ಆ್ಯಪ್ನಗರ

ಹೊಟ್ಟೆಯ ಕೊಬ್ಬು ಕಡಿಮೆ ಮಾಡಿಕೊಳ್ಳಲು 5 ನಿಮಿಷ ಈ ವ್ಯಾಯಾಮಗಳನ್ನು ಮಾಡಿ ಸಾಕು…

ಹೊಟ್ಡೆಯ ಸುತ್ತ ಬೆಳದಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಲೇಖನದಲ್ಲಿ 6 ವ್ಯಾಯಾಮಗಳನ್ನು ನೀಡಲಾಗಿದೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ ಓದಿ.

Vijaya Karnataka Web 22 Feb 2022, 1:44 pm
ನಮ್ಮ ವಿಶ್ವದಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ತೂಕವನ್ನು ನಿರ್ವಹಣೆ ಮಾಡಲು ಅನೇಕ ಡಯಟ್‌ ಪ್ಲಾನ್‌ಗಳು, ವ್ಯಾಯಾಮಗಳನ್ನು ಮಾಡುತ್ತಿದ್ದಾರೆ. ಆದಾಗ್ಯೂ ಕೂಡ ಹೊಟ್ಟೆಯಲ್ಲಿ ಶೇಖರಣೆಯಾದ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ಕಷ್ಟವಾಗಬಹುದು.
Vijaya Karnataka Web belly fat burning exercises at home in kannada
ಹೊಟ್ಟೆಯ ಕೊಬ್ಬು ಕಡಿಮೆ ಮಾಡಿಕೊಳ್ಳಲು 5 ನಿಮಿಷ ಈ ವ್ಯಾಯಾಮಗಳನ್ನು ಮಾಡಿ ಸಾಕು…


ಮುಖ್ಯವಾಗಿ ಹೊಟ್ಟೆಯ ಕೊಬ್ಬು ಅಥವಾ ಒಳಾಂಗಗಳ ಕೊಬ್ಬು ಅತ್ಯಂತ ಅಪಾಯಕಾರಿಯಾಗಿದೆ. ಹೆಚ್ಚಿನ ಜನರು ತಮ್ಮ ತೂಕವನ್ನು ಕಳೆದುಕೊಂಡರು ಕೂಡ, ಹೊಟ್ಟೆಯ ಸುತ್ತಲಿರುವ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ಸಾಕಷ್ಟು ಕಷ್ಟ ಪಡುತ್ತಾರೆ ಎಂದೇ ಹೇಳಬಹುದು.

ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕಳೆದುಕೊಳ್ಳಲು ಲೇಖನದಲ್ಲಿ 6 ವ್ಯಾಯಾಮಗಳನ್ನು ನೀಡಲಾಗಿದೆ. ಇದು ನಿಮ್ಮ ಹೊಟ್ಟೆಯ ಸುತ್ತ ಬೆಳೆದಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಬಹಳಷ್ಟು ಸಹಾಯ ಮಾಡುತ್ತದೆ.

ಮೌಂಟೇನ್‌ ಕ್ಲೈಂಬರ್‌

ಈ ಮೌಂಟೇನ್‌ ಕ್ಲೈಂಬರ್‌ ಅನ್ನು ಪರ್ವತಾರೋಹಿ ವ್ಯಾಯಾಮ ಎಂದು ಕೂಡ ಕರೆಯುತ್ತಾರೆ. ಈ ದೈಹಿಕ ಚಟುವಟಿಕೆ ಮಾಡುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬನ್ನು ಸಾಕಷ್ಟು ಕಡಿಮೆ ಮಾಡಿಕೊಳ್ಳಬಹುದು.

ಮಾಡುವ ರೀತಿ ಹೀಗಿದೆ

ಹಂತ 1 : ನಿಮ್ಮ ಎರಡು ಕೈಗಳನ್ನು ನೇರವಾಗಿ ನಿಮ್ಮ ಭುಜದ ಕೆಳಗೆ ಇರಿಸಿ. ನಿಮ್ಮ ಕಾಲ್ಬೆರಳುಗಳ ಮೇಲೆ ನಿಲ್ಲಿ. ನಿಮ್ಮ ಕಾಲು ಮತ್ತು ನಿಮ್ಮ ತಲೆಯ ಭಾಗ ಸಮ ಸ್ಥಿತಿಯಲ್ಲಿರಬೇಕು.

ಹಂತ 2 : ನಿಮ್ಮ ಬಲ ಮೊಣಕಾಲುಗಳನ್ನು ಬಗ್ಗಿಸಿ ಎದೆಯ ಭಾಗಕ್ಕೆ ತನ್ನಿ. ನಂತರ ಮೂಲ ಸ್ಥಾನಕ್ಕೆ ಹಿಂತಿರುಗಿ.

ಹಂತ 3 : ಅದೇ ರೀತಿ ಎಡಗಾಲನ್ನು ಎದೆಯ ಭಾಗಕ್ಕೆ ತನ್ನಿ ಮೂಲ ಸ್ಥಾನಕ್ಕೆ ತನ್ನಿ. ಒಟ್ಟಾರೆ ನೀವು ಪರ್ವತವನ್ನು ಏರುವ ರೀತಿ ಈ ವ್ಯಾಯಾಮ ಮಾಡಬೇಕು.

​ಲೆಗ್‌ ಲಿಫ್ಟ್‌

ಈ ಲೆಗ್ ಲಿಫ್ಟ್‌ ಮಾಡುವುದರಿಂದ ನಿಮ್ಮ ಕಾಲುಗಳು ಹೊಟ್ಟೆಯ ಮೇಲೆ ಒತ್ತಡವನ್ನು ಉಂಟು ಮಾಡುವುದರಿಂದ, ಹೊಟ್ಟೆಯ ಸುತ್ತ ಇರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಾಡುವ ವಿಧಾನ ಹೀಗಿದೆ

ಹಂತ 1 : ನೆಲದ ಮೇಲೆ ಮಲಗಿ. ನಿಮ್ಮ ಕಾಲುಗಳನ್ನು ಉದ್ದಕ್ಕೆ ಚಾಚಿ, ಕೈಗಳನ್ನು ಪಕ್ಕಕ್ಕೆ ಇರಿಸಿ.

ಹಂತ 2 : ನಿಮ್ಮ ಕಾಲುಗಳನ್ನು ನಿಧಾನವಾಗಿ ಮೇಲಕ್ಕೆ ಎತ್ತಿ.

ಹಂತ 3 : 5 ರಿಂದ 10 ಸೆಕೆಂಡ್‌ಗಳ ನಂತರ ಮತ್ತೆ ನಿಮ್ಮ ಕಾಲುಗಳನ್ನು ನೆಲದ ಮೇಲೆ ಇರಿಸಿ, ವಿಶ್ರಾಂತಿ ತೆಗೆದುಕೊಳ್ಳಿ. ಹೀಗೆ 5 ನಿಮಿಷಗಳ ಕಾಲ ಪುನರಾವರ್ತಿಸಿ.

​ಹೈ ಪ್ಲಾಂಕ್‌

ಹೈ ಪ್ಲಾಂಕ್‌ ನಿಮ್ಮ ಕೆಳ ಹೊಟ್ಟೆ ಬಿಗಿಗೊಳಿಸಿ, ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಇದೊಂದು ಹೊಟ್ಟೆಯ ಕೊಬ್ಬು ಕರಗಿಸಲು ಪರಿಣಾಮಕಾರಿ ದೈಹಿಕ ಚಟುವಟಿಕೆಯಾಗಿದೆ.

ಮಾಡುವ ವಿಧಾನ ಹೀಗಿದೆ

ಹಂತ 1 : ನಿಮ್ಮ ಎರಡು ಮಣಿಕಟ್ಟನ್ನು ನಿಮ್ಮ ಭುಜದ ಕೆಳಗೆ ಇರಿಸಿ, ಕಾಲು ಬೆರಳುಗಳ ಮೇಲೆ ನಿಂತುಕೊಳ್ಳಿ.

ಹಂತ 2 : ನಿಮ್ಮ ಬೆನ್ನು ಸಮಾನವಾಗಿದೆಯೇ ಎಂದು ಖಚಿತ ಪಡಿಸಿಕೊಳ್ಳಿ.

ಹಂತ 3 : ತಲೆಯನ್ನು ಮೇಲಕ್ಕೆ ಎತ್ತಿ, ಈ ಭಂಗಿಯಲ್ಲಿ 1 ನಿಮಿಷಗಳ ಕಾಲ ಇರಿ. ನಂತರ ಪುನರಾವರ್ತಿಸಿ.

ರಿವರ್ಸ್‌ ಪ್ಲ್ಯಾಂಕ್‌

ರಿವರ್ಸ್‌ ಪ್ಲ್ಯಾಂಕ್‌ ಮಾಡುವುದರಿಂದ ನಿಮ್ಮ ಕೆಳಹೊಟ್ಟೆಯು ಸಮತಟ್ಟಾದ ಅನುಭವವನ್ನು ನೀವು ಪಡೆಯುತ್ತೀರಿ. ಇದು ನಿಮ್ಮ ಸೊಂಟ ಮತ್ತು ಹೊಟ್ಟೆಯ ಭಾಗವನ್ನು ಬಿಗಿಗೊಳಿಸಿ, ಹೆಚ್ಚುವರಿ ಕೊಬ್ಬನ್ನು ಸುಡಲು ಕಾರಣವಾಗುತ್ತದೆ.

ಮಾಡುವ ವಿಧಾನ ಹೀಗಿದೆ

ಹಂತ 1 : ಮೊದಲು ನೆಲದ ಮೇಲೆ ಮಲಗಿ.

ಹಂತ 2 : ನಂತರ ಕೈಗಳನ್ನು ನೆಲದ ಮೇಲೆ ಇರಿಸಿ, ನಿಮ್ಮ ಸೊಂಟ ಮತ್ತು ಎದೆಯನ್ನು ಕೈಗಳ ಸಹಾಯದಿಂದ ಮೇಲಕ್ಕೆ ಎತ್ತಿ.

ಹಂತ 3 : ನಿಮ್ಮ ಕಾಲುಗಳನ್ನು ಒಟ್ಟಿಗೆ ಹಿಡಿದುಕೊಂಡು ನೆಲದ ಕಡೆಗೆ ನೋಡಿ.

ಹಂತ 4 : ಎದೆಯನ್ನು ಬಿಗಿಗೊಳಿಸಿ, ಉಸಿರಾಟವನ್ನು ಕೆಲವು ಸೆಕೆಂಡ್‌ಗಳ ಕಾಲ ಹಿಡಿದಿಟ್ಟುಕೊಳ್ಳಿ. ನಂತರ ಮಲಗುವ ಭಂಗಿಗೆ ಬನ್ನಿ. ಇದೇ ಸ್ಥಿತಿಯನ್ನು ಪುನರಾವರ್ತಿಸಿ.

ಇದನ್ನು ಓದಿ: ಮಹಿಳೆಯರು ತೂಕ ಇಳಿಕೆ ಮಾಡಿಕೊಳ್ಳಲು ಇಲ್ಲಿವೆ 8 ವ್ಯಾಯಾಮಗಳು

ಇದನ್ನು ಓದಿ: ತೂಕ ಇಳಿಕೆ: ಬೆಳಗ್ಗೆ ಅಥವಾ ಸಂಜೆ ಯಾವ ಸಮಯದಲ್ಲಿ ವರ್ಕೌಟ್ ಮಾಡಬೇಕು?

ಪ್ಲ್ಯಾಂಕ್‌

ಪ್ಲ್ಯಾಂಕ್‌ ನಿಮ್ಮ ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡುವ ಶಕ್ತಿಯುತವಾದ ವ್ಯಾಯಾಮವಾಗಿದೆ. ಇದು ಸ್ವಲ್ಪ ಕಷ್ಟವಾದ ವ್ಯಾಯಾಮವು ಹೌದು.

ಮಾಡುವ ವಿಧಾನ ಹೀಗಿದೆ

ಹಂತ 1 : ನಿಮ್ಮ ಮಣಿಕಟ್ಟನ್ನು ನಿಮ್ಮ ಭುಜದ ಕೆಳಗೆ ಇಡಿ. ನಿಮ್ಮ ಮೊಣಕಾಲುಗಳನ್ನು ಮೇಲಕೆತ್ತಿ. ನಿಮ್ಮ ಬೆನ್ನು ಮತ್ತು ಕಾಲುಗಳನ್ನು ನೇರವಾಗಿರಿಸಿ.

ಹಂತ 2 : ನಿಮ್ಮ ಕತ್ತಿನ ಹಿಂಭಾಗವನ್ನು ನೇರಗೊಳಿಸಿ, ನೆಲವನ್ನು ನೋಡಿ.

ಹಂತ 3 : ಈ ಸ್ಥಾನದಲ್ಲಿ 1 ನಿಮಿಷಗಳ ಕಾಲ ಇರಿ. ನಂತರ ವಿಶ್ರಾಂತಿಯನ್ನು ಪಡೆಯಿರಿ. ಇದನ್ನು 4 ರಿಂದ 5 ಬಾರಿ ಪುನರಾವರ್ತಿಸಿ.

ಇದನ್ನು ಓದಿ:40 ರ ನಂತರ ತೂಕ ನಷ್ಟ ಯಾಕೆ ಕಷ್ಟ ಗೊತ್ತಾ?40 ರ ನಂತರ ತೂಕ ನಷ್ಟ ಯಾಕೆ ಕಷ್ಟ ಗೊತ್ತಾ?

ಇದನ್ನು ಓದಿ: ತೂಕ ಹೆಚ್ಚಾಗಲು ಪಾನಿ ಪುರಿ ಕಾರಣವಾಗುತ್ತದೆಯೇ?

ಭುಜಕ್ಕೆ ಟ್ಯಾಪ್‌ ಮಾಡುವ ವ್ಯಾಯಾಮ

ಇದು ಕೂಡ ನಿಮ್ಮ ಹೊಟ್ಟೆಯ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುಲು ಸಹಾಯ ಮಾಡುತ್ತದೆ.

ಮಾಡುವ ವಿಧಾನ ಹೀಗಿದೆ

ಹಂತ 1 : ಮೊದಲು ನಿಮ್ಮ ಮಣಿಕಟ್ಟನ್ನು ನಿಮ್ಮ ಭುಜದ ಕೆಳಗೆ ಇಡಿ.

ಹಂತ 2 : ನಿಮ್ಮ ಕಾಲುಗಳನ್ನು ನೇರವಾಗಿಸಿ.

ಹಂತ 3 : ನಿಮ್ಮ ಎಡಗೈಯನ್ನು ಎತ್ತಿ ಬಲ ಭುಜವನ್ನು ಟ್ಯಾಪ್‌ ಅಥವಾ ಟೆಚ್‌ ಮಾಡಿ. ಅದೇ ರೀತಿ ಬಲಗೈಯನ್ನು ಎತ್ತಿ ಎಡ ಭುಜವನ್ನು ಟ್ಯಾಪ್‌ ಮಾಡಿ.

ಹಂತ 4 : ಈ ವ್ಯಾಯಾಮವನ್ನು 10 ರಿಂದ 15 ಬಾರಿ ಪುನರಾರ್ವತಿಸಿ.

ಇದನ್ನು ಓದಿ: ಮಹಿಳೆಯರಿಗೆ ಜಾಗಿಂಗ್‌ ಮಾಡುವಾಗ ಕಾಡುವ ಸಮಸ್ಯೆಗಳು


Read In English: Weight loss: 5-minute belly fat burning exercises

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ