ಆ್ಯಪ್ನಗರ

ಒಂದೇ ಒಂದು ಗ್ಲಾಸ್ ಮಜ್ಜಿಗೆಯ ಆರೋಗ್ಯ ಪವರ್ ಹೇಗಿರುತ್ತೆ ನೋಡಿ...

ಮೊಸರನ್ನು ಕಡೆದು ಬೆಣ್ಣೆಯನ್ನು ಹೊರತೆಗೆದ ಬಳಿಕ ಉಳಿಯುವ ನೀರೇ ಮಜ್ಜಿಗೆ. ಇದರಲ್ಲಿರುವ ಜೀರ್ಣಸ್ನೇಹಿ ಬ್ಯಾಕ್ಟೀರಿಯಾಗಳ ಕಾರಣದಿಂದ ಇದೊಂದು ಅದ್ಭುತ ಆಹಾರವಾಗಿದೆ ಹಾಗೂ ಜೀರ್ಣಕ್ರಿಯೆ ಉತ್ತಮಗೊಳಿಸಲು ಸೂಕ್ತ ಔಷಧಿಯೂ ಆಗಿದೆ.

Vijaya Karnataka Web 2 Dec 2021, 5:17 pm
ಮಜ್ಜಿಗೆ ಹಾಲಿನ ಉತ್ಪನ್ನವಾಗಿದ್ದು ಮೊಸರನ್ನು ಕಡೆದು ಬೆಣ್ಣೆ ತೆಗೆದಾದ ಬಳಿಕ ಲಭಿಸುತ್ತದೆ. ಆಂಗ್ಲಭಾಷೆಯಲ್ಲಿ ಇದಕ್ಕೆ ಬಟರ್ ಮಿಲ್ಕ್ ಎಂಬ ಹೆಸರಿದ್ದರೂ ಇದರಲ್ಲಿ ಬೆಣ್ಣೆಯೂ ಇರುವುದಿಲ್ಲ ಹಾಲೂ ಇರುವುದಿಲ್ಲ.
Vijaya Karnataka Web benefits of buttermilk for digestion to reduce weight here are other benefits
ಒಂದೇ ಒಂದು ಗ್ಲಾಸ್ ಮಜ್ಜಿಗೆಯ ಆರೋಗ್ಯ ಪವರ್ ಹೇಗಿರುತ್ತೆ ನೋಡಿ...


ಅಲ್ಲದೇ ಕೊಬ್ಬೆಲ್ಲಾ ಬೆಣ್ಣೆಯ ರೂಪದಲ್ಲಿ ಪ್ರತ್ಯೇಕಿಸಲ್ಪಟ್ಟಿರುವ ಕಾರಣ ಇದರಲ್ಲಿ ಉಳಿದಿರುವುದು ಹೆಚ್ಚಿನಾಂಶ ನೀರು, ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾ, ಕಾರ್ಬೋಹೈಡ್ರೇಟುಗಳು, ಲ್ಯಾಕ್ಟೋಸ್ ಮತ್ತು ಕೊಂಚ ಆಮ್ಲೀಯ ಅಂಶ.

ಈ ನೀರಿಗೆ ಕೊಂಚ ಉಪ್ಪು, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಜೀರಿಗೆಗಳನ್ನು ಬೆರೆಸಿ ಕುಡಿದರೆ ಇದರಷ್ಟು ಅಪ್ಯಾಯಮಾನವಾದ ತಂಪು ಪಾನೀಯ ಇನ್ನೊಂದಿಲ್ಲ.

​ಜೀರ್ಣಕ್ರಿಯೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

  • ಅಲ್ಲದೇ ಇದು ಅತಿ ಆರೋಗ್ಯಕರ ಪಾನೀಯವಾಗಿದ್ದು ಜೀರ್ಣಕ್ರಿಯೆ ಉತ್ತಮಗೊಳಿಸಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.
  • ಇದೇ ಕಾರಣಕ್ಕೆ ನಮ್ಮ ಸಾಂಪ್ರಾದಾಯಿಕ ಊಟದಲ್ಲಿ ಕೊನೆಯದಾಗಿ ಮಜ್ಜಿಗೆಯನ್ನು ಸೇವಿಸಲು ನೀಡಲಾಗುತ್ತದೆ.

​ಮನೆಯ ಮಜ್ಜಿಗೆಯೇ ಬೆಸ್ಟ್!

  • ಇಂದು ಮಾರುಕಟ್ಟೆಯಲ್ಲಿ ಸಿದ್ಧ ರೂಪದಲ್ಲಿ ಸಿಗುತ್ತಿರುವ ಮಜ್ಜಿಗೆ ವಾಸ್ತವದಲ್ಲಿ ಮೊಸರಿಗೆ ಕೊಂಚ ನೀರು ಸೇರಿಸಿ ಉಪ್ಪು ಖಾರ ಸೇರಿಸಿರಲಾಗಿರುತ್ತದೆ.
  • ಇವನ್ನು ಯಂತ್ರಗಳಲ್ಲಿ ಅತಿ ಬಿಸಿಯಾಗಿಸಿ ತಯಾರಿಸಲಾಗುವ ಕಾರಣ ಇವು ಇದರಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳಿಂದ ವಂಚಿತವಾಗಿರುತ್ತದೆ. ಆದ್ದರಿಂದ ಮಜ್ಜಿಗೆಯನ್ನು ಮನೆಯಲ್ಲಿಯೇ ತಯಾರಿಸುವುದು ಅತ್ಯುತ್ತಮ ಆಯ್ಕೆಯಾಗಿದೆ.

​ವರದಿಯ ಪ್ರಕಾರ

  • ಫೆಮಿನಾ ಎಂಬ ಮಾಧ್ಯಮದಲಿ ಪ್ರಕಟವಾದ ವರದಿಯ ಪ್ರಕಾರ, ಮಜ್ಜಿಗೆಯನ್ನು ಹೇಗೇ ತಯಾರಿಸಿರಲಿ, ಇದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಂತೂ ಇದ್ದೇ ಇವೆ. ನಿಯಮಿತವಾಗಿ ಮಜ್ಜಿಗೆಯನ್ನು ಸೇವಿಸುತ್ತಾ ಇರುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಜೀರ್ಣಾಂಗಗಳು ಉತ್ತಮ ಆರೋಗ್ಯದಲ್ಲಿರುತ್ತವೆ.
  • ಜೀರ್ಣಾಂಗಗಳಲ್ಲಿ ಎದುರಾಗುವ ಆಮ್ಲೀಯತೆಯನ್ನು ಸರಿಪಡಿಸುವ ಜೊತೆಗೇ ಮೂಳೆಗಳನ್ನೂ ದೃಢಗೊಳಿಸುತ್ತದೆ. ತೂಕ ಇಳಿಕೆಯ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗಂತೂ ಮಜ್ಜಿಗೆ ಹೇಳಿ ಮಾಡಿಸಿದ ಪಾನೀಯವಾಗಿದೆ. ಬನ್ನಿ ಮಜ್ಜಿಗೆಯ ಸೇವನೆಯ ಪ್ರಯೋಜನಗಳನ್ನು ಅರಿಯೋಣ:

ಜೀರ್ಣಕ್ರಿಯೆ ಸುಲಭಗೊಳಿಸುತ್ತದೆ

ಮಜ್ಜಿಗೆಯಲ್ಲಿಯೂ ಜೀರ್ಣಸ್ನೇಹಿ ಬ್ಯಾಕ್ಟೀರಿಯಾಗಳಿರುವ ಕಾರಣ ಜೀರ್ಣಾಂಗ ವ್ಯವಸ್ಥೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಅಜೀರ್ಣತೆ, ಮಲಬದ್ದತೆ ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ.

​ವಾಯುಪ್ರಕೋಪದಿಂದ ರಕ್ಷಿಸುತ್ತದೆ

ಇದರಲ್ಲಿರುವ ಜೀರ್ಣಸ್ನೇಹಿ ಬ್ಯಾಕ್ಟೀರಿಯಾಗಳು ಆಹಾರವನ್ನು ಪೂರ್ಣವಾಗಿ ಒಡೆಯುವ ಮೂಲಕ ವಾಯುಗಳು ಉತ್ಪನ್ನವಾಗುವುದನ್ನು ತಡೆಯುತ್ತವೆ, ತನ್ಮೂಲಕ ವಾಯುಪ್ರಕೋಪವಾಗದಂತೆ ರಕ್ಷಿಸುತ್ತದೆ. ಅಲ್ಲದೇ ಹುಳಿತೇಗು, ಹೊಟ್ಟೆಯುರಿ, ಎದೆಯುರಿ ಮೊದಲಾದ ಆಮ್ಲೀಯತೆಯಿಂದ ಎದುರಾಗುವ ತೊಂದರೆಗಳಿಂದಲೂ ರಕ್ಷಿಸುತ್ತದೆ.

​ಮೂಳೆಗಳನ್ನು ದೃಢಗೊಳಿಸುತ್ತದೆ

  • ಹಾಲಿನಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇದ್ದರೂ ಇದನ್ನು ನಮ್ಮ ಮೂಳೆಗಳು ನೇರವಾಗಿ ಹೀರಿಕೊಳ್ಳಲಾರವು. ಇದಕ್ಕೆ ವಿಟಮಿನ್ ಡಿ ಅಗತ್ಯವಿದೆ. ಮಜ್ಜಿಗೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಡಿ ಇದೆ ಹಾಗೂ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಸುಲಭಗೊಳಿಸುತ್ತದೆ.
  • ಇದೇ ಕಾರಣಕ್ಕೆ, ರಜೋನಿವೃತ್ತಿಯ ಸಮಯದಲ್ಲಿರುವ ಮಹಿಳೆಯರಿಗೆ ಮಜ್ಜಿಗೆ ಅತ್ಯುತ್ತಮವಾದ ಆಹಾರವೆಂದು ಪರಿಗಣಿಸಲಾಗಿದೆ. ವಿಶೇಷವಾಗಿ, ಬೆಳಗ್ಗಿನ ಹೊತ್ತು ಮೊದಲ ಆಹಾರವಾಗಿ ಸೇವಿಸುವ ಅಭ್ಯಾಸ ರೂಢಿಸಿಕೊಂಡರೆ ಮೂಳೆಗಳು ಶಿಥಿಲವಾಗುವ ಓಸ್ಟಿಯೋಪೋರೋಸಿಸ್ ಎಂಬ ಸ್ಥಿತಿ ಎದುರಾಗುವ ಸಾಧ್ಯತೆ ಅಪಾರವಾಗಿ ತಗ್ಗುತ್ತದೆ.

​ಕೊಲೆಸ್ಟ್ರಾಲ್ ಮಟ್ಟಗಳು ತಗ್ಗುತ್ತವೆ

ಬ್ರಿಟಿಷ್ ಮಾಧ್ಯಮದಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, ಮಜ್ಜಿಗೆಯಲ್ಲಿರುವ ವಿಶೇಷ ಜೈವಿಕ ಅಣುಗಳು (ಬಯೋ ಮಾಲಿಕ್ಯೂಲ್ಸ್) ಕೊಲೆಸ್ಟ್ರಾಲ್ ಮಟ್ಟಗಳನ್ನು ತಗ್ಗಿಸಲು ನೆರವಾಗುತ್ತವೆ:

​ತೂಕ ಇಳಿಸಲು ನೆರವಾಗುತ್ತದೆ

  • ಮಜ್ಜಿಗೆಯಲ್ಲಿಯೂ ಅಲ್ಪ ಪ್ರಮಾಣದ ಕೊಬ್ಬು ಇದೆ. ಇದು ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಅತ್ಯುತ್ತಮ ಆಹಾರವಾಗಿಸಿದೆ.
  • ಕೊಬ್ಬುಯುಕ್ತ ಪೇಯ ಅಥವಾ ಪಾನೀಯಗಳ ಬದಲಿಗೆ ಮಜ್ಜಿಗೆಯನ್ನು ಸೇವಿಸುವ ಮೂಲಕ ಈ ಪ್ರಯತ್ನಗಳು ಶೀಘ್ರ ಕೈಗೂಡುತ್ತವೆ ಹಾಗೂ ತೂಕ ಇಳಿಕೆ ಶೀಘ್ರವಾಗಿ ಪೂರ್ಣಗೊಳ್ಳುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ