ಇನ್ನು ಈ ತರಕಾರಿಯ ಒಂದೊಂದು ಆರೋಗ್ಯ ಪ್ರಯೋಜನಗಳನ್ನು ನೋಡುತ್ತಾ ಹೋದರೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ, ಜೊತೆಗೆ ತುಂಬಾನೇ ಖುಷಿನೂ ಆಗುತ್ತೆ! ಯಾಕೆಂದ್ರೆ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಆರೋಗ್ಯಕಾರಿ ಗುಣಲಕ್ಷಣಗಳು ಕೂಡ ಈ ತರಕಾರಿಯಲ್ಲಿ ಕಂಡು ಬರುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಬೀಟ್ರೂಟ್ ಪ್ರಯೋಜನಗಳ ಕುರಿತಾಗಿ ಪೌಷ್ಟಿಕಾಂಶ ತಜ್ಞೆ ಲವ್ನೀತ್ ಬಾತ್ರಾ ಅವರು ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ, ಈ ತರಕಾರಿಯ ಬಗ್ಗೆ ಕೆಲವೊಂದು ಮಾಹಿತಿ ಯನ್ನು ಹಂಚಿಕೊಂಡಿದ್ದಾರೆ ಮುಂದೆ ಓದಿ....
ಬೀಟ್ರೂಟ್ ತಿಂದರೆ ಸಿಗುವ ಲಾಭಗಳು ಒಂದೆರಡಲ್ಲ!
ಬಿಪಿ ಕಡಿಮೆಯಾಗುತ್ತದೆ
- ಹೈ ಬಿಪಿ ಇರುವ ಜನರು ಬೀಟ್ರೂಟ್ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ. ಇದರಲ್ಲಿ ನೈಸರ್ಗಿಕವಾಗಿ ನೈಟ್ರೇಟ್ ಇರುತ್ತದೆ ಅದು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುತ್ತದೆ.
- ಇದರಿಂದ ರಕ್ತ ನಾಳಗಳಲ್ಲಿ ಸರಾಗವಾಗಿ ರಕ್ತ ಸಂಚಾರ ಆಗುವುದು ಮಾತ್ರವಲ್ಲದೆ ಒಟ್ಟಾರೆ ರಕ್ತದ ಒತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ. ಹೀಗಾಗಿ ಇದರ ಸಂಪೂರ್ಣ ಲಾಭ ಪಡೆಯಬೇಕೆಂದ್ರೆ, ದಿನಾ ಒಂದು ಲೋಟ ಬೀಟ್ರೂಟ್ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ಉರಿಯೂತ ಕಡಿಮೆಯಾಗುತ್ತದೆ
ಬೀಟ್ರೂಟ್ ತನ್ನಲ್ಲಿ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳನ್ನು ಒಳಗೊಂಡಿರುವುದರಿಂದ ಉರಿಯೂತದ ತೊಂದರೆಯಿಂದ ಬಳಲುತ್ತಿರುವ ಜನರಿಗೆ ಇದು ಬಲು ಲಾಭಕಾರಿ. ಬೀಟಾಲೈನ್ಸ್ ಎನ್ನುವ ಆಂಟಿ ಇನ್ಫಾ ಮೇಟರಿ ಪ್ರಮಾಣ ಇದರಲ್ಲಿ ಹೇರಳವಾಗಿರುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ.
ಮಧುಮೇಹಿ ಸ್ನೇಹಿ
- ಹೌದು ಬೀಟ್ರೂಟ್ ತನ್ನಲ್ಲಿ ಆಲ್ಫಾ ಲಿಪೋಇಕ್ ಪ್ರಮಾಣ ಹೊಂದಿರುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಾಗುತ್ತದೆ.
- ಪ್ರಮುಖವಾಗಿ ಈ ತರಕಾರಿಯಲ್ಲಿ ನಿಸರ್ಗದತ್ತವಾದ ಸಕ್ಕರೆ ಅಂಶದ ಜೊತೆಗೆ, ಅಧಿಕ ಪ್ರಮಾಣದಲ್ಲಿ ನಾರಿನಾಂಶ ಕೂಡ ಅಪಾರ ಪ್ರಮಾಣದಲ್ಲಿ ಕಂಡು ಬರುತ್ತದೆ. ಇನ್ನು ಇವೆಲ್ಲಾದರ ಜೊತೆಗೆ ಪೊಟಾಶಿ ಯಂ ಹಾಗೂ ಫೋಲೆಟ್ ಎನ್ನುವ ಎರಡು ಸಂಯುಕ್ತ ಅಂಶಗಳು ಸಹ ಇರುವುದ ರಿಂದ, ಈ ಕಾಯಿಲೆ ಯನ್ನು ಕಂಟ್ರೋಲ್ ನಲ್ಲಿಡಲು ನೆರವಾಗುತ್ತದೆ.
ಸಕ್ಕರೆ ಕಾಯಿಲೆ ಇರುವವರು ಬೀಟ್ರೂಟ್ ತಿಂದರೆ ಏನಾಗುತ್ತದೆ ಗೊತ್ತಾ?
ಜೀರ್ಣಶಕ್ತಿ ವೃದ್ಧಿಸುತ್ತದೆ
ಬೀಟ್ರೂಟ್ ನಲ್ಲಿ ನಾರಿನ ಪ್ರಮಾಣ ತುಂಬಾ ಇದೆ. ಹಾಗಾಗಿ ಇದು ಕರುಳಿನ ಆರೋಗ್ಯದಲ್ಲಿ ಚೇತರಿಕೆ ಯನ್ನು ತಂದುಕೊಡುತ್ತದೆ. ಕರುಳಿನ ಭಾಗದ ಬ್ಯಾಕ್ಟೀರಿಯಾ ಇಲ್ಲವಾಗಿ ಆರೋಗ್ಯಕರವಾದ ಜೀರ್ಣ ಶಕ್ತಿಯನ್ನು ಪಡೆಯುವಂತೆ ಮಾಡುತ್ತದೆ. ಒಟ್ಟಾರೆ ಬೀಟ್ರೂಟ್ ಸೇವನೆಯಿಂದ ನಿಮ್ಮ ಆರೋಗ್ಯಕರ ವಾದ ಜೀವನ ನಿಮಗೆ ವಾಪಸ್ ಸಿಗುತ್ತದೆ.