ಆ್ಯಪ್ನಗರ

ವ್ಯಾಯಾಮ ಮಾಡಲು ಯಾವುದು ಉತ್ತಮ ಸಮಯ: ಬೆಳಿಗ್ಗೆ ಅಥವಾ ಸಂಜೆ?

ಕೆಲವು ಸಂಶೋಧಕರ ಪ್ರಕಾರ, ಸಂಜೆಯ ಸಮಯ ವ್ಯಾಯಾಮ ಮಾಡುವುದು ಬೆಳಿಗ್ಗೆ ವ್ಯಾಯಾಮ ಮಾಡುವುದಕ್ಕಿಂತ ವೇಗವಾಗಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ.

Vijaya Karnataka Web 24 Sep 2020, 12:16 pm
ತೂಕ ಕಡಿಮೆ ಮಾಡಿಕೊಳ್ಳುವುದು ಸಾಹಸಮಯ ಕೆಲಸವಾಗಿದ್ದು, ಇದಕ್ಕಾಗಿ ಸ್ಥಿರತೆ ಮತ್ತು ದೃಢಮನಸ್ಸಿನ ಅಗತ್ಯವಿದೆ. ತೂಕ ಕಡಿಮೆ ಮಾಡಿಕೊಳ್ಳುವ ಗುರಿ ಸಾಧಿಸಲು ಪ್ರತಿದಿನ ವ್ಯಕ್ತಿ ಅಲ್ಪ ಪ್ರಗತಿ ಸಾಧಿಸಬೇಕು. ಆದರೆ ಕೆಲವೊಮ್ಮೆ ನಿಮ್ಮ ನಿಗದಿತ ನಿದ್ರೆ ಅಥವಾ ವ್ಯಾಯಾಮದ ಸಮಯದಂತಹ ಚಿಕ್ಕ ವಿಷಯಗಳೂ ದೊಡ್ಡ ವ್ಯತ್ಯಸ ಉಂಟುಮಾಡುತ್ತದೆಂದು ಗಮನಿಸಬೇಕು.
Vijaya Karnataka Web whats a better time to exercise morning or evening
ವ್ಯಾಯಾಮ ಮಾಡಲು ಯಾವುದು ಉತ್ತಮ ಸಮಯ: ಬೆಳಿಗ್ಗೆ ಅಥವಾ ಸಂಜೆ?


​ಇಲ್ಲಿದೆ ಸರಿಯಾದ ಉತ್ತರ!

ತೂಕ ಕಡಿಮೆ ಮಾಡಿಕೊಳ್ಳುವ ವ್ಯಾಯಾಮದ ವಿಷಯಕ್ಕೆ ಸಂಬಂಧಿಸಿದಂತೆ, ನಿಮ್ಮ ಪ್ರಯತ್ನ ಮತ್ತು ನಿಗದಿತ ಬದ್ಧತೆ ಇತರ ಎಲ್ಲಾ ವಿಷಯಗಳಿಗಿಂತ ಮುಖ್ಯವೆಂದು ನಂಬಲಾಗುತ್ತದೆ. ಜೊತೆಗೆ ಸಮಯವೂ ತೂಕ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಇದು ಸಂಪೂರ್ಣ ಸತ್ಯವಲ್ಲ.

​ಸಂಜೆಯ ವರ್ಕೌಟ್ ಬೆಂಬಲಿಸುವ ಅಂಶಗಳು

ಶರೀರದ ಜೈವಿಕ ಗಡಿಯಾರ ಮತ್ತು ದೈಹಿಕ ಚಟುವಟಿಕೆಯ ನಡುವಿನ ಮಾನದಂಡ ಅಳೆಯಲು ನಡೆಸಲಾದ ಎರಡು ಅಧ್ಯಯನಗಳ ಪ್ರಕಾರ, ಸಂಜೆಯಲ್ಲಿ ವ್ಯಾಯಾಮ ಮಾಡುವುದು ಬೆಳಿಗ್ಗೆಗೆ ಹೋಲಿಸಿದರೆ ಹೆಚ್ಚು ಉತ್ಪಾದಕವಾಗಿರುತ್ತದೆ. ಎರಡೂ ಅಧ್ಯಯನಗಳನ್ನು ಇಲಿಗಳ ಮೇಲೆ ಮೊದಲು ನಡೆಸಲಾಯಿತು. ಇಲಿಗಳು ನಿಶಾಚರಿಯಾದ್ದರಿಂದ, ಇಲಿಗಳ ಸಮಯವನ್ನು ಮಾನವನ ಸಮಯಕ್ಕೆ ಹೋಲಿಸುವುದು ವಿಜ್ಞಾನಿಗಳಿಗೆ ಅತಿದೊಡ್ಡ ಸವಾಲಾಗಿತ್ತು, ನಂತರದಲ್ಲಿ ವಿಜ್ಞಾನಿಗಳು 12 ಮಾನವರ ಮೇಲೆ ಪ್ರಯೋಗ ನಡೆಸಿದಾಗ, ಇದಕ್ಕೆ ಸಮನಾದ ಫಲಿತಾಂಶಗಳು ಕಂಡುಬಂದಿತ್ತು.

ಪ್ರತಿದಿನ ಮೆಟ್ಟಿಲು ಹತ್ತಿ ಇಳಿಯುವುದರಿಂದ ಸಿಗಲಿದೆ ಈ 6 ಪ್ರಯೋಜನಗಳು!

​ಇದನ್ನು ಉತ್ತಮವೆಂದು ಪರಿಗಣಿಸಲು ಕಾರಣಗಳು

ಸಂಜೆಯ ಸಮಯ ಆಮ್ಲಜನಕದ ಬಳಕೆ ಕಡಿಮೆ ಇರುವುದರಿಂದ, ಇದು ನಿಮ್ಮ ಸಾಮರ್ಥ್ಯವನ್ನು ಸುಧಾರಿಸಿ, ನೀವು ಸ್ವಲ್ಪ ವೇಗವಾಗಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಅಧ್ಯಯನದಲ್ಲಿ, ಹೆಚ್ ಐ ಎಫ್-1ಅ ಎನ್ನುವ ಪ್ರೋಟೀನ್ ತೂಕ ನಷ್ಟದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ, ದಿನದ ಸಮಯವನ್ನು ಆಧರಿಸಿ ವಿವಿಧ ರೀತಿಯಲ್ಲಿ ವ್ಯಾಯಾಮದ ಮೂಲಕ ಸಕ್ರಿಯವಾಗುತ್ತದೆ.

ವಾಸ್ತವದಲ್ಲಿ, ವ್ಯಾಯಾಮದ ಕುರಿತು ಅಮೇರಿಕನ್ ಕೌನ್ಸಿಲ್ ಪ್ರಕಾರ, ಸ್ನಾಯುವಿನ ದೃಢತೆ ಮತ್ತು ಶಕ್ರಿ ಸಂಜೆಯ ಸಮಯದಲ್ಲಿ ಉತ್ತಮ ಸಾಮರ್ಥ್ಯದ ಮಟ್ಟ ಹೊಂದಿರುತ್ತದೆ. ಹೆಚ್ಚಾಗಿ, ಆಯಾಸದ ಪ್ರಮಾಣ ಕಡಿಮೆಯಿದ್ದು, ದೃಢತೆ ಗರಿಷ್ಟವಾಗಿರುತ್ತದೆ ಮತ್ತು ವಿಶ್ರಾಂತಿಯ ಹೃದಯ ಬಡಿತ ಮತ್ತು ರಕ್ತದೊತ್ತಡ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.

​ನೀವು ಯಾವಾಗ ವ್ಯಾಯಾಮ ಮಾಡಬೇಕು

ತೂಕ ಕಡಿಮೆ ಮಾಡಿಕೊಳ್ಳಲು ಬೆಳಿಗ್ಗೆಗಿಂತ ಸಂಜೆ ಹೆಚ್ಚು ಸೂಕ್ತವೆನ್ನಲು ಅನೇಕ ಸಾಕ್ಷಿಗಳಿದ್ದರೂ, ಸಾಕ್ಷಿಯ ಲಭ್ಯತೆ ಸೀಮಿತ ಪ್ರಮಾಣದಲ್ಲಿದೆ. ಈ ಅಂಶವನ್ನು ದೃಢಪಡಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಅಲ್ಲಿಯವರೆಗೆ ನೀವು ಬೆಳಿಗ್ಗೆ ಅಥವಾ ಸಂಜೆ ಯಾವುದೇ ಸಮಯದಲ್ಲಿ ವ್ಯಾಯಾಮ ಮಾಡಿದರೂ, ಸ್ಥಿರವಾಗಿದ್ದು, ನಿಮ್ಮ ವರ್ಕೌಟ್ ವಿಧಾನದಲ್ಲಿ ವೈವಿಧ್ಯತೆ ಸೇರಿಸಿ. ನೀವು ಸಂಜೆ ವ್ಯಾಯಾಮ ಮಾಡುವುದಾದರೆ ಗಮನಿಸಬೇಕಾದ ಕೆಲವು ಪ್ರಮುಖ ಅಂಶಗಳನ್ನುಇಲ್ಲಿ ನೀಡಲಾಗಿದೆ.

ಟ್ರೈಸ್ಪ್ ಡಿಪ್ಸ್ ಹಾಗೂ ಚೆಸ್ಟ್‌ ಡಿಪ್ಸ್ ಎರಡಕ್ಕೂ ಇರುವ ವ್ಯತ್ಯಾಸ ಏನು?

​ಸಂಜೆ ವ್ಯಾಯಾಮ ಮಾಡುವವರು ಇದನ್ನು ಗಮನದಲ್ಲಿಡಿ

*ಮಲಗಲು 4-5 ಗಂಟೆಗಳ ಮೊದಲು ವ್ಯಾಯಾಮ ಮಾಡಬೇಕು, ಇಲ್ಲದಿದ್ದಲ್ಲಿ, ರಾತ್ರಿ ನಿದ್ರಿಸಲು ಕಷ್ಟವಾಗುತ್ತದೆ.

*ವ್ಯಾಯಾಮ ಮಾಡುವ ಮೊದಲು ನೀವು ಸೂಕ್ತ ಆಹಾರ ಸೇವಿಸಬೇಕು, ನಿಮ್ಮ ಶರೀರ ಶ್ರಮದಾಯಕ ವ್ಯಾಯಾಮ ಮಾಡಲು ಸಾಕಷ್ಟು ಶಕ್ತಿ ಅಗತ್ಯವಿದೆ.

*ದೃಢತೆಯ ವ್ಯಾಯಾಮ, ಶರೀರ ತೂಕದ ವ್ಯಾಯಾಮ ಮತ್ತು ಹೃದಯದ ವ್ಯಾಯಾಮದಂತಹ ವಿವಿಧ ರೀತಿಯ ವರ್ಕೌಟ್ ಗಳು ಉತ್ತಮ ಫಲಿತಾಂಶ ನೀಡುತ್ತವೆ.

*ಕೇವಲ ವ್ಯಾಯಾಮ ಮಾತ್ರ ನಿಮ್ಮ ಗುರಿ ಸಾಧಿಸಲು ಸಾಕಾಗುವುದಿಲ್ಲ ಎನ್ನುವುದನ್ನು ನೆನಪಿಡಿ. ಆರೋಗ್ಯಕರ ಮತ್ತು ಪೌಷ್ಟಿಕಾಂಶಯುಕ್ತ ಆಹಾರವೂ ಅಷ್ಟೇ ಮುಖ್ಯವಾಗಿದೆ.

To read this in englis click: Morning vs. Evening: What’s a better time to exercise to lose weight?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ