ಆ್ಯಪ್ನಗರ

ಮೇಕಪ್ ಹಚ್ಚಲು ಅನುಸರಿಸಬೇಕಾದ ಪ್ರಾಥಮಿಕ ಹಂತಗಳು

ಮೇಕಪ್ ಹಚ್ಚಿಕೊಳ್ಳುವುದನ್ನು ಬಹುತೇಕ ಹುಡುಗಿಯರು ಇಷ್ಟಪಡುತ್ತಾರೆ. ಆದರೆ ಅವರಿಗೆ ಮೇಕಪ್ ಹಚ್ಚಿಕೊಳ್ಳುವ ಕಲೆ ತಿಳಿದಿರುವುದಿಲ್ಲ. ಅದಕ್ಕಾಗಿ ನಾವಿಲ್ಲಿ ಮೇಕಪ್‌ ಯಾವ ರೀತಿ ಹಚ್ಚಿಕೊಳ್ಳಬೇಕು ಎನ್ನುವುದನ್ನು ತಿಳಿಸಲಿದ್ದೇವೆ.

Vijaya Karnataka Web 20 May 2021, 4:58 pm
ಕಾಲೇಜಿಗೆ ಹೋಗುವಾಗ ಅಥವಾ ಆಫೀಸ್ ಕೆಲಸಕ್ಕೆ ಹೋಗುವಾಗ ನಮ್ಮ ನೋಟವು ಸುಂದರವಾಗಿ ಕಾಣಬೇಕು ಎಂದು ಬಯಸುವುದು ಸಹಜ. ಆದರೆ ಸರಿಯಾಗಿ ಮೇಕಪ್ ಮಾಡಿಕೊಳ್ಳಲು ಆಗದೆ ಇದ್ದಾಗ ನಮ್ಮ ನೋಟ ಅಥವಾ ಮುಖದ ಸೌಂದರ್ಯ ಮಂಕಾಗಿ ಕಾಣುವುದು. ನಮ್ಮ ಬಳಿ ಇರುವ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಬಳಸಿಕೊಂಡು ಸುಲಭವಾಗಿ ಮೇಕಪ್ ಮಾಡಬಹುದು. ಅಂತಹ ಸುಂದರವಾದ ಮೇಕಪ್ ಅನ್ನು ಹೇಗೆ ಅನ್ವಯಿಸುವುದು? ಎನ್ನುವುದನ್ನು ಹಂತ ಹಂತವಾಗಿ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತೇವೆ.
Vijaya Karnataka Web makeup tips for beginners
ಮೇಕಪ್ ಹಚ್ಚಲು ಅನುಸರಿಸಬೇಕಾದ ಪ್ರಾಥಮಿಕ ಹಂತಗಳು


Video-ಸಿಂಪಲ್ ಮೇಕಪ್ ನೀವೂ ಮಾಡಿಕೊಳ್ಳಬಹುದು

​ಪ್ರೈಮರ್ ಬಳಸಿ

ಮುಖಕ್ಕೆ ಮೇಕಪ್ ಮಾಡಿಕೊಳ್ಳುವ ಮೊದಲು ಮುಖವನ್ನು ಒಮ್ಮೆ ತೊಳೆದು, ಒಣಗಿಸಿಕೊಳ್ಳಿ. ನಂತರ ಪ್ರೈಮರ್ ಅನ್ನು ಕೆನ್ನೆ, ಮೂಗು, ಗಲ್ಲ ಹಾಗೂ ಹಣೆಯ ಭಾಗಕ್ಕೆ ಹಚ್ಚಿ.

​ಫೌಂಡೇಷನ್ ಕ್ರೀಮ್ ಅನ್ವಯಿಸಿ

ಪ್ರೈಮರ್ ಹಚ್ಚಿದ ನಂತರ ಲಿಕ್ವಿಡ್ ಅಥವಾ ಕ್ರೀಮ್‍ನ ರೂಪದಲ್ಲಿ ಇರುವ ಪೌಡೇಷನ್ ಕ್ರೀಮ್ ಅನ್ವಯಿಸಬೇಕು. ಫೌಂಡೇಷನ್ ಕ್ರೀಮ್ ಅನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಬೇಕು. ಹಚ್ಚುವಾಗ ಸ್ಪಾಂಜ್ ಬ್ರೆಶ್ ಅಥವಾ ಬ್ರೆಶ್ ಕುಂಚದಿಂದ ಹಚ್ಚಬೇಕು.

ಆಕರ್ಷಕ ತ್ವಚೆಗೆ ಇಲ್ಲಿದೆ ನೈಸರ್ಗಿಕ ಆರೈಕೆ

​ಪೌಡರ್‌ ಹಚ್ಚಿ

ಬಳಿಕ ಲೂಸ್ ಪೌಡರ್ ಸಹಾಯದಿಂದ ಮುಖದ ಎಲ್ಲಾ ಭಾಗಕ್ಕೂ ಹಚ್ಚುವುದರ ಮೂಲಕ ಸೆಟ್ ಮಾಡಬೇಕು.

​ಬ್ಲಶ್ ಮತ್ತು ಐಲ್ಯಾಶ್

ಕೆನ್ನೆಯ ಮೇಲ್ಭಾಗದಲ್ಲಿ ತೆಳುವಾಗಿ ಹೈಲೈಟರ್ ಅನ್ನು ಬ್ಲಶ್ ಆಗಿ ಹಚ್ಚಬೇಕು. ನಂತರ ಅದೇ ಹೈಲೈಟರ್ ಅನ್ನು ಐ ಲ್ಯಾಶ್ ಆಗಿಯೂ ಅನ್ವಯಿಸಬೇಕು. ನಂತರ ಬೆರಳಿನ ಸಹಾಯದಿಂದ ಅವುಗಳನ್ನು ಹರಡಿ. ಅದು ಸುಂದರವಾಗಿ ಹೊಂದಾಣಿಕೆ ಆಗುವುದು.

​ಐ ಲೈನರ್

ಬಳಿಕ ಐಲ್ ಲೈನರ್ ಅನ್ನು ಸೂಕ್ಷ್ಮವಾಗಿ ಅನ್ವಯಿಸಿ. ಬಳಿಕ ಮಸ್ಕರವನ್ನು ಅನ್ವಯಿಸಬೇಕು. ಬಳಿಕ ಹುಬ್ಬುಗಳನ್ನು ತೆಳುವಾಗಿ ತೀಡಿ. ಬಳಿಕ ಐ ಲ್ಯಾಶಸ್ ಅನ್ನು ಬಗ್ಗಿಸುವುದರ ಮೂಲಕ ಆಕರ್ಷಕಗೊಳಿಸಿ.

ಚರ್ಮದ ಉತ್ಪನ್ನಗಳನ್ನು ಸರಿಯಾದ ಕ್ರಮದಲ್ಲಿ ಏಕೆ ಬಳಸಬೇಕು

​ತುಟಿಗೆ ಬಣ್ಣ

ನೀವು ತುಟಿಗೆ ಬಣ್ಣ ಆರಿಸುವಾಗ ನಿಮ್ಮ ಉಡುಗೆ ಹಾಗೂ ಮುಖಕ್ಕೆ ಹೊಂದುವಂತಹ ಬಣ್ಣದ ಆಯ್ಕೆ ಮಾಡಬೇಕು. ಹಗಲಿನಲ್ಲಿ ಮೇಕಪ್ ಹಚ್ಚುವಾಗ ತೆಳು ಬಣ್ಣದ ತುಟಿಯ ಬಣ್ಣವನ್ನು ಆಯ್ಕೆ ಮಾಡಬೇಕು. ರಾತ್ರಿ ಪಾರ್ಟಿಗಳಿಗೆ ಅಥವಾ ಕಾರ್ಯಕ್ರಮಗಳಿಗಾದರೆ ಗಾಢ ಬಣ್ಣದ ತುಟಿಯ ಬಣ್ಣವನ್ನು ಆಯ್ಕೆ ಮಾಡಿ.

​ಅಂತಿಮ ಟಚಪ್

ಮೇಕಪ್ ಮುಗಿದ ಬಳಿಕ ಕೊನೆಯದಾಗಿ ಮೇಕಪ್ ಫಿಕ್ಸರ್ ಸ್ಪ್ರೇ ಅನ್ನು ಹಚ್ಚಿ. ಅದು ನಿಮ್ಮ ಮೇಕಪ್ ಅನ್ನು ದೀರ್ಘ ಸಮಯಗಳ ಕಾಲ ಹಾಳಾಗದಂತೆ ತಡೆಯುವುದು. ಜೊತೆಗೆ ದೀರ್ಘ ಸಮಯ ನೀವು ಸಹ ಆಕರ್ಷಕ ಹಾಗೂ ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ