ಆ್ಯಪ್ನಗರ

ದಿನಕ್ಕೊಂದು ಮೊಟ್ಟೆ ತಿನ್ನಿ

ಮೂಳೆಗಳು ಬಲವಾಗುತ್ತವೆ. ಇದರಲ್ಲಿ ವಿಟಮಿನ್‌ ಡಿ ಹಾಗೂ ಕ್ಯಾಲ್ಸಿಯಂ ಇದ್ದು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಟ್ಟೆಯನ್ನು ಡಯಟ್‌ನಲ್ಲಿ ಸೇರಿಸಿದರೆ ಸಂಧಿವಾತ ತಡೆಗಟ್ಟಬಹುದು.

Vijaya Karnataka Web 29 Mar 2019, 4:44 pm
ದಿನಕ್ಕೊಂದು ಮೊಟ್ಟೆ ತಿನ್ನಿ ಎನ್ನುತ್ತಾರೆ. ಹೌದು ವಿಟಮಿನ್ ಹಾಗೂ ಖನಿಜಗಳ ಆಗರ ಮೊಟ್ಟೆ. ನಿತ್ಯವೂ ಒಂದು ಹೆಚ್ಚು ಹೊತ್ತು ಬೇಯಿಸಿದ ಮೊಟ್ಟೆಯನ್ನು ಸೇವಿಸಿದರೆ ಇದು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ. ಅದರಲ್ಲೂ ಬ್ರೇಕ್‌ಫಾಸ್ಟ್‌ಗೆ ಮೊಟ್ಟೆ ತಿಂದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.
Vijaya Karnataka Web Egg


ಮೊಟ್ಟೆಯಲ್ಲಿರುವ ಪೋಷಕಾಂಶಗಳು


ಒಂದು ಮೊಟ್ಟೆಯಲ್ಲಿ 75 ಕ್ಯಾಲೋರಿ, 5 ಗ್ರಾಂ ಕೊಬ್ಬು, 80 ಮಿ.ಗ್ರಾಂ ಕೊಲೆಸ್ಟ್ರಾಲ್(ಇದು ಆರೋಗ್ಯಕರ ಕೊಲೆಸ್ಟ್ರಾಲ್‌ ಆಗಿದೆ), 1.6 ಗ್ರಾಂ ಸ್ಯಾಚುರೇಟಡ್‌ ಫ್ಯಾಟ್‌ ಹಾಗೂ ಅಲ್ಪ ಪ್ರಮಾಣದಲ್ಲಿ ವಿಟಮಿನ್‌ ಎ, ಡಿ, ವಿಟಮಿನ್‌ ಬಿ6, ಕಬ್ಬಿಣದಂಶ ಹಾಗೂ ವಿಟಮಿನ್‌ ಬಿ 12.

ಮೊಟ್ಟೆ ತಿನ್ನುವುದರಿಂದ ಏನಾಗುತ್ತದೆ?

ಮೂಳೆಗಳು ಬಲವಾಗುತ್ತವೆ. ಇದರಲ್ಲಿ ವಿಟಮಿನ್‌ ಡಿ ಹಾಗೂ ಕ್ಯಾಲ್ಸಿಯಂ ಇದ್ದು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಟ್ಟೆಯನ್ನು ಡಯಟ್‌ನಲ್ಲಿ ಸೇರಿಸಿದರೆ ಸಂಧಿವಾತ ತಡೆಗಟ್ಟಬಹುದು.

ಮಧುಮೇಹಿಗಳೂ ತಿನ್ನಬಹುದು

ವಾರದಲ್ಲಿ 12 ಮೊಟ್ಟೆಗಳವರೆಗೆ ತಿನ್ನಬಹುದೆಂದು ಇತ್ತೀಚೆಗೆ ನಡೆಸಿದ ಅಧ್ಯಯನ ಹೇಳಿದೆ.

ಹೃದಯದ ಆರೋಗ್ಯಕ್ಕೂ ಒಳ್ಳೆಯದು

ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್‌ ಇರುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಭಾವನೆ ಇದೆ. ಆದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯ ಕೊಲೆಸ್ಟ್ರಾಲ್‌ ಅವಶ್ಯಕ. ಅದು ಮೊಟ್ಟೆಯಲ್ಲಿದೆ.

ಕೂದಲು ಹಾಗೂ ಉಗುರಿನ ಆರೋಗ್ಯ

ಮೊಟ್ಟೆ ತಿನ್ನುವುದರಿಂದ ಆರೋಗ್ಯಕರ ಕೂದಲು ಹಾಗೂ ಉಗುರು ಪಡೆಯಬಹುದು.

ತೂಕ ಕಮ್ಮಿ ಮಾಡುತ್ತೆ

ತೂಕ ಕಮ್ಮಿ ಮಾಡಿಕೊಳ್ಳಲು ಬಯಸುವವರು ಡಯಟ್‌ನಲ್ಲಿ ಸೇರಿಸಬಹುದಾದ ಆರೋಗ್ಯಕರ ಫುಡ್ ಇದಾಗಿದೆ.

ಕಣ್ಣಿನ ಆರೋಗ್ಯ

ಪ್ರತಿನಿತ್ಯ ಮೊಟ್ಟೆ ತಿನ್ನುವುದರಿಂದ ಕಣ್ಣಿನ ಆರೋಗ್ಯ ಹೆಚ್ಚುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ