ಆ್ಯಪ್ನಗರ

ಹಾಗಲಕಾಯಿ ಕಹಿಯಾಗಿದ್ದರು ನಿಮ್ಮ ಆರೋಗ್ಯಕ್ಕೆ ಸಿಹಿಯಾಗಿದೆ

ಹಾಗಲಕಾಯಿ ಹಲವಾರು ಔಷಧಿಗಳ ಗುಣಗಳನ್ನು ಹೊಂದಿದೆ. ಇದನ್ನು ಜ್ಯೂಸ್ ಅಥವಾ ಪಲ್ಯ ಮಾಡಿಕೊಂಡು ಸೇವಿಸಬಹುದು. ಇದು ಕಹಿಯಾಗಿದ್ದರು ಕೂಡ ನಿಮ್ಮ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ತರಕಾರಿಯಾಗಿದೆ. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.

Vijaya Karnataka Web 3 Nov 2021, 11:13 am
ಹಾಗಲಕಾಯಿ ಕಹಿ ಕಹಿಯಾಗಿರುವುದರಿಂದ ಬಹುತೇಕರಿಗೆ ಇದು ಇಷ್ಟವಾಗದ ತರಕಾರಿ. ಹಾಗಲಕಾಯಿ ಯಥೇಚ್ಚವಾದ ಔಷಧಿಗಳ ಗುಣಗಳ್ಳುಳ್ಳ ತರಕಾರಿಯಾಗಿದ್ದು, ಜೀರ್ಣಕ್ರಿಯೆಗೆ ಸಹಕಾರಿ, ಲಾಡಿಹುಳ ನಿರೋಧಕ, ಮಲೇರಿಯಾ ನಿರೋಧಕ, ಮಧುಮೇಹಕ್ಕೆ ಒಳ್ಳೆಯದು.
Vijaya Karnataka Web amazing health benefits of bitter gourd
ಹಾಗಲಕಾಯಿ ಕಹಿಯಾಗಿದ್ದರು ನಿಮ್ಮ ಆರೋಗ್ಯಕ್ಕೆ ಸಿಹಿಯಾಗಿದೆ


ಇಷ್ಟೇಲ್ಲಾ ಪ್ರಯೋಜನಗಳಿದ್ದರು, ವಾಸ್ತವವಾಗಿ ಹಾಗಲಕಾಯಿಯನ್ನು ಸೇವಿಸಲು ಬಹಳಷ್ಟು ಮಂದಿ ಹಿಂದೇಟು ಹಾಕುತ್ತಾರೆ. ಕಹಿ ಕಹಿಯಾಗಿರುವ ಹಾಗಲಕಾಯಿಯ ರಸವು ಕಬ್ಬಿಣ, ಮೆಗ್ನೀಷಿಯಂ ಮತ್ತು ವಿಟಮಿನ್ ಗಳಿಂದ ಸಮೃದ್ಧವಾಗಿದೆ. ಹಾಗಲಕಾಯಿ ಫೈಬರ್ ನ ಅತ್ಯುತ್ತಮವಾದ ಮೂಲವಾಗಿದೆ. ಇದು ಪಾಲಕ ಸೊಪ್ಪಿಗೆ ಹೋಲಿಸಿದರೆ ಅದರ ಎರಡು ಪಟ್ಟು ಕ್ಯಾಲ್ಸಿಯಂ ಹೊಂದಿದೆ.

ಇದು ಉತ್ಕರ್ಷಣ ನಿರೋಧಕ, ಫ್ಲೇವನಾಯ್ಡ್, ಇತರ ಪಾಲಿಫಿನಾಲ್ ಸಂಯುಕ್ತಗಳ ಸಮೃದ್ಧವಾದ ಮೂಲವಾಗಿದೆ. ಮುಖ್ಯವಾಗಿ ಹಾಗಲಕಾಯಿ ಜ್ಯೂಸ್ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

​೧. ರಕ್ತದಲ್ಲಿನ ಸಕ್ಕರೆಯ ಮಟ್ಟ

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣಗೊಳಿಸಲು ಹಾಗಲಕಾಯಿ ಜ್ಯೂಸ್ ಸಹಾಯ ಮಾಡುತ್ತದೆ. ಇತ್ತೀಚೆಗೆ ಮಧುಮೇಹಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ದೊಡ್ಡವರು ಚಿಕ್ಕವರು ಎಂಬ ಯಾವುದೇ ಭೇದ ಭಾವವಿಲ್ಲದೇ, ಮಧುಮೇಹಕ್ಕೆ ಬಹು ಬೇಗ ತುತ್ತಾಗುತ್ತಿದ್ದಾರೆ. ಮುಖ್ಯವಾಗಿ ಹಾಗಲಕಾಯಿಯು ಪಿ ಇನ್ಸುಲಿನ್ ಎಂಬ ಸಂಯುಕ್ತವನ್ನು ಹೊಂದಿದ್ದು, ಇದು ನೈಸರ್ಗಿಕವಾಗಿಯೇ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.

ಹಾಗಲಕಾಯಿಯನ್ನು ನಿಯಮಿತವಾಗಿ ಸೇವಿಸಿದಾಗ ಟೈಪ್ ೨ ಮಧುಮೇಹದಿಂದ ಬಳಲುತ್ತಿರುವ ರೋಗಿಗಳಲ್ಲಿನ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಿಕೊಳ್ಳಬಹುದು. ಇದು ಟೈಪ್ ೧ ಮಧುಮೇಹಿಗಳಿಗೂ ಕೂಡ ಪರಿಣಾಮಕಾರಿಯಾಗಿದೆ.

ಕೆಲವು ವರದಿಯ ಪ್ರಕಾರ, ಹಾಲಕಾಯಿಯು ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಗ್ಲೈಸೆಮಿಕ್ ನಿಯಂತ್ರಣವನ್ನು ಸುಧಾರಿಸುತ್ತದೆ ಎಂದು ತಿಳಿದು ಬಂದಿದೆ.

​೨. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ

ಬಹುತೇಕರ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಿರುತ್ತದೆ. ಅಂತಹವರು ಸುಲಭವಾಗಿ ದೊರೆಯುವ ಹಾಗಲಕಾಯಿಯ ಜ್ಯೂಸ್ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿಕೊಳ್ಳಬಹುದು. ಔಷಧಿಗಳ ಪರ್ಯಾಯವಾಗಿ ಆರೋಗ್ಯಕರವಾದ ಈ ಜ್ಯೂಸ್ ಉತ್ತಮವಲ್ಲವೇ?

  • ಹಾಗಲಕಾಯಿ ಜ್ಯೂಸ್ ಉರಿಯೂತ ನಿವಾರಕ
  • ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.
  • ಇದರಲ್ಲಿ ಪೊಟ್ಯಾಷಿಯಂ ಸಮೃದ್ಧವಾಗಿರುವುದರಿಂದ ದೇಹದಲ್ಲಿನ ರಕ್ತದೊತ್ತಡವನ್ನು ಸಹ ನಿರ್ವಹಿಸುತ್ತದೆ.

​೩. ಸೌಂದರ್ಯಕ್ಕೂ ಹಾಗಲಕಾಯಿ ಸೈ

ಹಾಗಲಕಾಯಿ ಜ್ಯೂಸ್ ವಿಟಮಿನ್ ಎ ಮತ್ತು ಸಿ ಸಂಯುಕ್ತವಿದ್ದು, ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.

ಇದು ಆಕಾಲಿಕವಾಗಿ ಕಂಡುಬರುವ ಚರ್ಮದ ವಯಸ್ಸನ್ನು ತಡೆಯುವುದಲ್ಲದೇ, ತ್ವಚೆಯ ಮೇಲಿನ ಸುಕ್ಕುಗಳನ್ನು ಕೂಡ ಕಡಿಮೆ ಮಾಡುತ್ತದೆ.

  • ಅನೇಕ ಚರ್ಮ ಸಮಸ್ಯೆಗಳಾದ, ಎಗ್ಜಿಮಾ ಮತ್ತು ಸೋರಿಯಾಸಿಸ್ ಗಳಿಗು ಸಹಾಯಕವಾಗಿದೆ.
  • ಮೊಡವೆ ಪೀಡಿತ ತ್ವಚೆಯನ್ನು ಆರೋಗ್ಯಕರವಾಗಿಸುತ್ತದೆ.
  • ಹಾನಿಕಾರಕವಾದ ಸೂರ್ಯನ ಯು.ವಿ ಕಿರಣಗಳಿಂದ ರಕ್ಷಿಸುತ್ತದೆ.
  • ವಿಟಮಿನ್ ಎ ಮತ್ತು ಸಿ ಇರುವುದರಿಂದ ತ್ವಚೆಗೆ ಒಳಗಿನಿಂದ ಹೊಳಪನ್ನು ನೀಡುತ್ತದೆ.
  • ಹಾಗಲಕಾಯಿಯ ರಸವನ್ನು ನಿಮ್ಮ ನೆತ್ತಿಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ಕಡಿಮೆ ಮಾಡಿ, ತಲೆಹೊಟ್ಟು ನಿವಾರಿಸುತ್ತದೆ.

​೪. ತೂಕ ಇಳಿಕೆಗೆ ಸಹಾಯ ಮಾಡುತ್ತದೆ

ಹಾಗಲಕಾಯಿಯಲ್ಲಿ ಕಡಿಮೆ ಕ್ಯಾಲೋರಿ, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳು ಇವೆ . ಹಾಗಾಗಿ ಇದರಿಂದ ನಿಮ್ಮ ದೇಹದ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಒಂದು ವರದಿಯ ಪ್ರಕಾರ, ಹಾಗಲಕಾಯಿಯ ಸಾರಗಳು ಮಾನವನ ಕೊಬ್ಬಿನ ಕೋಶಗಳನ್ನು ಸ್ಥಳಾಂತರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಹೊಸ ಕೊಬ್ಬಿನ ಕೋಶಗಳ ರಚನೆಗೆ ಹಾಗು ಬೆಳವಣಿಗೆಯನ್ನು ತಡೆಯುತ್ತದೆ. ಹಾಗಲಕಾಯಿಯು ಸ್ಥೂಲಕಾಯಕ್ಕೆ ಚಿಕಿತ್ಸೆ ನೀಡುವ ನೈಸರ್ಗಿಕವಾದ ಚಿಕಿತ್ಸೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ