ಆ್ಯಪ್ನಗರ

ಸಕ್ಕರೆ ಕಾಯಿಲೆ ಇದ್ದವರು ಮರೆಯದೆ ಈ ಟಿಪ್ಸ್ ಅನುಸರಿಸಬೇಕು

ರಕ್ತದಲ್ಲಿನ ಅತಿಯಾದ ಸಕ್ಕರೆ ಅಂಶ, ಬೊಜ್ಜು, ದೇಹದ ತೂಕ ಎಲ್ಲವನ್ನು ನಿಯಂತ್ರಣ ಮಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್

Vijaya Karnataka Web 2 Nov 2021, 10:02 am
ನಾವು ಯಾವುದೇ ಕಾರಣಕ್ಕೂ ನಮ್ಮ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗಲು ಬಿಡಬಾರದು. ಏಕೆಂದರೆ ಇದರಿಂದ ಹಲವು ಆರೋಗ್ಯದ ತೊಂದರೆಗಳು ಕಂಡು ಬರಲು ಪ್ರಾರಂಭವಾಗುತ್ತದೆ. ಮಧುಮೇಹ ಹೆಚ್ಚಾಗಿರುವ ವ್ಯಕ್ತಿಗಳಿಗೆ ಹೃದಯದ ತೊಂದರೆ ಕೂಡ ಕಾಡುವ ಸಾಧ್ಯತೆ ಇರುತ್ತದೆ.
Vijaya Karnataka Web a sure tips for diabetic patients to have good health
ಸಕ್ಕರೆ ಕಾಯಿಲೆ ಇದ್ದವರು ಮರೆಯದೆ ಈ ಟಿಪ್ಸ್ ಅನುಸರಿಸಬೇಕು


ಹೀಗಾಗಿ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಅತ್ಯುತ್ತಮವಾಗಿ ನಿರ್ವಹಿಸಿಕೊಳ್ಳುವುದರ ಜೊತೆಗೆ ಆಗಾಗ ಮಧುಮೇಹ ಪರೀಕ್ಷೆಯನ್ನು ಮಾಡಿಸಿಕೊಂಡು ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು ಇದಕ್ಕೆ ಸಂಬಂಧಪಟ್ಟಂತೆ ಕೆಲವು ಟಿಪ್ಸ್ ಗಳನ್ನು ಇಲ್ಲಿ ತಿಳಿಸಿಕೊಡಲಾಗಿದೆ.

​ಬೆಳಗಿನ ಉಪಹಾರ ಆರೋಗ್ಯಕರವಾಗಿರಲಿ

  • ಬೆಳಗಿನ ಸಮಯದಲ್ಲಿ ಉಪಹಾರದ ರೂಪದಲ್ಲಿ ನೀವು ಸೇವನೆ ಮಾಡುವ ಆಹಾರ ಪದಾರ್ಥ ಸದಾ ಆರೋಗ್ಯದಿಂದ ಕೂಡಿರಬೇಕು. ಇದು ನಿಮ್ಮ ಇಡೀ ದಿನದ ಕಾರ್ಯಚಟುವಟಿಕೆಯ ಮೇಲೆ ಪ್ರಭಾವ ಬೀರುತ್ತದೆ.
  • ಇದರಿಂದ ನಿಮ್ಮ ದೇಹಕ್ಕೆ ಉತ್ತಮವಾದ ಫಲಿತಾಂಶಗಳು ಸಿಕ್ಕಿದಂತಾಗಿ, ಆರೋಗ್ಯಕರವಾದ ದೇಹ ನಿಮ್ಮದಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.

​ನಿಮ್ಮ ದೇಹಕ್ಕೆ ನೀರಿನ ಅಂಶ ಸೇರಿಸಿ

  • ಸಾಧ್ಯವಾದಷ್ಟು ನೀವು ಇಡೀ ದಿನದಲ್ಲಿ ಹೆಚ್ಚು ನೀರು ಕುಡಿಯಲು ಪ್ರಯತ್ನಿಸಿ. ಇದರಿಂದ ನಿಮಗೆ ಹಲವಾರು ಆರೋಗ್ಯದ ಅನುಕೂಲತೆಗಳು ಇರುತ್ತವೆ.
  • ನಿಮ್ಮ ದೇಹದ ಒಳಭಾಗದ ಅಂಗಾಂಗಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರಿನ ಪೂರೈಕೆ ಆಗಿ ಅವುಗಳ ಕಾರ್ಯನಿರ್ವಹಣೆಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ.
  • ನಿಮ್ಮ ಕರುಳಿನ ಭಾಗದ ಸ್ವಚ್ಛತೆಯಲ್ಲಿ ಕೂಡ ಇವುಗಳು ಅನುಕೂಲಕರವಾಗಿ ಕೆಲಸ ಮಾಡಿ ಆರೋಗ್ಯಕರವಾದ ಜೀರ್ಣಶಕ್ತಿ ಹಾಗೂ ಮೆಟಬಾಲಿಸಂ ಪ್ರಕ್ರಿಯೆ ನಿಮ್ಮದಾಗುವಂತೆ ಮಾಡುತ್ತದೆ. ಇದರಿಂದ ಆರೋಗ್ಯಕರವಾದ ದೇಹದ ತೂಕ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ ಅತ್ಯುತ್ತಮವಾಗಿ ನಿರ್ವಹಣೆಯಾಗುತ್ತದೆ.

​ನಿಯಮಿತವಾಗಿ ಪ್ರತಿ ದಿನ ವ್ಯಾಯಾಮ ಮಾಡಿ

  • ಬೆಳಗಿನ ಸಮಯದಲ್ಲಿ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ. ದೇಹದಲ್ಲಿ ಬೊಜ್ಜು ನಿಯಂತ್ರಣವಾಗಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುತ್ತದೆ.
  • ಇದು ಕ್ರಮೇಣವಾಗಿ ಇನ್ಸುಲಿನ್ ಪ್ರತಿರೋಧತೆಯನ್ನು ಕಡಿಮೆ ಮಾಡಿ ರಕ್ತದಲ್ಲಿ ಕಂಡುಬರುವ ಗ್ಲುಕೋಸ್ ಅಂಶ ಸರಿಯಾಗಿ ಸಂಸ್ಕರಣೆ ಆಗುವಂತೆ ಮಾಡುತ್ತದೆ.

​ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ

  • ಆಗಾಗ ನೀವು ಶುಗರ್ ಪರೀಕ್ಷೆ ಮಾಡಿಸಿಕೊಳ್ಳುವುದು ತುಂಬಾ ಒಳ್ಳೆಯದು. ಇದರಿಂದ ನಿಮ್ಮ ಸದ್ಯದ ರಕ್ತದಲ್ಲಿನ ಸಕ್ಕರೆ ಮಟ್ಟ ಯಾವ ಪ್ರಮಾಣದಲ್ಲಿ ಇದೆ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ.
  • ಈ ಮೂಲಕ ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಹಾಗೂ ಜೀವನಶೈಲಿಯಲ್ಲಿ ಬದಲಾವಣೆಯನ್ನು ತಂದುಕೊಳ್ಳಲು ಅನುಕೂಲವಾಗುತ್ತದೆ.
  • ಕ್ರಮೇಣವಾಗಿ ನಿಮ್ಮ ಮಧುಮೇಹ ನಿಯಂತ್ರಣ ಮಾಡಿಕೊಳ್ಳಲು ಇದು ದಾರಿ ಮಾಡಿಕೊಡುತ್ತದೆ. ಹಾಗಾಗಿ ನಿಮ್ಮ ಹತ್ತಿರದಲ್ಲಿರುವ ವೈದ್ಯರ ಬಳಿ ಆಗಾಗ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷೆ ಮಾಡಿ ಮಾಹಿತಿ ಪಡೆದುಕೊಳ್ಳಿ.

​ನಿಮ್ಮ ಪಾದಗಳನ್ನು ಆಗಾಗ ಪರೀಕ್ಷಿಸುತ್ತಿರಿ

  • ಒಂದು ವೇಳೆ ನೀವು ಮಧುಮೇಹ ರೋಗಿ ಆಗಿದ್ದಲ್ಲಿ, ನಿಮ್ಮ ಕಾಲುಗಳ ಹಾಗೂ ಪಾದಗಳ ಭಾಗದ ಮೇಲೆ ಹೆಚ್ಚು ಗಮನ ವಹಿಸಿ.
  • ಏಕೆಂದರೆ ಇಲ್ಲಿ ಚರ್ಮದ ಬಣ್ಣ ಬದಲಾಗುವುದು, ಚರ್ಮ ಸೀಳಿ ಬಿಟ್ಟಂತೆ ಆಗುವುದು ಎಲ್ಲವೂ ಕಂಡುಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ತುಂಬಾ ಒಳ್ಳೆಯದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ