ಆ್ಯಪ್ನಗರ

ಮಹಿಳೆಯರನ್ನು ಸ್ವಾಗತಿಸುತ್ತಿರುವ ಬಾಡಿ ಬಿಲ್ಡಿಂಗ್‌ ಕ್ಷೇತ್ರ

ಮಹಿಳೆಯರು ನ್ಯಾಚುರಲ್‌ ಬಾಡಿ ಬಿಲ್ಡಿಂಗ್‌ಗೆ ಹೆಚ್ಚು ಆದ್ಯತೆ ನೀಡತೊಡಗಿದ್ದಾರೆ. ಹೆಣ್ಣು ಮಕ್ಕಳಿಗೂ ಸ್ವಾಗತ: ಫಿಟ್ನೆಸ್‌ನ ನೆಕ್ಸ್ಟ್‌ ಲೆವೆಲ್‌ ಎಂದರೇ ಬಾಡಿ ಬಿಲ್ಡಿಂಗ್‌. ಮೊದಲೆಲ್ಲಾಗಂಡು ಮಕ್ಕಳಿಗೆ ಮಾತ್ರ ಸೀಮಿತವಾಗಿದ್ದ ಈ ಕ್ಷೇತ್ರ ಇದೀಗ ಹೆಣ್ಣು ಮಕ್ಕಳಿಗೂ ಸ್ವಾಗತ ನೀಡಿದೆ.

Vijaya Karnataka Web 8 Jan 2020, 10:22 am
ಬಾಡಿ ಬಿಲ್ಡಿಂಗ್‌ ಕ್ಷೇತ್ರ ಇದೀಗ ಹೆಣ್ಣುಮಕ್ಕಳನ್ನು ಸ್ವಾಗತಿಸುತ್ತಿದೆ. ಮಾನಿನಿಯರಲ್ಲೂ ಬಾಡಿ ಬಿಲ್ಡಿಂಗ್‌ ಕ್ರೇಝ್‌ ಮೊದಲಿಗಿಂತ ಹೆಚ್ಚಾಗಿದೆ. ಕೇವಲ ಫಿಟ್ನೆಸ್‌ಗೆ ಮಾತ್ರವಲ್ಲ, ಸ್ಪರ್ಧೆಗಳಲ್ಲಿಭಾಗವಹಿಸುವವರ ಸಂಖ್ಯೆಯೂ ಮೊದಲಿಗಿಂತ ಹೆಚ್ಚಾಗಿದೆ. ಸಮೀಕ್ಷೆಯೊಂದರ ಪ್ರಕಾರ, ಆರೋಗ್ಯಕರ ಫಿಟ್ನೆಸ್‌ಗೆ ಸಾಥ್‌ ನೀಡುವ ಬಾಡಿ ಬಿಲ್ಡಿಂಗ್‌ ಮಾಡುವ ಮಾನಿನಿಯರು ಇಂದು ಹೆಚ್ಚಾಗತೊಡಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಜಿಮ್‌ಗೆ ಹೋಗುವವರ ಸಂಖ್ಯೆ
Vijaya Karnataka Web ಮಹಿಳೆಯರನ್ನು ಸ್ವಾಗತಿಸುತ್ತಿರುವ ಬಾಡಿ ಬಿಲ್ಡಿಂಗ್‌ ಕ್ಷೇತ್ರ


ಅಧಿಕಗೊಂಡಿದೆ. ಅದರಲ್ಲೂ ಮಹಿಳೆಯರು ನ್ಯಾಚುರಲ್‌ ಬಾಡಿ ಬಿಲ್ಡಿಂಗ್‌ಗೆ ಹೆಚ್ಚು ಆದ್ಯತೆ ನೀಡತೊಡಗಿದ್ದಾರೆ. ಹೆಣ್ಣು ಮಕ್ಕಳಿಗೂ ಸ್ವಾಗತ: ಫಿಟ್ನೆಸ್‌ನ ನೆಕ್ಸ್ಟ್‌ ಲೆವೆಲ್‌ ಎಂದರೇ ಬಾಡಿ ಬಿಲ್ಡಿಂಗ್‌. ಮೊದಲೆಲ್ಲಾಗಂಡು ಮಕ್ಕಳಿಗೆ ಮಾತ್ರ ಸೀಮಿತವಾಗಿದ್ದ ಈ ಕ್ಷೇತ್ರ ಇದೀಗ ಹೆಣ್ಣು ಮಕ್ಕಳಿಗೂ ಸ್ವಾಗತ ನೀಡಿದೆ.

ಕೈಗಳ ತೋಳಿನ ಕೊಬ್ಬನ್ನು ಕರಗಿಸಲು ಸರಳ ಟಿಪ್ಸ್

ಹೆಣ್ಣು ಮಕ್ಕಳಿಗೆ ಈ ಕ್ಷೇತ್ರವಲ್ಲಎಂದು ವಾದಿಸುತ್ತಿದ್ದ ಮಂದಿಯೂ ಕಡಿಮೆಯಾಗಿದ್ದಾರೆ. ಮಾನಿನಿಯರೂ ಕೂಡ ಈ ಕ್ಷೇತ್ರದಲ್ಲಿಸೈ ಏನಿಸಿಕೊಳ್ಳಬಹುದು ಎಂದು ಈಗಾಗಲೇ ಸಾಕಷ್ಟು ಮಹಿಳೆಯರು ಪ್ರೂವ್‌ ಮಾಡಿದ್ದಾರೆ. ಇದು ನಮಗೆಲ್ಲಾ ಸ್ಪೂರ್ತಿ ಎನ್ನುತ್ತಾರೆ ಈಗಾಗಲೇ ಫಿಟ್ನೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಫಿಗರ್‌ ಹಾಗೂ ಫಿಟ್ನೆಸ್‌ ವಿಭಾಗದಲ್ಲಿಚಿನ್ನ ಗೆದ್ದಿರುವ ಜ್ಯೋತ್ಸಾ$್ನ ವೆಂಕಟೇಶ್‌.

ಅವರ ಪ್ರಕಾರ, ದೈಹಿಕ ಕಸರತ್ತಿನ ಜತೆಗೆ ಮಾನಸಿಕ ಸ್ಥೈರ್ಯವೂ ಇದಕ್ಕೆ ಅಗತ್ಯ ಎನ್ನುತ್ತಾರೆ. ಏನಿದು ಬಾಡಿ ಬಿಲ್ಡಿಂಗ್‌ ಕಾನ್ಸೆಪ್ಟ್‌ ?: ಬಾಡಿ ಬಿಲ್ಡಿಂಗ್‌ ಕೇವಲ ಕಸರತ್ತು ಎಂದುಕೊಂಡರೇ ಅದು ತಪ್ಪು. ನೈಸರ್ಗಿಕವಾಗಿ ಸಿಗುವ ಆಹಾರಗಳಾದ ಹಾಲು, ಮೊಟ್ಟೆ , ಮಾಂಸ, ಹಣ್ಣು ಹಾಗೂ ಹಸಿರು ತರಕಾರಿಗಳನ್ನು ಸೇವಿಸುವುದರೊಂದಿಗೆ ಉತ್ತಮ ಡಯಟ್‌ ಪಾಲಿಸುತ್ತಾ ಸ್ಟ್ರಿಕ್ಟ್ ವ್ಯಾಯಾಮ ಮಾಡಿ ಆರೋಗ್ಯದ ಜತೆಗೆ ಅಗತ್ಯಕ್ಕೆ ತಕ್ಕಂತೆ ದೇಹದ ಆಕಾರ ಪಡೆಯುವುದೇ ನ್ಯಾಚುರಲ್‌ ಬಾಡಿ ಬಿಲ್ಡಿಂಗ್‌.

ಓಟ್ಸ್‌ನ್ನು ತಣ್ಣೀರಿನಲ್ಲಿ ನೆನೆಸಿಟ್ಟು ಸೇವಿಸಿದರೆ, ಆರೋಗ್ಯಕ್ಕೆ ಒಳ್ಳೆಯದು

ನ್ಯಾಚುರಲ್‌ ಆಗಿರಲಿ
ಕೆಲವರು ಎಲ್ಲಾಕ್ರಮಗಳನ್ನು ಅನುಸರಿಸುವುದರ ಜತೆಗೆ ಆರೋಗ್ಯಕ್ಕೆ ಮಾರಕವಾಗಬಲ್ಲ, ಕೃತಕ ಔಷಧಗಳನ್ನು ಉಪಯೋಗಿಸಿ ದೇಹದ ನೈಸರ್ಗಿಕ ಸಾಮರ್ಥ್ಯವನ್ನು ಮೀರಿ ಬೆಳೆಸಲು ಯತ್ನಿಸುತ್ತಾರೆ ಇದು ತಪ್ಪು ಎನ್ನುತ್ತಾರೆ ಎಕ್ಸ್‌ಪರ್ಟ್ಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ