ಆ್ಯಪ್ನಗರ

ತೂಕ ಇಳಿಕೆಗೆ ಓಟ್ಸ್ ಸವಿಯುತ್ತಿದ್ದರೆ ಈ ತಪ್ಪುಗಳನ್ನು ಮಾಡದಿರಿ

ಬಹುತೇಕ ಜನರು ಓಟ್ಸ್ ಸೇವಿಸುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಆಗ ದೇಹದ ತೂಕ ಇಳಿಸಲು ಸಾಧ್ಯವಾಗದು. ಹಾಗಾದರೆ ತಪ್ಪು ಕ್ರಮಗಳು ಯಾವವು? ಅವುಗಳಿಂದ ಯಾವ ಬದಲಾವಣೆ ಉಂಟಾಗುವುದು? ನೋಡೋಣ.

Vijaya Karnataka Web 15 Apr 2021, 3:01 pm
ತೂಕ ಇಳಿಕೆಯ ಯೋಜನೆಯಲ್ಲಿ ಇರುವವರು ಸಾಮಾನ್ಯವಾಗಿ ಕಾರ್ಬೋಹೈಡ್ರೇಟ್ಸ್ ಹಾಗೂ ಎಣ್ಣೆಯಿಂದ ಕೂಡಿರುವ ಆಹಾರಗಳನ್ನು ದೂರ ಇಡುತ್ತಾರೆ. ಮುಂಜಾನೆ ಮತ್ತು ರಾತ್ರಿಯ ಊಟದ ಬದಲಿಗೆ ಓಟ್ಸ್ ಅನ್ನು ಸೇವಿಯುತ್ತಾರೆ. ಓಟ್ಸ್ ಉತ್ತಮ ಪೋಷಕಾಂಶಗಳೊಂದಿಗೆ ಹಸಿವನ್ನು ನಿಯಂತ್ರಣದಲ್ಲಿ ಇಡುವುದು. ಓಟ್ಸ್ ತೂಕ ಇಳಿಕೆಗೆ ಸಹಾಯ ಮಾಡುವ ಒಂದು ಅದ್ಭುತ ಆಹಾರ ವಸ್ತು. ತಜ್ಞರು ಹೇಳುವ ಪ್ರಕಾರ
Vijaya Karnataka Web different ways you can have oats for weight loss
ತೂಕ ಇಳಿಕೆಗೆ ಓಟ್ಸ್ ಸವಿಯುತ್ತಿದ್ದರೆ ಈ ತಪ್ಪುಗಳನ್ನು ಮಾಡದಿರಿ


​ಸಾಮಾನ್ಯ ಸೇವನೆ

ಮುಂಜಾನೆಯ ಉಪಹಾರ ಅಥವಾ ತೂಕ ನಷ್ಟಕ್ಕಾಗಿ ಓಟ್ಸ್ ಅನ್ನು ಆಹಾರವನ್ನಾಗಿ ಆಯ್ಕೆ ಮಾಡುತ್ತಾರೆ. ಆಗ ಓಟ್ಸ್ ನೊಂದಿಗೆ ಹಾಲು, ತಾಜಾ ಹಣ್ಣುಗಳ ಹೋಳು, ಒಣ ಹಣ್ಣುಗಳು ಮತ್ತು ಬೀಜಗಳನ್ನು ಸೇರಿಸಿ ಪೋಷಕಾಂಶಗಳಿಂದ ಕೂಡಿರುವ ಭಕ್ಷ್ಯವನ್ನಾಗಿ ಸೇವಿಸುವರು. ಇದು ತೂಕ ಇಳಿಕೆಗೆ ಎಷ್ಟು ಪರಿಣಾಮಕಾರಿಯಾದ ಆಹಾರ ಆಗುವುದು ಎನ್ನುವುದರ ಬಗ್ಗೆ ಯಾವುದೇ ಅಂದಾಜನ್ನು ಹೊಂದಿರುವುದಿಲ್ಲ. ತೂಕ ನಷ್ಟದ ಉದ್ದೇಶಕ್ಕಾಗಿ ಓಟ್ಸ್ ಸವಿಯುವಾಗ ಯಾವೆಲ್ಲಾ ತೊಂದರೆಯನ್ನು ಅನುಭವಿಸುತ್ತೇವೆ? ಎನ್ನುವುದನ್ನು ನಾವಿಲ್ಲಿ ತಿಳಿಸುತ್ತೇವೆ.

​ಓಟ್ಸ್ ಆಹಾರದಲ್ಲಿ ಇರುವ ಪೌಷ್ಟಿಕಾಂಶ

ಒಂದು ಕಪ್ ಓಟ್ಸ್ ಮೀಲ್‍ನಲ್ಲಿ 158 ಕ್ಯಾಲೋರಿ, 4 ಗ್ರಾಂ ಪ್ರೋಟೀನ್, 3.2 ಗ್ರಾಂ ಕೊಬ್ಬು, 0.5 ಗ್ರಾಂ ಸ್ಯಾಚುರೇಟೆಡ್ ಕೊಬ್ಬು, 7 ಗ್ರಾಂ ಕರ್ಬೋಹೈಡ್ರೇಟ್, 4 ಗ್ರಾಂ ಫೈಬರ್, 1.1 ಗ್ರಾಂ ಸಕ್ಕರೆ, 115 ಮಿಗ್ರಾಂ ಸೋಡಿಯಮ್ ಅನ್ನು ಹೊಂದಿರುತ್ತದೆ. ಒಂದು ದಿನಕ್ಕೆ ಅಗತ್ಯವಿರುವಷ್ಟು ಕಾರ್ಬ್ ಮತ್ತು ನಾರಿನಂಶವು ಇದರಲ್ಲಿ ದೊರೆಯುವುದು. ಇದರಲ್ಲಿರುವ ಪೌಷ್ಟಿಕಾಂಶವು ದೀರ್ಘ ಸಮಯಗಳ ಕಾಲ ಹಸಿವನ್ನು ತಡೆ ಹಿಡಿಯುವಷ್ಟು ಶಕ್ತಿಯನ್ನು ನೀಡುತ್ತವೆ. ಜೀರ್ಣ ಕ್ರಿಯೆಯು ಸುಗಮವಾಗುವಂತೆ ಮಾಡುತ್ತದೆ.

ವ್ಯಾಯಾಮದ ನಂತರ ಈ ಆಹಾರ ಸೇವಿಸುತ್ತಿದ್ದರೆ ಯಾವ ಪ್ರಯೋಜನವೂ ಆಗುವುದಿಲ್ಲ!

​ಓಟ್ ಮೀಲ್ ತಯಾರಿಸಲು ನೀರಿನ ಬಳಕೆ

ಓಟ್ ಮೀಲ್ ತಯಾರಿಸಲು ಹಲವು ವಿಧಾನವನ್ನು ಅನುಸರಿಸುತ್ತಾರೆ. ಭಿನ್ನವಾದ ಬಗೆಯ ಓಟ್ಸ್ ಆಹಾರವಾದರೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಳಸಲಾಗುವುದು. ಸೂಕ್ತ ಪ್ರಮಾಣದಲ್ಲಿ ನೀರನ್ನು ಸೇರಿಸುವುದರಿಂದ ಗುಣಮಟ್ಟದ ಪೋಷಕಾಂಶವನ್ನು ಪಡೆಯಬಹುದು. ಕೆಲವರು ಓಟ್ಸ್‌ಗೆ ಹಾಲನ್ನು ಸೇರಿಸುವುದರಿಂದ ಅಧಿಕ ಪೋಷಕಾಂಶಗಳನ್ನು ನೀಡುವುದು.

​ಸೂಕ್ತ ಪ್ರಮಾಣದ ಪ್ರೋಟೀನ್ ಇಲ್ಲದಿರುವುದು

ನಿತ್ಯದ ಆಹಾರದಲ್ಲಿ ಪ್ರೋಟೀನ್ ಸೂಕ್ತ ಪ್ರಮಾಣದಲ್ಲಿ ಇರಬೇಕು. ಅದು ಉತ್ತಮ ಆರೋಗ್ಯ ಹಾಗೂ ಸಮತೋಲಿತ ತೂಕ ಹೊಂದಲು ಸಹಾಯ ಮಾಡುವುದು. ಬಹುತೇಕ ಜನರು ತೂಕ ಇಳಿಕೆಗಾಗಿ ಓಟ್ಸ್ ಸೇವಿಸುವಾಗ ಸೂಕ್ತ ಪ್ರಮಾಣದ ಪ್ರೋಟೀನ್ ಸೇರಿಸಲು ಮರೆಯುತ್ತಾರೆ. ಆಗ ತೂಕ ಇಳಿಕೆ ಸುಲಭವಾಗಿ ನೆರವೇರದು. ಕೇವಲ ಹಣ್ಣುಗಳನ್ನು ಸೇರಿಸಿಕೊಳ್ಳುವುದಕ್ಕೆ ಅಂಟಿಕೊಂಡಿರಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.

​ಅಧಿಕ ಸಕ್ಕರೆ ಸೇರಿಸುವುದು

ಕೆಲವರು ಓಟ್ಸ್ ಆಹಾರ ಹೊಂದುವಾಗ ಅದಕ್ಕೆ ಅಧಿಕ ಪ್ರಮಾಣದ ಸಕ್ಕರೆ ಅಥವಾ ಸಿಹಿ ವಸ್ತುವನ್ನು ಸೇರಿಸಿಕೊಳ್ಳುತ್ತಾರೆ. ಅವು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಓಟ್ಸ್‍ನ ಪ್ರಮಾಣ, ಅದಕ್ಕೆ ಎಷ್ಟು ಸಿಹಿ ಸೇರಿಸಬೇಕು? ಎನ್ನುವುದರ ಬಗ್ಗೆ ಸೂಕ್ತ ಅರಿವು ಇರಬೇಕು. ಇಲ್ಲವಾದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುವುದು. ಹಣ್ಣುಗಳಲ್ಲಿ ನೈಸರ್ಗಿಕವಾಗಿಯೇ ಸಿಹಿ ಅಂಶ ಇರುತ್ತದೆ. ಹಾಗಾಗಿ ಪ್ರತ್ಯೇಕ ಸಿಹಿಯನ್ನು ಸೇರಿಸುವ ಅಗತ್ಯ ಇರುವುದಿಲ್ಲ. ಓಟ್ಸ್ ಆಹಾರದಲ್ಲಿ ದಾಲ್ಚಿನ್ನಿ, ವೆನಿಲ್ಲಾ ಸಾರವನ್ನು ಪರ್ಯಾಯವಾಗಿ ಬಳಸಬೇಕು.

ಗಿಡ್ಡ ಇರುವವರು ತೂಕ ಇಳಿಸಿಕೊಳ್ಳುವುದು ಹೆಚ್ಚು ಕಷ್ಟವೇ?

​ಓಟ್ಸ್‌ನ ಆಯ್ಕೆ ತಪ್ಪಾಗುವುದು

ಲೂಸ್ ಓಟ್ಸ್ ಅಥವಾ ಅಗ್ಗದ ದರದಲ್ಲಿ ಲಭ್ಯವಿರುವ ಓಟ್ಸ್ ಅನ್ನು ಬಳಸಲು ಮುಂದಾಗಬಾರದು. ನಮ್ಮ ಆರೋಗ್ಯಕ್ಕೆ ಉತ್ತಮವಾದ ಓಟ್ಸ್ ಬಳಸದೆ ಇದ್ದಾಗ ಅದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು. ಅಲ್ಲದೆ ಅವುಗಳಲ್ಲಿ ಅಧಿಕ ಪ್ರಮಾಣದ ಸಕ್ಕರೆ ಅಂಶ ಇರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಖರೀದಿಸುವಾಗ ಓಟ್ಸ್ ಗುಣಮಟ್ಟವನ್ನು ಪರೀಕ್ಷಿಸಿ ಖರೀದಿಸಬೇಕು. ಆಗ ನಿಮ್ಮ ತೂಕ ಇಳಿಕೆಯ ಯೋಜನೆ ಸರಿಯಾಗಿ ನೆರವೇರುವುದು.

ಅಧಿಕ ಪ್ರಮಾಣದ ಸೇವನೆ

ಓಟ್ಸ್ ಆಹಾರವನ್ನು ಸೇವಿಸುವಾಗ ಮಾಡುವ ದೊಡ್ಡ ತಪ್ಪು ಎಂದರೆ ಸೂಕ್ತ ಪ್ರಮಾಣದಲ್ಲಿ ಸೇವಿಸದೆ ಇರುವುದು. ಅಧಿಕ ಪ್ರಮಾಣದಲ್ಲಿ ಓಟ್ಸ್ ಸೇವಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಿಗೆ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಪೋಷಕಾಂಶ ರವಾನೆಯಾಗುವುದು. ಆಗ ದೇಹದ ತೂಕ ಇಳಿಕೆಗಿಂತ ಏರಿಕೆ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ದಿನಕ್ಕೆ ಒಂದು ಕಪ್ ಓಟ್ಸ್ ಆಹಾರವನ್ನು ಸೇವಿಸುತ್ತೀರಿ ಎಂದಾದರೆ ಅದರಲ್ಲಿ ಅರ್ಧದಷ್ಟು ಹಣ್ಣುಗಳನ್ನು ಮಾತ್ರ ಸೇರಿಸಬೇಕು. ಅಧಿಕ ಪ್ರಮಾಣದಲ್ಲಿ ಸೇರಿಸಿದರೆ ಕ್ಯಾಲೋರಿ ಹೆಚ್ಚಾಗುವುದು.

To Read in English Click: Weight loss: 5 mistakes to avoid while having oats for weight loss

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ