ಆ್ಯಪ್ನಗರ

ಟ್ರೋಲ್‌ ಆಗ್ತಿದೆ ಚಿಂದಿ ಪ್ಯಾಂಟ್‌

ಜೀನ್ಸ್‌ ಪ್ಯಾಂಟ್‌ ಇದೀಗ ಚಿಂದಿ ಆಗಿದೆ ಅಂದರೆ, ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಕಂಪ್ಲೀಟ್‌ ರೂಪ ಕಳೆದುಕೊಂಡಿದೆ...

Vijaya Karnataka Web 17 Sep 2019, 5:00 am
ಲವಲವಿಕೆಸುದ್ದಿಲೋಕ
Vijaya Karnataka Web torn jeans


ಜೀನ್ಸ್‌ ಪ್ಯಾಂಟ್‌ ಇದೀಗ ಚಿಂದಿ ಆಗಿದೆ. ಅಂದರೆ, ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಕಂಪ್ಲೀಟ್‌ ರೂಪ ಕಳೆದುಕೊಂಡಿದೆ. ಪಾಪ್‌, ರಾಕ್‌ ಕಲ್ಚರ್‌ ಹಾಗೂ ಅಲ್ಟಾ್ರ ಮಾಡರ್ನ್‌ ಫ್ಯಾಷನ್‌ ಪ್ರೇಮಿಗಳು ಇವುಗಳ ಮೊರೆ ಹೋಗಿದ್ದಾರೆ. ಆದರೆ, ಸದ್ಯಕ್ಕೆ ನಮ್ಮ ರಾಷ್ಟ್ರದಲ್ಲಿಈ ಮಟ್ಟ ಚಿಂದಿಯಾದ ಟೊರ್ನ್‌ ಪ್ಯಾಂಟ್‌ಗಳಿಗೆ ಬೆಲೆಯಿಲ್ಲ.

ಸೋಷಿಯಲ್‌ ಮೀಡಿಯಾದಲ್ಲಿಈ ಟೊರ್ನ್‌ ಪ್ಯಾಂಟ್‌ಗಳು ಟ್ರೋಲ್‌ ಆಗಿದ್ದು, ಆನ್‌ಲೈನ್‌ ಇಲ್ಲವೇ ಯಾವುದಾದರೂ ಸ್ಟಾರ್‌ ಧರಿಸಿದ ಫೋಟೋಗಳು ಕೂಡ ಟ್ರೋಲ್‌ನಿಂದ ಹೊರತಾಗಿಲ್ಲ.

' ಹರಿದು ಹೋದ ಯಾವುದೇ ಉಡುಪನ್ನು ನಮ್ಮಲ್ಲಿಧರಿಸುವುದು ಸಭ್ಯತೆ ಎಂದು ಭಾವಿಸುವುದಿಲ್ಲ. ಹಾಗಾಗಿ ಅತಿ ಹೆಚ್ಚು ಟೊರ್ನ್‌ ಆದ ಪ್ಯಾಂಟನ್ನು ನಮ್ಮ ಸಂಸ್ಕೃತಿಯನ್ನು ಪಾಲಿಸುವ ಮಂದಿ ಒಪ್ಪುವುದಿಲ್ಲ. ಹಾಗಾಗಿ ಇದು ಅತಿ ಹೆಚ್ಚು ಟ್ರೋಲ್‌ ಆಗುತ್ತಿದೆ' ಎನ್ನುತ್ತಾರೆ ಸ್ಟೈಲಿಸ್ಟ್‌. ಅವರ ಪ್ರಕಾರ, ಯಾವುದೇ ಸ್ಟೈಲ್‌ ಅಳವಡಿಸಿಕೊಳ್ಳುವ ಮುನ್ನ ಅದು ನಮ್ಮ ವ್ಯಕ್ತಿತ್ವಕ್ಕೆ ಹೊಂದುವುದೇ ಎಂಬುದನ್ನು ಮನಗಾಣಬೇಕು ಎನ್ನುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ