ಆ್ಯಪ್ನಗರ

ನೀವು ಧೂಮಪಾನ ಮಾಡುತ್ತೀರಾ? ಇನ್ನೊಂದು ಪಫ್ ಎಳೆಯುವ ಮುನ್ನ ಇತ್ತ ಗಮನಿಸಿ

ನೀವು ಧೂಮಪಾನಕ್ಕೆ ವಶವಾಗಿದ್ದೀರಾ? ಹಾಗಾದರೆ ಇನ್ನೊಂದು ಪಫ್ ಎಳೆಯುವ ಮುನ್ನ ದಯವಿಟ್ಟು ಇದನ್ನೊಮ್ಮೆ ಓದಿ.

Indiatimes 20 Aug 2020, 9:01 pm
ಧೂಮಪಾನ ಎನ್ನುವುದು ಜೀವಘಾತಕ ಚಟ. ಇತ್ತೀಚಿನ ವರ್ಷಗಳಲ್ಲಿ ಯುವಜನತೆ ಹೆಚ್ಚು ಹೆಚ್ಚಾಗಿ ಈ ಚಟಕ್ಕೆ ದಾಸರಾಗುತ್ತಿದ್ದು, ಇದು ಅವರ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ ಎಂಬುದು ದುಃಖಕರ ಸಂಗತಿ. ಧೂಮಪಾನ ಆರೋಗ್ಯಕ್ಕೆ ಎಷ್ಟೊಂದು ಹಾನಿಕರ ಎಂಬುದು ಗೊತ್ತಿದ್ದರೂ ಈ ದುರಭ್ಯಾಸದಿಂದ ಹೊರಬರಲು ಪ್ರಯತ್ನಿಸುತ್ತಿಲ್ಲ ಯುವ ಜನಾಂಗ. ಕೆಲವರಂತೂ ಊಟ, ತಿಂಡಿಯಾದರೂ ಬಿಟ್ಟಿಯಾರು, ಆದರೆ ಅವರಿಂದ ಸ್ಮೋಕಿಂಗ್ ಮಾತ್ರ ಮಾಡದಿರಲಾಗುವುದಿಲ್ಲ.
Vijaya Karnataka Web life_1542624012_725x725


ನೀವು ಧೂಮಪಾನಕ್ಕೆ ವಶವಾಗಿದ್ದೀರಾ? ಹಾಗಾದರೆ ಇನ್ನೊಂದು ಪಫ್ ಎಳೆಯುವ ಮುನ್ನ ದಯವಿಟ್ಟು ಇದನ್ನೊಮ್ಮೆ ಓದಿ.

1. ಧೂಮಪಾನವು ನಿಮ್ಮ ವಾಸನೆ ಗ್ರಹಣ ಶಕ್ತಿ ಮತ್ತು ಹಸಿವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಧೂಮಪಾನದ ನಂತರ ನಿಮಗೆ ಹಸಿವೆಯಾಗುವುದಿಲ್ಲ.

2. ಧೂಮಪಾನ ಅಕಾಲಿಕ ವೃದ್ಧಾಪ್ಯಕ್ಕೆ ಕಾರಣವಾಗುತ್ತದೆ. ಬೀಡಿ/ ಸಿಗರೇಟ್‌ಗೆ ದಾಸರಾಗಿರುವುದರಿಂದಲೇ ನೀವು ನಿಮ್ಮ ಮುಖದ ಮೇಲೆ ತೇಪೆಗಳೆದ್ದಿರಬಹುದು (ಪ್ಯಾಚಸ್).


3. ದಿನಗಳೆದಂತೆ ನಿಮ್ಮ ಬಾಯಿಂದ ಅಹಿತಕರ ವಾಸನೆ ಬರುತ್ತದೆ, ಅಥವಾ ನಿಮ್ಮ ಉಸಿರಿನ ವಾಸನೆ ಇತರರಿಗೆ ಅಹಿತಕರವಾಗಿರುತ್ತದೆ. ಸ್ನೇಹಿತರು ನಿಮ್ಮ ಬೆನ್ನ ಹಿಂದೆ ಇದನ್ನು ಮಾತನಾಡಿಕೊಳ್ಳಬಹುದು.

4.ಅಕಾಲಿಕ ವೃದ್ಧಾಪ್ಯದ ಜತೆಗೆ, ಕುರುಡುತನಕ್ಕೆ ( ವಿಶೇಷವಾಗಿ 65ರ ವಯಸ್ಸಿನ ನಂತರ) ಸಹ ಕಾರಣವಾಗುತ್ತದೆ.


5. ಸ್ತ್ರೀ ಧೂಮಪಾನಿಗಳು ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚು.

6. ನಿಮ್ಮ ವಯಸ್ಸಿನ ಇತರರಿಗೆ ಹೋಲಿಸಿದರೆ ನಿಮಗೆ ಬಹು ಬೇಗ ನೆಗಡಿ ಮತ್ತು ಕೆಮ್ಮು ಅಂಟಿಕೊಳ್ಳುತ್ತದೆ.


7. ದಿನನಿತ್ಯ ಧೂಮಪಾನ ವ್ಯಕ್ತಿಗೆ ನಾನ್ ಸ್ಮೋಕರ್‌ಗಿಂತ ಅಂದಾಜು 10 ವರ್ಷ ಆಯುಷ್ಯ ಕಡಿಮೆ.


8. ಸ್ಮೋಕಿಂಗ್‌ನಿಂದ ಆರ್ಥಿಕವಾಗಿ ಬಹಳ ನಷ್ಟವಾಗುತ್ತದೆ. ಜಸ್ಟ್ ಯೋಚಿಸಿ, ನೀವು ಸಿಗರೇಟ್‌ಗಾಗಿ ಪ್ರತಿದಿನ ಎಷ್ಟು ಹಣ ಚೆಲ್ಲುತ್ತಿರೆಂದು.

9.ಇದು ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಹೆಚ್ಚಿಸಬಹುದು. ಇದರಿಂದ ನಿಮಗೆ ಹೃದಯಾಘಾತವಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ.


10. ಸಿಗರೇಟ್ ಸೇವನೆಯಿಂದ ವರ್ಷಕ್ಕೆ ಸುಮಾರು 480,000 ಸಾವು ದಾಖಲಾಗುತ್ತದೆ. ಅಂದರೆ ದಿನಕ್ಕೆ 1300 ಕ್ಕಿಂತ ಹೆಚ್ಚು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ