Please enable javascript.Metabolism,ಉತ್ಕರ್ಷಣ ನಿರೋಧಕಗಳು: ಉಪಯೋಗ ಮತ್ತು ಅಡ್ಡ ಪರಿಣಾಮಗಳು - benefits, side effects and best sources of antioxidants - Vijay Karnataka

ಉತ್ಕರ್ಷಣ ನಿರೋಧಕಗಳು: ಉಪಯೋಗ ಮತ್ತು ಅಡ್ಡ ಪರಿಣಾಮಗಳು

Vijaya Karnataka Web 11 Feb 2021, 5:56 pm
Subscribe

ದೇಹದ ಆರೋಗ್ಯವನ್ನು ಕಾಪಾಡುವ ಆಂಟಿಆಕ್ಸಿಡೆಂಟ್ ದೇಹದಲ್ಲಿ ಸೂಕ್ತ ಪ್ರಮಾಣದಲ್ಲಿ ಇರಬೇಕು. ಇದರ ಪ್ರಮಾಣದಲ್ಲಿ ಅಸಮತೋಲನ ಉಂಟಾದರೆ ಅಡ್ಡ ಪರಿಣಾಮ ಬೀರುವುದು.

benefits side effects and best sources of antioxidants
ಉತ್ಕರ್ಷಣ ನಿರೋಧಕಗಳು: ಉಪಯೋಗ ಮತ್ತು ಅಡ್ಡ ಪರಿಣಾಮಗಳು
ದೇಹದ ಅಗತ್ಯ ಕಾರ್ಯಗಳನ್ನು ಉತ್ತೇಜಿಸುವ ಅಣುಗಳ ಮೇಲೆ ಸ್ವತಂತ್ರ ರಾಡಿಕಲ್ಸ್‍ಗಳು ದಾಳಿ ಮಾಡುತ್ತವೆ. ಹಾಗಾಗಿ ಸ್ವತಂತ್ರ ರಾಡಿಕಲ್ಸ್‍ಗಳನ್ನು ಕೆಟ್ಟ ಅಣುಗಳು ಎಂದು ಪರಿಗಣಿಸಲಾಗುವುದು. ಇವು ಆಂತರಿಕ ಅಥವಾ ಬಾಹ್ಯ ಸಂಗತಿಗಳಿಂದ ಉಂಟಾಗುವ ಸಾಧ್ಯತೆಗಳಿರುತ್ತವೆ. ಇಂತಹ ಕೆಟ್ಟ ಅಣುಗಳ ವಿರುದ್ಧ ಉತ್ಕರ್ಷಣ ನಿರೋಧಕ ಶಕ್ತಿಯು ಹೋರಾಡುವುದು.

ಜೊತೆಗೆ ಹೃದಯದ ಕಾಯಿಲೆ, ಮಧುಮೇಹ ಮತ್ತು ಕ್ಯಾನ್ಸರ್‍ನಂತಹ ಆರೋಗ್ಯ ಸಮಸ್ಯೆಯನ್ನು ನಿವಾರಿಸುವುದು. ಸ್ವತಂತ್ರ ರಾಡಿಕಲ್ಸ್ ಮತ್ತು ಉತ್ಕರ್ಷಣ ನಿರೋಧಕಗಳ ನಡುವಿನ ಅಸಮತೋಲನವು ಕೆಲವು ಆರೋಗ್ಯ ಸಂಬಂಧಿ ತೊಂದರೆಗೆ ಕಾರಣವಾಗುತ್ತದೆ. ಇಂತಹ ಅಸಮತೋಲನವನ್ನೇ ಆಕ್ಸಿಡೇಟಿವ್ ಒತ್ತಡ ಎಂದು ಕರೆಯುತ್ತಾರೆ.

​ಉತ್ಕರ್ಷಣ ನಿರೋಧಕಗಳ ವಿಧಗಳು

​ಉತ್ಕರ್ಷಣ ನಿರೋಧಕಗಳ ವಿಧಗಳು

ಸಾವಿರಾರು ಆಹಾರ ಪದಾರ್ಥಗಳು ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒಳಗೊಂಡಿರುತ್ತವೆ. ಪೌಷ್ಟಿಕ ಆಹಾರವನ್ನು ಸಮತೋಲಿತ ಪ್ರಮಾಣದಲ್ಲಿ ಸ್ವೀಕರಿಸಿದರೆ ದೇಹದ ಆರೋಗ್ಯವು ಉತ್ತಮವಾಗಿ ಇರುತ್ತದೆ. ಸೊಪ್ಪು, ತರಕಾರಿ ಹಾಗೂ ಹಣ್ಣುಗಳಲ್ಲಿ ಅಧಿಕ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಇರುತ್ತವೆ.

ವಿಟಮಿನ್ ಎ, ಸಿ, ಇ , ಬೀಟಾ ಕೆರೋಟಿನ್, ಲೈಕೋಪಿನ್, ಫ್ಲವೋನೈಡ್, ಫ್ಲೇವೋನ್ಸ್, ಕ್ಯಾಟೆಚಿನ್ಸ್, ಪಾಲಿಫಿನಾಲ್‍ಗಳು, ಫೈಟ್ರೋಜೆನ್‍ಗಳು, ಫೈಟೋನ್ಯೂಟ್ರಿಯೆಂಟ್, ಲುಟೀನ್, ಸೆಲೆನಿಯಮ್, ಮ್ಯಾಂಗನೀಸ್, ಝೀಕ್ಸಾನ್‍ಥಿನ್ ಮತ್ತು ತಾಮ್ರದ ಅಂಶ ಇರುವ ಆಹಾರ ಪದಾರ್ಥಗಳು ಉತ್ಕರ್ಷಣ ನಿರೋಧಕ ಶಕ್ತಿಯನ್ನು ನೀಡುತ್ತವೆ.

ಸ್ಟ್ರಾಬೆರಿ ಹಣ್ಣು ನಿಮ್ಮ ಆಹಾರಕ್ರಮಕ್ಕೆ ಪರಿಪೂರ್ಣ ಹಣ್ಣು ಎನ್ನಲು ಕಾರಣಗಳಿವು

​ಉತ್ಕರ್ಷಣ ನಿರೋಧಕಗಳ ಪ್ರಯೋಜನಗಳು

​ಉತ್ಕರ್ಷಣ ನಿರೋಧಕಗಳ ಪ್ರಯೋಜನಗಳು

ಆಂಟಿಆಕ್ಸಿಡೆಂಟ್‍ಗಳು ಸಮೃದ್ಧವಾಗಿದ್ದರೆ ದೇಹದ ಆರೋಗ್ಯವನ್ನು ಉತ್ತಮವಾಗಿಡುವುದರ ಜೊತೆಗೆ, ಸೌಂದರ್ಯವನ್ನು ಕಾಪಾಡುವ ಚರ್ಮ ಹಾಗೂ ಕೇಶರಾಶಿಗಳ ಆರೋಗ್ಯವನ್ನು ವೃದ್ಧಿಸುವುದು. ಜೊತೆಗೆ ಸಾಕಷ್ಟು ಸೋಂಕು ಹಾಗೂ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ನೀಡುವುದು. ವಿಟಮಿನ್ ಸಿ ಮತ್ತು ವಿಟಮಿನ್ ಬಿ ಇರುವ ಆಹಾರ ಪದಾರ್ಥಗಳು ರಕ್ತ ಪರಿಚಲನೆಯನ್ನು ಸುಧಾರಿಸುತ್ತವೆ. ಇದರ ಪರಿಣಾಮಾಗಿ ಚರ್ಮದ ಆರೋಗ್ಯವು ಸುಧಾರಿಸುವುದು. ಚರ್ಮವು ಮೃದು ಹಾಗೂ ಕಾಂತಿಯಿಂದ ಕಂಗೊಳಿಸುವುದು.

​ಹೃದಯ ಮತ್ತು ಕಣ್ಣಿನ ಆರೋಗ್ಯ

​ಹೃದಯ ಮತ್ತು ಕಣ್ಣಿನ ಆರೋಗ್ಯ

ಉತ್ಕರ್ಷಣ ನಿರೋಧಕ ಶಕ್ತಿಯಿಂದ ಹೃದಯದ ಆರೋಗ್ಯ ಸುಧಾರಿಸುವುದು. ಕೊಲೆಸ್ಟ್ರಾಲ್, ರಕ್ತ ದಪ್ಪವಾಗುವುದು, ಸೋಂಕನ್ನು ಹೊಂದುವುದು ಹಾಗೂ ಎಣ್ಣೆಯಂತಹ ಅಂಶವನ್ನು ತೆಗೆಯುವುದು. ಆರೋಗ್ಯಕರ ರಕ್ತ ಪರಿಚಲನೆಗೆ ಸಹಾಯ ಮಾಡುವುದು. ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯನ್ನು ತಡೆಯುವುದು.

ಬೆಲ್ ಪೆಪರ್, ಸಿಟ್ರಸ್ ಹಣ್ಣುಗಳು, ಪೇರಲೆ, ಕೂಸು ಗಡ್ಡೆ ಸೇರಿದಂತೆ ಇನ್ನಿತರ ಹಣ್ಣು ಮತ್ತು ತರಕಾರಿಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತವೆ. ಇಂತಹ ಆಹಾರಗಳ ಸೇವನೆಯಿಂದ ಕಣ್ಣಿನ ಆರೋಗ್ಯ ಹಾಘೂ ದೃಷ್ಟಿಯು ಸುಧಾರಿಸುವುದು. ಕಣ್ಣಿಗೆ ಸಂಬಂಧಿಸಿದ ಅನೇಕ ಆರೋಗ್ಯ ಸಮಸ್ಯೆಯು ನಿವಾರಣೆಯಾಗುವುದು.

​ಅಪಾಯಕಾರಿ ಆರೋಗ್ಯ ಸಮಸ್ಯೆ ತಡೆಯುವುದು

​ಅಪಾಯಕಾರಿ ಆರೋಗ್ಯ ಸಮಸ್ಯೆ ತಡೆಯುವುದು

ಕ್ಯಾನ್ಸರ್ ಮತ್ತು ಪ್ರಾಣಕ್ಕೆ ಅಪಾಯವನ್ನು ಉಂಟುಮಾಡುವಂತಹ ಆರೋಗ್ಯ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುವುದು. ಉತ್ಕರ್ಷಣ ನಿರೋಧಕವು ಸ್ವತಂತ್ರ ರಾಡಿಕಲ್ಸ್‍ನಿಂದ ಉಂಟಾಗುವ ಅಪಾಯ ಹಾಗೂ ತೊಂದರೆಯನ್ನು ತಡೆಯುವುದು. ಜೊತೆಗೆ ವಿವಿಧ ಬಗೆಯ ಕ್ಯಾನ್ಸರ್ ಸಮಸ್ಯೆಗಳು ಬರದಂತೆ ತಡೆಯುವುದು.

​ಅಡ್ಡ ಪರಿಣಾಮಗಳು

​ಅಡ್ಡ ಪರಿಣಾಮಗಳು

ಉತ್ಕರ್ಷಣ ನಿರೋಧಕ ಆಹಾರಗಳನ್ನು ಮಿತಿ ಮೀರಿ ಸೇವಿಸುವುದರಿಂದಲೂ ತೊಂದರೆ ಉಂಟಾಗುವುದು. ವಿಟಮಿನ್ ಎ ಯಂತಹ ಆಹಾರಗಳನ್ನು ಗರ್ಭಿಣಿಯರು ಅಧಿಕವಾಗಿ ಸೇವಿಸುವುದರಿಂದ ಜನ್ಮ ದೋಷಗಳು ಉಂಟಾಗುವ ಸಾಧ್ಯತೆಗಳೂ ಇರುತ್ತವೆ. ಗರ್ಭಾವಸ್ಥೆಯಲ್ಲಿ ಇರುವ ಮಹಿಳೆಯರು ಅಧಿಕ ಪ್ರಮಾಣದ ವಿಟಮಿನ್ ಎ ಅಥವಾ ಉತ್ಕರ್ಷಣ ನಿರೋಧಕ ಆಹಾರ ಸೇವಿಸುವಾಗ ವೈದ್ಯರಲ್ಲಿ ಸಲಹೆ ಪಡೆಯಬೇಕು.

ಇವು ಕೆಲವು ಬಗೆಯ ಕ್ಯಾನ್ಸರ್ ಕಣಗಳನ್ನು ಹೆಚ್ಚಿಸುವ ಸಾಧ್ಯತೆಯೂ ಇರುತ್ತದೆ. ಅತಿಯಾದದ ಆಂಟಿಆಕ್ಸಿಡೆಂಟ್ ಸೇವನೆಯಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಆಗ ಅತಿಸಾರ, ತಲೆ ಸುತ್ತತು, ಕೀಲು ನೋವು, ಚರ್ಮ ಹಳದಿಯಾಗುವುದು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಯು ಕಾಡುವುದು. ಅಲ್ಲದೆ ಕೆಲವು ಔಷಧಗಳನ್ನು ಸೇವಿಸಿದರೂ ಅದು ದೇಹಕ್ಕೆ ಆವುದೇ ಪರಿಣಾಮ ಬೀರದು.

ಇದುವರೆಗೂ ಪೌಷ್ಟಿಕಾಂಶಗಳ ಬಗ್ಗೆ ನಾವು ನಂಬಿಕೊಂಡು ಬಂದಿರುವ ಸುಳ್ಳುಗಳು

​ಅಧಿಕವಾಗಿರುವ ಆಂಟಿ ಆಕ್ಸಿಡೆಂಟ್ ಆಹಾರಗಳು

​ಅಧಿಕವಾಗಿರುವ ಆಂಟಿ ಆಕ್ಸಿಡೆಂಟ್ ಆಹಾರಗಳು

ನಾವು ಸೇವಿಸುವ ಆಹಾರದಲ್ಲಿ ಸಾಮಾನ್ಯವಾಗಿ ಪೋಷಕಾಂಶ ಹಾಗೂ ಜೀವಸತ್ವಗಳು ಇರುತ್ತವೆ. ಅವುಗಳಲ್ಲಿ ಕೆಲವು ಅಧಿಕ ಪ್ರಮಾಣದಲ್ಲಿ ಇರುತ್ತವೆ. ಅಂತಹ ಆಹಾರವನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಆಗ ಸಮತೋಲನ ಕಾಯ್ದುಕೊಳ್ಳಬಹುದು. ಬೆರ್ರಿ ಹಣ್ಣುಗಳು, ಡಾರ್ಕ್ ಚಾಕೋಲೇಟ್, ಟೊಮ್ಯಾಟೋಗಳಂತಹ ಆಹಾರದಲ್ಲಿ ಅಧಿಕ ಪ್ರಮಾಣದಲ್ಲಿ ಇರುತ್ತವೆ. ಅವುಗಳನ್ನು ಮಿತವಾಗಿ ಸೇವಿಸಿದಾಗ ಆರೋಗ್ಯವು ಹಿತವಾಗಿ ಇರುತ್ತದೆ.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ