ಆ್ಯಪ್ನಗರ

ಈ ನ್ಯಾಚುರಲ್ ಎಣ್ಣೆಗಳನ್ನು ಬಳಸಿದ್ರೆ, ಕೂದಲು ಉದುರುವ ಸಮಸ್ಯೆ ಕಮ್ಮಿ ಆಗುತ್ತೆ!

ನಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಪಡುವ ಪ್ರಯತ್ನ ವ್ಯರ್ಥ ಆಗಬಾರದು ಎಂದರೆ, ನಾವು ಕೂದಲಿನ ಪೌಷ್ಠಿಕತೆಗೆ ವಿವಿಧ ಬಗೆಯ ಹೇರ್ ಆಯಿಲ್ ಗಳನ್ನು ಬಳಸಬೇಕಾಗುತ್ತದೆ.

Lipi 30 Jul 2020, 5:55 pm
ನಮ್ಮ ತಲೆ ಕೂದಲು ನಮ್ಮ ಸೌಂದರ್ಯದ ಒಂದು ಪ್ರತೀಕ. ಅವುಗಳ ಸದೃಢತೆಗೆ ಹಾಗು ಸಂರಕ್ಷಣೆಗೆ ನಾವು ಇನ್ನಿಲ್ಲದ ಪ್ರಯತ್ನ ಮಾಡುತ್ತೇವೆ.
Vijaya Karnataka Web ಈ ನ್ಯಾಚುರಲ್ ಎಣ್ಣೆಗಳನ್ನು ಬಳಸಿದ್ರೆ, ಕೂದಲು ಉದುರುವ ಸಮಸ್ಯೆ ಕಮ್ಮಿ ಆಗುತ್ತೆ!


ಹಲವು ಬಗೆಯ ಕೂದಲಿನ ಬೆಳವಣಿಗೆಗೆ ಉಪಯೋಗವಾಗುವಂತಹ ಮಾರುಕಟ್ಟೆಗಳಲ್ಲಿ ಸಿಗುವ ಕೂದಲಿನ ಉತ್ಪನ್ನಗಳನ್ನು ಬಳಸಿ ಕೂದಲಿನ ಬೇರುಗಳಿಗೆ ಶಕ್ತಿ ಒದಗಿಸಿ ನಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಪಡುವ ಪ್ರಯತ್ನ ವ್ಯರ್ಥ ಆಗಬಾರದು ಎಂದರೆ, ನಾವು ಕೂದಲಿನ ಪೌಷ್ಠಿಕತೆಗೆ ವಿವಿಧ ಬಗೆಯ ಹೇರ್ ಆಯಿಲ್ ಗಳನ್ನು ಬಳಸಬೇಕಾಗುತ್ತದೆ.

ಈ ಲೇಖನದಲ್ಲಿ ಅಂತಹ ಕೆಲವು ಬಗೆಯ ತುಂಬಾ ಉಪಯೋಗದಲ್ಲಿ ಇರುವ ಹಾಗು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುವ ಹೇರ್ ಆಯಿಲ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಕೂದಲಿನ ಆರೋಗ್ಯ ಸಮಸ್ಯೆಗೆ ಕೆಲವೊಂದು ಎಸೆನ್ಶಿಯಲ್ ಆಯಿಲ್‌ಗಳು ತುಂಬಾ ಉಪಯೋಗಕ್ಕೆ ಬರುತ್ತವೆ. ಅವುಗಳಲ್ಲಿ ಕೆಲವನ್ನು ನೋಡುವುದಾದರೆ,

ಕೂದಲಿನ ಉದುರುವಿಕೆ ತಡೆಗೆ ಆಮ್ಲ ಹೇರ್ ಆಯಿಲ್

  • ನೆತ್ತಿಯ ಭಾಗದಲ್ಲಿ ಕೆರೆತ ಉಂಟಾಗುತ್ತಿರುವುದಕ್ಕೆ ಪರಿಹಾರವೆಂದರೆ ತುಳಸಿ ಎಣ್ಣೆ.
  • ಬಿಳಿ ಬಣ್ಣದ ಕೂದಲು ನಿವಾರಣೆಗೆ ಅಥವಾ ಚಿಕ್ಕ ವಯಸ್ಸಿನಲ್ಲಿ ಕೂದಲು ನೆರೆಯುವುದಕ್ಕೆ ಕರಿಬೇವಿನ ಎಲೆಗಳು ಮತ್ತು ತೆಂಗಿನ ಎಣ್ಣೆಯ ಮಿಶ್ರಣ.
  • ತಲೆ ಹೊಟ್ಟು ನಿವಾರಣೆಗೆ ಸಿಟ್ರಸ್ ಹೇರ್ ಆಯಿಲ್.
  • ಕೂದಲಿನ ಸಂಪೂರ್ಣ ಬೆಳವಣಿಗೆಗೆ ದಾಸವಾಳದ ಎಣ್ಣೆ.
ಈ ಮೇಲಿನ ಎಣ್ಣೆಗಳನ್ನು ಬಳಸಿ ಕೂದಲಿನ ರಕ್ಷಣೆ ಮಾಡಿಕೊಳ್ಳುವ ಉದ್ದೇಶ ವೆಂದರೆ, ಇವುಗಳಲ್ಲಿ ಕೂದಲಿನ ಬೇರುಗಳಿಗೆ ಅಗತ್ಯವಾಗಿ ಬೇಕಾದ ಫ್ಯಾಟಿ ಆಸಿಡ್ ಅಂಶಗಳು ವಿಟಮಿನ್ '

ಸಿ ' ಅಂಶಗಳು ಮತ್ತು ಆಂಟಿ - ಆಕ್ಸಿಡೆಂಟ್ ಅಂಶಗಳು ನಮ್ಮ ನೆತ್ತಿಯ ಭಾಗದ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿ ಕೂದಲು ಸೊಂಪಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುವಂತೆ ನೋಡಿಕೊಳ್ಳುತ್ತದೆ.

ಒಮ್ಮೆಈ ಮನೆಮದ್ದು ಹಚ್ಚಿ ನೋಡಿ, ಕೂದಲು ಉದುರುವ ಸಮಸ್ಯೆ ಕಮ್ಮಿ ಆಗುತ್ತೆ!undefined

ನೆತ್ತಿಯಲ್ಲಿ ಕಂಡು ಬರುವ ಕೆರೆತಕ್ಕೆ ತುಳಸಿ ಎಣ್ಣೆ
ತುಳಸಿ ಎಣ್ಣೆ ನಮಗೆಲ್ಲ ತಿಳಿದಿರುವ ಹಾಗೆ ತನ್ನಲ್ಲಿ ಆಂಟಿ - ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳನ್ನು ಹೊಂದಿದ್ದು, ಆಂಟಿ - ಸೆಪ್ಟಿಕ್ ಪ್ರಭಾವವನ್ನು ತೋರುತ್ತದೆ. ಇದು ವಿಟಮಿನ್ ' ಸಿ ' ಮತ್ತು ಆಂಟಿ - ಆಕ್ಸಿಡೆಂಟ್ ಅಂಶಗಳಲ್ಲಿ ತುಂಬಾ ಹೇರಳ ಎಂದು ತೋರುತ್ತದೆ.

ಇದು ಕೇವಲ ನಮ್ಮ ನೆತ್ತಿಯ ಭಾಗದ ಕೂದಲಿನ ಆರೋಗ್ಯವನ್ನು ನೋಡುವುದು ಮಾತ್ರವಲ್ಲದೆ ಸಂಪೂರ್ಣ ನಮ್ಮ ತಲೆಯ ಭಾಗವನ್ನು ತಂಪಾಗಿಸಿ ಯಾವುದೇ ಕಿರಿಕಿರಿ ಮತ್ತು ಉರಿಯೂತವನ್ನು ದೂರ ಮಾಡುತ್ತದೆ.

ಬಿಳಿ ಕೂದಲಿಗೆ ಕರಿಬೇವಿನ ಸೊಪ್ಪು ಮತ್ತು ಕೊಬ್ಬರಿ ಎಣ್ಣೆಯ ಮಿಶ್ರಣ
ನಮ್ಮ ತಲೆಯ ಭಾಗದ ನೆತ್ತಿಯ ಮೇಲಿನ ಸತ್ತ ಜೀವ ಕೋಶಗಳನ್ನು ತೆಗೆದು ಹಾಕಿ, ನಮ್ಮ ನೆತ್ತಿಯ ಭಾಗವನ್ನು ಸಂಪೂರ್ಣವಾಗಿ ಪುಷ್ಟೀಕರಿಸುವ ಕೆಲಸ ಕರಿಬೇವಿನ ಸೊಪ್ಪು ಮತ್ತು ಕೊಬ್ಬರಿ ಎಣ್ಣೆಯ ಮಿಶ್ರಣ ಮಾಡುತ್ತದೆ.

ನಮ್ಮ ಚರ್ಮದ ಮೇಲೆ ಮತ್ತು ಕೂದಲಿನ ಭಾಗದಲ್ಲಿ ' ಮೆಲಾನಿನ್ ' ಅಂಶವನ್ನು ಮರು ಹೊಂದಿಸಿ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ತಪ್ಪಿಸುತ್ತದೆ. ಮುಖ್ಯವಾಗಿ ಚಿಕ್ಕ ವಯಸ್ಸಿನಲ್ಲಿ ತಲೆ ಕೂದಲು ನೆರೆತು ಹೋಗುವುದನ್ನು ತಡೆಯಲು ಇದೊಂದು ಒಳ್ಳೆಯ ವಿಧಾನ.

ಅಲ್ಲಲ್ಲಿ ಇಣುಕುವ ಬಿಳಿ ಕೂದಲಿಗೆ ನ್ಯಾಚುರಲ್ ಹೇರ್ ಟಾನಿಕ್
ತಲೆ ಹೊಟ್ಟು ನಿವಾರಣೆಗೆ ಸಿಟ್ರಸ್ ಹೇರ್ ಆಯಿಲ್ :
ಸಿಟ್ರಸ್ ಆಯಿಲ್ ನಲ್ಲಿ ಹೇರಳವಾದ ವಿಟಮಿನ್ ' ಸಿ ' ಅಂಶ ಕಂಡು ಬಂದಿದ್ದು, ಇದು ಆಂಟಿ - ಇನ್ಫಾಮೇಟರಿ ಗುಣ ಲಕ್ಷಣಗಳನ್ನು ಒಳಗೊಂಡಿದೆ. ಈ ಗುಣ ಲಕ್ಷಣಗಳು ತಲೆ ಕೆರೆತ ಮತ್ತು ಹೆಚ್ಚಾದ ತಲೆ ಹೊಟ್ಟು ಸಮಸ್ಯೆಯನ್ನು ಮತ್ತೆ ಬರದಂತೆ ತಡೆಯುತ್ತದೆ.

ತಲೆ ಹೊಟ್ಟಿನ ಸಮಸ್ಯೆ ಹೋಗಲಾಡಿಸಲು ಹೀಗೆ ಮಾಡಿundefined

ಕೂದಲಿನ ಸಮಗ್ರ ಅಭಿವೃದ್ಧಿಗೆ ದಾಸವಾಳದ ಎಣ್ಣೆ
ತಮ್ಮ ಕೂದಲು ಸೊಂಪಾಗಿ ಬೆಳೆದು ಇತರರಿಗೆ ಕಣ್ಣುಕುಕ್ಕುವಂತೆ ಇರಬೇಕು ಎನ್ನುವವರು ದಾಸವಾಳದ ಎಣ್ಣೆಯನ್ನು ತಪ್ಪದೇ ಉಪಯೋಗಿಸಿ.

ಏಕೆಂದರೆ ಇದರಲ್ಲಿ ಕೂದಲಿನ ಬೇರುಗಳಿಗೆ ಬೇಕಾದ ಎಲ್ಲಾ ಬಗೆಯ ಪೌಷ್ಟಿಕಾಂಶಗಳು ಲಭ್ಯವಿದ್ದು, ಅಮೈನೋ ಆಮ್ಲಗಳು ಮತ್ತು ವಿಟಮಿನ್ ' ಸಿ ' ಅಂಶ ಹೇರಳವಾಗಿರುವ ಕಾರಣ ನೆತ್ತಿಯ ಭಾಗವನ್ನು ಸಂತುಷ್ಟಗೊಳಿಸಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಸುಂದರವಾದ ಮತ್ತು ಸಂಪಾದ ಕೂದಲು ನಿಮ್ಮದಾಗಬೇಕಾದರೆ ಕೇವಲ ಹರಳೆಣ್ಣೆಯನ್ನು ಮಾತ್ರ ಉಪಯೋಗಿಸದೆ ಈ ಮೇಲಿನ ಎಲ್ಲಾ ಬಗ್ಗೆ ಎಣ್ಣೆಗಳನ್ನು ಆಗಾಗ ಬಳಸಲು ಮುಂದಾಗಿ.

ದಾಸವಾಳ ಹೂವು ಪೂಜೆಗೆ ಮಾತ್ರವಲ್ಲ, ಕೂದಲಿನ ಆರೈಕೆಗೂ ಒಳ್ಳೆಯದು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ