ಆ್ಯಪ್ನಗರ

ಓಟ್ಸ್, ರಾಗಿ ಅಥವಾ ಜೋಳದ ಹಿಟ್ಟು ಇವುಗಳಲ್ಲಿ ಯಾವುದು ತೂಕ ಇಳಿಕೆಗೆ ಬೆಸ್ಟ್?

ನಾವು ನಿತ್ಯವೂ ಗಟ್ಟಿ ಆಹಾರವಾಗಿ ಬಳಸುವ ರಾಗಿ, ಜೋಳ ಹಾಗೂ ಓಟ್ಸ್ ನಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಯಾವುದು ಹೆಚ್ಚು ಕಾರ್ಬೋಹೈಡ್ರೇಟ್ ಗುಣವನ್ನು ಪಡೆದುಕೊಂಡಿದೆ? ಯಾವುದನ್ನು ಸೇವಿಸಿದರೆ ತೂಕದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬಹುದು. ಹಾಗಾದರೆ ಓಟ್ಸ್, ರಾಗಿ ಮತ್ತು ಜೋಳದಲ್ಲಿ ಯಾವುದರ ಆಯ್ಕೆ ಹಿತವನ್ನುಂಟುಮಾಡುವುದು?

Vijaya Karnataka Web 14 Nov 2020, 3:46 pm
ನಾವು ಸೇವಿಸುವ ಆಹಾರವು ನಮ್ಮ ಆರೋಗ್ಯವನ್ನು ಕಾಪಾಡುವ ಹಾಗೆಯೇ ಕೆಲವು ಸಮಸ್ಯೆಯನ್ನು ಸಹ ಸೃಷ್ಟಿಸುವುದು. ಸೂಕ್ತ ಪ್ರಮಾಣ ಹಾಗೂ ಆಹಾರದ ಆಯ್ಕೆ ಮಾಡದೆ ಇದ್ದರೆ ನಮ್ಮ ದೇಹದ ತೂಕ ಹೆಚ್ಚುವುದು. ಒಮ್ಮೆ ದೇಹದ ತೂಕ ಅತಿಯಾದರೆ ಅದನ್ನು ಇಳಿಸುವುದು ಸ್ವಲ್ಪ ಕಷ್ಟವೆ. ನಿಯಮಿತವಾದ ವ್ಯಾಯಾಮ, ಆಹಾರ ಸೇವನೆ ಹಾಗೂ ಜೀವನ ಕ್ರಮವನ್ನು ಸುಧಾರಿಸಿಕೊಂಡಾಗ ಮಾತ್ರ ತೂಕದಲ್ಲಿ ಇಳಿಕೆ ಆಗುವುದು.
Vijaya Karnataka Web most common grains associated with weight loss are oats ragi and jowar atta
ಓಟ್ಸ್, ರಾಗಿ ಅಥವಾ ಜೋಳದ ಹಿಟ್ಟು ಇವುಗಳಲ್ಲಿ ಯಾವುದು ತೂಕ ಇಳಿಕೆಗೆ ಬೆಸ್ಟ್?


​ಓಟ್ಸ್ ಹಿಟ್ಟು

ಉತ್ತಮ ಆರೋಗ್ಯ ಹಾಗೂ ಸಮತೋಲಿತ ತೂಕವನ್ನು ಹೊಂದಲು ಓಟ್ಸ್ ಮತ್ತು ಓಟ್ಸ್‍ನ ಹಿಟ್ಟು ಅತ್ಯುತ್ತಮವಾದ ಆಯ್ಕೆ ಆಗುವುದು. ಓಟ್ಸ್‍ನ ಹಿಟ್ಟಿನಲ್ಲಿ ಕಾರ್ಬೋ ಹೈಡ್ರೇಟ್‍ಗಳು ಸಮೃದ್ಧವಾಗಿರುತ್ತದೆ. ಇದನ್ನು ಕೈಗೆಟಕುವ ದರದಲ್ಲಿಯೇ ಖರೀದಿಸಬಹುದು. ಓಟ್ಸ್ ಹಿಟ್ಟು ಅಧಿಕ ಪೋಷಕಾಂಶಗಳೊಂದಿಗೆ ಹೊಟ್ಟೆಯನ್ನು ತೃಪ್ತಗೊಳಿಸುವುದು. ಇದರೊಟ್ಟಿಗೆ ಹೃದಯ, ರಕ್ತ ಹಾಗೂ ಜೀರ್ಣ ಕ್ರಿಯೆಗೆ ಸಂಬಂಧಿಸಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಸುಧಾರಿಸಲು ಸಹಾಯ ಮಾಡುವುದು. ಯಾರು ತೂಕವನ್ನು ಇಳಿಸಲು ಯೋಜನೆಯನ್ನು ಹೊಂದಿರುತ್ತಾರೆ ಅಂತಹವರು ಓಟ್ಸ್ ಹಾಗೂ ಓಟ್ಸ್‍ನ ಹಿಟ್ಟನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ದೀರ್ಘ ಸಮಯಗಳ ಕಾಲ ಹಸಿವನ್ನು ತಡೆಹಿಡಿದು ದೇಹಕ್ಕೆ ಅಗತ್ಯವಾದ ಶಕ್ತಿ ಹಾಗೂ ಪೋಷಣೆಯನ್ನು ನೀಡುವುದು.

ಪೌಷ್ಟಿಕಾಂಶದ ಮೌಲ್ಯ:

  • 100 ಗ್ರಾಂ ಓಟ್ ಮೀಲ್ ಹಿಟ್ಟಿನಲ್ಲಿ ಸುಮಾರು 400 ಗ್ರಾಂ. ಕ್ಯಾಲೋರಿ, 13.3 ಗ್ರಾಂ. ಪ್ರೋಟೀನ್ ಇರುತ್ತದೆ.
  • 100 ಗ್ರಾಂ ಓಟ್ಸ್ ಅಲ್ಲಿ 389 ರಷ್ಟು ಕ್ಯಾಲೋರಿ, ಶೇ.8 ರಷ್ಟು ನೀರು ಮತ್ತು 16.9 ಗ್ರಾಂ ನಷ್ಟು ಪ್ರೋಟೀನ್ ಇರುತ್ತದೆ.

​ರಾಗಿ ಹಿಟ್ಟು

ನಿತ್ಯದ ಆಹಾರಕ್ಕೆ ಬಳಸಲಾಗುವ ಒಂದು ಧಾನ್ಯ ರಾಗಿ. ಈ ಧಾನ್ಯದಲ್ಲಿ ಟ್ರಿಫ್ಟೊಫಾನ್ ಎಂಬ ಅಮೈನೋ ಆಮ್ಲ ಇರುತ್ತದೆ. ಹಾಗಾಗಿ ಇದನ್ನು ಸೇವಿಸಿದಾಗ ಹಸಿವು ನಿಗ್ರಹಗೊಳ್ಳುವುದು. ಜೊತೆಗೆ ಹೊಟ್ಟೆ ತುಂಬಿದ ಅನುಭವ ಪಡೆದುಕೊಳ್ಳುವರು. ಇದು ಅಂಟು ರಹಿತ ಧಾನ್ಯವಾಗಿದ್ದು, ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ರಾಗಿ ಹಿಟ್ಟಿನಿಮದ ತಯಾರಿಸಲಾದ ಆಹಾರವನ್ನು ಸೇವಿಸಿದರೆ ಉತ್ತಮ ನಿದ್ರೆ ಬರುವುದು. ಇದರಲ್ಲಿ ಇರುವ ಪೋಷಕಾಂಶವು ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್‍ಗಳನ್ನು ಕಡಿಮೆ ಮಾಡುವುದು. ದೀರ್ಘ ಸಮಯಗಳ ಕಾಲ ಹಸಿವನ್ನು ತಡೆ ಹಿಡಿಯುವುದರಿಂದ ತೂಕ ಇಳಿಸಲು ಒಂದು ಉತ್ತಮ ಆಯ್ಕೆಯಾದ ಆಹಾರ ಪದಾರ್ಥ ಆಗುವುದು. ರಾಗಿಯಲ್ಲಿ ಕಬ್ಬಿಣಾಂಶವು ಸಮೃದ್ಧವಾಗಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ರಾಗಿಯಿಂದ ತಯಾರಿಸಲಾದ ಆಹಾರವನ್ನು ಸೇವಿಸಬಹುದು.

ಪೌಷ್ಟಿಕಾಂಶದ ಮೌಲ್ಯ:

119 ಗ್ರಾಂ ರಾಗಿ ಹಿಟ್ಟಿನಲ್ಲಿ ಒಂದು ಅಂದಾಜಿನ ಪ್ರಕಾರ 455 ಕ್ಯಾಲೋರಿಗಳು ಮತ್ತು 130 ಗ್ರಾಂ. ಪ್ರೋಟೀನ್ ಅನ್ನು ಹೊಂದಿರುತ್ತದೆ.

ತೂಕ ಇಳಿಕೆಯಲ್ಲಿ ಕರಿಬೇವಿನ ಎಲೆಯ ಪಾತ್ರವೇನು?

​ಜೋಳದ ಹಿಟ್ಟು

ಉತ್ತಮ ಆರೋಗ್ಯವನ್ನು ಕಲ್ಪಿಸುವ ಆಹಾರ ಧಾನ್ಯಗಳಲ್ಲಿ ಜೋಳವು ಸಹ ಒಂದು. ಇದರ ಇಟ್ಟು ಸ್ವಲ್ಪ ಕಹಿಯಾದ ನಾರಿನಂಶವನ್ನು ಹೊಂದಿರುತ್ತದೆಯಾದರೂ ರುಚಿಯಲ್ಲಿ ಅಹಿತವನ್ನುಂಟುಮಾಡುವುದಿಲ್ಲ. ಜೋಳದ ಹಿಟ್ಟಿನಲ್ಲಿ ನಾರಿನಂಶ, ಪ್ರೋಟೀನ್, ಖನಿಜ ಮತ್ತು ಜೀವಸತ್ವಗಳನ್ನು ತುಂಬಿರುತ್ತದೆ. ಅಂಟು ರಹಿತವಾದ ಈ ಧಾನ್ಯವನ್ನು ಮಧುಮೇಹ ರೋಗಿಗಳು ದಾರಾಳವಾಗಿ ಬಳಸಬಹುದು. ದೇಹದ ಆರೋಗ್ಯಕ್ಕೆ ಉತ್ತಮ ಪೋಷಣೆ ನೀಡುವುದರ ಜೊತೆಗೆ ಅನಗತ್ಯವಾದ ಕೊಬ್ಬು ಕರಗಿಸಲು ಸಹಾಐ ಮಾಡುವುದು. ದೀರ್ಘ ಕಾಲ ಹಸಿವನ್ನು ತಡೆಯುವುದರ ಮೂಲಕ ಪದೇ ಪದೇ ತಿನ್ನುವ ಹಂಬಲವನ್ನು ಕಡಿಮೆ ಮಾಡುವುದು.

ಪೌಷ್ಟಿಕಾಂಶದ ಮೌಲ್ಯ:

100 ಗ್ರಾಂ ಜೋಳದ ಹಿಟ್ಟಿನಲ್ಲಿ 348 ರಷ್ಟು ಕ್ಯಾಲೋರಿ, 10.68 ಗ್ರಾಂ. ಪ್ರೋಟೀನ್, 12 ಗ್ರಾಂ ಗಿಂತ ಅಧಿಕ ನಾರಿನಂಶವನ್ನು ಒಳಗೊಂಡಿರುತ್ತದೆ.

ತೂಕ ಕಡಿಮೆ ಮಾಡಿಕೊಳ್ಳಲು ಎಷ್ಟು ಕ್ಯಾಲೊರಿ ಕಡಿಮೆ ಮಾಡಬೇಕು

​ನಿಮ್ಮ ಆಸಕ್ತಿಗೆ ಆಯ್ಕೆ

ಮೂರು ಆಹಾರ ಪದಾರ್ಥಗಳು ಅತ್ಯುತ್ತಮವಾದ ಪೋಷಕಾಂಶ ಹಾಗೂ ನಾರಿನಂಶವನ್ನು ಒಳಗೊಂಡಿರುತ್ತದೆ. ದೇಹಕ್ಕೆ ಅನಗತ್ಯವಾದ ಕೊಬ್ಬನ್ನು ನೀಡದೆ ಆರೋಗ್ಯವನ್ನು ಸಮತೋಲನವನ್ನು ನೀಡುವುದು. ಹಾಗಾಗಿ ಅವುಗಳ ರುಚಿ ಯಾವುದು ನಮಗೆ ಇಷ್ಟವಾಗುವುದು ಅಥವಾ ಹೆಚ್ಚು ಆಸೆಯನ್ನು ನೀಡುವುದು. ಅವುಗಳ ಆಯ್ಕೆ ಮಾಡಿಕೊಳ್ಳಬಹುದು. ಮೂರು ಆಹಾರ ಧಾನ್ಯಗಳು ತೂಕ ಇಳಿಕೆಗೆ ಉತ್ತಮ ಆಯ್ಕೆ ಆಗುವುದು.

To Read in English Click: Oats, Ragi or Jowar atta which helps the most in weight loss?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ