ಆ್ಯಪ್ನಗರ

ಸರ್ವ ರೋಗಗಳಿಗೂ ದಿವ್ಯೌಷಧಿ ತಾಳೆ ಹಣ್ಣು


ದೇಹಕ್ಕೆ ತಂಪು ನೀಡುವ ತಾಳೆ ಹಣ್ಣು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸೇವಿಸಲೇಬೇಕಾದ ಹಣ್ಣು. ಏಕೆ ಎಂದು ತಿಳಿಯಲು ಮುಂದೆ ಓದಿ…

Vijaya Karnataka Web 11 Jun 2020, 12:53 pm
Vijaya Karnataka Web benefits of ice apple fruit
ಸರ್ವ ರೋಗಗಳಿಗೂ ದಿವ್ಯೌಷಧಿ ತಾಳೆ ಹಣ್ಣು

ಭಾರತದಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ಪ್ರತಿ ಬೀದಿ ಮೂಲೆಯಲ್ಲಿ ಕಂಡುಬರುವ ಹಣ್ಣು ತಾಳೆ ಹಣ್ಣು. ಬಹಳ ರುಚಿಯಾಗಿರುವ ಈ ಹಣ್ಣು ನೋಡಲು ಬಿಳಿ ಜೆಲ್ಲಿಯ ಹಾಗೆ ಕಾಣುತ್ತದೆ. ತಾಳೆ ಹಣ್ಣಿಗೆ ಅನೇಕ ಹೆಸರಿದ್ದು, ಇದರಲ್ಲಿ ತಂಪು ಗುಣವಿರುವುದರಿಂದ ಇದನ್ನು ಐಸ್ ಆಪಲ್ ಎಂದು ಕರೆಯಲಾಗುತ್ತದೆ. ವಿನ್ಯಾಸದಲ್ಲಿ ಲಿಚಿಯನ್ನು ಹೋಲುವ, ರುಚಿಯಲ್ಲಿ ತಾಜಾ ತೆಂಗಿನಕಾಯಿಯನ್ನು ಹೋಲುವ ತಾಳೆ ಹಣ್ಣು ಸಾಮಾನ್ಯವಾಗಿ ಭಾರತದ ದಕ್ಷಿಣ ಭಾಗಗಳಲ್ಲಿ ಕಂಡುಬರುತ್ತದೆ, ಅಲ್ಲಿ ಇದನ್ನು ಬೇಸಿಗೆಯ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಇದು ಹೆಚ್ಚು ತಂಪಾಗಿರುವುದರಿಂದ ಮಧ್ಯಾಹ್ನ ಸಮಯದಲ್ಲಿ ತಿಂದರೆ ಒಳ್ಳೆಯದು. ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನೂ ಹೊಂದಿರುವ ತಾಳೆ ಹಣ್ಣು ಯಾವೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ನೋಡೋಣ ಬನ್ನಿ.

​ಶಕ್ತಿಯನ್ನು ಹೆಚ್ಚಿಸುತ್ತದೆ

ಐಸ್ ಆಪಲ್ ಅಥವಾ ತಾಳೆ ಹಣ್ಣಿನ ಮತ್ತೊಂದು ಅದ್ಭುತ ಆರೋಗ್ಯ ಪ್ರಯೋಜನಗಳೆಂದರೆ ಇದು ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ದೇಹಕ್ಕೆ ಬೇಕಾದ ಖನಿಜಗಳು ಮತ್ತು ಪೋಷಕಾಂಶಗಳನ್ನು ಸರಿಯಾದ ಸಮತೋಲನದಲ್ಲಿ ಇಡುತ್ತದೆ.

ಸ್ತನ ಕ್ಯಾನ್ಸರ್ ಬಾರದಂತೆ ತಡೆಯುತ್ತದೆ

ತಾಳೆ ಹಣ್ಣುಗಳು ಫೈಟೊಕೆಮಿಕಲ್ಸ್, ಆಂಥೋಸಯಾನಿನ್ ಅಂಶಗಳನ್ನು ಒಳಗೊಂಡಿರುವುದರಿಂದ ಇದು ಗೆಡ್ಡೆಗಳು ಮತ್ತು ಸ್ತನ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.

​ಗರ್ಭಿಣಿಯರಿಗೆ ತಿನ್ನಲು ಅತ್ಯುತ್ತಮವಾದ ಹಣ್ಣು

ಗರ್ಭಿಣಿಯರು ಐಸ್ ಸೇಬು ಅಥವಾ ತಾಳೆ ಹಣ್ಣನ್ನು ಸೇವಿಸಿದರೆ ಒಳ್ಳೆಯದು. ಏಕೆಂದರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆ ಮತ್ತು ಆಮ್ಲೀಯತೆಯ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಈ ಹಣ್ಣಿನ ಸೇವನೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.

ವಾಕರಿಕೆಗೆ ಅತ್ಯುತ್ತಮ ಮದ್ದು

ನಿಂಬೆ ಹಣ್ಣನ್ನು ಬಳಸಿದರೂ ನಿಮಗೆ ವಾಕರಿಕೆ ಕಡಿಮೆಯಾಗದಿದ್ದಾಗ ತಾಳೆ ಹಣ್ಣನ್ನು ಸೇವಿಸಿ. ತಾಳೆಹಣ್ಣಿನ ಅದ್ಭುತ ಆರೋಗ್ಯ ಪ್ರಯೋಜನಗಳಲ್ಲಿ ಇದು ಒಂದು ಎಂಬುದನ್ನು ಮರೆಯಬೇಡಿ.

​ಮಲಬದ್ಧತೆ ಸಮಸ್ಯೆ ಇರುವುದಿಲ್ಲ

ತಾಳೆ ಹಣ್ಣು ಬೇಸಿಗೆಯ ತಿಂಗಳುಗಳಲ್ಲಿ ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೀವು ತಿರುಳಿರುವ ಹಣ್ಣನ್ನು ಇಷ್ಟಪಡದಿದ್ದರೆ, ಅದನ್ನು ರಸವನ್ನಾಗಿ ಮಾಡಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಯಕೃತ್ತಿನ ತೊಂದರೆಗೆ ಮನೆಮದ್ದು

ಐಸ್ ಆಪಲ್ ಅಥವಾ ತಾಳೆ ಹಣ್ಣಿನ ಉತ್ತಮ ಆರೋಗ್ಯ ಪ್ರಯೋಜನವೆಂದರೆ ಹಣ್ಣಿನಲ್ಲಿರುವ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ವಿಷವನ್ನು ಶುದ್ಧೀಕರಿಸುವುದರಿಂದ ಅದು ನಿಧಾನವಾಗಿ ಯಕೃತ್ತಿನ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

​ತುರಿಕೆ ಕಡಿಮೆ ಮಾಡುತ್ತದೆ

ಬೇಸಿಗೆಯಲ್ಲಿ ಹೇರಳವಾಗಿ ಲಭ್ಯವಿರುವ ಈ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ, ಸತು, ರಂಜಕ, ಪೊಟ್ಯಾಶಿಯಮ್ ಸಮೃದ್ಧವಾಗಿದೆ. ನೀವು ಚಿಕನ್ ಪಾಕ್ಸ್‘ನಿಂದ ಬಳಲುತ್ತಿದ್ದರೆ, ಈ ರಸಭರಿತವಾದ ಹಣ್ಣು ದೇಹವನ್ನು ತಂಪಾಗಿಡುತ್ತದೆ. ಅಷ್ಟೇ ಅಲ್ಲ, ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಇದು ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದರೆ ದಣಿವಾರಿಸಿಕೊಳ್ಳಲು ನೀವು ಸೇವಿಸಲೇಬೇಕಾದ ಅತ್ಯುತ್ತಮ ಬೇಸಿಗೆ ಹಣ್ಣುಗಳಲ್ಲಿ ಒಂದಾಗಿದೆ.

​ಆಯಾಸದ ವಿರುದ್ಧ ಹೋರಾಡುತ್ತದೆ

ಬೇಸಿಗೆಯಲ್ಲಿ ಸಾಮಾನ್ಯವಾಗಿ ಜನರು ಹೆಚ್ಚು ಬೆವರು ಸುರಿಸುವುದರಿಂದ ಹೆಚ್ಚು ದಣಿದಿರುತ್ತಾರೆ. ಆದ್ದರಿಂದ ಆಯಾಸದ ವಿರುದ್ಧ ಹೋರಾಡಲು ಉತ್ತಮ ಮಾರ್ಗವೆಂದರೆ ತಾಳೆ ಹಣ್ಣಿನ ಸೇವನೆ.

ಹೊಟ್ಟೆ ಸಂಬಂಧಿತ ಕಾಯಿಲೆಗಳು ನಿವಾರಣೆ

ಹೊಟ್ಟೆಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳಿದ್ದರೂ ಇದಕ್ಕೆ ಐಸ್ ಆಪಲ್ ಅಥವಾ ತಾಳೆ ಹಣ್ಣು ಉತ್ತಮ ಮದ್ದಾಗಿ ಕಾರ್ಯನಿರ್ವಹಿಸುತ್ತದೆ. ಹೌದು ತಾಳೆ ಹಣ್ಣು ಹೊಟ್ಟೆ ಸಂಬಂಧಿತ ಕಾಯಿಲೆಗಳಿಗೆ ನೈಸರ್ಗಿಕ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.

ಅಂಜೂರ ಹಣ್ಣಿನ ಜ್ಯೂಸ್ ಕುಡಿಯೋದ್ರಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ

​ತೂಕ ಕಡಿಮೆ ಮಾಡುತ್ತದೆ

ದೇಹದ ತೂಕವನ್ನು ಇಳಿಸಿಕೊಳ್ಳಲು ಬಯಸುವವರು ತಾಳೆ ಹಣ್ಣನ್ನು ಸೇವಿಸಿ. ಇದು ದೇಹದಲ್ಲಿರುವ ಅನಗತ್ಯ ಕೊಬ್ಬನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದರಲ್ಲಿ ಬಹಳಷ್ಟು ನೀರು ಇದ್ದು, ಬೊಜ್ಜು ಬರದಂತೆ ತಡೆಯಲು ಸಹಾಯ ಮಾಡುತ್ತದೆ.

ಕಡಿಮೆ ಪ್ರಮಾಣದ ಕ್ಯಾಲೋರಿ ಹೊಂದಿದೆ

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಒಂದು ಟನ್’ಗಳಷ್ಟು ಬೇಸಿಗೆ ಹಣ್ಣುಗಳಿದ್ದರೂ, ತಾಳೆ ಹಣ್ಣು ಅತ್ಯುತ್ತಮವಾದುದು, ಏಕೆಂದರೆ ಇದು ಕಡಿಮೆ ಪ್ರಮಾಣದ ಕ್ಯಾಲೋರಿಗಳನ್ನು ಮತ್ತು ಹೆಚ್ಚಿನ ಶಕ್ತಿಯನ್ನು ಹೊಂದಿರುತ್ತದೆ.

​ಜೀರ್ಣಕ್ರಿಯೆಗೆ ಸುಲಭೋಪಾಯ

ಎಲ್ಲಾ ತರಹದ ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಅಂತ್ಯ ಹಾಡಲು ಉತ್ತಮ ಮಾರ್ಗವೆಂದರೆ ಬೇಸಿಗೆಯಲ್ಲಿ ಸಾಕಷ್ಟು ತಾಳೆ ಹಣ್ಣು ಅಥವಾ ಐಸ್ ಆಪಲ್ ತಿನ್ನುವುದು. ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಗುಣಪಡಿಸಲು ಪೂರ್ವಜರ ಚಿಕಿತ್ಸೆಯಲ್ಲಿ ಈ ಹಣ್ಣನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು.

ಶಾಖವನ್ನು ತಡೆಯುತ್ತದೆ

ಬೇಸಿಗೆಯಲ್ಲಿ ತಾಪಮಾನ ಹೆಚ್ಚಾದಾಗ ಸ್ವಾಭಾವಿಕವಾಗಿ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಆದರೆ ಈ ಸಮಯದಲ್ಲಿ ಹೆಚ್ಚು ಹೆಚ್ಚು ತಾಳೆ ಹಣ್ಣುಗಳನ್ನು ಸೇವಿಸುವುದರಿಂದ ದೇಹದ ಉಷ್ಣತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಉಷ್ಣತೆಯಿಂದ ಮುಖದ ಮೇಲೆ ಉದ್ಭವಿಸುವ ಗುಳ್ಳೆಗಳನ್ನು ತಡೆದು, ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.

ಗುಲಾಬಿ ಬಣ್ಣದ ಜಾಮೂನು ಹಣ್ಣು ಎಷ್ಟೆಲ್ಲಾ ಔಷಧೀಯ ಗುಣಗಳನ್ನು ಹೊಂದಿದೆ!

​ನಿರ್ಜಲೀಕರಣ ಸಮಸ್ಯೆ ದೂರವಾಗುತ್ತದೆ

ತಾಳೆ ಹಣ್ಣು ತನ್ನೊಳಗೆ ಬಹಳಷ್ಟು ನೀರನ್ನು ಹೊಂದಿದೆ. ಇದು ಬೇಸಿಗೆಯಲ್ಲಿ ನಿಮ್ಮನ್ನು ಹೈಡ್ರೀಕರಿಸಲು ಮತ್ತು ತಂಪಾಗಿರಿಸಲು ಸಹಾಯ ಮಾಡುತ್ತದೆ.

ಹೀಟ್ ಸ್ಟ್ರೋಕ್ ತಪ್ಪಿಸುತ್ತದೆ

ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ತಾಳೆ ಹಣ್ಣವನ್ನು ಒಂದು ಪ್ರಮುಖ ಭಾಗವಾಗಿ ಮಾಡಿಕೊಂಡರೆ ಒಳಿತು. ಏಕೆಂದರೆ ಇದು ಹೀಟ್ ಸ್ಟ್ರೋಕ್ (ಸನ್‌ಸ್ಟ್ರೋಕ್‌) ಆಗುವುದನ್ನು ತಪ್ಪಿಸುತ್ತದೆ. ಇದು ಸಾಕಷ್ಟು ನೀರನ್ನು ಹೊಂದಿದ್ದು, ದೇಹವನ್ನು ಹೈಡ್ರೀಕರಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ