ಆ್ಯಪ್ನಗರ

ರೇಜರ್‌ ಬಳಸುವುದಾದರೆ ಈ ಟಿಪ್ಸ್ ಪಾಲಿಸಿ

ರೇಜರ್‌ ಬಳಸಿ ಬೇಡದ ಕೂದಲು ತೆಗೆಯುವುದಕ್ಕಿಂತ ವ್ಯಾಕ್ಸ್ ವಿಧಾನ ಒಳ್ಳೆಯದು. ವ್ಯಾಕ್ಸ್ ಮಾಡಲು ಸಮಯವಿಲ್ಲದಿದ್ದಾಗ ರೇಜರ್ ಬಳಸುವುದಾದರೆ ಈ ಟಿಪ್ಸ್ ಪಾಲಿಸಿ.

TIMESOFINDIA.COM 23 Jun 2019, 3:43 pm
ಕಂಕುಳದಲ್ಲಿರುವ ಬೇಡದ ಕೂದಲನ್ನು ತೆಗೆಯಲು ರೇಜರ್‌ ಬದಲು ವ್ಯಾಕ್ಸ್ ಮಾಡುವುದು ಒಳ್ಳೆಯುವುದು ಎನ್ನುವುದು ಬ್ಯೂಟಿ ಎಕ್ಸ್‌ಪರ್ಟ್‌ಗಳ ಸಲಹೆ. ಆದರೆ ಆಗಾಗ ಬಿಡುವು ಮಾಡಿಕೊಂಡು ಪಾರ್ಲರ್‌ಗೆ ಹೋಗಲು ಎಲ್ಲಾ ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ. ಆಗ ರೇಜರ್‌ ವಿಧಾನವನ್ನು ಹೆಚ್ಚಿನವರು ಅನುಸರಿಸುತ್ತಾರೆ.
Vijaya Karnataka Web razor


ಆದರೆ ಕಾಸ್ಮೆಟಿಕ್‌ ಸರ್ಜನ್‌ ಡಾ. ಮೋಹನ್‌ ಥೋಮಸ್‌ರವರು ರೇಜರ್‌ ಬಳಸುವುದಕ್ಕಿಂತ ಲೇಸರ್‌ ಚಿಕಿತ್ಸೆ ಹೆಚ್ಚು ಜನಪ್ರಿಯವಾಗಿದೆ ಎಂದಿದ್ದಾರೆ.

ಲೇಸರ್‌ ಚಿಕಿತ್ಸೆ ದುಬಾರಿ ಅಂತ ರೇಜರ್‌ ಬಳಸುವುದಾದರೆ ಈ ಟಿಪ್ಸ್ ಪಾಲಿಸುವುದು ಒಳ್ಳೆಯದು:
* ಮಲ್ಟಿ ಬ್ಲೇಡ್‌ ರೇಜರ್ ಬಳಸಬೇಡಿ, ಇದರಿಂದ ಕೂದಲು ಸರಿಯಾಗಿ ಹೋಗದೆ ಆ ಭಾಗ ಕಪ್ಪಗೆ ಕಾಣುವುದು.
* ಡಲ್‌ ರೇಜರ್‌ ಬಳಸಬೇಡಿ. ಅದರ ಬದಲಿಗೆ ಶಾರ್ಪ್‌ ಅಥವಾ ಎಲೆಕ್ಟ್ರಿಕ್‌ ಟ್ರಿಮ್ಮರ್ ಬಳಸಿ ಕ್ಲೀನ್‌ ಮಾಡಿ.
* ರೇಜರ್‌ ಹಾಕಿದಾಗ ಕೂದಲು ಕಿತ್ತು ಬರುವಂತೆ ಅನಿಸಿದರೆ ಅಂಥ ರೇಜರ್‌ ಬಳಸಬೇಡಿ.
* ಶೇವಿಂಗ್‌ ಜೆಲ್‌ ಹಚ್ಚಿ ರೇಜರ್‌ ಹಾಕಿದರೆ ಕೂದಲು ತೆಗೆಯಲು ಸುಲಭವಾಗುವುದು.
* ಶೇವ್‌ ಮಾಡುವಾಗ ಕೈಯನ್ನು ಸ್ಟ್ರೆಚ್‌ ಮಾಡಿ.
* ಶೇವ್‌ ಮಾಡಿದ ಬಳಿಕ ಮಾಯಿಶ್ಚರೈಸರ್‌ ಹಚ್ಚಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ