ಆ್ಯಪ್ನಗರ

Shiny Hair: ಹೊಳೆಯುವ ಕೂದಲು ಪಡೆಯಲು ನೈಸರ್ಗಿಕ ವಿಧಾನಗಳು

ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಕೂದಲು ಹೊಳೆಯುವಂತೆ ಮಾಡಲು ಸಲೂನ್‌ಗೆ ಹೋಗಿ ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ. ಅಲ್ಲದೆ, ಟ್ರೀಟ್‌ಮೆಂಟ್‌, ಹಲವು ವಿಧದ ಕಂಡೀಷನರ್‌ ಹಾಗೂ ಶಾಂಪೂಗಳಿಗೆ ಹೆಚ್ಚು ಹಣ ನೀಡಬೇಕಿಲ್ಲ. ಬದಲಾಗಿ ಕಡಿಮೆ ಬೆಲೆಯಲ್ಲಿ ನೈಸರ್ಗಿಕ ವಿಧಾನದಲ್ಲೇ ಕೂದಲನ್ನು ಹೊಳೆಯುವಂತೆ ಮಾಡಬಹುದು.

TIMESOFINDIA.COM 21 Feb 2019, 10:14 pm
ನೈಸರ್ಗಿಕ ವಿಧಾನದಲ್ಲಿ ಕೂದಲು ಹೊಳೆಯುವಂತೆ ಮಾಡಲು ಹಾಗೂ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಹಲವು ವಿಧಾನಗಳಿವೆ. ಇವುಗಳು ಯಾವುವು ಎಂದರೆ,
Vijaya Karnataka Web shiny hair


1. ಮೇಯನೇಸ್ ಮಾಸ್ಕ್
ಮೃದು ಹಾಗೂ ಹೈಡ್ರೇಟೆಡ್ ಕೂದಲಿಗಾಗಿ ಮೇಯನೇಸ್ ಅನ್ನು ಡೀಪ್ ಕಂಡೀಷನರ್ ಆಗಿ ಬಳಸಬಹುದು ಅಥವಾ ಹೈಡ್ರೇಟಿಂಗ್ ಕೂದಲು ಮಾಸ್ಕ್‌ ಅನ್ನಾಗಿಯೂ ಬಳಸಬಹುದು. ನಿಮ್ಮ ಕೂದಲಿನ ಉದ್ದಕ್ಕೆ ತಕ್ಕಂತೆ ಮೇಯನೇಸ್ ಅನ್ನು ತೆಗೆದುಕೊಂಡು ಒದ್ದೆಯಾದ ಕೂದಲಿಗೆ ಮಸಾಜ್ ಮಾಡಿ. ನಂತರ ಅದನ್ನು 20 ನಿಮಿಷಗಳಿಂದ 1 ಗಂಟೆಯವರೆಗೆ ಬಿಟ್ಟು ಬಳಿಕ ಸಾಮಾನ್ಯದಂತೆ ತೊಳೆಯಬಹುದು.

2. ಬಾಳೆಹಣ್ಣಿನ ಮಾಸ್ಕ್
ಒಂದು ಮಧ್ಯಮ ಗಾತ್ರದ ಬಾಳೆಹಣ್ಣುತೆಗೆದುಕೊಂಡು ಅದನ್ನು ಪೇಸ್ಟ್ ಆಗುವಂತೆ ಮಾಡಿಕೊಳ್ಳಿ. ನಂತರ, ಒಂದು ಟೇಬಲ್‌ ಸ್ಪೂನ್‌ನಷ್ಟು ಹಾಲು ಸೇರಿಸಿ ನಿಮ್ಮ ಕೂದಲಿಗೆ ಹಚ್ಚಿಕೊಳ್ಳಬಹುದು. ಈ ಮಾಸ್ಕ್‌ ಅನ್ನು 20-30 ನಿಮಿಷಗಳ ಕಾಲ ಹಾಗೇ ಇರಿ. ಬಳಿಕ , ನೀವು ಬಳಸುವ ಸಾಮಾನ್ಯ ಶಾಂಪೂವಿನಲ್ಲಿ ಅದನ್ನು ತೊಳೆದುಕೊಳ್ಳಿ.

3.ಬಿಯರ್ ರಿನ್ಸ್
ಹೊಳೆಯುವ ಸುವಾಸನೆಯುಳ್ಳ ಕೂದಲು ಬೇಕಿದ್ದರೆ ಅದಕ್ಕೆ ಸೀಕ್ರೆಟ್ ಬಿಯರ್. ಹೌದು, ಒಂದು ಬಾಟಲ್ ಅಥವಾ ಒಂದು ಕ್ಯಾನ್ ಬಿಯರ್ ಅನ್ನು ಕಂಟೇನರ್‌ನಲ್ಲಿಟ್ಟು ಕೆಲ ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಹಾಗೇ ಇಡಿ. ಬಳಿಕ, ನೀವು ಶಾಂಪೂ ಹಾಗೂ ಹೇರ್ ಕಂಡೀಷನರ್ ಬಳಸಿಕೊಂಡ ಬಳಿಕ ಬಿಯರ್ ಅನ್ನು ಕೂದಲಿಗೆ ಸುರಿದುಕೊಂಡರೆ ಉತ್ತಮ ಫಲಿತಾಂಶ ದೊರೆಯಲಿದೆ. ಇನ್ನು, ಬಿಯರ್ ಅನ್ನು ಕೂದಲಿಗೆ ಹಾಕಿಕೊಂಡ ಬಳಿಕ 1-2 ನಿಮಿಷಗಳ ಕಾಲ ಮಸಾಜ್ ಮಾಡಿ. ಬಳಿಕ ಅದನ್ನು 15 ನಿಮಿಷಗಳ ಕಾಲ ಹಾಗೇ ಇಟ್ಟು ತಣ್ಣೀರಿನಿಂದ ಕೂದಲು ತೊಳೆದುಕೊಳ್ಳಿ.

4. ಈರುಳ್ಳಿ ಸೀರಮ್
ನಿಮ್ಮ ಕೂದಲು ಬೆಳೆಯಲು ಈರುಳ್ಳಿ ಪರಿಪೂರ್ಣ ಪರಿಹಾರವಾಗಿದೆ. ಉದ್ದ ಕೂದಲು ಬೇಕಿರುವವರಿಗಾಗಿ ಒಂದು ಈರುಳ್ಳಿ ತೆಗೆದುಕೊಂಡು ಅದನ್ನು ನೀಟಾಗಿ ಸಣ್ಣದಾಗಿ ಹೆಚ್ಚಿ. ಈರುಳ್ಳಿಯಲ್ಲಿರುವ ರಸವನ್ನು ಕೂದಲಿನ ಬೇರಿಗೆ ( ಹೇರ್‌ ರೂಟ್ಸ್) ಹಾಕಿ 30-40 ನಿಮಿಷಗಳ ಕಾಲ ಹಾಗೇ ಬಿಡಿ. ಬಳಿಕ ಕೂದಲನ್ನು ಮಾಮೂಲಿಯಂತೆ ತೊಳೆದುಕೊಳ್ಳಿ.

5. ಮೊಸರಿನ ಕಂಡೀಷನರ್
ಕೂದಲಿಗೆ ಮೊಸರು ಉತ್ತಮ ಕಂಡೀಷನರ್ ಆಗಬಲ್ಲದು. ಕೂದಲನ್ನು ರೇಷ್ಮೆಯಂತಹ ಹಾಗೂ ನಯವಾಗುವಂತೆ ಮಾಡಲು ಉತ್ತಮ ಪೌಷ್ಠಿಕಾಂಶಗಳು ಮೊಸರಿನಲ್ಲಿದೆ. ಜತೆಗೆ, ಆಲೋವೆರಾ ಹಾಗೂ ನಿಂಬೆ ರಸವನ್ನು ಸೇರಿಸಿ ಮೂರೂ ಪದಾರ್ಥಗಳನ್ನು ಮಿಶ್ರಣ ಮಾಡಿ ಆ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿಕೊಳ್ಳಿ. ನಂತರ, 15-20 ನಿಮಿಷಗಳ ಕಾಲ ಹಾಗೇ ಇಟ್ಟು ಬಳಿಕ ಕೂದಲನ್ನು ಮಾಮೂಲಿಯಂತೆ ತೊಳೆದುಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ