ಆ್ಯಪ್ನಗರ

ಜಂಕ್ ಫುಡ್ ಬಿಡಿ ಆರೋಗ್ಯ ಕಾಪಾಡಿಕೊಳ್ಳಿ

ನಗರಗಳಲ್ಲಿನ ರಸ್ತೆ ಬೀದಿಗಳಲ್ಲಿ ಎಲ್ಲಿ ನೋಡಿದರಲ್ಲಿ ಜಂಕ್ ಫುಡ್‌ ಅಥವಾ ಕುರುಕುಲು ತಿಂಡಿಗಳದ್ದೇ ಕಾರುಬಾರು. ಹಿರಿ ಕಿರಿಯರೆನ್ನದೆ ಎಲ್ಲರೂ ಇದರ ದಾಸರೇ. ನಮ್ಮ ಎಲುಬಿಲ್ಲದ ನಾಲಿಗೆಗೆ ಆರೋಗ್ಯ ಕಾಪಾಡುವ ಆಹಾರಕ್ಕಿಂತ ನಾಲಿಗೆ ರುಚಿಯ ಆಹಾರಗಳೇ ಹೆಚ್ಚು ಇಷ್ಟ ಬಿಡಿ. ಆದರೆ ಹೈಜೆನಿಕ್ ಕೂಡ ಇರದ, ಜೀರ್ಣಿಸಿಕೊಳ್ಳಲು ಕಷ್ಟವಾದ ಈ ಆಹಾರದಿಂದ ನಾಲಿಗೆಗೆನೋ ಖುಷಿ ಕೊಡಬಹುದು. ಆದರೆ ದೇಹಕ್ಕಿದು ಬಹಳ ಮಾರಕ.

Vijaya Karnataka 1 Mar 2019, 3:39 pm
ನಿಮ್ಮ ಆರೋಗ್ಯವನ್ನು ಕಾಪಾಡಲು ಆರೋಗ್ಯಕರ ಆಹಾರ ಕ್ರಮ ಅತ್ಯವಶ್ಯ. ತೂಕ ಇಳಿಸಿಕೊಳ್ಳುವ ಪ್ರಶ್ನೆಯೇ ಇರಲಿ, ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳುವ ಪ್ರಶ್ನೆಯೇ ಇರಲಿ ಆಹಾರದ ಪ್ರಾಮುಖ್ಯತೆ ಮಹತ್ವದ್ದು. ನಾವು ತಿನ್ನುವ ಆಹಾರ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಆಧುನಿಕ ಕಾಲದಲ್ಲಿ ಹೊಸ ಹೊಸ ಕಾಯಿಲೆಗಳು ಹುಟ್ಟುಕೊಳ್ಳುತ್ತಿದ್ದು ಇವೆಲ್ಲವೂ ನಮ್ಮ ಆಹಾರ ವಿಷಪೂರಿತವಾಗಿರುವುದರಿಂದ , ಜತೆಗೆ ದೇಹಕ್ಕೆ ಒಗ್ಗದ ಆಹಾರ ಸೇವಿಸುವುದರಿಂದಲೇ ಆಗಿದೆ. ಅದರಲ್ಲೊಂದು ಜಂಕ್ ಫುಡ್.
Vijaya Karnataka Web junk_food


ನಗರಗಳಲ್ಲಿನ ರಸ್ತೆ ಬೀದಿಗಳಲ್ಲಿ ಎಲ್ಲಿ ನೋಡಿದರಲ್ಲಿ ಜಂಕ್ ಫುಡ್‌ ಅಥವಾ ಕುರುಕುಲು ತಿಂಡಿಗಳದ್ದೇ ಕಾರುಬಾರು. ಹಿರಿ ಕಿರಿಯರೆನ್ನದೆ ಎಲ್ಲರೂ ಇದರ ದಾಸರೇ. ನಮ್ಮ ಎಲುಬಿಲ್ಲದ ನಾಲಿಗೆಗೆ ಆರೋಗ್ಯ ಕಾಪಾಡುವ ಆಹಾರಕ್ಕಿಂತ ನಾಲಿಗೆ ರುಚಿಯ ಆಹಾರಗಳೇ ಹೆಚ್ಚು ಇಷ್ಟ ಬಿಡಿ. ಆದರೆ ಹೈಜೆನಿಕ್ ಕೂಡ ಇರದ, ಜೀರ್ಣಿಸಿಕೊಳ್ಳಲು ಕಷ್ಟವಾದ ಈ ಆಹಾರದಿಂದ ನಾಲಿಗೆಗೆನೋ ಖುಷಿ ಕೊಡಬಹುದು. ಆದರೆ ದೇಹಕ್ಕಿದು ಬಹಳ ಮಾರಕ.

ಹೌದು ಜಂಕ್ ಫುಡ್ ಸೇವನೆಯಲ್ಲಿ ನಿಯಂತ್ರಣ ಮಾಡುವುದು ನಿಮ್ಮ ಆರೋಗ್ಯಕ್ಕೆ ನೀವು ಮಾಡಬಹುದಾದ ಬಹುದೊಡ್ಡ ಸಹಾಯ. ಯಾವಾಗಲಾದರು ಇದನ್ನು ತಿನ್ನುವುದು ಅಪಾಯವನ್ನು ತಂದಿಡಲಾರದು. ಆದರೆ ಅದು ನಿಮ್ಮ ದಿನನಿತ್ಯದ ಆಹಾರದ ಭಾಗವಾದರೆ ಕೆಟ್ಟ ಪರಿಣಾಮ ಶತಸಿದ್ಧ.

ನಿಮ್ಮ ದೇಹದ ಮೇಲೆ ಜಂಕ್ ಫುಡ್‌ ಪರಿಣಾಮ

ಟೈಪ್ 2 ಡಯಾಬಿಟೀಸ್: ನಿಯಮಿತವಾಗಿ ಜಂಕ್ ಆಹಾರವನ್ನು ಸೇವಿಸುವುದರಿಂದ ಟೈಪ್ 2 ಡಯಾಬಿಟಿಸ್ ಸೇರಿದಂತೆ ಹಲವಾರು ದೀರ್ಘಕಾಲಿಕ ರೋಗಗಳು ಒಕ್ಕರಿಸಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ ಎಂದು ಸಂಶೋಧನೆ ತೋರಿಸಿದೆ. ಈ ರೀತಿಯ ಆಹಾರವು ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ, ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಹೆಚ್ಚಿನ ಜಂಕ್ ಆಹಾರಗಳು ಕಾರ್ಬೊಹೈಡ್ರೇಟ್‌ಗಳಿಂದ ತುಂಬಿರುತ್ತವೆ ಮತ್ತು ಇದರಲ್ಲಿ ಫೈಬರ್ ಅಂಶ ಕಡಿಮೆ ಇರುತ್ತದೆ. ಇದು ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಲು ಕಾರಣವಾಗಬಹುದು. ಟೈಪ್ 2 ಡಯಾಬಿಟೀಸ್ ಸಾಧ್ಯತೆ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

ಹೃದ್ರೋಗ:
ಜಂಕ್ ಆಹಾರ ಪದಾರ್ಥಗಳು ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಟ್ರಾನ್ಸ್ ಕೊಬ್ಬುಗಳಿಂದ ತುಂಬಿರುತ್ತವೆ. ಇದು ನಿಮ್ಮ HDL (ಇತ್ತಮ ಕೊಲೆಸ್ಟ್ರಾಲ್) ತಗ್ಗಿಸಿ LDL (ಕೆಟ್ಟ ಕೊಲೆಸ್ಟರಾಲ್) ಅನ್ನು ಹೆಚ್ಚಿಸಬಹುದು. ಪರಿಣಾಮ ಟೈಪ್ 2 ಮಧುಮೇಹ ಮತ್ತು ಹೃದಯ ಕಾಯಿಲೆಯ ಅಪಾಯ ಹೆಚ್ಚುತ್ತದೆ.

ತೂಕದಲ್ಲಿ ಏರಿಕೆ: ಜಂಕ್ ಫುಡ್ ಸೇವನೆ ತೂಕ ಹೆಚ್ಚಿಸುತ್ತದೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ. ಹೆಚ್ಚು ಕ್ಯಾಲೋರಿ , ಕಡಿಮೆ ಪೌಷ್ಟಿಕಾಂಶ ಹೊಂದಿರುವ ಹೊಂದಿರುತ್ತದೆ. ಇದರಲ್ಲಿರುವ ಹೆಚ್ಚುವರಿ ಸಕ್ಕರೆ ಮತ್ತು ಕೊಬ್ಬು ದೇಹದಲ್ಲಿ ವಿಶೇಷವಾಗಿ ಅದರ ಸೊಂಟದ ಸುತ್ತಲೂ ಸಂಗ್ರಹವಾಗಿ ತೂಕ ಹೆಚ್ಚಾಗುತ್ತದೆ.

ಲಿವರ್‌ಗೆ ಹಾನಿ:
ಸದಾ ಜಂಕ್ ಫುಡ್ ಸೇವಿಸುವುದು ನಿಮ್ಮ ಯಕೃತ್ತು ಮತ್ತು ಇತರ ಆಂತರಿಕ ಭಾಗಗಳಿಗೆ ಹೆಚ್ಚು ವಿಷಕಾರಿಯಾಗಿದೆ. ನೀವು ಓವರ್ ವೇಟ್ ಇಲ್ಲದಿದ್ದರೂ ಮದ್ಯದಂತೆ ಜಂಕ್ ಫುಡ್ ಕೂಡ ಲಿವರ್‌ಗೆ ಹಾನಿಯನ್ನುಂಟು ಮಾಡಬಲ್ಲದು ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ.

ಉಸಿರಾಟದ ತೊಂದರೆಗಳು:
ಹೆಚ್ಚಿನ ಕ್ಯಾಲೊರಿಯುಕ್ತ ಆಹಾರ ಸೇವಿಸುವುದೆಂದರೆ ಬೊಜ್ಜು ಅಥವಾ ಅಧಿಕ ತೂಕ ಹೆಚ್ಚಾಗುವ ಅಪಾಯ ಹೆಚ್ಚುತ್ತಿದೆ ಎಂದರ್ಥ. ಅಸ್ತಮಾ ಸೇರಿದಂತೆ ಉಸಿರಾಟದ ತೊಂದರೆಗಳನ್ನು ಉಂಟುಮಾಡುವ ಸಾಧ್ಯತೆಗಳನ್ನು ಬೊಜ್ಜು ಹೆಚ್ಚಿಸುತ್ತದೆ ಎಂಬುದು ನಿಮಗೆ ಈಗಾಗಲೇ ತಿಳಿದಿರಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ