ಆ್ಯಪ್ನಗರ

ಕೂದಲು ತೆಳುವಾಗುವಿಕೆಯ ಸಮಸ್ಯೆಯನ್ನು ಎದುರಿಸುತ್ತಿರುವಿರಾ?

ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಈ ಲೇಖನವು ಸಹಕಾರಿಯಾಗಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಬೇಕಾದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ.

Vijaya Karnataka Web 28 Jan 2021, 12:57 pm
ಉತ್ತಮವಾದ, ಆರೋಗ್ಯಯುತವಾದ ಕೂದಲನ್ನು ಪಡೆಯಬೇಕೆಂಬುದು ಪ್ರತಿಯೊಬ್ಬ ಮಹಿಳೆಯ ಮನದಾಸೆ ಆಗಿರುತ್ತದೆ.ಆದರೆ ಕೆಲವೊಂದು ಬಾರಿ ಹಲವಾರು ಸಮಸ್ಯೆಗಳಿಂದ ಉತ್ತಮ ಕೂದಲು ಪಡೆಯಲು ಸಾಧ್ಯವಾಗುವುದಿಲ್ಲ.ಕಲುಷಿತ ನೀರು, ಮಲಿನವಾದ ವಾತಾವರಣ ಕೂದಲು ಉದುರುವ ಸಮಸ್ಯೆಗೆ ಪ್ರಮುಖ ಕಾರಣ.ಕೂದಲಿಗೆ ಸಿಕ್ಕಸಿಕ್ಕ ಎಣ್ಣೆ ,ಶಾಂಪು ಗಳನ್ನು ಬಳಸುವುದು ಸೂಕ್ತವಲ್ಲ. ರಾಸಾಯನಿಕಗಳು ಕೂದಲಿಗೆ ಮತ್ತಷ್ಟು ಹಾನಿಯನ್ನು ಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕೂದಲು ತೆಳುವಾಗುವಿಕೆ ಸಮಸ್ಯೆ ಸಾಮಾನ್ಯವಾಗಿದೆ. ಕೂದಲು ತೆಳುವಾಗುವಿಕೆಗೆ ಕಾರಣಗಳೆಂದರೆ ಒತ್ತಡ, ಹಾರ್ಮೋನ್ ಗಳ ಅಸಮತೋಲನ ಅತಿಯಾದ ಸ್ಟೈಲಿಂಗ್ ಸಾಧನಗಳ ಬಳಕೆ, ಖಿನ್ನತೆ, ಅಸಮತೋಲನ ಆಹಾರಗಳ ಸೇವನೆ, ಕೂದಲಿಗೆ ವಿವಿಧ ರೀತಿಯ ಬಣ್ಣಗಳನ್ನು ಹಚ್ಚುವುದು.
Vijaya Karnataka Web hair masks for those who suffering from hair thinning problem
ಕೂದಲು ತೆಳುವಾಗುವಿಕೆಯ ಸಮಸ್ಯೆಯನ್ನು ಎದುರಿಸುತ್ತಿರುವಿರಾ?


​ಕೂದಲು ತೆಳುವಾಗುವಿಕೆ ಯನ್ನು ತಡೆಯಲು ಪರಿಣಾಮಕಾರಿಯಾದ ಹೇರ್ ಮಾಸ್ಕ್ ಗಳು

ಕೂದಲು ತೆಳುವಾಗುವಿಕೆಗೆ ಹಲವಾರು ಕಾರಣಗಳಿವೆ. ಕೆಲವೊಂದು ಮನೆಮದ್ದುಗಳನ್ನು ಪ್ರಯೋಗಿಸುವ ಮೂಲಕ ಉತ್ತಮವಾದ ಕೂದಲನ್ನು ಪಡೆಯಬಹುದು.ಮನೆಮದ್ದು ಆಗಿರುವುದರಿಂದ ನಿಮ್ಮ ಕೂದಲಿನ ಮೇಲೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ.

​ಮೊಟ್ಟೆ ಮತ್ತು ಹಾಲಿನ ಹೇರ್ ಮಾಸ್ಕ್

ಮೊಟ್ಟೆಯಲ್ಲಿ ಅಪಾರ ಪ್ರಮಾಣದ ಪ್ರೋಟೀನ್, ಅಮಿನೋ ಆಸಿಡ್ ಗಳಿದ್ದು ಕೂದಲನ್ನು ಪೋಷಣೆ ಮಾಡುತ್ತದೆ. ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿ ಉತ್ತಮ ಹೊಳಪನ್ನು ಕೂದಲಿಗೆ ನೀಡುತ್ತದೆ. ಹಾಲು ಹೊಸ ಕೂದಲು ಬೆಳವಣಿಗೆ ಹೊಂದಲು ಮತ್ತು ನಿಮ್ಮ ಕೂದಲಿನ ಗಾತ್ರವನ್ನು ಹೆಚ್ಚಿಸಲು ಸಹಕರಿಸುತ್ತದೆ. ಈ ಮಾಸ್ಕ್ ತಯಾರಿಸಲು,ಒಂದು ಮೊಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಕಪ್ ಹಾಲು ಸೇರಿಸಿ.ಈ ಮಿಶ್ರಣಕ್ಕೆ ಎರಡು ಟೇಬಲ್ ಸ್ಪೂನ್ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಮತ್ತು ಯಾವುದಾದರೂ ಒಂದು ಎಸೆನ್ಸಿಯಲ್ ಎಣ್ಣೆ ಸೇರಿಸಿ.ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ತದನಂತರದಲ್ಲಿ ನಿಮ್ಮ ಕೂದಲು ಮತ್ತು ಕೂದಲಿನ ಬುಡಕ್ಕೆ ಹಚ್ಚಿ. ಇಪ್ಪತ್ತು ನಿಮಿಷಗಳ ನಂತರ ತಣ್ಣೀರಿನ ಸಹಾಯದಿಂದ ಕೂದಲನ್ನು ತೊಳೆಯಿರಿ.

ನೈಸರ್ಗಿಕವಾಗಿ ಕೂದಲಿನ ವಿನ್ಯಾಸವನ್ನು ಕಾಯ್ದುಕೊಳ್ಳಲು ಇಲ್ಲಿದೆ ಟಿಪ್ಸ್

​ಮೊಸರು ಮತ್ತು ಆಲಿವ್ ಎಣ್ಣೆ ಹೇರ್ ಮಾಸ್ಕ್

ಅಧ್ಯಯನದ ಪ್ರಕಾರ ಮೊಸರು ಕೂದಲು ತೆಳುವಾಗುವಿಕೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಕೂದಲಿಗೆ ಉತ್ತಮ ಪೋಷಣೆಯನ್ನು ನೀಡಿ ಕಾಂತಿಯುತವಾಗಿ ಇರುವಂತೆ ಮಾಡುತ್ತದೆ. ಈ ಮಾಸ್ಕ್ ತಯಾರಿಸಲು ನಿಮಗೆ ಒಂದು ಕಪ್ ಮೊಸರು , ಒಂದು ಟೇಬಲ್ ಸ್ಪೂನ್ ಆಲಿವ್ ಎಣ್ಣೆ ಎರಡನ್ನು ಒಂದು ಬೌಲ್ನಲ್ಲಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಅದಕ್ಕೆ ಜೇನುತುಪ್ಪವನ್ನು ಸಹ ಸೇರಿಸಬಹುದು.ಈ ಮಿಶ್ರಣವನ್ನು , ಕೂದಲಿನ ಬುಡ ಮತ್ತು ಕೂದಲಿಗೆ ಹಚ್ಚಿ ಹದಿನೈದು ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.

​ಅವಕಾಡೊ ಮತ್ತು ನುಗ್ಗೆ ಹೇರ್ ಮಾಸ್ಕ್

ಕೂದಲುದುರುವಿಕೆಗೆ ಪ್ರಮುಖ ಕಾರಣವೆಂದರೆ ಹಾರ್ಮೋನ್ ಗಳ ಅಸಮತೋಲನ. ನುಗ್ಗೆಯ ಎಲೆಯು ಈರೀತಿಯ ಹಾರ್ಮೋನುಗಳ ಅಸಮತೋಲನ ಮತ್ತು ವಿಟಮಿನ್ ಗಳ ಕೊರತೆಯನ್ನು ಕಡಿಮೆ ಮಾಡುತ್ತದೆ. ಅವೊಕಾಡೋ ದಲ್ಲಿ ಒಮೆಗ 3 ಫ್ಯಾಟಿ ಆಸಿಡ್, ವಿಟಮಿನ್ ಬಿ ,ವಿಟಮಿನ್ ಸಿ, ಕಬ್ಬಿಣಾಂಶ ಗಳಿದ್ದು ಈ ಎಲ್ಲಾ ಅಂಶಗಳು ಕೂದಲು ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ.ನಿಮಗೇನಾದರೂ ಕೂದಲುದುರುವ ಮತ್ತು ಕೂದಲು ತೆಳುವಾಗುವಿಕೆಯ ಸಮಸ್ಯೆಯಿದ್ದರೆ ಈ ಮಿಶ್ರಣವನ್ನು ಹಚ್ಚುವುದರಿಂದ ನಿಮ್ಮ ಕೂದಲಿಗೆ ಉತ್ತಮ ಪೋಷಣೆ ದೊರೆಯುತ್ತದೆ. ಈ ಮಿಶ್ರಣ ತಯಾರಿಸಲು ನಿಮಗೆ ಬೇಕಾಗಿದ್ದು, ಒಂದು ಟೇಬಲ್ ಸ್ಪೂನ್ ನಷ್ಟು ನುಗ್ಗೆ ಎಲೆಯ ಪುಡಿ, ಕಾಲು ಭಾಗದಷ್ಟು ಅವಕಾಡೊ ,ಒಂದು ಟೇಬಲ್ ಸ್ಪೂನ್ ಆಲಿವ್ ಎಣ್ಣೆ ಮತ್ತು ಜೇನುತುಪ್ಪ.ಎಲ್ಲಾ ಪದಾರ್ಥಗಳನ್ನು ಒಂದು ಬೌಲ್ ನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ತದನಂತರದಲ್ಲಿ ಈ ಮಿಶ್ರಣವನ್ನು ನಿಮ್ಮ ಕೂದಲಿನ ಬುಡ ಮತ್ತು ಕೂದಲಿಗೆ ಸಂಪೂರ್ಣವಾಗಿ ಹಚ್ಚಿ. ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ನಿಮ್ಮ ಕೂದಲನ್ನು ತೊಳೆಯಿರಿ.

​ಈರುಳ್ಳಿ ಮತ್ತು ತೆಂಗಿನ ಎಣ್ಣೆಯ ಹೇರ್ ಮಾಸ್ಕ್

ತೆಂಗಿನ ಎಣ್ಣೆಯಲ್ಲಿ ಆಂಟಿ ಇನ್ಫ್ಲ ಮೇಟರಿ, ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟರಿಯಲ್ ಗುಣಗಳಿವೆ.ಈರುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್ ಇದ್ದು ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಿ ನಿಮ್ಮ ಕೂದಲಿನ ಗಾತ್ರವನ್ನು ಹೆಚ್ಚು ಮಾಡುವಲ್ಲಿ ಸಹಕರಿಸುತ್ತದೆ. ಮಿಶ್ರಣವನ್ನು ತಯಾರಿಸಲು ನಿಮಗೆ ಬೇಕಾದ ದ್ದು, ಈರುಳ್ಳಿಯ ಜ್ಯೂಸ್ ಮತ್ತು ತೆಂಗಿನ ಎಣ್ಣೆ.ಇವೆರಡರ ಜೊತೆಗೆ ಸ್ವಲ್ಪ ಟೀಟ್ರೀ ಎಣ್ಣೆಯನ್ನು ಹಾಕಿ ಒಂದು ಮಿಶ್ರಣವನ್ನು ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಕೂದಲಿನ ಬುಡ ಮತ್ತು ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಮೂವತ್ತು ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.

ಕೂದಲು ಕವಲೊಡೆಯುವಿಕೆ ಇಂದ ಮುಕ್ತಿ ಬೇಕೆ?

​ಮೆಂತ್ಯ ಮತ್ತು ಮೊಸರಿನ ಹೇರ್ ಮಾಸ್ಕ್

ಭಾರತೀಯರ ಪ್ರತಿ ಅಡಿಗೆಮನೆಯಲ್ಲಿ ಮೆಂತ್ಯ ಇದ್ದೇ ಇರುತ್ತದೆ.ನಿಮ್ಮ ಕೂದಲಿನ ಸಮಸ್ಯೆಗೆ ಮೆಂತ್ಯೆ ಅವು ಉತ್ತಮ ಪರಿಹಾರವನ್ನು ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಮುಖದಲ್ಲಿ ಅಪಾರ ಪ್ರಮಾಣದ ಕಬ್ಬಿಣಾಂಶ ಮತ್ತು ಪ್ರೊಟೀನ್ ಇದ್ದು ನಿಮ್ಮ ಕೂದಲು ಉದುರುವಿಕೆಯನ್ನು ತಡೆಗಟ್ಟುವ ಕೆಲಸವನ್ನು ನಿರ್ವಹಿಸುತ್ತದೆ. ಮೆಂತ್ಯವು ಸುಲಭ ರೀತಿಯಲ್ಲಿ ದೊರೆಯುವಂತಹ ಒಂದು ಪದಾರ್ಥವಾಗಿದೆ. ಮೊಸರು ನಿಮ್ಮ ಕೂದಲಿಗೆ ಮತ್ತಷ್ಟು ಹೊಳಪನ್ನು ನೀಡುತ್ತದೆ. ಈ ಮಿಶ್ರಣವನ್ನು ತಯಾರಿಸಲು ನಿಮಗೆ ಬೇಕಾದ ವಸ್ತುಗಳೆಂದರೆ, ಒಂದು ಟೇಬಲ್ಸ್ಪೂನ್ ಮೆಂತ್ಯದ ಪುಡಿ, ನಾಲ್ಕರಿಂದ ಐದು ಟೇಬಲ್ ಸ್ಪೂನ್ ಮೊಸರು.ಈ ಎರಡರ ಮಿಶ್ರಣಕ್ಕೆ ಸ್ವಲ್ಪ ಆಲಿವ್ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.ತದನಂತರದಲ್ಲಿ ಇದನ್ನು ನಿಮ್ಮ ಕೂದಲಿನ ಬುಡ ಮತ್ತು ಕೂದಲಿಗೆ ಹಚ್ಚಿ. ಒಂದು ಗಂಟೆಯ ನಂತರ ತಣ್ಣೀರಿನಿಂದ ಅಥವಾ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ ಉತ್ತಮ ಫಲಿತಾಂಶವನ್ನು ಪಡೆಯಿರಿ.

​ಯಾವುದೇ ಹಾನಿಯಿಲ್ಲ

ಕೂದಲು ಉದುರುವಿಕೆ ಅಥವಾ ಕೂದಲು ತೆಳುವಾಗುವುದು ಹೆಚ್ಚಿನ ಜನರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಈ ಮೇಲೆ ತಿಳಿಸಿದ ಎಲ್ಲ ಪರಿಹಾರಗಳು ನಿಮ್ಮ ಕೂದಲು ಉದುರುವಿಕೆ ಮತ್ತು ಕೂದಲು ತೆಳುವಾಗುವಿಕೆ ಪರಿಹಾರವಾಗುವುದರಲ್ಲಿ ಸಂದೇಹವಿಲ್ಲ.ಈ ಎಲ್ಲಾ ಪದಾರ್ಥಗಳು ನೈಸರ್ಗಿಕ ಪದಾರ್ಥಗಳಗಿರುವುದರಿಂದ ನಿಮ್ಮ ಕೂದಲಿನ ಮೇಲೆ ಯಾವುದೇ ಹಾನಿಯನ್ನು ಮಾಡುವುದಿಲ್ಲ ಇದರಿಂದ ಉತ್ತಮ ಫಲಿತಾಂಶ ನಿಮಗೆ ದೊರತೆ ದೊರೆಯುತ್ತದೆ.ಕೆಲವರು ಚಿಕಿತ್ಸೆಗೆ ಹೆಚ್ಚು ಸಮಯ ಮತ್ತು ಹಣ ಬೇಕಾಗುತ್ತದೆ ಎನ್ನುವವರು ಈ ರೀತಿಯ ಸುರಕ್ಷಿತ ನೈಸರ್ಗಿಕ ಮನೆಮದ್ದುಗಳನ್ನು ಆರಿಸಿಕೊಳ್ಳುವುದು ಉತ್ತಮ.ಇವೆಲ್ಲವುಗಳ ಜೊತೆಗೆ ಉತ್ತಮ ಮತ್ತು ಸಮತೋಲನ ಆಹಾರವನ್ನು ಸೇವಿಸಿ ಅದರ ಜೊತೆಗೆ ಇವುಗಳನ್ನು ಪ್ರಯತ್ನಿಸಿದರೆ ಉತ್ತಮವಾದ ಫಲಿತಾಂಶ ನಿಮ್ಮದಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ