ಆ್ಯಪ್ನಗರ

ಟ್ರೆಡಿಷನಲ್ ಹಾಗೂ ಮಾಡರ್ನ್‌ ಲುಕ್‌ಗೆ ಸೈ ಆ್ಯಂಟಿಕ್‌ ಜ್ಯುವೆಲರಿ

ಆ್ಯಂಟಿಕ್‌ ಜುವೆಲರಿಗಳು ಮತ್ತೊಮ್ಮೆ ಟ್ರೆಂಡಿಯಾಗಿವೆ. ಬ್ಯಾಂಗಲ್ಸ್‌, ಹಾರ, ನೆಕ್ಲೇಸ್‌ ಸೇರಿದಂತೆ ನಾನಾ ಜುವೆಲ್‌ ಆಕ್ಸೆಸರೀಸ್‌ ಟೆಂಪಲ್‌ ವಿನ್ಯಾಸದಲ್ಲಿ ಎಂಟ್ರಿ ನೀಡಿವೆ.

Vijaya Karnataka Web 23 Jun 2019, 4:54 pm
ಇತ್ತೀಚೆಗೆ ಮದುವೆ ಸಮಾರಂಭಗಳಲ್ಲಿ ಆ್ಯಂಟಿಕ್‌ ಆಭರಣಗಳದ್ದೇ ಮೆರಗು. ನೆಕ್ಲೇಸ್‌, ಕಿವಿಯೋಲೆ, ನೆತ್ತಿಸರ ಎಲ್ಲದಕ್ಕೂ ಆ್ಯಂಟಿಕ್‌ ಆಭರಣ ಬಳಸುವ ಟ್ರೆಂಡ್‌ ಶುರುವಾಗಿದೆ. ಸಾಂಪ್ರದಾಯಕ ಡ್ರೆಸ್ಸಿಂಗ್‌ಗೆ ಆ್ಯಂಟಿಕ್‌ ಆಭರಣಗಳು ಮತ್ತಷ್ಟು ಮೆರಗು ನೀಡುವುದರಿಂದ ಯುವತಿಯರು, ಮಧ್ಯ ವಯಸ್ಸು ದಾಟಿದವರು ಎಲ್ಲರೂ ಆ್ಯಂಟಿಕ್‌ ಆಭರಣಗಳನ್ನು ಬಳಸುತ್ತಿದ್ದಾರೆ.
Vijaya Karnataka Web antic jwellery


ಗ್ರ್ಯಾಂಡ್‌ ಹಾಗೂ ಸಿಂಪಲ್‌ ಡ್ರೆಸ್ಸಿಂಗ್‌ನಲ್ಲಿಯೂ ಆ್ಯಂಟಿಕ್‌ ಆಭರಣಗಳ ಬ್ಯೂಟಿ ಟಚ್
ಸಾಂಪ್ರದಾಯಿಕವಾಗಿ ಅಲಂಕಾರ ಮಾಡಿಕೊಂಡು, ದೊಡ್ಡ ಗಾತ್ರದ ಆ್ಯಂಟಿಕ್‌ ಆಭರಣಗಳನ್ನು ಧರಿಸಿದರೆ ಗ್ರ್ಯಾಂಡ್‌ ಲುಕ್‌ ನೀಡಿದರೆ, ಸರಳವಾಗಿ ಅಲಂಕರಿಸಿಕೊಂಡು ಬರೀ ಕಿವಿಯೋಲೆಯಷ್ಟೇ ಆ್ಯಂಟಿಕ್‌ ಧರಿಸಿದರೂ ಆಕರ್ಷಕವಾಗಿ ಕಾಣುವುದರಿಂದ ಇದು ಆಭರಣ ಪ್ರಿಯರನ್ನು ಹೆಚ್ಚಾಗಿ ಸೆಳೆಯುತ್ತಿದೆ.

ಮಾಡರ್ನ್‌ ಡ್ರೆಸ್ಸಿಂಗ್‌ನಲ್ಲಿ ಆ್ಯಂಟಿಕ್‌ ಆಭರಣ ಧರಿಸಿ ಫ್ಯಾಷನಬಲ್‌ ಲುಕ್‌
ಆ್ಯಂಟಿಕ್‌ ಆಭರಣಗಳು ಸಾಂಪ್ರದಾಯಿಕ ಉಡುಪಿನಲ್ಲಿ ಆಕರ್ಷಕವಾಗಿ ಕಂಡರೆ, ಘಾಗ್ರ, ಗೌನ್‌ ಮುಂತಾದ ಮಾಡರ್ನ್‌ ಡ್ರೆಸ್ಸಿಗೂ ಚೆನ್ನಾಗಿ ಒಪ್ಪುತ್ತದೆ. ಆದರಎ ಈ ರೀತಿಯ ಡ್ರೆಸ್ಸಿಂಗ್‌ ಮಾಡಿದಾಗ ಸರಳವಾದ ಆ್ಯಂಟಿಕ್‌ ಜ್ಯುವೆಲರಿ ಹೆಚ್ಚು ಮೆರಗು ನೀಡುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ