ಆ್ಯಪ್ನಗರ

ಹೇರ್‌ ಸ್ಪಾ ಮನೆಯಲ್ಲೇ ಮಾಡುವುದು ಹೇಗೆ?

​ ಆಕರ್ಷಕ ಕೂದಲು ಯಾರಿಗೆ ಬೇಡ ಹೇಳಿ? ಸೌಂದರ್ಯದ ಬಹು ದೊಡ್ಡ ಪ್ಲಸ್ ಪಾಯಿಂಟ್‌ ಅಂದರೆ ಆಕರ್ಷಕವಾದ ಕೂದಲು. ಮೃದುವಾದ, ಸೊಂಪಾದ ಆಕರ್ಷಕ ಕೂದಲಿಗಾಗಿ ಆರೈಕೆ ಮಾಡಲೇಬೇಕು.

Vijaya Karnataka Web 2 Nov 2017, 4:10 pm
ಆಕರ್ಷಕ ಕೂದಲು ಯಾರಿಗೆ ಬೇಡ ಹೇಳಿ? ಸೌಂದರ್ಯದ ಬಹು ದೊಡ್ಡ ಪ್ಲಸ್ ಪಾಯಿಂಟ್‌ ಅಂದರೆ ಆಕರ್ಷಕವಾದ ಕೂದಲು.
Vijaya Karnataka Web give yourself a relaxing hair spa at home
ಹೇರ್‌ ಸ್ಪಾ ಮನೆಯಲ್ಲೇ ಮಾಡುವುದು ಹೇಗೆ?


ಮೃದುವಾದ, ಸೊಂಪಾದ ಆಕರ್ಷಕ ಕೂದಲಿಗಾಗಿ ಆರೈಕೆ ಮಾಡಲೇಬೇಕು. ಪಾರ್ಲರ್‌ ಅಥವಾ ಸ್ಪಾಗಳಿಗೆ ಹೋಗಿ ಹೇರ್‌ ಕೇರ್ ಮಾಡಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ ಪಾರ್ಲರ್‌ನಲ್ಲಿ ಮಾಡುವಂತೆಯೇ ಮನೆಯಲ್ಲೇ ಮಾಡಿ ಆರೈಕೆ ಮಾಡಬಹುದು.

ನೀವು ಈ ಕೆಳಗಿನ ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು, ಆಕರ್ಷಕ ಕೂದಲಿನ ಚೆಲುವು ನಿಮ್ಮದಾಗುವುದು.

ಹೇರ್‌ ಸ್ಪಾದಲ್ಲಿ 5 ಸ್ಟೆಪ್‌
1. ಮಸಾಜ್‌ 2. ಸ್ಟೀಮಿಂಗ್ 3. ಕ್ಲೆನ್ಸಿಂಗ್‌ 4. ಕಂಡಿಷಿನಿಂಗ್ 5. ಅಪ್ಲೈ ಹೇರ್‌ ಮಾಸ್ಕ್‌

ಸ್ಟೆಪ್‌ 1-ಮಸಾಜ್




ಕೊಬ್ಬರಿ ಎಣ್ಣೆಯನ್ನು ಉಗುರು ಬೆಚ್ಚಗಿನ ಬಿಸಿ ಮಾಡಿ, ಆ ಎಣ್ಣೆಯಿಂದ ತಲೆಗೆ ಚೆನ್ನಾಗಿ ಮಸಾಜ್‌ ಮಾಡಿ.

ಸ್ಟೆಪ್‌ 2 -ಸ್ಟೀಮಿಂಗ್‌



ನಂತರ 4 ಮಗ್ ನೀರನ್ನು ಚೆನ್ನಾಗಿ ಕುದಿಸಿ, ಅದನ್ನು ಬಕೆಟ್‌ಗೆ ಸುರಿದು ಅದಕ್ಕೆ ತಣ್ಣೀರು ಮಿಕ್ಸ್‌ ಮಾಡಿ, ಉಗುರು ಬೆಚ್ಚಗಿನ ನೀರು ಮಾಡಿ ಅದರಲ್ಲಿ ತೆಳು ಟವಲ್‌ ಅದ್ದಿ ಹಿಂಡಿ ತಲೆಗೆ ಸುತ್ತಿ 20 ನಿಮಿಷ ಬಿಡಿ. ಇದರಿಂದ ಕೂದಲಿನ ಬುಡ ಎಣ್ಣೆಯನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ.

ಸ್ಟೆಪ್‌ 3- ಮಾಸ್ಕ್‌



ನಂತರ ಶ್ಯಾಂಪೂ ಹಚ್ಚಿ ತಲೆಯನ್ನು ವಾಶ್‌ ಮಾಡಿ, ನಂತರ ಮೊಸರು, ಮೊಟ್ಟೆಯ ಬಿಳಿ, ಲೋಲೆಸರ ಹೀಗೆ ಮನೆಯಲ್ಲೇ ಸಿಗುವ ಕಂಡೀಷನರ್‌ ಹಚ್ಚಿ 20 ನಿಮಿಷ ಬಿಡಿ.

ಸ್ಟೆಪ್‌ 4- ಕ್ಲೆನ್ಸಿಂಗ್‌



ಈಗ ಶ್ಯಾಂಪೂ ಹಚ್ಚಿ ಚೆನ್ನಾಗಿ ತೊಳೆಯರಿ.

ಸ್ಟೆಪ್‌ 5-ಕಂಡೀಷನರ್‌



ಕಂಡೀಷನರ್‌ ಹಚ್ಚಿ ತಲೆಯನ್ನು ತೊಳೆದು ನಂತರ ರೂಮಿನ ಉಷ್ಣತೆಯಲ್ಲು ಕೂದಲನ್ನು ಒಣಗಿಸಿ, ಬಾಚಿ.

ಈ ರೀತಿ ತಿಂಗಳಿಗೊಮ್ಮೆ ಮಾಡಿದರೆ ಕೂದಲು ಆಕರ್ಷಕವಾಗಿರುತ್ತದೆ.

A hair spa involves five steps in the following order: massaging, steaming, cleansing, conditioning and applying hair mask.Here is a hair spa tips to do at home.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ