ಆ್ಯಪ್ನಗರ

ಬಾಲ ನಟಿ ಬೇಬಿ ಶಾಮಿಲಿಯ ಫ್ಯಾಶನ್ ಲುಕ್ ಎಲ್ಲರ ಹುಬ್ಬೇರಿಸುತ್ತಿದೆ…!

ಒಂದು ಕಾಲದಲ್ಲಿ ಸಿನಿಮಾ ರಂಗದಲ್ಲಿ ಮಿಂಚಿದ್ದ ಬಾಲ ನಟಿ ಬೇಬಿ ಶಾಮಿಲಿ ಈಗ ಹೇಗೆ ಕಾಣುತ್ತಾರೆ ಗೊತ್ತಾ?

Vijaya Karnataka Web 12 Jan 2022, 10:41 am
PC: shamlee_official
Vijaya Karnataka Web baby shamili dressing style in kannada
ಬಾಲ ನಟಿ ಬೇಬಿ ಶಾಮಿಲಿಯ ಫ್ಯಾಶನ್ ಲುಕ್ ಎಲ್ಲರ ಹುಬ್ಬೇರಿಸುತ್ತಿದೆ…!


ನಮ್ಮ ಭಾರತೀಯ ಸಿನಿಮಾ ರಂಗದ ಬಾಲ ನಟಿ ಬೇಬಿ ಶಾಮಿಲಿ ಯಾರಿಗೆ ಗೊತ್ತಿಲ್ಲ ಹೇಳಿ? ಮಲಯಾಲಂ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳ ಚಲನಚಿತ್ರಗಳಲ್ಲಿ ಅದ್ಭುತವಾಗಿ ನಟಿಯುತ್ತಿದ್ದ ಬಾಲ ನಟಿ ಎಂದರೆ ಅದು ಬೇಬಿ ಶಾಮಿಲಿ.

ಇವರು ತನ್ನ ಅತ್ಯುತ್ತಮವಾದ ಅಭಿನಯಕ್ಕೆ ಬಾಲ ಕಲಾವಿದೆಯಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಸುಂದರವಾದ ಬಾಲ ನಟಿ ತನ್ನ ಎರಡನೇ ವಯಸ್ಸಿನಲ್ಲಿ ತಮಿಳು ಚಿತ್ರರಂಗದಲ್ಲಿ ನಟಿಸಲು ಪ್ರಾರಂಭ ಮಾಡಿದರು. ನಮ್ಮ ಕನ್ನಡದಲ್ಲಿಯೂ ಘಟಾನುಘಟಿಗಳ ಜೊತೆಗೆ ಅಭಿನಯಿಸುವುದು ಸಾಮಾನ್ಯವಾದ ವಿಚಾರವಲ್ಲ.

ಒಂದು ಕಾಲದಲ್ಲಿ ಅದ್ಭುತವಾಗಿ ನಟನೆ ಮಾಡುತ್ತಿದ್ದ ಬೇಬಿ ಶಾಮಿಲಿ ಈಗ ಎಷ್ಟು ಸುಂದರವಾಗಿದ್ದಾರೆ ಗೊತ್ತಾ? ಮುಂದೆ ಓದಿ.

​೧. ಲಂಗ ದಾವಣಿ

PC: shamlee_official

ಲಂಗ ದಾವಣಿ ನಮ್ಮ ಭಾರತೀಯ ಹೆಣ್ಣು ಮಕ್ಕಳ ಪ್ರಿಯವಾದ ಉಡುಗೆಯಾಗಿದೆ. ಈ ಉಡುಪಿನಲ್ಲಿ ಬೇಬಿ ಶಾಮಿಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ನೀಲಿ ಬಣ್ಣದ ಮತ್ತು ಹೆಚ್ಚು ವರ್ಕ್ ಇಲ್ಲದ ಬ್ಲೌಸ್, ಹಳದಿ ಬಣ್ಣದ ದಾವಣಿಯು ಬೇಬೆ ಶಾಮಿಲಿಯ ಚರ್ಮ ಬಣ್ಣಕ್ಕೆ ಸೊಗಸಾಗಿ ಸೂಟ್ ಆಗಿದೆ.

ಕತ್ರಿನಾ ಕೈಫ್ ಲೆಹೆಂಗಾ: ಪಚ್ಚೆ, ವಜ್ರ, ಮಾಣಿಕ್ಯ, ೧೮ ಕೆ.ಜಿ ಚಿನ್ನ ಹೊಂದಿದೆ

​೨. ಪಿಂಗ್ ಗೌನ್ ನಲ್ಲಿ ಮುದ್ದು ಗೊಂಬೆ

PC: shamlee_official

ಸಾಮಾನ್ಯವಾಗಿ ಗುಲಾಬಿ ಬಣ್ಣ ಎಲ್ಲಾ ಮಹಿಳೆಯರ ಅಚ್ಚು ಮೆಚ್ಚಿನ ಬಣ್ಣ. ಬೇಬಿ ಶಾಮಿಲಿ ಪಿಂಗ್ ಗೌನ್ ನಲ್ಲಿ ಮುದ್ದಾದ ಗೊಂಬೆಯಂತೆ ಕಾಣುತ್ತಿದ್ದಾರೆ. ಸರಿಯಾದ ಮೇಕಪ್ ಅವರ ಗುಲಾಬಿ ಬಣ್ಣದ ಗೌನ್ ನ ಅಂದವನ್ನು ಹೆಚ್ಚಿಸಿದೆ. ಹೆಚ್ಚಾಗಿ ಅಭರಣಗಳನ್ನು ಧರಿಸದೇ, ಕೇವಲ ಒಂದೇ ಒಂದು ಹ್ಯಾಂಗಿಂಗ್ ಕಿವಿಯೋಲೆಯಿಂದ ತನ್ನ ಫ್ಯಾನ್ಸ್ ಗಳಿಗೆ ಹೇಗೆ ಸಿಂಪಲ್ ಅಭರಣಗಳಿಂದ ರಿಚ್ ಆಗಿ ಕಾಣಿಸಬಹುದೆಂದು ತೋರಿಸಿದ್ದಾರೆ.

ವಿಶ್ವ ಸುಂದರಿ ಕ್ಯಾಂಡಿಯ ಕ್ಯೂಟ್ ಮಾತು ಇಲ್ಲಿದೆ ನೋಡಿ…

​೩. ಹಸಿರು ಸೀರೆಯಲ್ಲಿ ಬೇಬಿ

PC: shamlee_official

ಹಸಿರು ಸೀರೆಯು ಮಹಿಳೆಯರ ಅಂದವನ್ನು ಹೆಚ್ಚಿಸುವ ಬಣ್ಣ ಎಂದರೆ ತಪ್ಪಾಗಲಾರದು. ಹಸಿರುವ ಬಣ್ಣದ ಬಟ್ಟೆ, ಮುಖ್ಯವಾಗಿ ಹಸಿರು ಬಣ್ಣದ ಬಳೆ ನೋಡುಗರಿಗೆ ವಾವ್ ಎನ್ನುವಂತಿರುತ್ತದೆ. ಹಾಗೆಯೇ ಬೇಬಿ ಶಾಮಿಲಿ ಕೂಡ ಹಸಿರು ಬಣ್ಣದ ಸೀರೆಯಲ್ಲಿ ಸಿಂಪಲ್ ಗರ್ಲ್ ನಂತೆ ಕಾಣುತ್ತಿದ್ದಾರೆ.

ನಿಮ್ಮಲ್ಲೂ ಇದೆಯೇ? ಸೆಲೆಬ್ರಿಟಿಗಳ ಫೇವರೇಟ್ ಈ ಚಾಂದ್ ಬಾಲಿ ಕಿವಿಯೋಲೆ…

​೪. ಕ್ರಾಪ್ ಟಾಪ್ ನಲ್ಲಿ ಬೇಬಿ ಲುಕ್

PC: shamlee_official

ಬೇಬಿ ಶಾಮಿಲಿ ತನ್ನ ಗೋಲ್ಡನ್ ಬಣ್ಣದ ಕ್ರಾಪ್ ಟಾಪ್ ನಲ್ಲಿ ಸೂಪರ್ ಆಗಿ ಕಾಣುತ್ತಿದ್ದಾರೆ. ಇತ್ತೀಚೆಗೆ ಕ್ರಾಪ್ ಟಾಪ್ ಹುಡುಗಿಯರ ಫೇವರೆಟ್ ಆಗಿಬಿಟ್ಟಿದೆ. ಈ ಫೋಟೊದಲ್ಲಿ ಸುಂದರವಾದ ಹೇರ್ ಸ್ಟೇಲ್ ಅವರ ಲುಕ್ ಗೆ ವಿಶೇಷವಾದ ಮೆರಗು ನೀಡಿದೆ.

ರಶ್ಮಿಕಾ ಮಂದಣ್ಣ: ವಿಭಿನ್ನವಾದ ಸೀರೆಗಳಲ್ಲಿ ಕ್ಲಾಸಿ ಲುಕ್

​೫. ಕಪ್ಪು ಬಣ್ಣದ ಡ್ರೆಸ್ ನಲ್ಲಿ ಆಕರ್ಷಕ ಲುಕ್

PC: shamlee_official

ಬಹುತೇಕರಿಗೆ ಕಪ್ಪು ಬಣ್ಣ ಅಚ್ಚು ಮೆಚ್ಚಿನ ಬಣ್ಣ. ಸುಂದರವಾದ ಮೈ ಬಣ್ಣವು ಕಪ್ಪು ಬಣ್ಣದ ಉಡುಗೆಗೆ ಮತ್ತಷ್ಟು ಮೆರಗು ನೀಡುತ್ತದೆ. ಅದರಂತೆಯೇ ಕಪ್ಪು ಬಣ್ಣದ ಬಟ್ಟೆಯಲ್ಲಿ ಬೇಬಿ ಶಾಮಿಲಿಯ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಿನಿಮಾ ನಟಿಯರಂತೆ ಲೆಹೆಂಗ ಹೇಗೆ ಆಯ್ಕೆ ಮಾಡಬೇಕು ಗೊತ್ತಾ?

​೬. ವೆಸ್ಟರ್ನ್ ಡ್ರೆಸ್ ನಲ್ಲಿ ಶಾಮಿಲಿ

PC: shamlee_official

ಕಪ್ಪು ಬಣ್ಣದ ವೆಸ್ಟರ್ನ್ ಲುಕ್ ನಲ್ಲಿ ತನ್ನ ಮಾದಕತೆಯ ನಗೆಯನ್ನು ಬೀರಿದ್ದಾರೆ ಬೇಬಿ. ಈ ಫೋಟೋದಲ್ಲಿ ಹೆಚ್ಚು ಕಾಂಫಿಡೆಂಟ್ ಲುಕ್ ನೀಡಿದ್ದಾರೆ. ಬೇಬಿ ವೆಸ್ಟರ್ನ್ ಲುಕ್ ನಲ್ಲಿಯು ಸೈ, ಕ್ಲಾಸಿ ಲುಕ್ ನಲ್ಲಿಯು ಸೈ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ