ಆ್ಯಪ್ನಗರ

ಮೈಸೂರು ವಿಕ ನವತಾರೆ ವರ್ಷಾ

ವಿಜಯ ಕರ್ನಾಟಕ ಆಯೋಜಿಸಿದ್ದ 'ವಿಕ ನವತಾರೆ 2019' ಕಾಲೇಜು ಸೌಂದರ್ಯ ಸ್ಪರ್ಧೆ ೨೦೧೯ರ ಮೈಸೂರು ಆಡಿಷನ್ ಶನಿವಾರ ಮೈಸೂರಿನ ಬನ್ನೂರು ರಸ್ತೆಯ ಕ್ರೆಸ್ಟ ಕಾಲೇಜಿನಲ್ಲಿಯಶಸ್ವಿಯಾಗಿ ನಡೆಯಿತು.

Vijaya Karnataka 8 Sep 2019, 5:00 am
ಮೈಸೂರು ವಿಕ ನವತಾರೆ ವರ್ಷಾ
Vijaya Karnataka Web navatare mysore 2019


ವಿಜಯ ಕರ್ನಾಟಕ ಆಯೋಜಿಸಿದ್ದ 'ವಿಕ ನವತಾರೆ 2019' ಕಾಲೇಜು ಸೌಂದರ್ಯ ಸ್ಪರ್ಧೆ ೨೦೧೯ರ ಮೈಸೂರು ಆಡಿಷನ್ ಶನಿವಾರ ಮೈಸೂರಿನ ಬನ್ನೂರು ರಸ್ತೆಯ ಕ್ರೆಸ್ಟ ಕಾಲೇಜಿನಲ್ಲಿಯಶಸ್ವಿಯಾಗಿ ನಡೆಯಿತು. ಸ್ಪರ್ಧೆಯಲ್ಲಿ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ವ್ಯಾಪ್ತಿಯ ಇನ್ನೂರಕ್ಕೂ ಅಧಿಕ ಯುವತಿಯರು ಆಸಕ್ತಿ ತೋರಿ ಫೋಟೋಗಳನ್ನು ಕಳಿಸಿ ಭಾಗಿಯಾಗಿದ್ದರು. 18ರಿಂದ 23 ವರ್ಷದೊಳಗಿನ ಎಂಜಿನಿಯರಿಂಗ್‌, ಮ್ಯಾನೇಜ್‌ಮೆಂಟ್‌, ಮಾನವಿಕ, ವಾಣಿಜ್ಯ... ಹೀಗೆ ವಿವಿಧ ವಿಭಾಗಗಳಲ್ಲಿಓದುತ್ತಿರುವ ವಿದ್ಯಾರ್ಥಿನಿಯರು ವೇದಿಕೆಯಲ್ಲಿತಮ್ಮ ಸೌಂದರ‍್ಯ, ಬುದ್ಧಿಮತ್ತೆಯನ್ನು ಪ್ರದರ್ಶಿಸಿದರು.

ಈ ಸ್ಪರ್ಧೆಯಲ್ಲಿ ಮೈಸೂರಿನ ಜಿಎಸ್‌ಎಸ್‌ಎಸ್‌ ಕಾಲೇಜಿನ ವರ್ಷಾ ಎಂ.ಎಸ್‌. ವಿಜೇತರಾದರು. ಅದೇ ಕಾಲೇಜಿನ ನಿತ್ಯಾ ಸಿ.ಎಂ. ಪ್ರಥಮ ರನ್ನರ್‌ ಅಪ್‌ ಸ್ಥಾನ ಗಳಿಸಿದರು. ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜಿನ ಲೇಖನ ಎಂ. ದ್ವಿತೀಯ ರನ್ನರ್‌ ಅಪ್‌ ಸ್ಥಾನಿಯಾದರು. ಕ್ರೆಸ್ಟಾ ಕಾಲೇಜಿನ ಲೀಷಾ ಎಸ್‌. ಹಾಗೂ ಎಸ್‌ಜೆಪಿ ಕಾಲೇಜಿನ ಯೋಗಿತಾ ಎ.ಜಿ. ಅಂತಿಮ ಹಂತದ ಸ್ವರ್ಧೆಗೆ ಆಯ್ಕೆಯಾದರು. ಈ ಮೂಲಕ ಮೈಸೂರಿನಿಂದ ಐವರು ಕಾಲೇಜು ವಿದ್ಯಾರ್ಥಿನಿಯರು ಬೆಂಗಳೂರಿನಲ್ಲಿನಡೆಯುವ ಅಂತಿಮ ಹಂತದ ಸ್ವರ್ಧೆಗೆ ಆಯ್ಕೆಯಾದರು. ಸ್ಪರ್ಧೆಯಲ್ಲಿಚಿತ್ರನಟಿ ಹಾಗೂ ನಿರೂಪಕಿ ಅನುಪಮಾ ಗೌಡ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ, ಫ್ಯಾಷನ್‌ ಉದ್ಯಮಿ ಹಾಗೂ ವಿನ್ಯಾಸಕಿ ಜಯಂತಿ ಬಲ್ಲಾಳ್‌ ಮತ್ತು ರೇಡಿಯೋ ಜಾಕಿ ಅನನ್ಯ ಜ್ಯೂರಿಗಳಾಗಿ ಪಾಲ್ಗೊಂಡಿದ್ದರು.

ರೇವಾ ಯೂನಿವರ್ಸಿಟಿ, ಸ್ಪಶ್‌ರ್‍ ಮಸಾಲಾ ಪ್ರಾಯೋಜಕತ್ವದ ವಿಕ ನವತಾರೆ 2019 ಸ್ಪರ್ಧೆಗೆ ಮೈಸೂರು ಟರ್ಪಾಲಿನ್ಸ್‌, ವೈಭವ್‌ ಸ್ಪೀಚ್‌ ಅಂಡ್‌ ಹಿಯರಿಂಗ್‌ ಸೆಂಟರ್‌ ಹಾಗೂ ನವನಗರ ಅರ್ಬನ್‌ ಕೊ-ಅಪರೇಟಿವ್‌ ಬ್ಯಾಂಕ್‌ ಸ್ಥಳೀಯ ಪ್ರಾಯೋಜಕತ್ವ ನೀಡಿದ್ದರು. ಮೈಸೂರಿನ ಕ್ರೆಸ್ಟ ಕಾಲೇಜ್‌ ಆಫ್‌ ಮ್ಯಾನೇಜ್‌ಮೆಂಟ್‌, ಸೈನ್ಸ್‌ ಅಂಡ್‌ ಆರ್ಟ್ಸ್ ಸಭಾಂಗಣ ಸಹಕಾರ ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ