ಆ್ಯಪ್ನಗರ

ಮುಖದ ಮೇಲೆ ಕಾಣಿಸಿಕೊಳ್ಳುವ ಮೊಡವೆ ಗುಳ್ಳೆಗಳಿಗೆ ಕಾರಣ ಏನು?

ಮೊಡವೆಗಳನ್ನು ಹಿಚುಕುವುದರಿಂದ ಅಥವಾ ನೋವು ಮಾಡುವುದರಿಂದ ಅದರ ಹರಡುವಿಕೆಯು ಸಹ ದೊಡ್ಡ ಜಾಗವನ್ನು ಪಡೆದುಕೊಳ್ಳುವುದು. ಹೀಗೆ ಮುಖದ ಮೇಲೆ ಕಾಣಿಸಿಕೊಳ್ಳುವ ಅನುಚಿತ ಕುರುಹುಗಳನ್ನು ಹೇಗೆ ನಿಯಂತ್ರಣದಲ್ಲಿ ಇಡುವುದು ನೋಡಿ.

Vijaya Karnataka Web 17 Feb 2021, 6:15 pm
ಮುಖದ ಮೇಲೆ ಯಾವುದೇ ಕಲೆ ಹಾಗೂ ಮೊಡವೆಯ ಕುರುಹು ಇರಬಾರದು ಎಂದು ಬಯಸುವುದು ಸಾಮಾನ್ಯ. ಆದರೆ ಧೂಳು, ಮಾಲಿನ್ಯ, ಹಾರ್ಮೋನ್ ಹಾಗೂ ಜಿಡ್ಡುಗಳ ಕಾರಣದಿಂದ ಮುಖದಲ್ಲಿ ಮೊಡವೆ, ಬ್ಲಾಕ್ ಹೆಡ್ ಮತ್ತು ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಜಿಡ್ಡು ಹಾಗೂ ಹಾರ್ಮೋನ್ ಕಾರಣದಿಂದ ಮುಖದಲ್ಲಿ ಮೊಡವೆಗಳು ಹುಟ್ಟಿಕೊಳ್ಳುವುದು.
Vijaya Karnataka Web reasons behind the pimples on face
ಮುಖದ ಮೇಲೆ ಕಾಣಿಸಿಕೊಳ್ಳುವ ಮೊಡವೆ ಗುಳ್ಳೆಗಳಿಗೆ ಕಾರಣ ಏನು?


​ಮುಖದಲ್ಲಿ ಸಿಸ್ಟ್ಸ್

ಮೊಡವೆಯು ತೀವ್ರವಾಗಿ ಕೀವುಗಳಿಂದ ಕೂಡಿದ್ದು, ಮುಟ್ಟಲು ಮೃದುವಾದದ ಸಂವೇದನೆ ನೀಡುವುದು. ಈ ಬಗೆಯ ಮೊಡವೆಯು ಸಾಮಾನ್ಯವಾಗಿ ಕೆನ್ನೆ ಹಾಗೂ ಗಡ್ಡದ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಮುಖದಲ್ಲಿ ಅಧಿಕ ಎಣ್ಣೆಯಂಶ, ಸತ್ತ ಚರ್ಮ ಮತ್ತು ಬ್ಯಾಕ್ಟೀರಿಯಾಗಳ ಕಾರಣದಿಂದ ಕಾಣಿಸಿಕೊಳ್ಳುತ್ತವೆ. ನೋವು ಮತ್ತು ಕೀವುಗಳಿಂದ ಕೂಡಿರುವ ಈ ಮೊಡವೆಗಳು ವಾರ ಹಾಗೂ ತಿಂಗಳುಗಳ ಕಾಲ ಮುಖದ ಮೇಲೆ ಉಳಿದುಕೊಳ್ಳುತ್ತವೆ. ಇವುಗಳನ್ನು ಹಿಚುಕುವುದು ಅಥವಾ ನೋವನ್ನು ಉಂಟುಮಡುವುದರಿಂದ ಹೆಚ್ಚು ಸಮಯಗಳ ಕಾಲ ವಿಶಾಲ ವ್ಯಾಪ್ತಿಯನ್ನು ಪಡೆದುಕೊಳ್ಳುವುದು.

​ಮೊಡವೆಯ ವಲ್ಗುರಿಸ್

ಮೊಡವೆಯ ಒಂದು ರೂಪವಾದ ವಲ್ಗುರಿಸ್ ಗಳು ಬ್ಯಾಕ್‍ಹೆಡ್, ವೈಟ್ ಹೆಡ್ ಮತ್ತು ಕೊಳೆಗಳ ಕಾರಣದಿಂದ ಕಾಣಿಸಿಕೊಳ್ಳುತ್ತವೆ. ಇವು ಮಧ್ಯಮ ಗಾತ್ರದ ಮೊಡವೆಯನ್ನು ಪ್ರಚೋದಿಸುತ್ತವೆ. ಇದರ ತೀವ್ರತೆಯು ಹೆಚ್ಚಾದಾಗ ಚರ್ಮ ರೋಗ ತಜ್ಞರಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಆಗಾಗ ಬ್ಲ್ಯಾಕ್ ಹೆಡ್ ಮತ್ತು ವೈಡ್ ಹೆಡ್‍ಗಳ ಸ್ವಚ್ಛತೆಯನ್ನು ಮಾಡಿಕೊಳ್ಳುತ್ತಿದ್ದರೆ ಚರ್ಮವು ಆರೋಗ್ಯ ಮತ್ತು ಮೊಡವೆ ಮುಕ್ತವಾಗಿ ಇರುತ್ತದೆ. ಈ ಬಗೆಯ ಮೊಡವೆಯನ್ನು ಹಿಚುಕುವುದು ಅಥವಾ ಉಗುರುಗಳಿಂದ ಕೆರೆದುಕೊಳ್ಳುವ ಪ್ರಯತ್ನ ಮಾಡಬಾರದು.

ಪಪ್ಪಾಯ, ಆಲೂಗಡ್ಡೆ, ನಿಂಬೆಹಣ್ಣು, ಇದ್ರಲ್ಲಿ ಒಂದು ಇದ್ರೂ ಸಾಕು ಕಪ್ಪು ಕಲೆ ಮಂಗಮಾಯ!!

​ಬ್ಲ್ಯಾಕ್ ಹೆಡ್

ಬ್ಲ್ಯಾಕ್ ಹೆಡ್‍ಗಳು ತೆರೆದ ಕಾಮೆಡೋನ್ಸ್ ಎಂದು ಕರೆಯಲಾಗುವುದು. ಬ್ಲ್ಯಾಕ್‍ಹೆಡ್‍ಗಳ ತಲೆಭಾಗದ ರಂಧ್ರವು ತೆರೆದಿರುತ್ತದೆ. ಇವು ಚರ್ಮದ ಮೇಲಿನ ಭಾಗ ಅಥವಾ ಪದರವನ್ನು ಹಾನಿಗೊಳಿಸುತ್ತವೆ. ಜೊತೆಗೆ ಮೊಡವೆಗಳಿಗೆ ಪ್ರಚೋದನೆ ನೀಡುವುದು. ಆಗಾಗ ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ಚರ್ಮದ ಸ್ವಚ್ಛತೆ ಹಾಗೂ ಆರೈಕೆ ಮಾಡುವುದರ ಮೂಲಕ ಸಮಸ್ಯೆಯನ್ನು ನಿವಾರಿಸಬಹುದು. ಜೊತೆಗೆ ಮೊಡವೆಯ ಪ್ರಚೋದನೆಯನ್ನು ನಿಯಂತ್ರಣದಲ್ಲಿ ಇಡಬಹುದು.

​ವೈಟ್‍ಹೆಡ್‍ಗಳು

ಚರ್ಮದ ಮೇಲೆ ಸಣ್ಣ ಅಥವಾ ಮಧ್ಯಮ ಉಬ್ಬುಗಳಾಗಿ ಕಾಣಿಸಿಕೊಳ್ಳುತ್ತವೆ. ಇವು ಸಾಮಾನ್ಯವಾಗಿ ಬಿಳ್ಳಿ ಅಥವಾ ಚರ್ಮದ ಬಣ್ಣದಲ್ಲಿಯೇ ಕಾಣಿಸಿಕೊಳ್ಳುವುದು. ಇಂತಹ ಬಿಳಿಯ ಗುಳ್ಳೆಯನ್ನು ವೈಡ್‍ಹೆಡ್‍ಗಳು ಎಂದು ಕರೆಯಲಾಗುವುದು. ಇವುಗಳು ಚರ್ಮದ ಮೇಲೆ ತಾತ್ಕಾಲಿಕವಾಗಿ ಅಂಟಿಕೊಂಡಿರುತ್ತವೆ. ಜೊತೆಗೆ ಚರ್ಮದ ಆರೋಗ್ಯವನ್ನು ಹಾಳು ಮಾಡುವುದು. ಅಲ್ಲದೆ ಮೊಡವೆಗಳಿಗೆ ಪ್ರಚೋದನೆ ನೀಡುವುದು. ಇವುಗಳನ್ನು ಸಹ ಹಿಸುಕದೆ ಸೂಕ್ತ ಆರೈಕೆ ಹಾಗೂ ಸ್ವಚ್ಛತೆಯ ಮೂಲಕ ಆರೈಕೆ ಮಾಡಬಹುದು.

ಈ ಮೂರು-ನಾಲ್ಕು ಬಗೆಯ ಸೊಪ್ಪುಗಳು ಮೊಡವೆಗಳಿಗೆ ಪರ್ಫೆಕ್ಟ್ ಮದ್ದು

​ಕೀವು ತುಂಬಿದ ಗುಳ್ಳೆಗಳು

ಪಿಂಪಲ್ ಅಥವಾ ವೈಡ್‍ಹೆಡ್ ಗಳು ಉಬ್ಬಿಕೊಂಡಂತಹ ರಚನೆಯನ್ನು ಪಡೆದುಕೊಂಡು ಸುತ್ತಲೂ ಉಗುರದಂತೆ ಕೀವುಗಳು ತುಂಬಿಕೊಂಡಿರುತ್ತವೆ. ಇವುಗಳನ್ನು ಹಿಚುಕುವುದರ ಮೂಲಕ ಕೀವುಗಳನ್ನು ತೆಗೆದರೆ ಚರ್ಮದ ಮೇಲೆ ಕಪ್ಪು ಕಲೆಯಾಗಿ ಮಾರ್ಪಡುವುದು. ಈ ಕಲೆಗಳು ಸಾಕಷ್ಟು ದಿನಗಳ ಮೇಲೆ ಹಾಗೆಯೇ ಉಳಿದುಕೊಳ್ಳುತ್ತವೆ. ಅವುಗಳಿಗಾಗಿ ಸೂಕ್ತ ಚಿಕಿತ್ಸೆ ಹಾಗೂ ತಪಾಸಣೆ ಪಡೆಬೇಕು.

​ಕಾಮೆಡೋನ್ಸ್

ಮುಖದ ಮೇಲೆ ಇರುವ ಅನುಪಯುಕ್ತ ಕೂದಲುಗಳ ಕೋಶದಿಂದ ಉಂಟಾಗುವ ಮೊಡವೆಗಳಿಗೆ ಕಾಮೆಡೋನ್ಸ್ ಎಂದು ಕರೆಯುತ್ತಾರೆ. ಈ ರೀತಿಯ ಮೊಡವೆಗಳು ಎಣ್ಣೆಯಿಂದ ಮುಚ್ಚಿರುತ್ತವೆ. ಚರ್ಮದ ಒಳಭಾಗದಿಂದ ಮೊಡವೆಯ ರಚನೆಯಾಗಿ ಚರ್ಮದ ಮೇಲ್ಭಾಗದಲ್ಲಿ ಉಬ್ಬಿರುವಂತೆ ಕಾಣುವುದು. ಇವು ಚರ್ಮದ ಮೇಲ್ಭಾಗದಲ್ಲಿ ನೋವು ಹಾಗೂ ತುರಿಕೆಯನ್ನು ಪ್ರಚೋದಿಸುವುದು. ಇವುಗಳನ್ನು ವೈದ್ಯರಲ್ಲಿ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ