ಆ್ಯಪ್ನಗರ

ಕೂದಲಿಗೆ ಮೊಸರನ್ನು ಬಳಸುತ್ತೀರಾ? ಹಾಗಾದ್ರೆ ಈ ವಿಷ್ಯ ನೆನಪಿಟ್ಟುಕೊಳ್ಳಿ

ಕೂದಲಿಗೆ ಮೊಸರನ್ನು ಹಚ್ಚುವುದರಿಂದ ಕೂದಲಿಗೆ ಹಲವಾರು ಪ್ರಯೋಜನಗಳಿವೆ. ಆದರೆ ಮೊಸರಿನಿಂದ ಅಲರ್ಜಿ ಇರುವವರು ಇದನ್ನು ಬಳಸಬಾರದು. ಕೂದಲಿಗೆ ಮೊಸರನ್ನು ಬಳಸುವವರು ಕೆಲವೊಂದು ಅಂಶಗಳನ್ನು ತಿಳಿದಿರಬೇಕು.

Vijaya Karnataka Web 24 Jun 2022, 2:04 pm
ಮಹಿಳೆಯರು ಉದ್ದ ಕೂದಲು ಬೆಳೆಯಲು ಏನೆಲ್ಲಾ ಮನೆಮದ್ದುಗಳನ್ನು ಮಾಡುತ್ತಾರೆ. ಕೂದಲಿನ ಆರೈಕೆಗಾಗಿ ಕೂದಲನ್ನು ಬುಡದಿಂದ ಬಲಪಡಿಸಲು ಹಲವಾರು ಹೇರ್‌ಪ್ಯಾಕ್‌ನ್ನು ಬಳಸುತ್ತಾರೆ. ನಿಮ್ಮ ಅಡುಗೆಮನೆಯಲ್ಲಿ ಕೂದಲನ್ನು ಬಲಪಡಿಸಲು ಸಹಾಯ ಮಾಡುವ ಹಲವಾರು ಸಾಮಾಗ್ರಿಗಳಿವೆ. ಇವುಗಳಲ್ಲಿ ಮೊಸರು ಕೂಡಾ ಒಂದು. ಬೇಸಿಗೆಯಲ್ಲಿ ಪ್ರತಿ ಮನೆಯಲ್ಲೂ ಮೊಸರನ್ನು ನಿಯಮಿತವಾಗಿ ಬಳಸಲಾಗುತ್ತದೆ. ಇದು ದೇಹಕ್ಕೆ ನೈಸರ್ಗಿಕ ಪ್ರೋಬಯಾಟಿಕ್ ಆಗಿ ಕಾರ್ಯನಿರ್ವಹಿಸುವುದಲ್ಲದೆ, ಕೂದಲಿಗೆ ಪ್ರಯೋಜನಕಾರಿಯಾಗಿದೆ.
Vijaya Karnataka Web keep this in mind before using curd on hair
ಕೂದಲಿಗೆ ಮೊಸರನ್ನು ಬಳಸುತ್ತೀರಾ? ಹಾಗಾದ್ರೆ ಈ ವಿಷ್ಯ ನೆನಪಿಟ್ಟುಕೊಳ್ಳಿ


curd hair

​ಕೂದಲ ಪೋಷಣೆಗೆ ಮೊಸರು

ಮೊಸರನ್ನು ಕೂದಲಿಗೆ ಬಳಸುವುದರಿಂದ ಕೂದಲಿನ ಪೋಷಣೆಗೆ ಸಹಾಯ ಮಾಡುತ್ತದೆ. ಅಲ್ಲದೆ, ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲದ ಉಪಸ್ಥಿತಿಯು ನೆತ್ತಿಯನ್ನು ಪೋಷಿಸುತ್ತದೆ ಮತ್ತು ಆ ಮೂಲಕ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ತಲೆಹೊಟ್ಟು ಸೇರಿದಂತೆ ಹಲವು ಕೂದಲಿನ ಸಮಸ್ಯೆ ನಿವಾರಣೆಗೆ ಇದು ಸಹಕಾರಿಯಾಗಿದೆ. ಕೂದಲಿಗೆ ಮೊಸರು ಹಚ್ಚುವಾಗ, ನೀವು ಕೆಲವು ವಿಶೇಷ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಈ ಲೇಖನದಲ್ಲಿ ನಾವು ಕೂದಲಿಗೆ ಮೊಸರು ಬಳಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳ ಬಗ್ಗೆ ಹೇಳುತ್ತಿದ್ದೇವೆ.

​ಮೊಸರಿನೊಂದಿಗೆ ಏನೆಲ್ಲಾ ಬಳಸಬಹುದು

ಬರೀ ಮೊಸರನ್ನು ಮಾತ್ರ ಕೂದಲಿಗೆ ಹೇರ್ ಪ್ಯಾಕ್ ಆಗಿ ಬಳಸಬಹುದು. ಆದರೆ ಕೆಲವು ಮಹಿಳೆಯರು ಮೊಸರಿನ ಜೊತೆ ನಿಂಬೆ, ಮೊಟ್ಟೆ, ಮೆಂತ್ಯ ಇತ್ಯಾದಿಗಳನ್ನು ಬೆರೆಸುತ್ತಾರೆ. ನೀವು ಯಾವುದೇ ಇತರ ಪದಾರ್ಥವನ್ನು ಮೊಸರಿನೊಂದಿಗೆ ಮಿಕ್ಸ್‌ ಮಾಡುವ ಮೊದಲು, ನಿಮ್ಮ ಕೂದಲಿನ ಸಮಸ್ಯೆಯತ್ತ ನೀವು ಗಮನ ಕೊಡಬೇಕು.

ಕೂದಲಿಗೆ ಹೊಳಪಿನ ಜೊತೆಗೆ ಉತ್ತಮ ಕೂದಲು ಬೆಳವಣಿಗೆಯನ್ನು ನೀವು ಬಯಸುವುದಾದರೆ, ಮೊಸರಿನ ಜೊತೆಗೆ ಮೊಟ್ಟೆಗಳನ್ನು ಬೆರೆಸಿ ಹಚ್ಚಬಹುದು. ಅದೇ ಸಮಯದಲ್ಲಿ, ನೀವು ತಲೆಹೊಟ್ಟು ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಮೊಸರಿನೊಂದಿಗೆ ನಿಂಬೆ ಮಿಶ್ರಣ ಮಾಡುವುದು ಉತ್ತಮ ಆಯ್ಕೆಯಾಗಿದೆ.

​ಅಲರ್ಜಿ ಇದೆಯೇ ಪರೀಕ್ಷಿಸಿಕೊಳ್ಳಿ

ನೀವು ಇದೇ ಮೊದಲ ಬಾರಿಗೆ ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಮೊಸರನ್ನು ಹಚ್ಚುತ್ತಿದ್ದರೆ, ಅದನ್ನು ಎಂದಿಗೂ ಸಂಪೂರ್ಣ ಕೂದಲು ಮತ್ತು ನೆತ್ತಿಯ ಮೇಲೆ ಹಚ್ಚಬೇಡಿ. ಮೊಸರು ನಿಮ್ಮ ನೆತ್ತಿಯನ್ನು ತಂಪಾಗಿಸುತ್ತದೆ. ಆದರೆ ನೀವು ಲ್ಯಾಕ್ಟೋಸ್ ಅಸಹಿಷ್ಣುತೆಯ ಸಮಸ್ಯೆಯನ್ನು ಹೊಂದಿದ್ದರೆ, ಮೊಸರನ್ನು ನೆತ್ತಿಗೆ ಹಚ್ಚುವುದರಿಂದ ಅಲರ್ಜಿಯ ಪ್ರತಿಕ್ರಿಯೆಗಳು ಉಂಟಾಗಬಹುದು. ಆದ್ದರಿಂದ, ಇದನ್ನು ನಿಮ್ಮ ಕೂದಲ ರಕ್ಷಣೆಯ ದಿನಚರಿಯಲ್ಲಿ ಸೇರಿಸುವ ಮೊದಲು ಮೊಸರು ನಿಮ್ಮ ದೇಹಕ್ಕೆ ಸರಿಹೊಂದುತ್ತದೆಯೇ ಇಲ್ಲವೆ ಎನ್ನುವುದನ್ನು ಪರೀಕ್ಷಿಸಿ ನೋಡಿ.

​ಕೂದಲನ್ನು ಸರಿಯಾಗಿ ತೊಳೆಯುವುದು ಅವಶ್ಯಕ

ಕೂದಲಿಗೆ ಮೊಸರು ಹಚ್ಚಿದ ನಂತರ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು. ನೀವು ಕೂದಲನ್ನು ಚೆನ್ನಾಗಿ ತೊಳೆಯಬೇಕು. ಕೆಲವರು ಕೂದಲನ್ನು ಸರಿಯಾಗಿ ತೊಳೆಯುವುದಿಲ್ಲ, ಇದರಿಂದಾಗಿ ನಿಮ್ಮ ನೆತ್ತಿ ಎಣ್ಣೆಯುಕ್ತ ಮತ್ತು ಜಿಡ್ಡಿನಂತಾಗುತ್ತದೆ.

ಮೊಸರನ್ನು ಕೂದಲಿಂದ ಸರಿಯಾಗಿ ಶುಚಿಗೊಳಿಸದಿದ್ದರೆ, ಕೂದಲಿನಿಂದ ವಿಚಿತ್ರವಾದ ವಾಸನೆಯೂ ಬರುತ್ತದೆ. ನೀವೂ ಕೂದಲಿಗೆ ಯಾವುದೇ ವಸ್ತುಗಳನ್ನು ಹಚ್ಚುವಾಗ ಅದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕೂದಲನ್ನು ತೊಳೆಯುವಾಗ ಸರಿಯಾಗಿ ತೊಳೆಯಬೇಕು. ಇಲ್ಲವಾದರೆ ವಾಸನೆ ಬಹಳ ದಿನಗಳ ವರೆಗೆ ಹಾಗೆಯೇ ಇರುತ್ತದೆ.

​ತಾಜಾ ಮೊಸರನ್ನು ಬಳಸಿ

ಮೊಸರು ಹಾಳಾದಾಗ ಅದನ್ನು ಎಸೆಯುತ್ತೇವೆ. ಅದನ್ನು ಎಸೆಯುವ ಬದಲು ಕೂದಲಿಗೆ ಹಚ್ಚುತ್ತಾರೆ. ಕೂದಲ ರಕ್ಷಣೆಯ ದಿನಚರಿಯಲ್ಲಿ ತಾಜಾ ಮೊಸರು ಹಳೆಯ ಮೊಸರುಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲ, ನೀವು ಬಳಸುತ್ತಿರುವ ಮೊಸರು ಕೆಟ್ಟು ಹೋಗಿದ್ದರೆ, ಅದು ನಿಮ್ಮ ನೆತ್ತಿಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಕೂದಲಿಗೆ ಮೊಸರನ್ನು ಹಚ್ಚುವಾಗ ಯಾವಾಗಲೂ ತಾಜಾ ಮೊಸರನ್ನೇ ಹಚ್ಚಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ