ಆ್ಯಪ್ನಗರ

ಮಜ್ಜಿಗೆಯನ್ನು ಮುಖಕ್ಕೆ ಹಚ್ಚೋದರಿಂದ ತ್ವಚೆಗೆ ಸಿಕ್ಕಾಪಟ್ಟೆ ಲಾಭಗಳಿವೆ

ಮಜ್ಜಿಗೆಗೆ ಕೆಲವೊಂದು ಪದಾರ್ಥಗಳನ್ನು ಮಿಕ್ಸ್ ಮಾಡಿ ಮುಖಕ್ಕೆ ತ್ವಚೆಗೆ ಹಚ್ಚುವುದರಿಂದ ಸಾಕಷ್ಟು ಲಾಭಗಳನ್ನು ಪಡೆದುಕೊಳ್ಳಬಹುದು. ಮೊಡವೆ ಕಲೆಗಳಿಂದ ಹಿಡಿದು ಸನ್‌ಟ್ಯಾನ್ ಹೋಗಲಾಡಿಸುವವರೆಗೆ ಮಜ್ಜಿಗೆಯೂ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ.

Vijaya Karnataka Web 30 May 2022, 11:31 am
ಮಜ್ಜಿಗೆಯ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಬೇಸಿಗೆಯಲ್ಲಿ ಮಜ್ಜಿಗೆಯನ್ನು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಮಜ್ಜಿಗೆ ಬರೀ ದೇಹದ ಆರೋಗ್ಯಕ್ಕೆ ಮಾತ್ರವಲ್ಲ ನಮ್ಮ ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ನಮ್ಮ ಸೌಂದರ್ಯ ವರ್ಧಿಸುವಲ್ಲಿ ಮಜ್ಜಿಗೆಯ ಪಾತ್ರ ಬಹಳಷ್ಟಿದೆ.
Vijaya Karnataka Web here is the benefits buttermilk for skin
ಮಜ್ಜಿಗೆಯನ್ನು ಮುಖಕ್ಕೆ ಹಚ್ಚೋದರಿಂದ ತ್ವಚೆಗೆ ಸಿಕ್ಕಾಪಟ್ಟೆ ಲಾಭಗಳಿವೆ


ಮಜ್ಜಿಗೆಯು ಚರ್ಮವನ್ನು ಶುದ್ಧೀಕರಿಸಲು ಮತ್ತು ಪೋಷಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಸಂಯೋಜಿತ ಚರ್ಮದ ಪ್ರಕಾರಗಳು, ಬಿಸಿಲು ಮತ್ತು ಟ್ಯಾನಿಂಗ್‌ನಿಂದ ಬಳಲುತ್ತಿರುವವರು ಮಜ್ಜಿಗೆಯಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಹಾಗಾಗಿ ಮಜ್ಜಿಗೆಯನ್ನು ಸೌಂದರ್ಯವನ್ನು ವೃದ್ಧಿಸಲು ಬಳಸಬಹುದು. ಮಜ್ಜಿಗೆಯೊಂದಿಗೆ ಇನ್ನಿತರ ಪದಾರ್ಥಗಳನ್ನು ಮಿಕ್ಸ್‌ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

​ಮಜ್ಜಿಗೆಯ ಕ್ಲೆನ್ಸರ್


ಮಜ್ಜಿಗೆಯನ್ನು ಚರ್ಮದಲ್ಲಿರುವ ಕಲ್ಮಶಗಳನ್ನು ತೆಗೆಯಲು ಮತ್ತು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಯಂತ್ರಿಸಲು ನೀವು ಕ್ಲೆನ್ಸರ್‌ ಆಗಿ ಬಳಸಬಹುದು.

ಈ ಪ್ಯಾಕ್ ತಯಾರಿಸಲು, ಮಜ್ಜಿಗೆ, ಆಲಿವ್ ಎಣ್ಣೆ ಮತ್ತು ಸ್ವಲ್ಪ ಬಾದಾಮಿ ಎಣ್ಣೆಯನ್ನು ಮಜ್ಜಿಗೆಗೆ ಮಿಕ್ಸ್‌ ಮಾಡಿ. ಈ ಮಿಶ್ರಣಕ್ಕೆ ಕೆಲವು ಹನಿ ರೋಸ್ ವಾಟರ್ ಸೇರಿಸಿ. ಇದನ್ನು ಹತ್ತಿ ಉಂಡೆ ಯಲ್ಲಿ ನಿಮ್ಮ ಮುಖದ ಮೇಲೆ ಸಮವಾಗಿ ಹಚ್ಚಿರಿ. 10-15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

​ಅರಶಿನ ಹಾಗೂ ಮಜ್ಜಿಗೆ


ಅರಶಿನ, ಮುಲ್ತಾನಿ ಮಿಟ್ಟಿ ಯೊಂದಿಗೆ ಮಜ್ಜಿಗೆ ಮಿಶ್ರ ಮಾಡಿ ಮುಖಕ್ಕೆ ಹಚ್ಚಿಕೊಂಡು ಸ್ಕ್ರಬ್ ಮಾಡಿ ಮತ್ತು ಸಾಮಾನ್ಯ ನೀರಿನಿಂದ ತೊಳೆಯಿರಿ. ಬೇಸಿಗೆಯಲ್ಲಿ ಇದನ್ನು ಫೇಸ್ ವಾಶ್ ಆಗಿಯೂ ಬಳಸಬಹುದು. ಸಾಮಾನ್ಯ ಚರ್ಮಕ್ಕೆ ಎಣ್ಣೆಯುಕ್ತ ಸಂಯೋಜನೆಗೆ ಇದು ಸೂಕ್ತವಾಗಿದೆ. ಒಣ ತ್ವಚೆಯಿರುವವರು ಮಜ್ಜಿಗೆಯನ್ನು ಒಂದು ಚಿಟಿಕೆ ಅರಶಿನ ಮತ್ತು ಶ್ರೀಗಂಧದ ಪುಡಿಯೊಂದಿಗೆ ಸೇರಿಸಿ ಮತ್ತು ಅದನ್ನು ದೈನಂದಿನ ಫೇಸ್ ಪ್ಯಾಕ್‌ ಆಗಿ ಬಳಸಬಹುದು.

ಅಲೋವೆರಾ ಹಾಗೂ ಮಜ್ಜಿಗೆ

ಮಜ್ಜಿಗೆ ಲ್ಯಾಕ್ಟಿಕ್ ಆಮ್ಲದಿಂದ ಕೂಡಿದ್ದು, ಇದು ನೈಸರ್ಗಿಕ ಎಕ್ಸ್‌ಫೋಲಿಯೇಟರ್ ಆಗಿದೆ. ಇದು ಚರ್ಮದ ಹಾನಿಗೊಳಗಾದ ಪದರವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಅಲೋವೆರಾದೊಂದಿಗೆ ಮಜ್ಜಿಗೆಯನ್ನು ಬೆರೆಸಿದಾಗ, ಅದರ ಜಲಸಂಚಯನ ಗುಣಗಳು ದ್ವಿಗುಣಗೊಳ್ಳುತ್ತವೆ. ಮಜ್ಜಿಗೆ, ಜೇನುತುಪ್ಪ ಮತ್ತು ತಾಜಾ ಅಲೋವೆರಾ ಜೆಲ್ ಅನ್ನು ಮಿಕ್ಸ್‌ ಮಾಡಿ ಮತ್ತು ನಯವಾದ ಪೇಸ್ಟ್ ತಯಾರಿಸಿ ರೋಸ್‌ ವಾಟರ್‌ನೊಂದಿಗೆ ಮುಖಕ್ಕೆ ಹಚ್ಚಿ. ಒಣಗಿದ ನಂತರ ತೊಳೆಯಿರಿ.

​ಕಿತ್ತಳೆ ಸಿಪ್ಪೆಪುಡಿ ಹಾಗೂ ಮಜ್ಜಿಗೆ


ಒಣ ಕಿತ್ತಳೆ ಸಿಪ್ಪೆಯ ಪುಡಿ ಮತ್ತು ಮಜ್ಜಿಗೆಯನ್ನು ಮಿಕ್ಸ್‌ ಮಾಡಿ ಹಚ್ಚುವುದರಿಂದ ಮುಖದಲ್ಲಿರುವ ಕಲೆಗಳನ್ನು ಹೋಗಲಾಡಿಸಬಹುದು. ಇದನ್ನು ಹಿಸುಕಿದ ಪಪ್ಪಾಯಿ ಅಥವಾ ಟೊಮೆಟೊಗಳೊಂದಿಗೆ ಬೆರೆಸಿ, ನಿಮ್ಮ ಚರ್ಮಕ್ಕೆ ಹಚ್ಚಿರಿ ಒಣಗಿದ ನಂತರ ತೊಳೆಯಿರಿ. ಇದು ನಿಮ್ಮ ಚರ್ಮದ ಮೇಲೆ ಬಿಸಿಲಿನ ಹಾನಿಯನ್ನು ಕಡಿಮೆ ಮಾಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ