ಆ್ಯಪ್ನಗರ

ಬಿಸಿಲಿನ ಝಳ ಹೆಚ್ಚಿದೆ, ತ್ವಚೆ ಆರೈಕೆ ಹೀಗಿರಲಿ

ಒಂದು 10 ನಿಮಿಷ ಓಡಾಡಿದರೂ ಸ್ಕಿನ್‌ ಟ್ಯಾನ್ ಆಗುತ್ತವೆ ಅಷ್ಟಿದೆ ಬಿಸಿಲಿನ ತೀವ್ರತೆ. ಬಿಸಿಲಿನಲ್ಲಿ ತ್ವಚೆ ಒಣಗುವುದು, ಟ್ಯಾನ್ ಆಗುವುದು, ನಿರ್ಜಲೀಕರಣ ಉಂಟಾಗುವುದನ್ನು ತಪ್ಪಿಸಲು ಈ ರೀತಿ ಆರೈಕೆ ಮಾಡಿ

TIMESOFINDIA.COM 24 May 2019, 1:43 pm
ಈ ವರ್ಷ ಬಿಸಿಲಿನ ಝಳ ಹೆಚ್ಚಾಗಿಯೇ ಇದೆ. ಬಿಸಿಲಿನಲ್ಲಿ ಹೊರಗಡೆ ಹೋಗುವಾಗ ತ್ವಚೆ ಆರೈಕೆ ಕಡೆ ತುಸು ಹೆಚ್ಚೇ ಕಾಳಜಿ ನೀಡಬೇಕಾಗಿದೆ. ಒಂದು 10 ನಿಮಿಷ ಓಡಾಡಿದರೂ ಸ್ಕಿನ್‌ ಟ್ಯಾನ್ ಆಗುತ್ತವೆ ಅಷ್ಟಿದೆ ಬಿಸಿಲಿನ ತೀವ್ರತೆ.

ಬಿಸಿಲಿನಲ್ಲಿ ತ್ವಚೆ ಒಣಗುವುದು, ಟ್ಯಾನ್ ಆಗುವುದು, ನಿರ್ಜಲೀಕರಣ ಉಂಟಾಗುವುದನ್ನು ತಪ್ಪಿಸಲು ಈ ರೀತಿ ಆರೈಕೆ ಮಾಡಿ:

1. ಸಾಕಷ್ಟು ನೀರು ಕುಡಿಯಿರಿ
ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ. ನಿಮ್ಮ ಮೈ ತೂಕಕ್ಕೆ ತಕ್ಕಂತೆ ನೀರು ಕುಡಿಯಿರಿ. ಕಡಿಮೆಯೆಂದರೂ 8 ಲೋಟ ನೀರು ಕುಡಿಯಿರಿ.
2. ಎಳನೀರು, ಫ್ರೂಟ್‌ ಜ್ಯೂಸ್‌ ಕುಡಿಯಿರಿ.
3. ಬಿಸಿಲಿಗೆ ಹೋಗುವಾಗ ಸನ್‌ಸ್ಕ್ರೀನ್‌ ಬಳಸಿ
4. ತುಟಿ ಡ್ರೈಯಾಗದಿರಲು SPF ಬೇಸ್ಡ್‌ ಲಿಪ್‌ಬಾಮ್‌ ಬಳಸಿ.
5. ತ್ವಚೆಯಲ್ಲಿ ಬಿದ್ದ ಟ್ಯಾನ್‌ ಹೋಗಲು ಕ್ರೀಮ್‌, ಮಾಸ್ಕ್‌ ಬಳಸಿ.
6. ಕೂದಲನ್ನು ಶ್ಯಾಂಪೂ ಹಾಕಿ ತೊಳೆದು ಒಣಗಿಸಿ, ಹೇರ್‌ ಮಾಸ್ಕ್‌ ಬಳಸಿ. ಇದು ನಿಮ್ಮ ಕೂದಲು ಡ್ರೈಯಾಗುವುದನ್ನು ತಡೆಯುತ್ತದೆ.
7. ವಾರದಲ್ಲಿ ಎರಡು ಬಾರಿ ಇಡೀ ಮೈಗೆ ಸ್ಕ್ರಬ್ಬಿಂಗ್‌ ಮಾಡಿ. ಎಣ್ಣೆಗೆ ಸಕ್ಕರೆ ಹಾಕಿ ಸ್ಕ್ರಬ್ ಮಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ