ಆ್ಯಪ್ನಗರ

ಬಿಸಿಲಿಗೆ ಹೊರಗಡೆ ಹೋಗುವಾಗ ಮುಖಕ್ಕೆ-ಕೂದಲಿಗೆ ಸ್ಕಾರ್ಫ್ ಹಾಕಿಕೊಳ್ಳಿ! ಯಾಕೆ ಗೊತ್ತಾ?

ದ್ವಿಚಕ್ರ ವಾಹನ ಚಲಾಯಿಸುವ ವೇಳೆ ಮಹಿಳೆಯರು ಮುಖಕ್ಕೆ ಕೂಡ ಸ್ಕಾರ್ಪ್ ಸುತ್ತಿಕೊಳ್ಳುವುದು. ಇದಕ್ಕೆ ಕಾರಣ ಬಿಸಿಲು.

Vijaya Karnataka Web 27 Jan 2021, 5:41 pm
ಅತಿಯಾಗಿ ಬಿಸಿಲು ಇರುವಂತಹ ಕೆಲವೊಂದು ರಾಜ್ಯಗಳಲ್ಲಿ ಮಹಿಳೆಯರು ತಮ್ಮ ಮುಖವನ್ನು ಸಂಪೂರ್ಣವಾಗಿ ಸ್ಕಾರ್ಪ್ ನಿಂದ ಮುಚ್ಚುವರು. ಮುಖದ ಕಾಂತಿಯು ಬಿಸಿಲಿನಿಂದಾಗಿ ಹಾನಿ ಆಗಬಾರದು ಎನ್ನುವ ಉದ್ದೇಶದಿಂದಾಗಿ ಇದನ್ನು ಕಟ್ಟಿಕೊಳ್ಳುವರು. ಆದರೆ ಈಗ ಇದು ಬಿಸಿಲು ಅತಿಯಾಗಿ ಇರುವ ರಾಜ್ಯಗಳ ಹೊರತಾದ ಮಹಿಳೆಯರಲ್ಲೂ ಕಂಡುಬರುತ್ತಲಿದೆ.
Vijaya Karnataka Web know the reasons why you must cover your face and hair with a scarf when you travel
ಬಿಸಿಲಿಗೆ ಹೊರಗಡೆ ಹೋಗುವಾಗ ಮುಖಕ್ಕೆ-ಕೂದಲಿಗೆ ಸ್ಕಾರ್ಫ್ ಹಾಕಿಕೊಳ್ಳಿ! ಯಾಕೆ ಗೊತ್ತಾ?


ಬಸ್, ಬೈಕ್ ಅಥವಾ ಬೇರೆ ಯಾವುದೇ ವಾಹದನದಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಮಹಿಳೆಯರು ಸ್ಕಾರ್ಪ್ ನಿಂದ ಸಂಪೂರ್ಣವಾಗಿ ಮುಖ ಮುಚ್ಚಿಕೊಳ್ಳುವರು.

ಇದು ಬಿಸಿಲು ಹಾಗೂ ವಾತಾವರಣದಲ್ಲಿನ ಧೂಳಿನಿಂದ ರಕ್ಷಿಸಿಕೊಳ್ಳಲು ಸಹಕಾರಿ. ಇದನ್ನು ಅಭ್ಯಾಸ ಮಾಡಿದರೆ ಯಾಕೆ ಒಳ್ಳೆಯದು ಎಂದು ಈ ಲೇಖನದಲ್ಲಿ ಮಹಿಳೆಯರು ತಿಳಿಯಬೇಕು.

​ಬಿಸಿಲಿನಿಂದಾಗಿ ಆಗುವ ಕಲೆಯಿಂದ ರಕ್ಷಣೆ

  • ಭಾರತದಲ್ಲಿ ಹೆಚ್ಚಿನ ರಾಜ್ಯಗಳು ಬಿಸಿಲಿನ ಝಳದಿಂದ ಬಳಲುತ್ತಿರುತ್ತವೆ. ವರ್ಷದ ಹೆಚ್ಚಿನ ತಿಂಗಳು ತೀವ್ರವಾದ ಬಿಸಿಲು ಇರುವುದು. ಇದು ನೇರವಾಗಿ ಚರ್ಮದ ಮೇಲೆ ಪರಿಣಾಮ ಬೀರುವುದು. ಬಿಸಿಲಿಗೆ ಮೈಯೊಡ್ಡಿಕೊಂಡರೆ ಅದರಿಂದ ಕಲೆಗಳು ಮುಖದಲ್ಲಿ ಕಾಣಿಸುವುದು.
  • ಚರ್ಮದ ಅಡಿ ಪದರಲ್ಲಿ ಇರುವಂತಹ ಮೆಲನಿನ್ ಅಂಶವು ಇದಕ್ಕೆ ಕಾರಣವಾಗಿದೆ. ಚರ್ಮದಲ್ಲಿ ಕಲೆ ಮೂಡುವುದು ಎಂದರೆ ಅದು ತನ್ನನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುವುದು ಎಂದರ್ಥ.
  • ಇದನ್ನು ತಡೆಯಲು ಬಿಸಿಲಿಗೆ ಹೋರ ಹೋಗುವ ಸಂದರ್ಭದಲ್ಲಿ ಮುಖವನ್ನು ಸ್ಕಾರ್ಪ್ ನಿಂದ ಮುಚ್ಚಿಕೊಳ್ಳಬೇಕು. ಇದು ಬಿಸಿಲಿನಿಂದ ರಕ್ಷಣೆ ನೀಡುವುದಲ್ಲದೆ, ಚರ್ಮವು ನಿಸ್ತೇಜ ಹಾಗೂ ಕಪ್ಪಾಗುವುದನ್ನು ತಡೆಯುವುದು.

​ಚರ್ಮ ಹಾಗೂ ಕೂದಲಿನ ರಕ್ಷಣೆ

  • ಮಾಲಿನ್ಯವೆನ್ನುವುದು ಇಂದಿನ ದಿನಗಳಲ್ಲಿ ಪ್ರತಿಯೊಂದು ಕಡೆಯಲ್ಲೂ ಕಂಡುಬರುವುದು. ಹೀಗಾಗಿ ನೀವು ದೊಡ್ಡ ನಗರದಲ್ಲಿ ವಾಸಿಸುತ್ತಿದ್ದರೂ ಮಾಲಿನ್ಯವು ಇದ್ದೇ ಇರುವುದು.
  • ಧೂಳು, ಕಲ್ಮಷ ಮತ್ತು ಇತರ ಗಾಳಿಯಲ್ಲಿ ಹರಿದಾಡುವಂತಹ ಕೆಲವೊಂದು ರಾಸಾಯನಿಕಗಳು ಚರ್ಮಕ್ಕೆ ಹಾನಿ ಉಂಟು ಮಾಡುವುದು. ಎಣ್ಣೆಯುಕ್ತ ಚರ್ಮದಲ್ಲಿ ಧೂಳು ಹಾಗೆ ನಿಲ್ಲುವುದು ಮತ್ತು ಕಿರಿಕಿರಿ ಉಂಟು ಮಾಡುವುದು.
  • ಚರ್ಮದಲ್ಲಿ ಮೊಶ್ಚಿರೈಸರ್ ನ್ನು ಹೀರಿಕೊಂಡು ಚರ್ಮವು ತುಂಬಾ ನಿಸ್ತೇಜ ಹಾಗೂ ಒಣಗಿರುವಂತೆ ಮಾಡುವುದು. ಕಲ್ಮಷದಿಂದಾಗಿ ಫ್ರೀ ರ್ಯಾಡಿಕಲ್ ಕೂಡ ಉಂಟಾಗಿ ಅದರಿಂದ ಚರ್ಮಕ್ಕೆ ವಯಸ್ಸಾಗುವಂತೆ ಆಗುವುದು.
  • ಚರ್ಮವು ಸೂಕ್ಷ್ಮವಾಗಿದ್ದರೆ, ಆಗ ರಾಸಾಯನಿಕಗಳು ಇದರಲ್ಲಿ ಹೀರಿಕೊಳ್ಳುವುದು ಹಾಗೂ ಹಾನಿ ಉಂಟು ಮಾಡುವುದು.

ಕೂದಲು ಹಾಗೂ ತ್ವಚೆಯ ಸೌಂದರ್ಯಕ್ಕೆ ಒಂದು ಕಪ್ ಮೊಸರು ಬಳಸಿ!

​ಯುವಿ ಕಿರಣಗಳಿಂದ ಕೂದಲಿಗೆ ರಕ್ಷಣೆ

  • ಬಿಸಿಲು ಕೂದಲಿಗೆ ಕೂಡ ಹಾನಿ ಉಂಟು ಮಾಡಬಹುದು. ಅತಿಯಾಗಿ ಬಿಸಿಲಿನಲ್ಲಿದ್ದರೆ ಅದರಿಂದ ಕೂದಲಿನ ಬಣ್ಣ ಕೆಡುವುದು ಹಾಗೂ ಒಣಗಿ, ನಿಸ್ತೇಜವಾಗುವುದು.
  • ಧೂಳು ಹಾಗೂ ಇತರ ಕಲ್ಮಶದೊಂದಿಗೆ ಬಿಸಿಲು ಕೂದಲಿಗೆ ಅತಿಯಾಗಿ ಹಾನಿ ಉಂಟು ಮಾಡಬಹುದು. ಬಿಸಿಲಿನಿಂದಾಗಿ ತಲೆಯಲ್ಲಿ ಬೆವರು ಬಂದು ಅದು ಧೂಳಿನೊಂದಿಗೆ ತಲೆಬುರುಡೆಯಲ್ಲಿ ಅಂಟಿಕೊಳ್ಳಬಹುದು.

​ಸೂಚನೆ

  • ನೀವು ಯಾವುದಾದರೂ ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಆಗ ಕೂಡ ನೀವು ಇದನ್ನು ಬಳಕೆ ಮಾಡಬಹುದು.
  • ತಂಪು ಗಾಳಿ, ಬಿಸಿಲು ಕೂಡ ಚರ್ಮಕ್ಕೆ ಹಾನಿ ಉಂಟು ಮಾಡುವುದು. ಸ್ಕಾರ್ಪ್ ಇದರಿಂದ ರಕ್ಷಣೆ ನೀಡುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ