ಆ್ಯಪ್ನಗರ

ಎಲ್ಲರಿಗೂ ಸೂಟ್‌ ಆಗುವ 2 ಬ್ಯೂಟಿ ಟಿಪ್ಸ್ ನೀಡಿದ ಸೋನಂ ಕಪೂರ್‌

ಬಾಲಿವುಡ್‌ ಬ್ಯೂಟಿ ಸೋನಂ ಕಪೂರ್‌ ಬ್ಯೂಟಿ ಸೀಕ್ರೆಟ್‌ ತಿಳಿಯ ಬಯಸಿದ ಅಭಿಮಾನಿಗಳಿಗೆ ಸೋನಂ ನೀಡಿರುವ ಬ್ಯೂಟಿ ಟಿಪ್ಸ್ ಅದ್ಭುತವಾಗಿದೆ. ಕಾಂತಿಯುತ ತ್ವಚೆ ಬಯಸುವವರು ಸೋನಂ ಹೇಳಿರುವ ಈ ಸಿಂಪಲ್‌ ಟಿಪ್ಸ್ ಬಳಸಿದರೆ ಸಾಕು, ಲುಕ್‌ ಹೆಚ್ಚಿಸಿಕೊಳ್ಳಬಹುದು.

TIMESOFINDIA.COM 30 Jun 2019, 4:19 pm
ಸೋನಂ ಕಪೂರ್‌ ಬಾಲಿವುಡ್‌ನ ಇತರ ನಟಿಯರಿಗಿಂತ ಭಿನ್ನವಾಗಿ ಕಾಣುವುದೇ ತಮ್ಮ ಬೋಲ್ಡ್ ಬ್ಯೂಟಿ ಸ್ಟೇಟ್‌ಮೆಂಟ್‌ ಮೂಲಕ.
Vijaya Karnataka Web beauty care


ಸಿನಿಮಾ ನಟಿಯರ ತ್ವಚೆ ತುಂಬಾ ಸುಂದರವಾಗಿರುತ್ತೆ, ಅವರು ನಮಗಿಂತ ತುಂಬಾ ಸುಂದರವಾಗಿರುತ್ತೆ ಎಂದು ಭಾವಿಸುವ ಸಾಮಾನ್ಯ ಹೆಣ್ಣು ಮಕ್ಕಳಿಗೆ ಸಿನಿಮಾ ನಟಿಯರು ಮೇಕಪ್‌ ಇಲ್ಲದಿದ್ದರೆ ಹೇಗೆ ಕಾಣುತ್ತಾರೆ ಎಂಬುವುದನ್ನು ತನ್ನ ಸ್ಟೋರಿ ಮೂಲಕ ಹೇಳಿದ್ದರು.

ನನಗೆ ಮನೆಯಿಂದ ಹೊರಗಡೆ ಬರಬೇಕೆಂದರೆ ಕಡಿಮೆಯೆಂದರೂ ಎರಡು ಗಂಟೆ ಕನ್ನಡಿ ಮುಂದೆ ಕೂರಬೇಕೆಂದು ಹೇಳುವ ಮೂಲಕ ಹೇಳಿ ಚೆನ್ನಾಗಿಲ್ಲವೆಂದು ಕೊರಗುವುದು ಬೇಡ, ಮೇಕಪ್‌ ಹಾಕಿದರೆ ಎಲ್ಲರೂ ಚೆನ್ನಾಗಿ ಕಾಣುತ್ತಾರೆ ಎಂದು ಹೇಳುವ ಮೂಲಕ ಸ್ಪೂರ್ತಿ ತುಂಬುವ ಪ್ರಯುತ್ನ ಮಾಡಿದ್ದರು.

ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಬ್ಯೂಟಿ ಕುರಿತು 2 ಸೂಪರ್‌ ಬ್ಯೂಟಿ ಟಿಪ್ಸ್ ನೀಡಿದ್ದಾರೆ.

ಸೋನಂ ಪ್ರಕಾರ ಬ್ಯೂಟಿ ಸೀಕ್ರೆಟ್‌ ಅಂದರೆ 'ಲವ್ ಮತ್ತು ಫ್ರೆಶ್‌ ಏರ್‌'. ಆಕೆಯ ಅಭಿಮಾನಿಗಳು ಕಾಂತಿಯುತ ತ್ವಚೆಗಾಗಿ ಏನು ಮಾಡುತ್ತೀರಾ ಎಂದು ಕೇಳಿದಾಗ 'ವಿಟಮಿನ್‌ ಸಿ, ಸಾಕಷ್ಟು ನೀರು ಕುಡಿಯುವುದು, ಬಿಸಿಲಿಗೆ ಮೈ ಒಡ್ಡುವುದು, ಮೇಕಪ್‌ ತೆಗೆದು ಮಲಗುವುದು'ಎಂದಿದ್ದಾರೆ.

ಗೋಧಿ ವರ್ಣಕ್ಕೆ ಸೂಕ್ತವಾದ ಕನ್ಸೀಲರ್‌ ಸಿಗುವುದಿಲ್ಲ, ಆದ್ದರಿಂದ 2-3 ಬಗೆಯ ಕನ್ಸೀಲರ್‌ ಮಿಕ್ಸ್ ಮಾಡಿ ಹಚ್ಚುತ್ತೇನೆ. ಇದರಿಂದ ನನ್ನ ಮುಖ ಮೇಕಪ್ ಮಾಡಿದಂತೆ ಕಾಣುವುದಿಲ್ಲ ಎಂದಿದ್ದಾರೆ.

ಅಲ್ಲದೆ ಹಗಲಿನಲ್ಲಿ ತುಸು ಹೊತ್ತು ಮಲಗುವುದರಿಂದ ರಕ್ತ ಸಂಚಾರ ಸರಿಯಾಗಿ ನಡೆಯುವುದು, ಇದರಿಂದ ತ್ವಚೆ ಕಾಂತಿ ಹೆಚ್ಚುವುದು ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ