಿ ಮಿಶ್ರಣ ಮಾಡಿ. ನಿಮ್ಮ ತಲೆ ಕೂದಲನ್ನು ಸ್ವಚ್ಛವಾಗಿ ಶಾಂಪು ಬಳಸಿ ತೊಳೆದುಕೊಳ್ಳಿ.
  • ತಲೆ ಸ್ವಚ್ಛ ಮಾಡುವ ಸಂದರ್ಭದಲ್ಲಿ ಇದು ಹೆಚ್ಚು ನೊರೆಯನ್ನು ಉತ್ಪತ್ತಿ ಮಾಡದೇ ಇದ್ದರೂ ಕೂಡ ತಲೆ ಕೂದಲು ಬಹಳ ಚೆನ್ನಾಗಿ ಸ್ವಚ್ಛವಾಗುತ್ತದೆ.
  • ಒಂದುವೇಳೆ ನಿಮಗೆ ಅತಿಯಾದ ಒಣ ಕೂದಲಿನ ಸಮಸ್ಯೆ ಇದ್ದರೆ ಶಾಂಪೂ ಜೊತೆಗೆ ಸ್ವಲ್ಪ ಹೆಚ್ಚಿನ ಸೀಗೆಕಾಯಿ ಪುಡಿ ಬಳಕೆ ಮಾಡಿ. ತಲೆ ಸ್ನಾನ ಮಾಡುವ ಒಂದು ಗಂಟೆ ಮುಂಚೆ ತಲೆಗೆ ತೆಂಗಿನ ಎಣ್ಣೆ ಅನ್ವಯಿಸಿ. ಇದರಿಂದ ಉತ್ತಮ ಫಲಿತಾಂಶಗಳು ಸಿಗಲಿವೆ.

​ಹೊಳಪಿನ ಹಾಗೂ ನುಣುಪಾದ ತಲೆ ಕೂದಲು ನಿಮ್ಮದಾಗಲು

  • ಹೊರಗಿನ ಅತಿಯಾದ ಮಾಲಿನ್ಯದಿಂದ, ಜನರ ಆಸಕ್ತಿಕರ ಕೇಶ ವಿನ್ಯಾಸ ಉತ್ಪನ್ನಗಳಿಂದ, ಬಳಸುವ ರಾಸಾಯನಿಕ ಪದಾರ್ಥಗಳಿಂದ ತಲೆ ಕೂದಲು ಸಾಕಷ್ಟು ಹಾನಿಯಾಗುತ್ತದೆ ಮತ್ತು ಹಾಳಾಗುತ್ತದೆ.
  • ಇದಕ್ಕಾಗಿ ನೀವು ಮತ್ತೊಮ್ಮೆ ತಲೆ ಕೂದಲಿನ ಹೊಳಪನ್ನು ಮರುಕಳಿಸಿ ಪಡೆಯುವ ಪ್ರಯತ್ನ ಮಾಡಬೇಕಾಗುತ್ತದೆ. ಹಾಗಾಗಿ ನೆಲ್ಲಿಕಾಯಿ, ಮೊಸರು ಮತ್ತು ಅಂಟುವಾಳ ಕಾಯಿ ಜೊತೆಯಲ್ಲಿ ಬಳಕೆಮಾಡಿ ತಲೆ ಕೂದಲಿಗೆ ಕಂಡೀಶನ್ ಮಾಡಿಕೊಂಡು ಕೂದಲಿನ ಮೃದುತ್ವವನ್ನು ಕಾಪಾಡಿಕೊಳ್ಳಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ