ಜಗತ್ತಿನಾದ್ಯಂತ ಜುಲೈ 5 ನ್ನು ಬಿಕಿನಿ ಡೇ ಎಂದು ಸೆಲೆಬ್ರೇಟ್ ಮಾಡಲಾಗುತ್ತದೆ. ಇತರ ಉಡುಪುಗಳಂತೆ ಬಿಕಿನಿಗೂ ದಶಕಗಳ ಇತಿಹಾಸವಿದೆ ಮತ್ತು ಒಂದು ಘನತೆಯೂ ಇದೆ. ಎಲ್ಲರಿಗೂ ಬಿಕಿನಿ ಧರಿಸಲಾಗುವುದಿಲ್ಲ. ಯಾಕೆಂದರೆ ಇದನ್ನು ಧರಿಸಲು ಕೂಡಾ ವಿಲ್ ಪವರ್ ಗಟ್ಟಿಯಿರಬೇಕು. ಅದಕ್ಕೆಂದೇ ಬಿಕಿನಿ ಧರಿಸಿದವರೆಲ್ಲಾ ಕೆಚ್ಚೆದೆಯ ಮಹಿಳೆಯರಾಗಿಯೇ ಗುರುತಿಸಿಕೊಳ್ಳುತ್ತಾರೆ. 'ಪವರ್ ಆಫ್ ವುಮನ್' ಎಂದೂ ಕರೆಸಿಕೊಳ್ಳುವ ಈ ಪುಟ್ಟ ಉಡುಪು ಈಗಿನ ಜನರೇಷನ್ನ ಅಭಿರುಚಿಗೆ ತಕ್ಕಂತೆ ವಿವಿಧ ಪ್ರಯೋಗಗಳಿಗೆ ತೆರೆದುಕೊಂಡು ಹೊಸ ಹೊಸ ಸ್ಟೈಲಿಶ್ ವಿನ್ಯಾಸದಲ್ಲಿ ಮೂಡಿ ಬರುತ್ತಿದೆ. ಈ ಮೂಲಕ ಹಾಲಿವುಡ್, ಬಾಲಿವುಡ್, ಸ್ಯಾಂಡಲ್ವುಡ್ ಸಿಲೆಬ್ರಿಟಿಗಳು ಮಾತ್ರವಲ್ಲ, ಹೈ ಪ್ರೊಫೈಲ್ ಮಹಿಳೆಯರು, ಕಾರ್ಪೊರೇಟ್ ಕ್ಷೇತ್ರದ ಮಹಿಳೆಯರು ಮತ್ತು ಟ್ರಾವೆಲ್ ಪ್ರಿಯರನ್ನೂ ಇನ್ನಿಲ್ಲದಂತೆ ಸೆಳೆಯುತ್ತಿದೆ.
ಜುಲೈ 5 ಬಿಕಿನಿ ಡೇ
ಜಗತ್ತಿನಾದ್ಯಂತ ಜುಲೈ 5 ನ್ನು ಬಿಕಿನಿ ಡೇ ಎಂದು ಸೆಲೆಬ್ರೇಟ್ ಮಾಡಲಾಗುತ್ತದೆ...
Vijaya Karnataka 5 Jul 2019, 5:00 am