ಆ್ಯಪ್ನಗರ

ಕಪ್ಪು ದ್ರಾಕ್ಷಿ ಹಣ್ಣನ್ನು ಮುಖಕ್ಕೆ ಹಚ್ಚೋದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

ದ್ರಾಕ್ಷಿ ಹಣ್ಣು ಅಥವಾ ಅದರ ಫೇಸ್‌ ಪ್ಯಾಕ್ ಹಚ್ಚಿಕೊಳ್ಳುವುದರಿಂದ ನಮ್ಮ ತ್ವಚೆಗೆ ಎಷ್ಟೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ನೋಡಿ.

Vijaya Karnataka 11 Aug 2020, 9:58 am
ದ್ರಾಕ್ಷಿ ಹಣ್ಣು ಅಥವಾ ಒಣ ದ್ರಾಕ್ಷಿ ಆರೋಗ್ಯಕ್ಕೆ ಬಹಳ ಒಳ್ಳೆಯದು ಅನ್ನೋದು ಗೊತ್ತೇ ಇದೆ. ಇದು ಮುಖದ ಸೌಂದರ್ಯಕ್ಕೂ ಒಳ್ಳೆಯದು ಅನ್ನೋದು ಹೆಚ್ಚಿನವರಿಗೆ ತಿಳಿದಿಲ್ಲ. ವಯಸ್ಸಾಗುತ್ತಿದ್ದಂತೆ, ಚರ್ಮವು ಅದರ ಸ್ಥಿತಿಸ್ಥಾಪಕತ್ವ ಮತ್ತು ತೇವಾಂಶವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಚರ್ಮದ ಸಮಸ್ಯೆಗಳನ್ನು ಎದುರಿಸಲು ದ್ರಾಕ್ಷಿಯಿಂದ ಮಾಡಿದ ಫೇಸ್‌ ಪ್ಯಾಕ್‌ಗಳನ್ನು ತಯಾರಿಸುವುದು ಒಳ್ಳೆಯದು. ದ್ರಾಕ್ಷಿ ಹಣ್ಣಿನ ಪ್ರಯೋಜನಗಳು ಏನು ಅನ್ನೋದನ್ನು ನೋಡೋಣ.
Vijaya Karnataka Web ಕಪ್ಪು ದ್ರಾಕ್ಷಿ ಹಣ್ಣನ್ನು ಮುಖಕ್ಕೆ ಹಚ್ಚೋದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ


* ಸಾಮಾನ್ಯ ತ್ವಚೆ ಚಿಕಿತ್ಸೆಯಾಗಿ, ಮೊಡವೆಗಳನ್ನು ಕಡಿಮೆ ಮಾಡಲು ದ್ರಾಕ್ಷಿಗಳು ಒಳ್ಳೆಯದು.

* ದ್ರಾಕ್ಷಿ ಹಣ್ಣಿನ ಬೀಜಗಳು ರಕ್ತನಾಳಗಳನ್ನು ಬಲಪಡಿಸಲು ಮತ್ತು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಸೋಂಪು ಕಾಳಿನಿಂದ ತ್ವಚೆಗೆ ಮತ್ತು ಕೂದಲಿಗೆ ಎಷ್ಟೆಲ್ಲಾ ಲಾಭಗಳಿವೆ


* ದ್ರಾಕ್ಷಿ ಬೀಜದ ಎಣ್ಣೆಯು ಆರ್ಧ್ರಕ ಅಂಶದಿಂದ ಸಮೃದ್ಧವಾಗಿದೆ ಮತ್ತು ಚರ್ಮಕ್ಕೆ ವಿಟಮಿನ್ ಸಿ ಮತ್ತು ಇ ಅನ್ನು ಸಹ ನೀಡುತ್ತದೆ.

ಈ ದ್ರಾಕ್ಷಿ ಹಣ್ಣಿನ ಫೇಸ್ ಪ್ಯಾಕ್‌ಗಳನ್ನು ತಯಾರಿಸುವುದು ಹೇಗೆ ಅನ್ನೋದನ್ನು ನೋಡೋಣ.

* ದ್ರಾಕ್ಷಿಯನ್ನು ನೀವು ಹಾಗೆಯೇ ಹಿಸುಕಿ ಮುಖಕ್ಕೆ ಹಚ್ಚಿಕೊಳ್ಳ ಬಹುದು. ಇದು ಸತ್ತ ಚರ್ಮದ ಕೋಶಗಳನ್ನು ಸಿಪ್ಪೆ ತೆಗೆಯಲು ಸಹಾಯ ಮಾಡುತ್ತದೆ. ದ್ರಾಕ್ಷಿಯನ್ನು ಮುಖಕ್ಕೆ ಹಚ್ಚಿಕೊಂಡ ನಂತರ ಸುಮಾರು 10 ರಿಂದ 15 ನಿಮಿಷಗಳ ಕಾಲ ಬಿಡಿ ನಂತರ ತೊಳೆಯಿರಿ.

ಕೂದಲು ಉದುರುತ್ತಿದೆಯೇ ಹಾಗಾದ್ರೆ ರೋಸ್ ವಾಟರ್ ಬಳಸಿ


* ಒಣ ಚರ್ಮವನ್ನು ಹೊಂದಿರುವವರು ಹಿಸುಕಿದ ಕಪ್ಪು ದ್ರಾಕ್ಷಿ, ಆವಕಾಡೊ ತಿರುಳನ್ನು ತೆಗೆದುಕೊಂಡು ಎರಡು ಟೀ ಚಮಚ ಜೇನುತುಪ್ಪ ಮತ್ತು ರೋಸ್ ವಾಟರ್ ನೊಂದಿಗೆ ಬೆರೆಸಿ ಪ್ಯಾಕ್ ತಯಾರಿಸಬಹುದು. ಅದನ್ನು ಹಚ್ಚಿಕೊಂಡ ನಂತರ 15 ನಿಮಿಷಗಳ ಕಾಲ ಬಿಡಿ ನಂತರ ತೊಳೆಯಿರಿ.

*ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ಕಪ್ಪು ದ್ರಾಕ್ಷಿಯನ್ನು ಮುಲ್ತಾನಿ ಮಿಟ್ಟಿಯಂತಹ ಕೆಲವು ತೈಲ ಹೀರಿಕೊಳ್ಳುವ ಪೌಡರ್‌ ಜೊತೆ ಬೆರೆಸಬೇಕು. ಇದನ್ನು ಪೇಸ್ಟ್ ರೂಪದಲ್ಲಿ ಮಾಡಲು, ಅದಕ್ಕೆ ರೋಸ್ ವಾಟರ್ ಸೇರಿಸಿ ಮಿಶ್ರಣ ಮಾಡಿ. ಇದು ನಿಮ್ಮ ಮುಖದ ಮೇಲೆ 15 ನಿಮಿಷಗಳ ಕಾಲ ಇರಲಿ ಮತ್ತು ನಂತರ ಅದನ್ನು ತೊಳೆಯಿರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ