ಆ್ಯಪ್ನಗರ

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಕಷಾಯ!

ಆಯುರ್ವೇದಿಕ್ ಪಾನೀಯದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ ಮತ್ತು ಇದು ಹಲವಾರು ರೀತಿಯ ಶಮನಕಾರಿ ಗುಣ ಕೂಡ ಹೊಂದಿದೆ. ಇದನ್ನು ನೀವು ನಿತ್ಯವೂ ಕುಡಿದರೆ ಅದರಿಂದ ಆರೋಗ್ಯವು ಚೆನ್ನಾಗಿರುತ್ತದೆ.

Vijaya Karnataka Web 20 May 2020, 4:05 pm
ಕೊರೊನಾ ಎನ್ನುವುದು ಸದ್ಯ ಪ್ರಪಂಚವನ್ನೇ ತಲ್ಲಣಗೊಳಿಸುತ್ತಿರುವ ಕಾಯಿಲೆ. ಇದರ ಗಂಭೀರತೆ ಏನು ಎನ್ನುವುದನ್ನು ತಿಳಿದುಕೊಳ್ಳುವಷ್ಟರಲ್ಲೇ ಸಾಕಷ್ಟು ಜನರ ಪ್ರಾಣವನ್ನು ಹೀರಿದೆ. ಜೊತೆಗೆ ಒಂದಿಷ್ಟು ಜನರು ಸೋಂಕಿನಿಂದಾಗಿ ಪ್ರಾಣದೊಂದಿಗೆ ಹೋರಾಟ ನಡೆಸುತ್ತಿದ್ದಾರೆ.
Vijaya Karnataka Web Kwatha


ಇಂತಹ ಸ್ಥಿತಿಯಲ್ಲಿ ಇದರ ನಿವಾರಣೆಗಾಗಿ ಯಾವುದೇ ಔಷಧ ಅಥವಾ ಲಸಿಕೆ ಇಲ್ಲದೆ ಇರುವುದು ಚಿಂತನೀಯ ಸ್ಥಿತಿಯಾಗಿದೆ. ಕೇವಲ ಮುನ್ನೆಚ್ಚರಿಕೆಯ ಕ್ರಮದಿಂದ ರೋಗದೊಂದಿಗೆ ದೂರ ಇರಬಹುದು. ಮನುಷ್ಯನಲ್ಲಿ ಎಷ್ಟು ಸಮಯಗಳ ಕಾಲ ರೋಗ ನಿರೋಧಕ ಶಕ್ತಿ ಅಧಿಕವಾಗಿರುವುದೋ ಅಷ್ಟು ದಿನಗಳ ಕಾಲ ಅದ್ಭುತ ಆರೋಗ್ಯ ಸ್ಥಿತಿಯನ್ನು ಹೊಂದಿರಬಹುದು.

ಆಗ ಎಂತಹ ರೋಗ ಆವರಿಸಿಕೊಂಡರೂ ಬಹುಬೇಗ ನಿವಾರಣೆ ಹೊಂದಬಹುದು. ಈ ಹಿನ್ನೆಲೆಯಲ್ಲಿಯೇ ಆಯುಷ್ ಸಂಸ್ಥೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯವನ್ನು ತಿಳಿಸಿಕೊಡುತ್ತಿದೆ. ಜನರ ಆರೋಗ್ಯ ಹಾಗೂ ದೇಶದ ಭವಿಷ್ಯದ ಬಗ್ಗೆ ನಮ್ಮ ಸರ್ಕಾರಗಳು ಸಾಕಷ್ಟು ಮುಂಜಾಗ್ರತಕ್ರಮದ ಬಗ್ಗೆ ಹಾಗೂ ಆರೋಗ್ಯದ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮವನ್ನು ತಿಳಿಸಿಕೊಟ್ಟಿದೆ.

ಪ್ರತಿರೋಧಕ ಶಕ್ತಿ ವೃದ್ಧಿಸಲು ಕೆಲವು ಆಯುಷ್ ಕ್ರಮಗಳು
ಇದರೊಟ್ಟಿಗೆ ಸರ್ಕಾರಿ ಕೇಂದ್ರೀಯ ಔಷಧಗಾರವಾದ ಆಯುಷ್ ಇಲಾಖೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅನೇಕ ಔಷಧಗಳನ್ನು ಹಾಗೂ ಮನೆ ಮದ್ದು ವಿಧಾನಗಳನ್ನು ತಿಳಿಸಿಕೊಟ್ಟಿದೆ. ಅಂತಹ ಒಂದು ಅದ್ಭುತ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಷಾಯ ವಿಧಾನವನ್ನು ಇದೀಗ ತಿಳಿಸಿಕೊಟ್ಟಿದೆ.

ಆಯುಷ್ ಕ್ವಾಧ/ ಜೋಶಾಂದಾ ಕಷಾಯ
ಈ ಕಷಾಯವು ಆಯುರ್ವೇದ ಗಿಡಮೂಲಿಕೆಯಿಂದ ತಯಾರಿಸಲಾಗುವುದು. ಇದರಲ್ಲಿ ಬಳಸುವ ಗಿಡಮೂಲಿಕೆಯು ಅದ್ಭುತವಾದ ಆರೋಗ್ಯಕರ ಗುಣಗಳನ್ನು ಒಳಗೊಂಡಿವೆ. ವಿಶೇಷವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಜೊತೆಗೆ ಆರೋಗ್ಯದಲ್ಲಿ ಇರುವ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಿಸುತ್ತವೆ.

ಜೋಶಾಂದ ಕಷಾಯದ ಸಾಮಾಗ್ರಿಗಳು
  • ತುಳಸಿ (ಒಣಗಿದ ಎಲೆಗಳು) - 4 ಭಾಗ
  • ದಾಲ್ಚಿನ್ನಿ- 2 ಭಾಗ
  • ಒಣಶುಂಠಿ - 2 ಭಾಗ
  • ಕರಿಮೆಣಸು - 1 ಭಾಗ
ಪುಡಿ ತಯಾರಿಸುವ ವಿಧಾನಗಳು
ಮೊದಲಿಗೆ ಮೇಲೆ ಹೇಳಲಾದ ಅಗತ್ಯ ವಸ್ತುಗಳನ್ನು ಮೊದಲು ತೆಗೆದುಕೊಳ್ಳಬೇಕು.
ನಂತರ ನಾಲ್ಕು ಸಾಮಾಗ್ರಿಗಳನ್ನು ಒಟ್ಟಿಗೆ ಸೇರಿಸಿ ನುಣುಪಾಗಿ ಪುಡಿಮಾಡಿಕೊಳ್ಳಿ.
ಸಿದ್ಧವಾದ ಪುಡಿಯನ್ನು ಗಾಳಿ ಆಡದ ಡಬ್ಬಿಯಲ್ಲಿ ಶೇಖರಿಸಿಟ್ಟುಕೊಳ್ಳಿ.

ಈ ಆಯುರ್ವೇದ ಪಾನೀಯ ಕಧಾ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಳ

ಕಷಾಯ ತಯಾರಿಸುವ ವಿಧಾನ
  • ಒಂದು ಪಾತ್ರೆಯಲ್ಲಿ 150 ಮಿ.ಲೀ. ಅಷ್ಟು ನೀರನ್ನು ಸೇರಿಸಿ.
  • ನಂತರ ಅದಕ್ಕೆ 1/4 ಚಮಚದಷ್ಟು ಕಷಾಯದ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ.
  • ಮಿಶ್ರಣವನ್ನು 5-10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು.
  • ನಿಮ್ಮ ಆಯ್ಕೆಗೆ ಅನುಗುಣವಾಗಿ ರುಚಿ ಹೆಚ್ಚಿಸಿಕೊಳ್ಳಲು ಬೆಲ್ಲ, ನಿಂಬೆ ರಸ ಅಥವಾ ಒಣದ್ರಾಕ್ಷಿಯ ರಸಗಳನ್ನು ಸೇರಿಸಿಕೊಳ್ಳಬಹುದು.
  • ಸಿದ್ಧವಾದ ಕಷಾಯವನ್ನು ಸೋಸಿಕೊಳ್ಳಿ.
  • ಸಿದ್ಧವಾದ ಕಷಾಯವನ್ನು ದಿನಕ್ಕೆ ಒಂದು ಬಾರಿ ಸೇವಿಸಿ.
  • ಗಣನೀಯವಾಗಿ ಈ ಕ್ರಮವನ್ನು ಅನುಸರಿಸಿದರೆ ರೋಗ ನಿರೋಧಕ ಶಕ್ತಿಯು ಹೆಚ್ಚುವುದು.
ಅಕ್-ಎ-ಅಜೀಬ್
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉತ್ಪನ್ನಗಳಲ್ಲಿ ಅಕ್-ಎ-ಅಜೀಬ್ ಸಹ ಒಂದು. ಇದನ್ನು ನಾವು ಮನೆಯಿಂದ ಆಚೆ ಹೋಗುವಾಗ ಅಥವಾ ಮನೆಯಲ್ಲಿಯೇ ಇರುವಾಗ ಬಳಸಬಹುದು.
ಬಳಸುವ ವಿಧಾನ:
  • ಈ ಉತ್ಪನ್ನವನ್ನು ನಮ್ಮ ಕರವಸ್ತ್ರಗಳಲ್ಲಿ 2-3 ಹನಿಗಳಷ್ಟು ಸಿಂಪಡಿಸಿಕೊಂಡು, ಆಗಾಗ ವಾಸನೆಯನ್ನು ತೆಗೆದುಕೊಳ್ಳುತ್ತಲೇ ಇರಬೇಕು.
  • ಕುದಿಬಂದ ನೀರಿಗೆ ಅಕ್- ಎ - ಅಜೀಬ್‍ಅನ್ನು 2-3 ಅಷ್ಟು ಸೇರಿಸಬೇಕು. ನಂತರ ಅದರ ಹಬೆಯನ್ನು ಸೇವಿಸಬೇಕು.
  • ಈ ರೀತಿಯಲ್ಲಿ ಆಯುಷ್ ಪದ್ಧತಿಯನ್ನು ಅನುಸರಿಸುವುದರ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ