ಆ್ಯಪ್ನಗರ

ಮೇಕಪ್‌ಕಿಟ್‌ ಸರ್ವೆ

ಬ್ಯೂಟಿ ಎಕ್ಸ್‌ಪರ್ಟ್ಸ್ ಮಾತ್ರವಲ್ಲ, ಸಾಮಾನ್ಯ ಗೃಹಿಣಿಯರು ಮೇಕಪ್‌ ಕಿಟ್‌ ಖರೀದಿಸುವುದು ಹೆಚ್ಚಾಗಿದೆಯಂತೆ.

Vijaya Karnataka Web 14 Nov 2017, 5:00 am

ಮೇಕಪ್‌ಕಿಟ್‌ ಶಾಪಿಂಗ್‌ ಪ್ರಿಯರು

ಸ್ಲಗ್‌ : ಫ್ಯಾಷನ್‌ ಸರ್ವೆ

ಇಂಟ್ರೋ : ಬ್ಯೂಟಿ ಎಕ್ಸ್‌ಪರ್ಟ್ಸ್ ಮಾತ್ರವಲ್ಲ, ಸಾಮಾನ್ಯ ಗೃಹಿಣಿಯರು ಮೇಕಪ್‌ ಕಿಟ್‌ ಖರೀದಿಸುವುದು ಹೆಚ್ಚಾಗಿದೆಯಂತೆ.

-ಲವಲವಿಕೆಸುದ್ದಿಲೋಕ

ಮೊದಲೆಲ್ಲಾ ಮೇಕಪ್‌ ಕಿಟ್‌ ಇದೆ ಎಂದಾಕ್ಷಣ ಅವರು ಬ್ಯೂಟಿಷಿಯನ್‌ ಎಂದೇ ಹೇಳಲಾಗುತ್ತಿತ್ತು. ಆದರೆ, ಈಗಿನ ಒಂದು ಸರ್ವೆ ಪ್ರಕಾರ ಸಾಮಾನ್ಯ ಗೃಹಿಣಿಯರು ಕೂಡ ಮೇಕಪ್‌ಕಿಟ್‌ ಖರೀಸಿತೊಡಗಿದ್ದಾರಂತೆ.

ಖಾಸಗಿ ಕಂಪನಿಯೊಂದು ನಡೆಸಿದ ಸಮೀಕ್ಷೆ ಪ್ರಕಾರ, ಮೇಕಪ್‌ ಕಿಟ್‌ಗಳ ಮಾರಾಟದಲ್ಲಿಮೊದಲಿಗಿಂತ ಹೆಚ್ಚಾಗಿದೆಯಂತೆ. ವಿದೇಶಿಗರು ಮೇಕಪ್‌ ಕಿಟ್‌ ಕೊಳ್ಳುವುದರಲ್ಲಿ ಈ ಮೊದಲು ಮುಂದಿದ್ದರಂತೆ. ಆದರೆ, ಇದೀಗ ಭಾರತದಲ್ಲೂ ಹೆಚ್ಚಾಗಿದೆ ಎನ್ನುತ್ತದೆ ಸರ್ವೆ.

ಮೇಕಪ್‌ ಕಿಟ್‌ನಲ್ಲಿ ಖರೀದಿದಾರರ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣ, ಮಹಿಳೆಯರು ಖುದ್ದು ಮೇಕಪ್‌ ಮಾಡಿಕೊಳ್ಳಲು ಆರಂಭಿಸಿರುವುದು. ಪರ್ಸನಲ್‌ ಗ್ರೂಮಿಂಗ್‌ ಮಾಡಿಕೊಂಡವರು ಸಭೆ-ಸಮಾರಂಭಗಳಲ್ಲಿ ಬ್ಯೂಟಿ ಪಾರ್ಲರ್‌ಗಳಿಗೆ ಹೋಗುವುದೇ ಇಲ್ಲ. ಬದಲಿಗೆ ತಾವೇ ಖುದ್ದು ಮೇಕಪ್‌ ಮಾಡಿಕೊಳ್ಳುತ್ತಾರಂತೆ.

ಹಾಗೆಂದು ಬ್ರಾಂಡೆಡ್‌ ಮೇಕಪ್‌ಕಿಟ್‌ಗಳ ಬೆಲೆ ಕಡಿಮೆಯೇನಿಲ್ಲ. ಆದರೆ, ಟ್ರಯಲ್‌ ಮೇಕಪ್‌ ಟ್ಯೂಟೋರಿಯಲ್‌ ನೀಡುವುದರ ಮೂಲಕ ಸಾಕಷ್ಟು ಕಂಪನಿಗಳು ತಮ್ಮ ಮಾರಾಟ ವೃದ್ಧಿಸಿಕೊಳ್ಳುತ್ತಿವೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್.

---------------

ಕೋಟ್ಸ್‌

ಚೈನಾ ಸೆಟ್‌ ಇರುವ ಮೇಕಪ್‌ಕಿಟ್‌ ಯಾವುದೇ ಕಾರಣಕ್ಕೂ ಕೊಳ್ಳಕೂಡದು. ಇದು ಗುಣಮಟ್ಟ ಇರುವುದಿಲ್ಲ. ತ್ವಚೆ ಹಾಳಾಗುವ ಸಂಭವವಿರುತ್ತದೆ.

- ರೋಮಿ, ಬ್ಯೂಟಿ ಎಕ್ಸ್‌ಪರ್ಟ್‌

-----------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ