ಆ್ಯಪ್ನಗರ

ಹೇರ್‌ ಕಲರ್‌ನಿಂದಾಗಿ ಕೂದಲು ಹಾಳಾಗಿದೆಯೇ?

ಸ್ಟೈಲ್ ಲುಕ್‌ಗಾಗಿ ಹೇರ್‌ ಕಲರ್‌ ಮಾಡಿಸುತ್ತೇವೆ. ಆದರೆ ಈ ಹೇರ್‌ ಕಲರ್‌ನಿಂದಾಗಿ ಕೆಲವೊಮ್ಮೆ ಕೂದಲಿನ ನೈಜ ಸೌಂದರ್ಯ ಹಾಳಾಗಿ ಹೋದ ಉದಾಹರಣೆಗಳು ಎಷ್ಟೋ ಇವೆ.

Vijaya Karnataka Web 16 Jul 2017, 2:20 pm
ಸ್ಟೈಲ್ ಲುಕ್‌ಗಾಗಿ ಹೇರ್‌ ಕಲರ್‌ ಮಾಡಿಸುತ್ತೇವೆ. ಆದರೆ ಈ ಹೇರ್‌ ಕಲರ್‌ನಿಂದಾಗಿ ಕೆಲವೊಮ್ಮೆ ಕೂದಲಿನ ನೈಜ ಸೌಂದರ್ಯ ಹಾಳಾಗಿ ಹೋದ ಉದಾಹರಣೆಗಳು ಎಷ್ಟೋ ಇವೆ.
Vijaya Karnataka Web how to protect your hair from colour damage
ಹೇರ್‌ ಕಲರ್‌ನಿಂದಾಗಿ ಕೂದಲು ಹಾಳಾಗಿದೆಯೇ?


ಹೇರ್ ಕಲರ್ ಮಾಡಿ ನಿಮ್ಮ ಕೂದಲು ಡ್ಯಾಮೇಜ್ ಆಗಿದ್ದರೆ ಇಲ್ಲಿ ಕೆಲ ಟಿಪ್ಸ್ ನೀಡಲಾಗಿದೆ. ಅವುಗಳನ್ನು ಪಾಲಿಸಿ ಕೂದಲಿನ ಆರೋಗ್ಯ ಮತ್ತು ಸೌಂದರ್ಯ ಮರಳಿ ಪಡೆಯಬಹುದು:


ಹೇರ್‌ ಕಲರ್‌ ಮಾಡಿ ಕೂದಲು ರಫ್‌ ಹೋಗಿದೆಯೇ?

ಕೂದಲಿಗೆ ಬೆಣ್ಣೆ ಹಾಕಿ ಮಸಾಜ್ ಮಾಡಿ, ಇಲ್ಲದಿದ್ದರೆ ಪ್ರತೀದಿನ ಆಲೀವ್ ಎಣ್ಣೆಯಿಂದ ಮಸಾಜ್ ಮಾಡಿ.
ವಾರಕ್ಕೊಮ್ಮೆ ಒಂದು ಬೌಲ್‌ನಲ್ಲಿ ಮೊಟ್ಟೆಯ ಬಿಳಿ, ಜೇನು ಹಾಗೂ ತೆಂಗಿನೆಣ್ಣೆ ಹಾಕಿ ಮಿಕ್ಸ್ ಮಾಡಿ ಅವುಗಳನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಿರಿ.

ಈ ರೀತಿ ಮಾಡುತ್ತಾ ಬಂದರೆ ಕೂದಲಿನ ಸೌಂದರ್ಯ ಮರಳಿ ಪಡೆಯಬಹುದು.

ಕೂದಲು ಕವಲೊಡೆಯುವ ಸಮಸ್ಯೆ

ಹೇರ್‌ ಕಲರ್‌ನಲ್ಲಿರುವ ಕೆಮಿಕಲ್‌ನಿಂದಾಗಿ ಕೂದಲು ಕವಲೊಡೆಯುವುದು. ಇದಕ್ಕೆ ಸೂಕ್ತ ಪರಿಹಾರವೆಂದರೆ ಒಳ್ಳೆಯ ಶ್ಯಾಂಪೂ ಬಳಸಬೇಕು. ಡೀಪ್‌ ಮಾಯಿಶ್ಚರೈಸರ್ ಕಂಡೀಷನರ್ ಹಾಕಿ ಕೂದಲಿನ ಆರೈಕೆ ಮಾಡಿ.

ಕೂದಲಿನ ಬುಡದ ಆರೈಕೆಗಾಗಿ
ಮೊಟ್ಟೆ, ಸೂರ್ಯಕಾಂತಿ ಬೀಜ, ಸಿಹಿಗೆಣಸು, ಪ್ರೊಟೀನ್, ವಿಟಮಿನ್ ಸಿ, ಒಮೆಗಾ 3 ಇರುವ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ