ಆ್ಯಪ್ನಗರ

ರಶ್ಮಿಕಾ ಮಂದಣ್ಣ: ವಿಭಿನ್ನವಾದ ಸೀರೆಗಳಲ್ಲಿ ಕ್ಲಾಸಿ ಲುಕ್

ರಶ್ಮಿಕಾ ಮಂದಣ್ಣ ವಿವಿಧ ರೀತಿಯ ಸೀರೆಯಲ್ಲಿ ಮನಮೋಹಕವಾಗಿ ಕಾಣಿಸುತ್ತಿದ್ದಾರೆ. ಚಮಕ್ ಸುಂದರಿಯ ಚಮಕ್ ಸೀರೆಗಳು ಇಲ್ಲಿವೆ ಮುಂದೆ ಓದಿ.

Vijaya Karnataka Web 18 Dec 2021, 10:27 am
PC: rashmika_mandanna
Vijaya Karnataka Web rashmika mandanna saree look in kannada
ರಶ್ಮಿಕಾ ಮಂದಣ್ಣ: ವಿಭಿನ್ನವಾದ ಸೀರೆಗಳಲ್ಲಿ ಕ್ಲಾಸಿ ಲುಕ್


೨೦೦೬ರಲ್ಲಿ ಕಿರಿಕ್ ಪಾರ್ಟಿಯ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಅಪೂರ್ವವಾದ ದೇಹ ಸೌಂದರ್ಯವನ್ನು ಹೊಂದಿದ್ದಾರೆ. ಅವರು ವೆಸ್ಟನ್ ಹಾಗು ಸಾಂಪ್ರದಾಯಿಕ ಉಡುಗೆ ಎರಡರಲ್ಲಿಯೂ ಕೂಡ ಬ್ಯೂಟಿಫುಲ್ ಆಗಿ ಕಾಣುತ್ತಾರೆ. ಬಹು ಬೇಡಿಕೆಯ ನಟಿಯಾಗಿರುವ ರಶ್ಮಿಕಾ ಸೀರೆಯಲ್ಲಿ ಹೇಗೆ ಕಾಣುತ್ತಾರೆ ಗೊತ್ತಾ?

ಪ್ರಸ್ತುತ ರಶ್ಮಿಕಾ ೨೦೨೦ ನ್ಯಾಷನಲ್ ಕ್ರಶ್ ಆಗಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಅವರ ಸ್ಟೈಲೀಶ್ ಲುಕ್. ಸೀರೆಯಲ್ಲಿ ದೇವತೆಯ ರೀತಿ ಕಾಣುವ ರಶ್ಮಿಕಾ ತನ್ನ ಸೊಗಸಾದ ಮೇಕಪ್ ನಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ.

​೧. ಕೊಡಗಿನ ಬೆಡಗಿ ರಶ್ಮಿಕಾ

PC: rashmika_mandanna

ಹೆಚ್ಚಾಗಿ ಆಭರಣ ಧರಿಸದೇ, ಕೇವಲ ಸಿಲ್ವರ್ ಸಿಂಪಲ್ ಸೆಟ್ ನಲ್ಲಿ ಕಂಗೊಳಿಸುತ್ತಿರುವ ರಶ್ಮಿಕಾ ತನ್ನ ತುಂಟುತನದ ನಗುವಿನಿಂದ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಸೊಗಸಾಗಿ ನೆರಿಗೆಯನ್ನು ಹಾಕಿ, ಎಂಬ್ರಾಯ್ಡರಿ ಮೆರೂನ್ ಬ್ಲೌಸ್ ಸಖತ್ತಾಗಿ ಸೂಟ್ ಆಗಿದೆ. ಸಿಂಪಲ್ ಸ್ಯಾರಿಯಲ್ಲಿ ಹೇಗೆ ಸೂಪರ್ ಆಗಿ ಕಾಣಿಸುವುದು ಎಂಬುದನ್ನು ಕಿರಿಕ್ ಲೇಡಿ ತೋರಿಸಿದ್ದಾರೆ.

​೨. ನೀಲಿ ಬಣ್ಣದ ಸೀರೆಯಲ್ಲಿ ಚಮಕ್ ಹುಡುಗಿ

PC: rashmika_mandanna

ಈ ಫೋಟೋದಲ್ಲಿ ಕೂಡ ಹೆಚ್ಚಾಗಿ ಆಭರಣ ಧರಿಸದ ರಶ್ಮಿಕಾ ಗಾಢ ನೀಲಿ ಬಣ್ಣದಲ್ಲಿ ಆಕರ್ಷಕವಾಗಿ ಕಾಣುತ್ತಿದ್ದಾರೆ. ಗಾಢ ನೀಲಿ ಸೀರೆಗೆ ಕಾಂಟ್ರಾಸ್ಟ್ ಪ್ಲೇನ್ ಬ್ಲೌಸ್ ಧರಿಸಿದ್ದಾರೆ.

​೩. ಸೂರ್ಯಕಾಂತಿಯ ಮಧ್ಯೆ ಗುಲಾಬಿ

PC: rashmika_mandanna

ರಶ್ಮಿಕಾ ಮಂದಣ್ಣ ಸೂರ್ಯಕಾಂತಿಯ ಒಡಲಿನಲ್ಲಿ ಗುಲಾಬಿಯಂತೆ ಕಂಗೊಳಿಸುತ್ತಿದ್ದಾರೆ. ಸಿಲ್ವರ್ ಜ್ಯುವೆಲರಿ ಧರಿಸಿರುವ ದೇವ ಕನ್ಯೆಯಂತೆ ಕಾಣುತ್ತಿದ್ದು, ಪ್ಲೇನ್ ೩/೪ ಬ್ಲೌಸ್ ನಲ್ಲಿ ಸೂಪರ್ ಆಗಿ ಕಾಣುತ್ತಿದ್ದಾರೆ. ಸಿಲ್ವರ್ ಜ್ಯುವೆಲರಿ ಲುಕ್ ಹೇಗಿರಬೇಕು ಎಂಬುದನ್ನು ರಶ್ಮಿಕಾ ತೋರಿಸಿಕೊಟ್ಟಿದ್ದಾರೆ.

​೪. ಕೊಡಗು ಸ್ಟೈಲ್ ನಲ್ಲಿ ಕೊಡಗಿನ ಬೆಡಗಿ

PC: rashmika_mandanna

ಸ್ಯಾಂಡಲ್ ವುಡ್ ಆಗಲೀ, ಬಾಲಿವುಡ್ ಆಗಲೀ, ಟಾಲಿವುಡ್ ಆಗಲೀ ಎಷ್ಟೇ ಆದರೂ ಕರ್ನಾಟಕದ ಹೆಣ್ಣು ಮಗಳು ಅಲ್ಲವೇ? ಹಸಿರು ರೇಷ್ಮೆ ಸೀರೆ, ಕೆಂಪು ಬಾರ್ಡರ್ ನಲ್ಲಿ ಶ್ರೀಮಂತ ಕೊಡಗು ಸಂಸ್ಕೃತಿಯ ರೀತಿ ರಶ್ಮಿಕಾ ಮಂದಣ್ಣ ಸೀರೆಯನ್ನುಟ್ಟು ಸುಂದರವಾಗಿ ಕಾಣುತ್ತಿದ್ದಾರೆ.

​೫. ಬಿಳಿ ಸೀರೆಯಲ್ಲಿ ದೇವ ಕನ್ಯೆ

PC: rashmika_mandanna

ಸಿಂಪಲ್ ಹುಡುಗಿ ರಶ್ಮಿಕಾ ಕಾಟನ್ ಬಿಳಿ ಸೀರೆಯಲ್ಲಿ ದೇವ ಕನ್ಯೆಯಂತೆ ಕಾಣುತ್ತಿದ್ದಾರೆ. ಹಳದಿ ಬಣ್ಣದ ಸ್ಲೀವ್ ಲೆಸ್ ಬ್ಲೌಸ್ ಟ್ರೆಂಡಿ ಲುಕ್ ನೀಡಿದೆ.

ನೀವು ಕಂಡಿರದ ವಿರಾಟ್ ಕೊಯ್ಲಿ ಫ್ಯಾಶನ್ ಲುಕ್ ..!

​೬. ಪಿಂಕ್ ಸೀರೆಯಲ್ಲಿ ಪಿಂಕ್ ಬ್ಯೂಟಿ

PC: rashmika_mandanna

ಪಿಂಕ್ ಸೀರೆ ಎಲ್ಲಾ ಮಹಿಳೆಯರ ಅಚ್ಚು ಮೆಚ್ಚು. ಪಿಂಕ್ ಸೀರೆ, ಗ್ರ್ಯಾಂಡ್ ಹ್ಯಾಂಡ್ ವರ್ಕ್ ಮತ್ತು ಫುಲ್ ಸ್ಲೀವ್ ಸೀರೆಯಲ್ಲಿ ರಶ್ಮಿಕಾ ಮನಮೋಹಕ ನಗೆ ಬೀರುತ್ತಿರುವುದು ಅದ್ಭುತವಾಗಿದೆ.

ಸಿಲ್ವರ್ ಗೌನ್ ನಲ್ಲಿ ದೇವತೆಯಂತಿರುವ ಬ್ಯೂಟಿಫುಲ್ ತಮನ್ನಾ

​೭. ಹಸಿರು ರೇಷ್ಮೆ ಸೀರೆ

PC: rashmika_mandanna

ಹಸಿರು ಹಾಗು ಗೋಲ್ಡ್ ಬಾರ್ಡರ್ ಸೀರೆಯಲ್ಲಿ ರಶ್ಮಿಕಾ ಆಕರ್ಷಕವಾಗಿ ಕಾಣುತ್ತಿದ್ದಾರೆ. ಹೆಚ್ಚಾಗಿ ನಾಟ್ ಇಷ್ಟ ಪಡುವ ನಟಿ ರಶ್ಮಿಕಾ ಆಗಿದ್ದು, ರೇಷ್ಮೆ ಸೇರೆಯಲ್ಲಿ ನಾಟ್ ಧರಿಸಿದರೆ ಹೇಗೆ ಕಾಣುತ್ತದೆ ಎಂಬುದನ್ನು ಚಮಕ್ ನಟಿ ತೋರಿಸಿದ್ದಾರೆ.

ವಿಶ್ವ ಸುಂದರಿ ಕ್ಯಾಂಡಿಯ ಕ್ಯೂಟ್ ಮಾತು ಇಲ್ಲಿದೆ ನೋಡಿ…

​೮. ಸೀರೆಯಲ್ಲಿ ತುಂಟಿ

PC: rashmika_mandanna

ಸದಾ ತನ್ನ ತುಂಟುತನದಿಂದ ಜನಪ್ರಿಯವಾಗಿರುವ ನಟಿಯಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಕೂದಲು ಸಡಿಲವಾಗಿಸಿ, ಗೋಲ್ಡನ್ ಜುಮಕಾ ಹಾಗು ಸೀರೆಯಲ್ಲಿ ಕ್ಲಾಸಿ ಲುಕ್ ಕಾಣಿಸುತ್ತಿದ್ದಾರೆ. ಗೋಲ್ಡನ್ ಸ್ಯಾರಿಗೆ ಪಿಂಗ್ ಬ್ಲೌಸ್ ಸಖತ್ ಸೂಟ್ ಆಗಿದೆ.

ಕತ್ರಿನಾ ಕೈಫ್ ಲೆಹೆಂಗಾ: ಪಚ್ಚೆ, ವಜ್ರ, ಮಾಣಿಕ್ಯ, ೧೮ ಕೆ.ಜಿ ಚಿನ್ನ ಹೊಂದಿದೆ

​೯. ಗೋಲ್ಡ್ ಸೀರೆಯಲ್ಲಿ ಗೋಲ್ಡನ್ ಲೇಡಿ

PC: rashmika_mandanna

ವೆಸ್ಟನ್ ಎಂಬ್ರಾಯ್ಡರಿಗಳಿಂದ ತುಂಬಿರುವ ಗೋಲ್ಡ್ ಸ್ಯಾರಿಯಲ್ಲಿ ಬ್ಯೂಟಿಫುಲ್ ಆಗಿ ಕಾಣುತ್ತಿರುವ ರಶ್ಮಿಕಾ, ತನ್ನ ಸುಂದರವಾದ ನಗುವೇ ಆಕೆಗೆ ಆಭರಣವಾಗಿದೆ. ಮುಡಿಯಲ್ಲಿ ಒಂದು ಗುಲಾಬಿ ಹೂ ಆಕೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ