ಆ್ಯಪ್ನಗರ

ಸಿಲೆಬ್ರಿಟಿ ಡಿಸೈನರ್‌ ಬೃಂದಾಗೌಡ

ಬೃಂದಾಗೌಡ ಸ್ಯಾಂಡಲ್‌ವುಡ್‌ನ ಸಿಲೆಬ್ರಿಟಿ ಡಿಸೈನರ್‌. ಈ ಜನರೇಷನ್‌ನ ತಾರೆಯರಿಗೆ ಅವರ ಅಭಿರುಚಿಗೆ ತಕ್ಕಂತೆ ಡಿಸೈನರ್‌ವೇರ್‌ಗಳನ್ನು ಸಿದ್ಧಪಡಿಸುವಲ್ಲಿ ಸಿದ್ಧಹಸ್ತರು. ಈ ಬಾರಿ ಓದುಗರ ಪ್ರಶ್ನೆಗೆ ಕೆಳಗಿನಂತೆ ಉತ್ತರಿಸಿದ್ದಾರೆ.

Vijaya Karnataka Web 6 Mar 2018, 5:00 am

* ಮುಂಬರುವ ಸೀಸನ್‌ಗೆ ತಕ್ಕಂತೆ ಮೊದಲೇ ಡಿಸೈನ್‌ಗಳ ಬಗ್ಗೆ ಪ್ರಿಪ್ಲಾನ್‌ ಮಾಡಲಾಗುತ್ತದೆಯೇ?

ಹೌದು. ಆಯಾ ಸೀಸನ್‌ಗೆ ತಕ್ಕಂತೆ ಪ್ಲಾನ್‌ ಮಾಡಲಾಗುತ್ತದೆ. ಥೀಮ್‌ಗೆ ಸೂಟ್‌ ಆಗುವಂತೆ ಡಿಸೈನ್‌ ಮಾಡಲಾಗುತ್ತದೆ.

* ಇಂದು ಟ್ರೆಂಡಿಯಾಗಿರುವ ಒಂದಿಷ್ಟು ಡಿಸೈನರ್‌ವೇರ್‌ಗಳ ಹೆಸರುಗಳನ್ನು ತಿಳಿಸುವೀರಾ?

ಚೂಡಿದಾರ್‌ ಸೀರೆ, ಲಾಂಗ್‌, ಶಾರ್ಟ್‌ ಜಾಕೆಟ್‌ ಸೀರೆ, ಫ್ರಂಟ್‌ ಸ್ಲಿಟ್‌ ಇರುವ ಲಾಂಗ್‌ ಕುರ್ತಾ, ಗೌನ್‌ ಹಾಗೂ ಕುರ್ತಾಗೆ ಬೆಲ್‌ ಸ್ಲೀವ್‌, ಡಿಫರೆಂಟ್‌ ಡ್ರೇಪ್‌ ಸೀರೆ ಇಂದು ಹೆಚ್ಚು ಟ್ರೆಂಡಿಯಾಗಿವೆ. ಆಯಾ ಡಿಸೈನರ್‌ ಹಾಗೂ ಗ್ರಾಹಕರ ಮನೋಭಿಲಾಷೆಗೆ ತಕ್ಕಂತೆ ಇವು ವಿನ್ಯಾಸಗೊಳ್ಳುತ್ತವೆ.

* ವುಮೆನ್ಸ್‌ ಡೇ ಸಮೀಪಿಸುತ್ತಿದೆ. ಇದಕ್ಕೆ ಒಂದಿಷ್ಟು ಟಿಫ್ಸ್‌ ನೀಡುವೀರಾ?

ಸಿಂಪಲ್‌ ಹಾಗೂ ಮಿನಿಮಲ್‌ ವಿನ್ಯಾಸಗಳು ನೋಡುಗರನ್ನು ಆಕರ್ಷಿಸುತ್ತವೆ. ಹೆವ್ವಿ ಡಿಸೈನ್‌ ಇದ್ದಲ್ಲಿ ಪಿಂಕ್‌ ಚೂಸ್‌ ಮಾಡಿ. ಆಕ್ಸೆಸರೀಸ್‌ ಕಡಿಮೆ ಧರಿಸಿ. ನೋಡಲು ಗಾಂಭೀರ‍್ಯತೆ ನೀಡುವಂತಹ ಉಡುಪನ್ನು ಧರಿಸಿ. ಫಂಕಿ ಲುಕ್‌ ಬೇಡ.

ಟ್ರಡಿಷನಲ್‌ ಲುಕ್‌ ಆದಲ್ಲಿ ಕಾಟನ್‌, ಇಲ್ಲವೇ ಸಿಲ್ಕ್‌ ಮಿಕ್ಸ್‌ ಇರುವ ಯಾವುದೇ ಸಾದಾ ಸೀರೆ ಧರಿಸಬಹುದು. ಸೀಸನ್‌ ಶೇಡ್‌ನ ಕುರ್ತಾ ಕೂಡ ಓಕೆ. ಕೊಂಚ ಮಾಡರ್ನ್‌ ಧರಿಸಬೇಕಾದಲ್ಲಿ ಶಿಫ್ಟ್‌ ಡ್ರೆಸ್‌, ವೆವ್ವಿ ಸ್ಕಾಟೇರ್‌ ಡ್ರೆಸ್‌, ಕಂಫರ್ಟಬಲ್‌ ಪಾಲಾಜ್ಹೋ, ಮ್ಯಾಕ್ಸಿ ಡ್ರೆಸ್‌ ಧರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ