ಆ್ಯಪ್ನಗರ

ಥೈರಾಯ್ಡ್ ಸಮಸ್ಯೆಯನ್ನು ಕಂಟ್ರೋಲ್‌ ಮಾಡಲು ಆಯುರ್ವೇದ ಟಿಪ್ಸ್

ಹಾರ್ಮೋನ್ ಮಟ್ಟದಲ್ಲಿ ವ್ಯತ್ಯಾಸ ಆಗುವುದರಿಂದ ಆರೋಗ್ಯ ಸಮಸ್ಯೆ ಕಾಣಿಸುತ್ತದೆ. ಟಿ3,ಟಿ4 ಕಡಿಮೆ ಆದರೆ ಹೈಪೋ ಥೈರಾಯಿಡಿಸಮ್ ಸಮಸ್ಯೆ ಉಂಟಾಗುತ್ತದೆ.

Vijaya Karnataka Web 25 May 2020, 12:22 pm
'ಥೈರಾಯ್ಡ್‌ ಎಂಬುದು ತಾನಾಗಿಯೇ ಗುಣವಾಗುವ ಸಮಸ್ಯೆ. ಹಿಂದೆಲ್ಲ ಥೈರಾಯ್ಡ್‌ ಸಮಸ್ಯೆಯೆಂದರೆ ಅಯೋಡಿನ್‌ ಕೊರತೆಯಿಂದ ಉಂಟಾಗುವ ಒಂದು ಕಾಯಿಲೆ ಎಂದಷ್ಟೇ ತಿಳಿದಿತ್ತು. ಆದರೆ ಇಂದು ಉಪ್ಪಿನಲ್ಲಿ ಅಯೋಡಿನ್‌ ಆಂಶ ಕಡ್ಡಾಯವಾಗಿರುವುದರಿಂದ ಆ ಬಗೆಯ ಥೈರಾಯ್ಡ್‌ ಸಮಸ್ಯೆ ನಿವಾರಣೆಯಾಗಿದೆ.
Vijaya Karnataka Web ayurveda tips to manage thyroid symptoms
ಥೈರಾಯ್ಡ್ ಸಮಸ್ಯೆಯನ್ನು ಕಂಟ್ರೋಲ್‌ ಮಾಡಲು ಆಯುರ್ವೇದ ಟಿಪ್ಸ್


ಆದರೆ ಇಂದು ಕಾಣಿಸಿಕೊಳ್ಳುವ ಥೈರಾಯ್ಡ್‌ ಸಮಸ್ಯೆಗಳನ್ನು ಔಷಧದಿಂದ ತಡೆಯಲಾಗದು. ಥೈರಾಯ್ಡ್‌ ಸಮಸ್ಯೆಗಳಿಗೆ ಯಾವುದೇ ನಿಗದಿತ ಚಿಕಿತ್ಸೆ ಎಂಬುದಿಲ್ಲ. ಜನರು ನಿಯಮಿತ ಔಷಧಗಳ ಸೇವನೆ ಹಾಗೂ ಕಾಲ ಕಾಲಕ್ಕೆ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ..

ಇದಕ್ಕೆ ಕಾರಣಗಳೇನು?

ಶರೀರದೊಳಗೆ ರೋಗ ನಿರೋಧಕ ಶಕ್ತಿ ತಯಾರಿಸುವ ಗ್ರಂಥಿ ಕೆಲಸ ಮಾಡದೆ ಹಾಗೆ ಮಾಡುವುದು ಮುಖ್ಯ ಕಾರಣ. ಇದು ಕೂಡ ಆಟೋ ಇಮ್ಯೂನ್ ಡಿಸಾರ್ಡರ್ ಇದ್ದ ಹಾಗೆ. ಇದು ಸ್ತ್ರೀಯರಲ್ಲಿ ಹೆಚ್ಚು. ಚಿಕ್ಕ ಮಕ್ಕಳಲ್ಲಿ ಕಂಡು ಬಂದರೆ ದೈಹಿಕ ಹಾಗೂ ಮಿದುಳಿನ ಬೆಳವಣಿಗೆಗೆ ಸಮಸ್ಯೆ ಉಂಟು ಮಾಡಬಹುದು.ಕೆಲವರಲ್ಲಿ ಹುಟ್ಟಿನಿಂದಲೇ ಕಂಡು ಬರುತ್ತದೆ.ಆದ್ದರಿಂದ ಸಮಸ್ಯೆಯನ್ನು ಆರಂಭದಲ್ಲಿ ಗುರುತಿಸುವುದು ಮುಖ್ಯ. ಈ ಸಮಸ್ಯೆಗೆ ಶಾರೀರಿಕ ಹಾಗೂ ಮಾನಸಿಕ ಲಕ್ಷಣ ಅರಿತು ಚಿಕಿತ್ಸೆ ನೀಡಲಾಗುವುದು.

ಇದರ ಲಕ್ಷಣಗಳು

ಒಂದು ವೇಳೆ ಹೆಚ್ಚಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ಇವೆರಡೂ ಸ್ಥಿತಿಗಳನ್ನು ವೈದ್ಯ ವಿಜ್ಞಾನ ಹೈಪೋಥೈರಾಯ್ಡಿಸಂ - Hypothyroidism (ಅಗತ್ಯಕ್ಕೂ ಕಡಿಮೆ ಸ್ರವಿಸುವುದು) ಮತ್ತು ಹೈಪರ್ ಥೈರಾಯ್ಡಿಸಂ hyperthyroidism(ಅಗತ್ಯಕ್ಕಿಂತಲೂ ಹೆಚ್ಚು ಸ್ರವಿಸುವುದು) ಎಂದು ವರ್ಗೀಕರಿಸಿದೆ. ಈ ಸ್ಥಿತಿಗಳು ಸಾಮಾನ್ಯ ಕ್ಕಿಂತ ಎಷ್ಟು ಮಟ್ಟದಲ್ಲಿ ಹೆಚ್ಚು ಅಥವಾ ಕಡಿಮೆ ಇವೆ ಎಂಬುದನ್ನು ಅನುಸರಿಸಿ ದೇಹಕ್ಕೆ ಎದುರಾಗುವ ತೊಂದರೆಗಳೂ ಭಿನ್ನವಾಗಿರುತ್ತವೆ. ಕೊಂಚ ಪ್ರಮಾಣದ ವ್ಯತ್ಯಾಸದಿಂದ ಖಿನ್ನತೆ, ಹಸಿವಿಲ್ಲದಿರುವುದು, ಮಲಬದ್ದತೆ, ಸುಸ್ತು, ತೂಕದಲ್ಲಿ ಏರಿಳಿತ ಅಥವಾ ದೇಹದಲ್ಲಿ ಶಕ್ತಿಯ ಉಡುಗುವಿಕೆ ಮೊದಲಾದವು ಕಾಣಿಸಿಕೊಳ್ಳಬಹುದು.

ಹೈಪೊಥೈರೋಯಿಡಿಸಂ ಮತ್ತು ಹೈಪರ್ಥೈರೋಯಿಡಿಸಂ

ಹೈಪೊಥೈರೋಯಿಡಿಸಂ ಎಂದರೆ ಥೈರೊಯ್ಡ್ ಗ್ರಂಥಿ ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ಥೈರೊಯ್ಡ್ ಹಾರ್ಮೋನ್ ಉತ್ಪತ್ತಿ ಮಾಡುತ್ತದೆ. ಇದರ ಸಾಧಾರಣ ಗುಣ ಲಕ್ಷಣಗಳೆಂದರೆ, ಒಣ ಚರ್ಮ, ಮಲಬದ್ಧತೆ, ಶೀತ, ಮಾನಸಿಕ ಖಿನ್ನತೆ. ಹೈಪರ್ಥೈರೋಯಿಡಿಸಂ ಸಮಸ್ಯೆ ಹೊಂದಿರುವವರ ದೇಹದಲ್ಲಿ ಥೈರಾಯಿಡ್ ಗ್ರಂಥಿಯು ಅಗತ್ಯಕ್ಕಿಂತ ಹೆಚ್ಚಿನ ಹಾರ್ಮೋನ್ ಉತ್ಪತ್ತಿ ಮಾಡುತ್ತದೆ. ಈ ಸಮಸ್ಯೆಯ ಸಾಮಾನ್ಯ ಗುಣ ಲಕ್ಷಣ ಎಂದರೆ, ಹೆಚ್ಚಿದ ಹೃದಯ ಬಡಿತ, ಮಾನಸಿಕ ಆತಂಕ, ಹೆಚ್ಚಿದ ಕರುಳಿನ ಚಲನೆ, ವಿಪರೀತ ಬೆವರುವುದು ಇತ್ಯಾದಿ. ಥೈರಾಯಿಡ್ ಸಮಸ್ಯೆಗೆ ವೈದ್ಯಕೀಯ ಔಷಧಿಗಳು ಇರುವುದು ನಮಗೆ ಗೊತ್ತೇ ಇದೆ. ಆದರೆ ಆಯುರ್ವೇದದಲ್ಲಿ ಇದಕ್ಕೆ ಸುಲಭ ಚಿಕಿತ್ಸೆಗಳು ಲಭ್ಯವಿದ್ದು ಜನರಿಗೆ ಇವುಗಳ ಬಗ್ಗೆ ಅಷ್ಟಾಗಿ ಇದುವರೆಗೆ ತಿಳಿದಿಲ್ಲ. ನಿಮ್ಮ ಥೈರಾಯ್ಡ್ ಸಮಸ್ಯೆ ಆಯುರ್ವೇದ ಅಭ್ಯಾಸಗಳಿಂದ ನಿಯಂತ್ರಣ ಮಾಡಬಹುದು ಎಂದರೆ ನೀವು ನಂಬಲೇಬೇಕು

ಆಯುರ್ವೇದ ಹೇಳುವ ಪ್ರಕಾರ

ಆಯುರ್ವೇದ ಹೇಳುವ ಪ್ರಕಾರ ಥೈರಾಯಿಡ್ ಮಜ್ಜಾಧಾತುವಿನಲ್ಲಿದ್ದು, ಇದರ ಕಾರ್ಯ ಚಟುವಟಿಕೆಗಳನ್ನು ಪಿತ್ತದೋಷವು ನಿಯಂತ್ರಣ ಮಾಡಿ ಮನುಷ್ಯನ ದೇಹದ ಎಲ್ಲಾ ಮೆಟಬಾಲಿಕ್ ಪ್ರಕ್ರಿಯೆಗಳಿಗೆ ಕಾರಣವಾಗುತ್ತದೆ. ಆಯುರ್ವೇದದ ಪ್ರಕಾರ ಪಂಚಕರ್ಮ ವಾಮನ ( ದೇಹದಿಂದ ತ್ಯಾಜ್ಯ ವಸ್ತುಗಳು ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕುವುದು ), ವಿರೇಚನ ( ಶುದ್ಧೀಕರಣ ತೆರಪಿ ), ಉದ್ವರ್ಥನಮ್ ( ವಿಶೇಷ ಅಂಗಾಂಶಗಳ ಮಸಾಜ್ ), ತಲೆಯ ಮಸಾಜ್ ಮತ್ತು ಇಂತಹ ಪ್ರಕರಣಗಳಲ್ಲಿ ಉಂಟಾಗುವ ಅನೇಕ ಪ್ರಯೋಜನಗಳು. ಮತ್ತೊಂದು ನಂಬಲರ್ಹವಾದ ಆಯುರ್ವೇದ ಅಭ್ಯಾಸ ಅವಗಹ ಸ್ವೇದನ ಇಂತಹ ಪರಿಸ್ಥಿತಿಗಳಲ್ಲಿ ಸಹಾಯಕ್ಕೆ ಬರುತ್ತದೆ. ಅಗತ್ಯವಾದ ಪೌಷ್ಟಿಕ ಸತ್ವಗಳಾದ ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ' ಡಿ ' ಮತ್ತು ಜಿಂಕ್ ಅಂಶಗಳನ್ನು ಹೊಂದಿದ ಸಮತೋಲನ ಆಹಾರ ಪದ್ಧತಿ ತಾಜಾ ತರಕಾರಿಗಳು, ಹಣ್ಣುಗಳು ಮತ್ತು ಕೆಲವೊಂದು ದ್ವಿದಳ ಧಾನ್ಯಗಳಲ್ಲಿ ಲಭ್ಯವಿವೆ. ಆದರೆ ಇವುಗಳು ಚೆನ್ನಾಗಿ ಬೇಯಿಸಿದ ಆಹಾರಗಳಲ್ಲಿ ಅಥವಾ ಬೀದಿ ಬದಿಯ ಜಂಕ್ ಫುಡ್ ಗಳಲ್ಲಿ ಸಿಗುವುದಿಲ್ಲ.

'ಥೈರಾಯ್ಡ್ ಕ್ಯಾನ್ಸರ್‌' ಈ ಹೆಸರು ಖತರ್ನಾಕ್ ಇದ್ದರೂ, ಭಯಪಡಬೇಕಾಗಿಲ್ಲ!

ಸರ್ವಾಂಗಾಸನ

ಯೋಗದ ಒಂದು ಅಭ್ಯಾಸವಾದ ಸರ್ವಾಂಗಾಸನ ಥೈರಾಯ್ಡ್ ಗ್ರಂಥಿಯ ಉತ್ತಮ ಕಾರ್ಯ ಚಟುವಟಿಕೆಗೆ ಬಹಳ ಪರಿಣಾಮಕಾರಿಯಾದ ಮತ್ತು ಸರಿಯಾದ ಯೋಗ ಅಭ್ಯಾಸವಾಗಿದೆ. ಇದರ ಜೊತೆಗೆ ಸೂರ್ಯ ನಮಸ್ಕಾರ, ಪವನ್ಮುಕ್ತಸನ, ಕಪಾಲಭಟಿ, ಅವಲೋಮ - ವಿಲೋಮದಂತಹ ಯೋಗಾಭ್ಯಾಸಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಥೈರಾಯಿಡ್ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ.

ಥೈರಾಯ್ಡ್ ರೋಗಿಗಳು ಅಗತ್ಯವಾಗಿ ಮಾಡಬೇಕಾದ ಕೆಲಸಗಳು

  • ನಿಮ್ಮ ಥೈರಾಯ್ಡ್ ಮಟ್ಟಗಳನ್ನು ನಿಯಮಿತವಾಗಿ ಪರೀಕ್ಷಿಸಿ ಗಮನಿಸುತ್ತಾ ಇರಿ.
  • ಪ್ರತಿ ದಿನ ನಾಲ್ಕರಿಂದ ಐದು ಲೀಟರ್ ನೀರಿನ ಸೇವನೆ ಥೈರಾಯ್ಡ್ ರೋಗಿಗಳಿಗೆ ಬಹಳಷ್ಟು ಅವಶ್ಯಕ ಇದರಿಂದ ಥೈರಾಯಿಡ್ ಗ್ರಂಥಿ ಚೆನ್ನಾಗಿ ಕೆಲಸ ಮಾಡಲು ಅನುವಾಗುತ್ತದೆ. ಜೊತೆಗೆ ದೇಹದ ವಿಷಕಾರಿ ಅಂಶಗಳು ಲಿವರ್ ಮತ್ತು ಮೂತ್ರ ಪಿಂಡಗಳಿಂದ ಹೊರ ಹೋಗುತ್ತವೆ.
  • ಆಂಟಿ - ಆಕ್ಸಿಡೆಂಟ್ ಅಂಶಗಳನ್ನು ಹೆಚ್ಚಾಗಿ ಹೊಂದಿದ ಆಹಾರಗಳನ್ನು ಸೇವನೆ ಮಾಡುವುದು ಅತ್ಯಗತ್ಯ.
  • ಥೈರಾಯ್ಡ್ ಮಟ್ಟ ಸಾಮಾನ್ಯವಾಗಿ ಇರುವವರು ವಿಟಮಿನ್ ' ಬಿ ' ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸುವುದು ಅಗತ್ಯ
  • ವಿಟಮಿನ್ ' ಡಿ ' ಅಂಶವನ್ನು ಹೊಂದಿದ ಆಹಾರಗಳು ಥೈರಾಯ್ಡ್ ರೋಗಿಗಳಿಗೆ ಬಹಳಷ್ಟು ಅವಶ್ಯಕ.
  • ಹಸಿರು ಎಲೆ - ತರಕಾರಿಗಳ ಸೇವನೆ ಥೈರಾಯಿಡ್ ರೋಗಿಗಳ ದಿನ ನಿತ್ಯದ ಆಹಾರ ಪದ್ಧತಿಯಲ್ಲಿ ಒಂದಾಗಬೇಕು.
  • ಥೈರಾಯ್ಡ್ ರೋಗಿಗಳು ಈ ಕೆಲಸಗಳನ್ನು ಎಂದಿಗೂ ಮಾಡಬಾರದು

ಧೂಮಪಾನ, ಮಧ್ಯಪಾನ ತಂಬಾಕುಗಳಿಂದ ದೂರವಿರಿ

  • ಥೈರಾಯ್ಡ್ ರೋಗಿಗಳು ಧೂಮಪಾನ, ಮಧ್ಯಪಾನ ಮತ್ತು ತಂಬಾಕು ಸೇವನೆಯಿಂದ ದೂರವಿರಬೇಕು. ಏಕೆಂದರೆ ಇವುಗಳು ಥೈರಾಯಿಡ್ ಗ್ರಂಥಿಯ ಕಾರ್ಯ ಚಟುವಟಿಕೆಗಳನ್ನು ತಡೆ ಹಾಕುತ್ತವೆ. ಧೂಮಪಾನ ಸೇವನೆಯಿಂದ ಅಯೋಡಿನ್ ಅಂಶದ ಕೊರತೆ ಉಂಟಾಗುತ್ತದೆ.
  • ಕಾರ್ಬೋಹೈಡ್ರೇಟ್, ಕೊಬ್ಬಿನ ಅಂಶ ಹೊಂದಿದ ಆಹಾರಗಳು ಮತ್ತು ಪ್ರೋಟೀನ್ ಯುಕ್ತ ಆಹಾರಗಳ ಸೇವನೆ ನಿಷಿದ್ಧ.
  • ಸಕ್ಕರೆ ಅಂಶ ಮತ್ತು ಕಾಫಿ ಸೇವಿಸಬಾರದು.
  • ಯಾವುದೇ ಕಾರಣಕ್ಕೂ ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿ ತೆಗೆದುಕೊಳ್ಳಬಾರದು.

ಆಹಾರಕ್ರಮ ಹೇಗಿರಬೇಕು

ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆ ಹೆಚ್ಚು ಅಥವಾ ಕಡಿಮೆಯಾಗಲು ನಮ್ಮ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಉದಾಹರಣೆಗೆ ಇಡಿಯ ಧಾನ್ಯಗಳು, ಕೊಬ್ಬುಯುಕ್ತ ಮೀನು ಮತ್ತು ಡೈರಿ ಉತ್ಪನ್ನಗಳು ಮೊದಲಾದವು ಹೈಪೋಥೈರಾಯ್ಡಿಸಂ ತೊಂದರೆಯನ್ನು ಸರಿಪಡಿಸಬಲ್ಲವು. ಇದೇ ರೀತಿ ಒಮೆಗಾ ೩ ಕೊಬ್ಬಿನ ಆಮ್ಲ ಯುಕ್ತ ಆಹಾಗಳು ಹೈಪರ್ ಥೈರಾಯ್ಡಿಸಂ ಅನ್ನು ನೈಸರ್ಗಿಕವಾಗಿ ಗುಣಪಡಿಸಬಲ್ಲವು. ಹಾಗಾಗಿ, ಒಂದು ವೇಳೆ ನಿಮಗೆ ಇವೆರಡರಲ್ಲಿ ಯಾವುದೇ ತೊಂದರೆ ಇದ್ದರೂ ಕೆಳಗೆ ವಿವರಿಸಿರುವ ಅಹಾರಗಳನ್ನು ಸೇವಿಸುವ ಮೂಲಕ ಈ ತೊಂದರೆಗಳನ್ನು ನೈಸರ್ಗಿಕವಾಗಿ ಗುಣಪಡಿಸಲು ಸಾಧ್ಯವಾಗುತ್ತದೆ. ಬನ್ನಿ ನೋಡೋಣ...

ಅಣಬೆ
ಥೈರಾಯ್ಡ್ ಗ್ರಂಥಿಯ ಕ್ಷಮತೆ ಏರುಪೇರಾಗಲು ದೇಹದಲ್ಲಿ ಸೆಲೆನಿಯಂ ಎಂಬ ಖನಿಜದ ಕೊರತೆ ಕಾರಣವಾಗಿದೆ. ಮೃದುವಾದ ಅಣಬೆಗಳಲ್ಲಿ ಉತ್ತಮ ಪ್ರಮಾಣದ ಸೆಲೆನಿಯಂ ಇದೆ.

ಕೊಬ್ಬರಿ ಎಣ್ಣೆ

ಇದರಲ್ಲಿರುವ ಅವಶ್ಯಕ ಕೊಬ್ಬಿನ ಆಮ್ಲಗಳು ಸೇವನೆಯ ತಕ್ಷಣವೇ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ ಹಾಗೂ ಇದು ಥೈರಾಯ್ಡ್ ಕಾರ್ಯವನ್ನು ನಿಯಂತ್ರಿಸುತ್ತದೆ.
ಬೆಳ್ಳುಳ್ಳಿ
ಸೆಲೆನಿಯಂ ಇರುವ ಇನ್ನೊಂದು ಆಹಾರವೆಂದರೆ ಬೆಳ್ಳುಳ್ಳಿ. ಇದೊಂದು ಮಸಾಲೆಯಾಗಿದ್ದು ಆರೋಗ್ಯವನ್ನು ವೃದ್ದಿಸುವ ಜೊತೆಗೇ ಥೈರಾಯ್ಡ್ ಗ್ರಂಥಿಯ ಕ್ಷಮತೆಯನ್ನೂ ಹೆಚ್ಚಿಸುತ್ತದೆ. ವಿಶೇಷವಾಗಿ ಮಧುಮೇಹಿಗಳು ಮತ್ತು ಹೃದ್ರೋಗಿಗಳಿಗೂ ಬೆಳ್ಳುಳ್ಳಿ ಉತ್ತಮ ಆಹಾರವಾಗಿದೆ.

ಈ ಲಕ್ಷಣಗಳು ಕಂಡು ಬಂದರೆ ಥೈರಾಯ್ಡ್‌ ಇರಬಹುದು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ